ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್: ಪೆಟ್ರೋಲ್ ಮೈಲೇಜ್ ಹೋಲಿಕೆ
ಕಿಯಾ ಸೆಲ್ಟೋಸ್ ಗಾಗಿ rohit ಮೂಲಕ ಜುಲೈ 31, 2023 09:26 pm ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸಾಮಾನ್ಯ ಆಯ್ಕೆಯಾಗಿದೆ, ಆದರೆ ಅತ್ಯುತ್ತಮ ಇಂಧನ ದಕ್ಷತೆಯನ್ನು ಕ್ಲೈಮ್ ಮಾಡುವ ಕಾರು ಯಾವುದು?
ಕಿಯಾ ಸೆಲ್ಟೋಸ್‌ಗೆ ಇತ್ತೀಚೆಗೆ ಮಧ್ಯಂತರ ನವೀಕರಣ ನೀಡಲಾಗಿದ್ದು, ಇದರಲ್ಲಿ ಹೊಸ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ನೀಡಲಾಗಿದೆ ಮತ್ತು ಅದೇ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳನ್ನು ಅವುಗಳ ಆಯಾ ಗೇರ್‌ಬಾಕ್ಸ್‌ಗಳೊಂದಿಗೆ ಉಳಿಸಿಕೊಳ್ಳಲಾಗಿದೆ. ನೀವು ಕಿಯಾ SUV ಯ 1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್ ಅನ್ನು ಆಯ್ಕೆ ಮಾಡಲು ಯೋಚಿಸುತ್ತಿದ್ದು, ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಇದರ ಇಂಧನ ದಕ್ಷತೆಯ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ಈ ಕೆಳಗಿನ ಟೇಬಲ್ ಅನ್ನು ನೋಡಿ:
ಪವರ್‌ಟ್ರೇನ್‌ಗಳು ಮತ್ತು ಇಂಧನ ದಕ್ಷತೆಗಳು ಹೋಲಿಸಲಾಗಿದೆ
ನಿರ್ದಿಷ್ಟತೆ |
ಕಿಯಾ ಸೆಲ್ಟೋಸ್ |
ಹ್ಯುಂಡೈ ಕ್ರೆಟಾ |
ಮಾರುತಿ ಗ್ರ್ಯಾಂಡ್ ವಿಟಾರಾ |
ಟೊಯೋಟಾ ಹೈರೈಡರ್ |
ಇಂಜಿನ್ |
1.5-ಲೀಟರ್ ಪೆಟ್ರೋಲ್ |
1.5- ಲೀಟರ್ ಪೆಟ್ರೋಲ್ |
||
ಪವರ್ |
115PS |
103PS |
||
ಟಾರ್ಕ್ |
144Nm |
137Nm |
||
ಟ್ರಾನ್ಸ್‌ಮಿಶನ್ |
6-ಸ್ಪೀಡ್ MT, CVT |
5-ಸ್ಪೀಡ್ MT, 6- ಸ್ಪೀಡ್ AT |
||
ಕ್ಲೈಮ್ ಮಾಡಲಾದ ಇಂಧನ ದಕ್ಷತೆ |
17kmpl, 17.7kmpl |
16.8kmpl, 16.9kmpl |
21.11kmpl/ 19.38kmpl (AWD), 20.58kmpl |
N.A.* |
*N.A.- ಅನ್ವಯವಾಗುವುದಿಲ್ಲ
ಮೇಲೆ ನೋಡಿದಂತೆ, ಮಾರುತಿ ಗ್ರ್ಯಾಂಡ್ ವಿಟಾರಾದ ಪೆಟ್ರೋಲ್-ಮ್ಯಾನುವಲ್ ಜೋಡಿಯು 21kmpl ನ ಅತ್ಯಂತ ಹೆಚ್ಚು ಕ್ಲೈಮ್ ಮಾಡಲಾದ ಮೈಲೇಜ್ ಅನ್ನು ನೀಡುತ್ತದೆ ಹಾಗೆಯೇ ಇದರ ಪೆಟ್ರೋಲ್-ಆಟೋ ಸೆಟಪ್ 20.5kmpl ಕ್ಕಿಂತ ತುಸು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.
ಇಲ್ಲಿರುವ ಎಲ್ಲಾ ಕಾಂಪ್ಯಾಕ್ಟ್ SUVಗಳಲ್ಲಿ, ಹ್ಯುಂಡೈ ಕ್ರೆಟಾದ 1.5-ಲೀಟರ್ ಪೆಟ್ರೋಲ್ ಇಂಜಿನ್ ಅತ್ಯಂತ ಹೆಚ್ಚು ಇಂಧನವನ್ನು ಬಳಸಿಕೊಂಡು ಸಣ್ಣ ಅಂತರದಲ್ಲಿ ನವೀಕೃತ ಕಿಯಾ ಸೆಲ್ಟೋಸ್‌ಗಿಂತ ಹಿಂದಿದೆ. ಗಮನಾರ್ಹ ವಿಷಯವೆಂದರೆ, ಹ್ಯುಂಡೈ SUVಯ ಅಂಕಿಗಳು BS6.2ಗೂ ಮೊದಲು ಅಪ್‌ಡೇಟ್ ಮಾಡಲಾದ ಪವರ್‌ಟ್ರೇನ್‌ನದ್ದಾಗಿದೆ. ಕೊರಿಯನ್ SUVಗಳಿಗೂ ಕಾರ್ಯಕ್ಷಮತೆಯಲ್ಲಿ ಹೆಚ್ಚಿನ ರೇಟ್ ನೀಡಲಾಗಿದ್ದು ಬಹುಶಃ ಕಡಿಮೆ ಮೈಲೇಜ್ ಇದಕ್ಕೆ ಕಾರಣ ಇರಬಹುದು.
ಟೊಯೋಟಾ ಹೈರೈಡರ್‌ನ ಕ್ಲೈಮ್ ಮಾಡಲಾದ ಮೈಲೇಜ್ ಲಭ್ಯವಿರುವುದಿಲ್ಲವಾದರೂ ಇವು ಗ್ರ್ಯಾಂಡ್ ವಿಟಾರಾದ ಅಂಕಿಗಳನ್ನೇ ಹೋಲುತ್ತವೆ, ಯಾಕೆಂದರೆ ಮೂಲಭೂತವಾಗಿ ಎರಡೂ ಕೂಡಾ SUVಗಳೇ ಆಗಿವೆ. ಈ ಎರಡೂ SUV ಆಫರಿಂಗ್‌ಗಳು ಸ್ಮಾರ್ಟ್-ಹೈಬ್ರಿಡ್ ತಂತ್ರಜ್ಞಾನವನ್ನು ಪೆಡದಿದ್ದು ಇದು ಸೆಲ್ಟೋಸ್-ಕ್ರೆಟಾ ಜೋಡಿ ಹೆಚ್ಚಿನ ಇಂಧನ ದಕ್ಷತೆಯನ್ನು ನೀಡಲು ಕಾರಣವಿರಬಹುದು. ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಮಾತ್ರ ಸರಿಯಾದ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಅನ್ನು ಪೆಡೆದಿರುವ SUVಗಳಾಗಿವೆ. ಈ ಎರಡು ಕಾಂಪ್ಯಾಕ್ಟ್ SUVಗಳು ಆಲ್-ವ್ಹೀಲ್ ಡ್ರೈವ್‌ಟ್ರೇನ್ (AWD) ಆಯ್ಕೆಯನ್ನು ಹೊಂದಿರುವ ವಿಭಾಗದಲ್ಲಿನ ಏಕೈಕ ಮಾಡಲ್ ಆಗಿರುವ ಪ್ರಯೋಜನವನ್ನು ಪಡೆದಿದೆ.
ಸಂಬಂಧಿತ: ಕಿಯಾ ಸೆಲ್ಟೋಸ್ ವರ್ಸಸ್ ಸ್ಕೋಡಾ ಕುಷಕ್ ವರ್ಸಸ್ ಫೋಕ್ಸ್‌ವಾಗನ್ ಟೈಗನ್: ಟರ್ಬೋ DCT ಕ್ಲೈಮ್ ಮಾಡಲಾದ ಮೈಲೇಜ್ ಹೋಲಿಕೆ
ಈ SUVಗಳ ವೇರಿಯೆಂಟ್‌ವಾರು ಪವರ್‌ಟ್ರೇನ್ ಆಯ್ಕೆಗಳು
1.5-ಲೀಟರ್ ಪೆಟ್ರೋಲ್ MT |
1.5- ಲೀಟರ್ ಪೆಟ್ರೋಲ್ CVT |
1.5- ಲೀಟರ್ ಪೆಟ್ರೋಲ್ AT |
|
ಕಿಯಾ ಸೆಲ್ಟೋಸ್ |
HTE, HTK, HTK+, and HTX |
HTX |
– |
ಹ್ಯುಂಡೈ ಕ್ರೆಟಾ |
E, EX, S, S+ ನೈಟ್, SX ಎಕ್ಸಿಕ್ಯೂಟಿವ್, ಮತ್ತು SX |
SX, SX (O), ಮತ್ತು SX (O) ನೈಟ್ |
– |
ಮಾರುತಿ ಗ್ರ್ಯಾಂಡ್ ವಿಟಾರಾ |
ಸಿಗ್ಮಾ, ಡೆಲ್ಟಾ, ಝೆಟಾ, ಆಲ್ಫಾ, ಮತ್ತು ಆಲ್ಫಾ AWD |
– |
ಡೆಲ್ಟಾ, ಝೆಟಾ ಮತ್ತು ಆಲ್ಫಾ |
ಟೊಯೋಟಾ ಹೈರೈಡರ್ |
E, S, G, ಮತ್ತು V |
– |
S, G, ಮತ್ತು V |
...ಮತ್ತು ಇಲ್ಲಿವೆ ಅವುಗಳ ಬೆಲೆಗಳು
ಸ್ವಾಭಾವಿಕವಾಗಿ ಚೂಷಿಸಲ್ಪಡುವ ಸೆಲ್ಟೋಸ್ ವೇರಿಯೆಂಟ್‌ಗಳಿಗೆ ಕಿಯಾ ರೂ10.90 ಲಕ್ಷ ಮತ್ತು ರೂ 16.59 ಲಕ್ಷದ ನಡುವೆ ಬೆಲೆಯನ್ನು ನಿಗದಿಪಡಿಸಿದೆ. ಹ್ಯುಂಡೈ ಕ್ರೆಟಾ ವೇರಿಯೆಂಟ್‌ಗಳೂ ಅದೇ ಪವರ್‌ಟ್ರೇನ್‌ಗಳನ್ನು ಹೊಂದಿದ್ದು ಬೆಲೆಗಳು ರೂ 10.87 ಲಕ್ಷದಿಂದ ರೂ 17.70 ಲಕ್ಷದ ತನಕ ಇದೆ.
ಗ್ರ್ಯಾಂಡ್ ವಿಟಾರಾ-ಹೈರೈಡರ್ ಜೋಡಿಯ ಬೆಲೆಗಳು ರೂ10.70 ಲಕ್ಷದಿಂದ ರೂ 17.24 ಲಕ್ಷದ ತನಕ ಇದೆ. 1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಮೋಟರ್ ಹೊಂದಿರುವ ಇನ್ನೊಂದು ವಿಭಾಗ MG ಎಸ್ಟರ್, ಆದರೆ ಇದರ ಕ್ಲೈಮ್ ಮಾಡಲಾದ ಇಂಧನ ಅಂಕಿಗಳು ಈ ಹೋಲಿಕೆಯನ್ನು ಪ್ರಕಟಿಸುವ ಸಂದರ್ಭದಲ್ಲಿ ದೊರೆತಿಲ್ಲ.
ಇದನ್ನೂ ಓದಿ: ನವೀಕೃತ ಕಿಯಾ ಸೆಲ್ಟೋಸ್ ವರ್ಸಸ್ ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಷಕ್ ಮತ್ತು ಇತರೆ: ಬೆಲೆ ಹೋಲಿಕೆ
ಸ್ವಾಭಾವಿಕವಾಗಿ ಚೂಷಿಸಲ್ಪಡುವ ಇಂಜಿನ್‌ಗಳ ಆಯ್ಕೆಯಲ್ಲಿ, ಅವುಗಳ ಆಯಾ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳು ಇಲ್ಲಿ ಲಭ್ಯವಿದ್ದು, ನಿಮ್ಮ ಆಯ್ಕೆಯ SUV ಯಾವುದು? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರ
ಇನ್ನಷ್ಟು ಓದಿ : ಕಿಯಾ ಸೆಲ್ಟೋಸ್ ಡೀಸೆಲ್
0 out of 0 found this helpful