Login or Register ಅತ್ಯುತ್ತಮ CarDekho experience ಗೆ
Login

ಡೀಲರ್‌ಶಿಪ್‌ಗಳನ್ನು ತಲುಪಿದ ನವೀಕೃತ ಕಿಯಾ ಸೆಲ್ಟೋಸ್, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ

published on ಜುಲೈ 14, 2023 11:04 pm by rohit for ಕಿಯಾ ಸೆಲ್ಟೋಸ್

ಡೀಲರ್‌ಶಿಪ್‌ನಲ್ಲಿ ಕಂಡುಬಂದ ಮಾಡೆಲ್ ನವೀಕೃತ ಕಿಯಾ ಸೆಲ್ಟೋಸ್‌, GT ಲೈನ್ ವೇರಿಯಂಟ್ ಆಗಿದ್ದು, ಇದು ಹೊಸ 'ಪ್ಯೂಟರ್ ಆಲಿವ್' ಬಣ್ಣದ ಆಯ್ಕೆಯಲ್ಲಿ ಫಿನಿಶಿಂಗ್ ಮಾಡಲ್ಪಟ್ಟಿದೆ.

  • ನವೀಕೃತ ಸೆಲ್ಟೋಸ್‌ನ ಬುಕಿಂಗ್‌ಗಳು ಜುಲೈ 14 ರಿಂದ ಪ್ರಾರಂಭವಾಗುತ್ತವೆ.

  • ಕಿಯಾ ಸೆಲ್ಟೋಸ್ ಎಸ್‌ಯುವಿ ಟೆಕ್ ಲೈನ್ (HT), GT ಲೈನ್ ಮತ್ತು X-ಲೈನ್ ಎಂಬ ಮೂರು ವಿಶಾಲವಾದ ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

  • ಚಿತ್ರಗಳಲ್ಲಿ ಕಂಡುಬಂದ ಎಸ್‌ಯುವಿ ಎಲ್ಇಡಿ ಲೈಟಿಂಗ್, 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು ಮತ್ತು 'GT ಲೈನ್' ಬ್ಯಾಡ್ಜ್ ಅನ್ನು ಹೊಂದಿತ್ತು.

  • ಇದರ ಇಂಟೀರಿಯರ್ ಹೊಸ ಇಂಟಿಗ್ರೇಟೆಡ್ ಡಿಸ್‌ಪ್ಲೇಗಳು, ಡ್ಯುಯಲ್-ಝೋನ್ AC ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿದೆ.

  • ಇದರ GTX+ ವೇರಿಯಂಟ್ ವಿಹಂಗಮ ಸನ್‌ರೂಫ್ ಮತ್ತು ADAS ನಂತಹ ಹೆಚ್ಚುವರಿ ಫೀಚರ್‌ಗಳನ್ನು ಸಹ ಒಳಗೊಂಡಿದೆ.

  • ಹೊಸ ಸೆಲ್ಟೋಸ್ ಮೂರು 1.5-ಲೀಟರ್ ಎಂಜಿನ್‌ಗಳಿಂದ ಚಾಲಿತವಾಗಿದ್ದು, ಪ್ರತಿಯೊಂದೂ ತನ್ನದೇ ಆದ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿವೆ.

  • ಇದು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ; ಬೆಲೆಗಳು ರೂ. 11 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ನವೀಕೃತ ಕಿಯಾ ಸೆಲ್ಟೋಸ್ ಅನ್ನು ಇತ್ತೀಚೆಗೆ ಭಾರತದಲ್ಲಿ ಅನಾವರಣಗೊಳಿಸಲಾಗಿದೆ. ಬಿಡುಗಡೆಯಾದ ಸುಮಾರು ನಾಲ್ಕು ವರ್ಷಗಳ ನಂತರ, ಸೆಲ್ಟೋಸ್ ಪ್ರಮುಖ ಅಪ್‌ಡೇಟ್ ಅನ್ನು ಪಡೆಯಲಿದೆ. ಹೊಸ ಕಿಯಾ ಸೆಲ್ಟೋಸ್ ಕಾರು ಟೆಕ್ ಲೈನ್ (HT), GT ಲೈನ್ ಮತ್ತು X-ಲೈನ್ ಎಂಬ ಮೂರು ವಿಶಾಲವಾದ ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಕಂಪನಿಯು ಜುಲೈ 14 ರಿಂದ ಹೊಸ ಸೆಲ್ಟೋಸ್‌ಗಾಗಿ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತದೆ. ಬಿಡುಗಡೆಗಿಂತ ಮೊದಲು ನೀವು ಅದನ್ನು ವೈಯಕ್ತಿಕವಾಗಿ ಪರಿಶೀಲಿಸಲು ಸಾಧ್ಯವಾಗುವಂತೆ ಡೀಲರ್‌ಶಿಪ್‌ಗಳಿಗೆ ಆಗಮಿಸುತ್ತಿರುವ ನವೀಕೃತ ಮಾಡೆಲ್‌ನ ಕೆಲವು ಇಮೇಜ್‌ಗಳನ್ನು ಪಡೆದುಕೊಂಡಿದ್ದೇವೆ.

ಕ್ಯಾಮೆರಾದಲ್ಲಿ ಸೆರೆಯಾದ ಮಾಡೆಲ್‌ನ ವಿವರಗಳು

ನಮಗೆ ದೊರಕಿದ ವಿಶೇಷ ಇಮೇಜ್‌ಗಳಿಂದ, ಈ ಎಸ್‌ಯುವಿ ಕಾರಿನ ಫಿನಿಶಿಂಗ್ ಅನ್ನು ಹೊಸ 'ಪ್ಯೂಟರ್ ಆಲಿವ್' ಪೇಂಟ್ ಆಯ್ಕೆಯಲ್ಲಿ ಮಾಡಲಾಗಿದೆ ಎಂದು ನಾವು ಗಮನಿಸಬಹುದು. ಟೈಲ್‌ಗೇಟ್‌ನಲ್ಲಿರುವ 'GT ಲೈನ್' ಬ್ಯಾಡ್ಜಿಂಗ್ ಇದು ಟಾಪ್ GTX+ ವೇರಿಯಂಟ್ ಆಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದು 4-ಪೀಸ್ ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಜೇನುಗೂಡು ಮಾದರಿಯ ಗ್ರಿಲ್, DRL ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು, ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳು, 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ.

ಇಂಟೀರಿಯರ್

ಇಂಟೀರಿಯರ್ ಇಮೇಜ್‌ಗಳಲ್ಲಿ, ನೀವು GTX+ ಸಂಬಂಧಿತ ಫೀಚರ್‌ಗಳಾದ ಎರಡು 10.25-ಇಂಚಿನ ಡಿಸ್‌ಪ್ಲೇಗಳು (ಒಂದು ಇನ್‌ಸ್ಟ್ರುಮೆಂಟೇಶನ್ ಮತ್ತು ಇನ್ನೊಂದು ಇನ್ಫೋಟೇನ್ಮೆಂಟ್‌ಗಾಗಿ), ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಆಟೋ-ಹೋಲ್ಡ್ ಫಂಕ್ಷನ್ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಗಮನಿಸಬಹುದು. ಇವುಗಳ ಹೊರತಾಗಿ GTX+ ನಲ್ಲಿ ಕಂಡುಬರುವ ಇತರ ಫೀಚರ್‌ಗಳ ಪಟ್ಟಿ ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 8-ವೇ ಚಾಲಿತ ಡ್ರೈವರ್ ಸೀಟ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ: ನವೀಕೃತ ಕಿಯಾ ಸೆಲ್ಟೋಸ್‌ನ ಯಾವ ವೇರಿಯಂಟ್‌ನಲ್ಲಿ, ಯಾವ ಫೀಚರ್‌ಗಳು ಲಭ್ಯವಿವೆ ಎಂಬುದನ್ನು ಇಲ್ಲಿ ತಿಳಿಯಿರಿ

ಹೆಚ್ಚಿನ ಸುರಕ್ಷತಾ ತಂತ್ರಜ್ಞಾನ

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ-ಬೀಮ್ ಅಸಿಸ್ಟ್ ಮತ್ತು ಡ್ರೈವರ್ ಅಟೆನ್ಟಿವ್‌ನೆಸ್ ಅಲರ್ಟ್‌ನಂತಹ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS)ನೊಂದಿಗೆ ನವೀಕೃತ ಕಿಯಾ ಸೆಲ್ಟೋಸ್ ಅನ್ನು ಸಜ್ಜುಗೊಳಿಸಿದೆ. ಎಸ್‌ಯುವಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳಂತಹ ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆ

2023 ರ ಸೆಲ್ಟೋಸ್ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳ ಆಯ್ಕೆಯನ್ನು ಉಳಿಸಿಕೊಂಡಿದೆ. ಹುಂಡೈ ಕ್ರೆಟಾವನ್ನು ಹೊರತುಪಡಿಸಿ ಇದು ಎರಡನೆಯ ಆಯ್ಕೆಯನ್ನು ನೀಡುವ ಏಕೈಕ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. ಇದರ ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳು ಈ ಕೆಳಗಿನಂತಿವೆ:

ನಿರ್ದಿಷ್ಟ ವಿವರಣೆ

1.5-ಲೀಟರ್ ಪೆಟ್ರೋಲ್

1.5-ಲೀಟರ್ ಟರ್ಬೋ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್

115PS

160PS

116PS

ಟಾರ್ಕ್

144Nm

253Nm

250Nm

ಟ್ರಾನ್ಸ್‌ಮಿಷನ್

6-ಸ್ಪೀಡ್ MT, CVT

6- ಸ್ಪೀಡ್ iMT, 7- ಸ್ಪೀಡ್ DCT

6- ಸ್ಪೀಡ್ iMT, 6- ಸ್ಪೀಡ್ AT

ಇದನ್ನೂ ನೋಡಿ: ಈ 15 ಇಮೇಜ್‌ಗಳಿಂದ ನವೀಕೃತ ಕಿಯಾ ಸೆಲ್ಟೋಸ್‌ನ ಸಂಪೂರ್ಣ ನೋಟವನ್ನು ಪಡೆದುಕೊಳ್ಳಿ

ಬಿಡುಗಡೆ ಮತ್ತು ಸ್ಪರ್ಧೆ

ಕಿಯಾ ಶೀಘ್ರದಲ್ಲೇ ನವೀಕೃತ ಸೆಲ್ಟೋಸ್ ಅನ್ನು ಸುಮಾರು 11 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡುತ್ತದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ಹುಂಡೈ ಕ್ರೆಟಾದ ಹೊರತಾಗಿ, ನವೀಕೃತ ಎಸ್‌ಯುವಿ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಗ್ರ್ಯಾಂಡ್ ವಿಟಾರಾ, MG ಆಸ್ಟರ್, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಮುಂಬರುವ ಸಿಟ್ರಾನ್ C3 ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ಗಳೊಂದಿಗೆ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ: ಕಿಯಾ ಸೆಲ್ಟೋಸ್ ಡೀಸೆಲ್

r
ಅವರಿಂದ ಪ್ರಕಟಿಸಲಾಗಿದೆ

rohit

  • 22 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೆಲ್ಟೋಸ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ