• English
  • Login / Register

ನವೀಕೃತ ಸೆಲ್ಟೋಸ್‌ನೊಂದಿಗೆ 10 ಲಕ್ಷ ಕಾರುಗಳ ಉತ್ಪಾದನೆಯ ಮೈಲುಗಲ್ಲು ದಾಟಿದ ಕಿಯಾದ ಭಾರತೀಯ ಘಟಕ

ಕಿಯಾ ಸೆಲ್ಟೋಸ್ ಗಾಗಿ rohit ಮೂಲಕ ಜುಲೈ 17, 2023 10:28 pm ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಮೇಡ್ ಇನ್ ಇಂಡಿಯಾ ಕಿಯಾದ 10 ಲಕ್ಷನೆಯ ಕಾರು ಹೊಸ ‘ಪ್ಯೂಟರ್ ಆಲಿವ್’ ಬಣ್ಣದಲ್ಲಿರುವ ಜಿಟಿ ಲೈನ್ ಮಾಡೆಲ್‌ನ ನವೀಕೃತ ಕಿಯಾ ಸೆಲ್ಟೋಸ್ ಆಗಿದೆ

Kia India 1 million cars production milestone

  •  ಒಟ್ಟು ಉತ್ಪಾದನೆಯು 10 ಲಕ್ಷ ಯೂನಿಟ್‌ಗಳಷ್ಟಾಗಿದ್ದು, ಇದರಲ್ಲಿ ಸೆಲ್ಟೋಸ್ 50 ಪ್ರತಿಶತಕ್ಕಿಂತ ಹೆಚ್ಚು ಕೊಡುಗೆಯನ್ನು ನೀಡುತ್ತಿದೆ.

  •  ಕಿಯಾ ಇಲ್ಲಿಯವರೆಗೆ ಅನಂತಪುರ ಘಟಕದಿಂದ 5.3 ಲಕ್ಷ ಯೂನಿಟ್ ಸೆಲ್ಟೋಸ್‌ಗಳನ್ನು ಉತ್ಪಾದಿಸಿದೆ.

  •  ಕಿಯಾ ಇಂಡಿಯಾವು ಸೋನೆಟ್‌ನ 3.3 ಲಕ್ಷಕ್ಕೂ ಹೆಚ್ಚಿನ ಯೂನಿಟ್‌ಗಳನ್ನು ಮತ್ತು ಕಾರೆನ್ಸ್‌ನ 1.2 ಲಕ್ಷ ಯೂನಿಟ್‌ಗಳನ್ನು ಉತ್ಪಾದಿಸಿದೆ.

  •  ನವೀಕೃತ ಸೆಲ್ಟೋಸ್‌ನ ಬುಕ್ಕಿಂಗ್‌ಗಳು ಈಗ ರೂ. 25000 ಕ್ಕೆ ತೆರೆದಿದೆ.

  •  ಇದು ಶೀಘ್ರದಲ್ಲಿಯೇ ಬಿಡುಗಡೆಗೊಳ್ಳುವ ನಿರೀಕ್ಷೆಯಿದ್ದು, ಬೆಲೆಗಳು ರೂ. 11 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್-ಶೋರೂಮ್)

 ಈ ನವೀಕೃತ ಕಿಯಾ ಸೆಲ್ಟೋಸ್ ಶೀಘ್ರದಲ್ಲಿಯೇ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು ಅದರ ಬುಕ್ಕಿಂಗ್ ಅನ್ನು ಈಗ ತೆರೆಯಲಾಗಿದೆ. ಅದರ ಬೆಲೆ ಘೋಷಣೆಗೆ ಮುಂಚಿತವಾಗಿಯೇ, 2023 ರ ಸೆಲ್ಟೋಸ್ ಇತ್ತೀಚಿಗೆ ಭಾರತದ ಅನಂತಪುರ ಘಟಕದ 10 ಲಕ್ಷ ಕಾರು ಉತ್ಪಾದನೆಯ ಮೈಲಿಗಲ್ಲನ್ನು ಪೂರೈಸಿತು. ಇದು ಜಿಟಿ ಲೈನ್ ವೇರಿಯೆಂಟ್ ಆಗಿದ್ದು ಸಂಪೂರ್ಣ ಕಪ್ಪಾದ ಒಳಾಂಗಣದಿಂದ ಕೂಡಿದೆ ಹಾಗೂ ‘ಪ್ಯೂಟರ್ ಆಲಿವ್’ ಅನ್ನು ಹೊಂದಿದೆ.

ಉತ್ಪಾದನೆಯಲ್ಲಿ ಸೆಲ್ಟೋಸ್‌ನ ಕೊಡುಗೆ

Kia Seltos facelift

 2019 ರ ಮಧ್ಯದಲ್ಲಿ ಮಾರುಕಟ್ಟೆಗೆ ಬಂದಾಗಿನಿಂದ, ಈ ಸೆಲ್ಟೋಸ್ ಇಲ್ಲಿಯವರೆಗೆ ಒಟ್ಟು 5 ಲಕ್ಷ ಯೂನಿಟ್‌ಗಳ ಮಾರಾಟವನ್ನು ಕಂಡಿದೆ. ಇದು ಕಿಯಾ ಇಂಡಿಯಾದ ಇತ್ತೀಚಿನ ಉತ್ಪಾದನಾ ಮೈಲಿಗಲ್ಲಿನ 50 ಪ್ರತಿಶತಕ್ಕಿಂತಲೂ ಹೆಚ್ಚಾಗಿದೆ. ಕೊರಿಯಾದ ಕಾರು ತಯಾರಕರು ಭಾರತದಲ್ಲಿ 5.3 ಲಕ್ಷಕ್ಕೂ ಸೆಲ್ಟೋಸ್‌ಗಳನ್ನು ಉತ್ಪಾದಿಸಿದ್ದು ಇದರಲ್ಲಿ ನವೀಕೃತ ಪೂರ್ವ ಮತ್ತು ನವೀಕೃತ ಎರಡೂ ವಿಧಗಳ ಎಸ್‌ಯುವಿಗಳು ಸೇರಿವೆ.

ಸಂಬಂಧಿತ: ಬಿಡುಗಡೆಗೆ ಮುಂಚಿತವಾಗಿ ಡೀಲರ್‌ಗಳನ್ನು ತಲುಪಿದ ನವೀಕೃತ ಕಿಯಾ ಸೆಲ್ಟೋಸ್

 ಕಿಯಾ ಇಂಡಿಯಾ ಉತ್ಪಾದನಾ ಸಾರಾಂಶ

Kia Sonet
Kia Carens

ಕಿಯಾದ ಅನಂತಪುರ ಘಟಕದಲ್ಲಿ ಉತ್ಪಾದಿಸಲಾದ 10 ಲಕ್ಷಕ್ಕೂ ಹೆಚ್ಚು ಕಾರುಗಳಲ್ಲಿ, 7.5 ಲಕ್ಷಕ್ಕೂ ಹೆಚ್ಚು ಮಾಡೆಲ್‌ಗಳು ದೇಶೀಯವಾಗಿ ಮಾರಾಟವಾಗಿದ್ದು ಸುಮಾರು 2.5 ಲಕ್ಷ ಯೂನಿಟ್‌ಗಳು ಕಾರು ತಯಾರಕರ ರಫ್ತಿಗೆ ಕೊಡುಗೆ ನೀಡಿವೆ. ಸೆಲ್ಟೋಸ್ ಆ ಮೈಲಿಗಲ್ಲಿನ ಸಾಧನೆಯ ಅರ್ಧದಷ್ಟಕ್ಕೆ ಕಾರಣವಾಗಿದ್ದರೆ, ಕಿಯಾ ಇಂಡಿಯಾ ಶ್ರೇಣಿಯಲ್ಲಿನ ಇತರ ಮಾಡೆಲ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಕಿಯಾ ಸೋನೆಟ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ, 3.3 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು, ಕಾರೆನ್ಸ್ ಎಂಪಿವಿಯ 1.2 ಲಕ್ಷ ಯೂನಿಟ್‌ಗಳು ಮತ್ತು ಕಾರ್ನಿವಲ್ ಎಂಪಿವಿಯ 14,500 ಯೂನಿಟ್‌ಗಳನ್ನು ತಯಾರಿಸಿದೆ.

 

ನವೀಕೃತ ಸೆಲ್ಟೋಸ್‌ನ ವಿವರಗಳು

Kia Seltos facelift rear

 ಕಿಯಾ ಸೆಲ್ಟೋಸ್ ಜಾಗತಿಕ ಮಾಡೆಲ್ ಆಗಿದ್ದರೂ ನಾವು ಭಾರತ ಕೇಂದ್ರಿತ ಮಾಡೆಲ್ ಅನ್ನು ಪಡೆಯುತ್ತೇವೆ ಮತ್ತು ಇದರ ಎಲ್ಲಾ ವಿವರಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಇದನ್ನು ಮೂರು ವಿಶಾಲ ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ: ಟೆಕ್ (HT) ಲೈನ್, GT ಲೈನ್ ಮತ್ತು X-ಲೈನ್. ನಿರ್ಗಮಿತ ಸೆಲ್ಟೋಸ್‌ನ ಉಪಕರಣ ಲಿಸ್ಟ್‌ಗಿಂತ ಈ ಕಾಂಪ್ಯಾಕ್ಟ್ ಎಸ್‌ಯುವಿ ಪ್ರಮುಖ ಹೆಚ್ಚುವರಿ ಫೀಚರ್‌ಗಳನ್ನು ಪಡೆಯುತ್ತದೆ.

ಕಿಯಾ ಈ ನವೀಕೃತ ಸೆಲ್ಟೋಸ್‌ನ ಬೆಲೆಯನ್ನು ರೂ 11 ಲಕ್ಷಕ್ಕೆ (ಎಕ್ಸ್-ಶೋರೂಮ್) ನಿಗದಿಪಡಿಸುವ ಸಾಧ್ಯತೆಯಿದೆ. ಇದು ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್, ಎಂಜಿ ಆಸ್ಟರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾಗಳಿಗೆ ಪೈಪೋಟಿ ಒದಗಿಸುತ್ತದೆ.

ಇದನ್ನೂ ಓದಿ: ನವೀಕೃತ ಕಿಯಾ ಸೆಲ್ಟೋಸ್ ವೇರಿಯೆಂಟ್‌ವಾರು ಫೀಚರ್‌ಗಳು ಬಹಿರಂಗ

ಇನ್ನಷ್ಟು ಇಲ್ಲಿ ಓದಿ : ಕಿಯಾ ಸೆಲ್ಟೋಸ್ ಡಿಸೇಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಸೆಲ್ಟೋಸ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience