ಭಾರತದಲ್ಲಿ 1.30 ಕೋಟಿ ರೂ. ಬೆಲೆಯಲ್ಲಿ Kia EV9 ಬಿಡುಗಡೆ
ಕಿಯಾ ಇವಿ9 ಗಾಗಿ shreyash ಮೂಲಕ ಅಕ್ಟೋಬರ್ 03, 2024 06:47 pm ರಂದು ಪ್ರಕಟಿಸಲಾಗಿದೆ
- 99 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಇವಿ9 ಭಾರತದಲ್ಲಿ ಕೊರಿಯನ್ ವಾಹನ ತಯಾರಕರಿಂದ ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇದು 561 ಕಿಮೀ ವರೆಗೆ ಕ್ಲೈಮ್ ಮಾಡಿದ ಚಾಲನಾ ರೇಂಜ್ ಅನ್ನು ನೀಡುತ್ತದೆ
-
ಇದು E-GMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಕಿಯಾ ಇವಿ6 ಮತ್ತು ಹ್ಯುಂಡೈ ಐಯೋನಿಕ್ 5 ಸಹ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
-
ಹೊರಭಾಗದಲ್ಲಿ, ಇದು ಗ್ರಿಲ್ ಮತ್ತು ಸ್ಟಾರ್ ಮ್ಯಾಪ್ ಎಲ್‌ಇಡಿ ಡಿಆರ್‌ಎಲ್‌ಗಳಲ್ಲಿ ಡಿಜಿಟಲ್ ಲೈಟಿಂಗ್ ಪ್ಯಾಟರ್ನ್ ಅನ್ನು ಪಡೆಯುತ್ತದೆ.
-
ಒಳಗೆ, ಇದು ಟ್ರಿಪಲ್ ಸ್ಕ್ರೀನ್ ಸೆಟಪ್ ಜೊತೆಗೆ ಕನಿಷ್ಠ ಫ್ಲೋಟಿಂಗ್ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ.
-
ಎರಡನೇ ಸಾಲಿನ ಸೀಟ್‌ಗಳು 8-ವೇ ಪವರ್ ಆಡ್ಜಸ್ಟ್‌ಮೆಂಟ್ ಮತ್ತು ಮಸಾಜ್ ಫಂಕ್ಷನ್ ಅನ್ನು ಸಹ ಹೊಂದಿವೆ.
-
ಡ್ಯುಯಲ್ ಸನ್‌ರೂಫ್‌ಗಳು, ಮುಂಭಾಗ ಮತ್ತು ಎರಡನೇ ಸಾಲಿನ ಸೀಟಿನಲ್ಲಿ ವಿಶ್ರಾಂತಿ ಫಂಕ್ಷನ್ ಮತ್ತು ಹಂತ 2 ADAS ನೊಂದಿಗೆ ಬರುತ್ತದೆ.
-
99.8 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ ಇದು 500 ಕಿ.ಮೀ ಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
ಜಾಗತಿಕವಾಗಿ ಬಿಡುಗಡೆಯಾದ ಸುಮಾರು ಒಂದೂವರೆ ವರ್ಷಗಳ ನಂತರ, ಕಿಯಾ ಇವಿ9 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ 1.30 ಕೋಟಿ ರೂ.ಇದೆ. ಇವಿ9 E-GMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಹಾಗೆಯೇ ಕಿಯಾ ಇವಿ6 ಮತ್ತು ಹ್ಯುಂಡೈ ಐಯೋನಿಕ್ 5 ಸಹ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕಿಯಾದ ಈ ಲಕ್ಷುರಿ ಕಾರನ್ನು ವಿದೇಶದಲ್ಲಿ ಸಂಪೂರ್ಣವಾಗಿ ಸಿದ್ಧಪಡಿಸಿ ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ.
ಡಿಸೈನ್
ಇವಿ9 ಬಾಕ್ಸಿ, ಎಸ್‌ಯುವಿ ತರಹದ ಬಾಡಿ ಆಕಾರವನ್ನು ಹೊಂದಿದ್ದರೂ, ಮುಂಬರುವ ದಿನಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ವಿಶೇಷವಾಗಿ ಮೊಡೆರ್ನ್ ಎಲ್‌ಇಡಿ ಲೈಟಿಂಗ್ ಸೆಟಪ್‌ಗೆ ನಾವು ಧನ್ಯವಾದ ಹೇಳಲೇಬೇಕು. ಮುಂಭಾಗದಲ್ಲಿ, ಇದು ಗ್ರಿಲ್‌ಗೆ ಸಂಯೋಜಿತವಾಗಿರುವ ಡಿಜಿಟಲ್ ಪ್ಯಾಟರ್ನ್ ಲೈಟಿಂಗ್ ಅನ್ನು ಪಡೆಯುತ್ತದೆ. ಲಂಬವಾಗಿ ಜೋಡಿಸಲಾದ ಹೆಡ್‌ಲೈಟ್ ಸೆಟಪ್, ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿದ್ದು, ಇದನ್ನು ಸ್ಟಾರ್ ಮ್ಯಾಪ್ ಲೈಟಿಂಗ್ ಎಂದು ಕರೆಯಲಾಗುತ್ತದೆ, ಇದು ಅನಿಮೇಟೆಡ್ ಲೈಟಿಂಗ್ ಪ್ಯಾಟರ್ನ್ ಅನ್ನು ರಚಿಸುತ್ತದೆ. ಇವಿ9 ಮೊನಚಾದ ರೂಫ್ ಲೈನ್ ಅನ್ನು ಹೊಂದಿದೆ, ಆದರೆ ಹಿಂಭಾಗದಲ್ಲಿ ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್ ದೀಪಗಳನ್ನು ಪಡೆಯುತ್ತದೆ, ಜೊತೆಗೆ ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಸಂಪೂರ್ಣ ಕಪ್ಪಾದ ಬಂಪರ್ ಅನ್ನು ಹೊಂದಿದೆ.
ಇದನ್ನೂ ಓದಿ: ಭಾರತದಲ್ಲಿ 2024ರ Kia Carnival ಬಿಡುಗಡೆ, ಬೆಲೆ 63.90 ಲಕ್ಷ ರೂ.ನಿಂದ ಪ್ರಾರಂಭ
ಕ್ಯಾಬಿನ್ & ಫೀಚರ್‌ಗಳು
ಒಳಭಾಗದಲ್ಲಿ, Kia EV9 ಕಪ್ಪು ಬಣ್ಣದಲ್ಲಿ ಮುಗಿದ ತೇಲುವ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ, ಇದು ಕನಿಷ್ಠವಾಗಿ ಕಾಣುತ್ತದೆ. ಇದರ ಟ್ರಿಪಲ್ ಸ್ಕ್ರೀನ್ ಸೆಟಪ್ ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ, ಇದರಲ್ಲಿ ಎರಡು 12.3-ಇಂಚಿನ ಡಿಸ್‌ಪ್ಲೇಗಳಾಗಿದ್ದು, ಈ ಎರಡು ಡಿಸ್‌ಪ್ಲೇಗಳ ನಡುವೆ 5.3-ಇಂಚಿನ ಕ್ಲೈಮೇಟ್ ಕಂಟ್ರೋಲ್‌ನ ಡಿಸ್‌ಪ್ಲೇಯನ್ನು ಸಂಯೋಜಿಸಲ್ಪಟ್ಟಿವೆ. ಸೆಂಟ್ರಲ್ ಡಿಸ್‌ಪ್ಲೇಯ ಕೆಳಗೆ, ಸ್ಟಾರ್ಟ್/ಸ್ಟಾಪ್, ಕ್ಲೈಮೇಟ್ ಕಂಟ್ರೋಲ್ ಮತ್ತು ವೆಂಟಿಲೇಶನ್ ಡಿಸ್‌ಪ್ಲೇ, ಮೀಡಿಯಾ ಮತ್ತು ಇತರ ಸೆಟ್ಟಿಂಗ್‌ಗಳಿಗಾಗಿ ಡ್ಯಾಶ್‌ಬೋರ್ಡ್ ಪ್ಯಾನೆಲ್‌ನಲ್ಲಿ ವರ್ಚುವಲಿ ಹಿಡನ್-ಮಾದರಿಯ ಟಚ್-ಇನ್‌ಪುಟ್ ಕಂಟ್ರೋಲ್‌ಗಳಿವೆ.
ಇಂಡಿಯಾ-ಸ್ಪೆಕ್ EV9 ಆನ್‌ಬೋರ್ಡ್‌ನಲ್ಲಿರುವ ಇತರ ಫೀಚರ್‌ಗಳೆಂದರೆ ಮೊದಲ ಮತ್ತು ಎರಡನೇ ಸಾಲಿಗೆ ಪ್ರತ್ಯೇಕ ಸನ್‌ರೂಫ್‌ಗಳು, ಡಿಜಿಟಲ್ IRVM (ಇನ್‌ಸೈಡ್ ರಿಯರ್ ವ್ಯೂ ಮಿರರ್), ಲೆಗ್ ಬೆಂಬಲದೊಂದಿಗೆ ಮೊದಲ ಮತ್ತು ಎರಡನೇ ಸಾಲಿನ ಸೀಟ್‌ಗಳಿಗೆ ವಿಶ್ರಾಂತಿ ಪೀಚರ್ ಮತ್ತು 64-ಬಣ್ಣದ ಆಂಬಿಯೆಂಟ್ ಲೈಟಿಂಗ್. ಇವಿ9 ನ ಎರಡನೇ ಸಾಲು 8-ರೀತಿಯಲ್ಲಿ ಪವರ್ ಹೊಂದಾಣಿಕೆ ಮತ್ತು ಮಸಾಜ್ ಫಂಕ್ಷನ್‌ನೊಂದಿಗೆ ಕ್ಯಾಪ್ಟನ್ ಸೀಟ್‌ಗಳನ್ನು ನೀಡುತ್ತದೆ.
ಇವಿ9 ರ ಸುರಕ್ಷತಾ ಕಿಟ್ ಬಹು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಯುರೋ NCAP ಮತ್ತು ANCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಈಗಾಗಲೇ 5-ಸ್ಟಾರ್ ಸುರಕ್ಷತೆಯ ರೇಟಿಂಗ್ ಅನ್ನು ಗಳಿಸಿದೆ.
ಪವರ್‌ಟ್ರೈನ್ ಮಾಹಿತಿಗಳು
ಇಂಡಿಯಾ-ಸ್ಪೆಕ್ ಇವಿ9 99.8 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಬ್ಯಾಟರಿ ಪ್ಯಾಕ್ |
99.8 ಕಿ.ವ್ಯಾಟ್ |
ಕ್ಲೈಮ್ ಮಾಡಲಾದ ರೇಂಜ್ |
561 ಕಿಮೀ ವರೆಗೆ (ARAI-MIDC ಪೂರ್ಣ) |
ಇಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ |
2 |
ಪವರ್ |
384 ಪಿಎಸ್ |
ಟಾರ್ಕ್ |
700 ಎನ್‌ಎಮ್ |
ಆಕ್ಸಿಲರೇಶನ್(0-100kmph) |
5.3 ಸೆಕೆಂಡ್‌ಗಳು |
ಡ್ರೈವ್ ಟೈಪ್ |
AWD (ಆಲ್ ವೀಲ್ ಡ್ರೈವ್) |
ARAI - ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ
MIDC - ಮೊಡಿಫೈಡ್ ಇಂಡಿಯನ್ ಡ್ರೈವ್ ಸೈಕಲ್
ಕಿಯಾದ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿ 350 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಅದರ ಬ್ಯಾಟರಿ ಪ್ಯಾಕ್ ಅನ್ನು ಕೇವಲ 24 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಇವಿ9 V2L (ವಾಹನದಿಂದ ಲೋಡ್) ಫಂಕ್ಷನ್ ಅನ್ನು ಹೊಂದಿದೆ, ಇದು ಕಾರಿನ ಬ್ಯಾಟರಿಯನ್ನು ಬಳಸಿಕೊಂಡು ಬೇರೆ ಡಿವೈಸ್‌ಗೆ ಪವರ್ ಅನ್ನು ಪೂರೈಸುತ್ತದೆ.
ಬೆಲೆ & ಪ್ರತಿಸ್ಪರ್ಧಿಗಳು
ಭಾರತದಲ್ಲಿ, ಕಿಯಾ ಇವಿ9, ಬಿಎಮ್‌ಡಬ್ಲ್ಯೂ iX ಮತ್ತು ಮರ್ಸಿಡೀಸ್ ಬೆಂಜ್ ಇಕ್ಯೂಇ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ