ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಕ್ ಮತ್ತು ಇತರೆ: ಬೆಲೆ ಹೋಲಿಕೆ
ಕಿಯಾ ಸೆಲ್ಟೋಸ್ ಗಾಗಿ rohit ಮೂಲಕ ಜುಲೈ 24, 2023 05:34 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ನವೀಕರಣದೊಂದಿಗೆ, ಕಿಯಾ ಸೆಲ್ಟೋಸ್ ತನ್ನ ವಿಭಾಗದಲ್ಲಿ ಅತ್ಯಂತ ಸುಸಜ್ಜಿತ ಕಾರಾಗಿ ಹೊರಹೊಮ್ಮಿದ್ದು, ತನ್ನ ಪ್ರತಿಸ್ಪರ್ಧಿಗಳಿಗೆ ಹೊಲಿಸಿದಾಗ ಇದರ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ.
ನವೀಕೃತ ಕಿಯಾ ಸೆಲ್ಟೋಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದನ್ನು ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ : ಟೆಕ್ (HT) ಲೈನ್, GT ಲೈನ್ ಮತ್ತು X-ಲೈನ್. ಮಿಡ್‌ಲೈಫ್ ರಿಫ್ರೆಶ್‌ನೊಂದಿಗೆ ಈ ಕಾಂಪ್ಯಾಕ್ಟ್ SUV ಹೆಚ್ಚು ದುಬಾರಿಯಾಗಿದ್ದು ತನ್ನ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಮಾಡೆಲ್ ಆಗಿದೆ (ಇದಕ್ಕೆ ಕಾರಣ ಇದರ ಟರ್ಬೋ-ಪೆಟ್ರೋಲ್ ಇಂಜಿನ್).
ಕಿಯಾದ ನವೀಕೃತ ಕಾಂಪ್ಯಾಕ್ಟ್ SUV ಬೆಲೆಯನ್ನು ಅದರ ವಿಭಾಗದ ಪ್ರತಿಸ್ಪರ್ಧಿಗಳೊಂದಿಗೆ ಹೋಲಿಸಿರುವುದನ್ನು ನೋಡೋಣ:
ಪೆಟ್ರೋಲ್-ಮ್ಯಾನುವಲ್
2023 ಕಿಯಾ ಸೆಲ್ಟೋಸ್ |
ಹ್ಯುಂಡೈ ಕ್ರೆಟಾ |
ಮಾರುತಿ ಗ್ರ್ಯಾಂಡ್ ವಿಟಾರಾ |
ಟೊಯೋಟಾ ಹೈರೈಡರ್ |
ಸ್ಕೋಡಾ ಕುಶಕ್ |
ಫೋಕ್ಸ್‌ವಾಗನ್ ಟೈಗನ್ |
MG ಎಸ್ಟರ್ |
HTE - ರೂ 10.89 ಲಕ್ಷ |
E - ರೂ 10.87 ಲಕ್ಷ |
ಸಿಗ್ಮಾ - ರೂ 10.70 ಲಕ್ಷ |
E - Rs 10.86 ಲಕ್ಷ |
ಸ್ಟೈಲ್ - ರೂ 10.81 ಲಕ್ಷ |
||
HTK - ರೂ 12.09 ಲಕ್ಷ |
EX - ರೂ 11.81 ಲಕ್ಷ |
ಡೆಲ್ಟಾ - ರೂ 12.10 ಲಕ್ಷ |
ಆ್ಯಕ್ಟಿವ್ 1L - ರೂ 11.59 ಲಕ್ಷ |
ಕಂಫರ್ಟ್‌ಲೈನ್ 1L - ರೂ 11.62 ಲಕ್ಷ |
||
S - ರೂ 12.61 ಲಕ್ಷ |
ಆನಿಕ್ಸ್ ಆವೃತ್ತಿ 1L - ರೂ 12.39 ಲಕ್ಷ |
ಸೂಪರ್ - ರೂ 12.51 ಲಕ್ಷ |
||||
HTK+ - ರೂ 13.49 ಲಕ್ಷ |
S - ರೂ 13.05 ಲಕ್ಷ |
ಆ್ಯಂಬಿಷನ್1L - ರೂ 13.34 ಲಕ್ಷ |
||||
S+ ನೈಟ್ - ರೂ 13.96 ಲಕ್ಷ |
ಹೈಲೈನ್ 1L - ರೂ 13.70 ಲಕ್ಷ |
|||||
SX ಎಕ್ಸಿಕ್ಯೂಟಿವ್ - ರೂ 13.99 ಲಕ್ಷ |
ಝೆಟಾ - ರೂ 13.91 ಲಕ್ಷ |
ಸ್ಮಾರ್ಟ್ - ರೂ 14.20 ಲಕ್ಷ |
||||
G - ರೂ 14.49 ಲಕ್ಷ |
||||||
HTK+ iMT - ರೂ 14.99 ಲಕ್ಷ |
SX - ರೂ 14.81 ಲಕ್ಷ |
|||||
HTX - ರೂ 15.19 ಲಕ್ಷ |
ಆ್ಯಂಬಿಷನ್ 1.5L - ರೂ 14.99 ಲಕ್ಷ |
ಶಾರ್ಪ್ ಐವರಿ - ರೂ 15.14 lakh/ ಶಾರ್ಪ್ ಸಂಗ್ರಿಯಾ - ರೂ 15.24 ಲಕ್ಷ |
||||
ಆಲ್ಫಾ - ರೂ 15.41 ಲಕ್ಷ |
ಸ್ಟೈಲ್ NSR 1L - ರೂ 15.59 ಲಕ್ಷ |
|||||
ಸ್ಟೈಲ್ 1L - ರೂ 15.79 ಲಕ್ಷ |
ಟಾಪ್‌ಲೈನ್ 1L - ರೂ 15.84 ಲಕ್ಷ |
|||||
V - ರೂ 16.04 ಲಕ್ಷ |
ಮ್ಯಾಟ್ ಆವೃತ್ತಿ 1L - ರೂ 16.19 ಲಕ್ಷ |
GT 1.5L - ರೂ 16.26 ಲಕ್ಷ |
||||
ಆಲ್ಫಾ AWD - ರೂ 16.91 ಲಕ್ಷ |
ಮೋಂಟೆ ಕಾರ್ಲೋ 1L - ರೂ 16.49 ಲಕ್ಷ |
|||||
V AWD - ರೂ 17.34 ಲಕ್ಷ |
||||||
ಸ್ಟೈಲ್ 1.5L - ರೂ 17.79 ಲಕ್ಷ |
GT+ 1.5L - ರೂ 17.80 ಲಕ್ಷ |
|||||
ಸ್ಟೈಲ್ 1.5L ಲಾವಾ ಆವೃತ್ತಿ - ರೂ 17.99 ಲಕ್ಷ |
GT+ ಎಡ್ಜ್ 1.5L - ರೂ 18 ಲಕ್ಷ |
|||||
HTX+ iMT - ರೂ 18.29 ಲಕ್ಷ |
ಮ್ಯಾಟ್ ಆವೃತ್ತಿ 1.5L - ರೂ 18.19 ಲಕ್ಷ |
GT+ ಎಡ್ಜ್ ಮ್ಯಾಟ್ 1.5L - ರೂ 18.20 ಲಕ್ಷ |
||||
ಮೋಂಟೆ ಕಾರ್ಲೋ 1.5L - ರೂ 18.49 ಲಕ್ಷ |
-
ನವೀಕೃತ ಕಿಯಾ ಸೆಲ್ಟೋಸ್‌ನ ಆರಂಭಿಕ ಬೆಲೆಯು ಅದರ ಪ್ರಮುಖ ಪ್ರತಿಸ್ಪರ್ಧಿಗಳ ಬೆಲೆಯೊಂದಿಗೆ ಸಮಾನಾಗಿದೆ. ಇದೇವೇಳೆ ಮಾರುತಿ ಗ್ರ್ಯಾಂಡ್ ವಿಟಾರಾದ ಆರಂಭಿಕ ಬೆಲೆಯು ಹೊಸ ಸೆಲ್ಟೋಸ್‌ಗಿಂತ ಕಡಿಮೆಯಾಗಿದೆ, ಸ್ಕೋಡಾ ಕುಶಕ್-ಫೋಕ್ಸ್‌ವಾಗನ್ ಟೈಗನ್ ಜೋಡಿಯ ರೂ 11.50 ಕ್ಕಿಂತಲೂ ಹೆಚ್ಚಿನ ಅತ್ಯಂತ ದುಬಾರಿ ಆರಂಭಿಕ ಬೆಲೆಯನ್ನು ಹೊಂದಿದೆ.
-
ಮೇಲೆ ಉಲ್ಲೇಖಿಸಲಾದ ಏಳು ಕಾಂಪ್ಯಾಕ್ಟ್ SUVಗಳಲ್ಲಿ ಐದು-ಜರ್ಮನ್ ಜೋಡಿಯನ್ನು ಹೊರತುಪಡಿಸಿ- ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ 1.5-ಲೀಟರ್ ಪೆಟ್ರೋಲ್ ಇಂಜಿನ್ ಪಡೆಯುತ್ತವೆ.
-
ಹೊಸ 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ನೊಂದಿಗೆ 6-ಸ್ಪೀಡ್ iMT (ಕ್ಲಚ್‌ಲೆಸ್ ಮ್ಯಾನುವಲ್) ಆಯ್ಕೆಯನ್ನು ನೀಡುವ ಏಕೈಕ ಕಾಂಪ್ಯಾಕ್ಟ್ SUV ಈ ನವೀಕೃತ ಕಿಯಾ ಸೆಲ್ಟೋಸ್. ತನ್ನ ಶ್ರೇಣಿಯಲ್ಲಿ 160PS/253Nm ಉತ್ಪಾದಿಸುವ ಹೊಸ ಸೆಲ್ಟೋಸ್ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ್ಯ ಟಾರ್ಕ್ ಇರುವಂಥ SUV ಆಗಿದೆ.
-
1-ಲೀಟರ್ ಮತ್ತು 1.5 ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಕೇವಲ ಸ್ಕೋಡಾ ಕುಶಕ್ ಮತ್ತು ಫೋಕ್ಸ್‌ವಾಗನ್ ಟೈಗನ್ ಮಾತ್ರ ಪಡೆದಿದೆ.
-
ನೀವು CNG ಪವರ್‌ಟ್ರೇನ್ ಬಯಸುವುದಾದರೆ, ಈ ವಿಭಾಗದಲ್ಲಿ ನಿಮ್ಮ ಆಯ್ಕೆಗಳು ಮಾರುತಿ ಮತ್ತು ಟೊಯೋಟಾ SUVಗಳಿಗೆ ಸೀಮಿತವಾಗುತ್ತದೆ. ಅಲ್ಲದೇ ಇವುಗಳು ತಮ್ಮ ಟಾಪ್-ಸ್ಪೆಕ್ ಮ್ಯಾನುವಲ್ ವೇರಿಯೆಂಟ್‌ಗಳೊಂದಿಗೆ ಆಲ್-ವ್ಹೀಲ್ ಡ್ರೈವ್ ಟ್ರೇನ್ (AWD) ಆಯ್ಕೆಯೊಂದಿಗೆ ಬರುವ SUVಗಳು
-
ರೂ 18.29 ಲಕ್ಷಕ್ಕೆ, ಹೊಸ ಸೆಲ್ಟೋಸ್ ಆಫರ್‌ನಲ್ಲಿ ದುಬಾರಿ ಶ್ರೇಣಿಯ ಟಾಪ್ ಪೆಟ್ರೋಲ್-ಮ್ಯಾನುವಲ್ ವೇರಿಯೆಂಟ್‌ಗಳಲ್ಲಿ ಒಂದಾಗಿದ್ದು, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8-ವಿಧದಲ್ಲಿ ಚಾಲಿತಗೊಳ್ಳುವ ಡ್ರೈವರ್ ಸೀಟ್ ಮತ್ತು ಸೀಟ್ ವೆಂಟಿಲೇಶನ್ ಮುಂತಾದ ಪ್ರೀಮಿಯಂ ಫೀಚರ್‌ಗಳನ್ನು ಪಡೆದಿದೆ.
-
MG ಎಸ್ಟರ್ ಮತ್ತು ಗ್ರ್ಯಾಂಡ್ ವಿಟಾರಾ-ಹೈರೈಡರ್, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಹೊಂದಿರುವ ಇತರ SUVಗಳಿಗಿಂತ ಭಿನ್ನವಾಗಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಪೆಟ್ರೋಲ್ ಇಂಜಿನ್ ಪಡೆದಿರುವ ಜೋಡಿಯಾಗಿದೆ.
ಪೆಟ್ರೋಲ್-ಆಟೋ
2023 ಕಿಯಾ ಸೆಲ್ಟೋಸ್ |
ಹ್ಯುಂಡೈ ಕ್ರೆಟಾ |
ಮಾರುತಿ ಗ್ರ್ಯಾಂಡ್ ವಿಟಾರಾ |
ಟೊಯೋಟಾ ಹೈರೈಡರ್ |
ಸ್ಕೋಡಾ ಕುಶಕ್ |
ಫೋಕ್ಸ್‌ವಾಗನ್ ಟೈಗನ್ |
MG ಎಸ್ಟರ್ |
ಡೆಲ್ಟಾ AT - ರೂ 13.60 ಲಕ್ಷ |
S AT - ರೂ 13.81 ಲಕ್ಷ |
ಸೂಪರ್ CVT - ರೂ 13.93 ಲಕ್ಷ |
||||
ಆ್ಯಂಬಿಷನ್ 1L AT - ರೂ 15.14 ಲಕ್ಷ |
ಹೈಲೈನ್ 1L AT - ರೂ 15.20 ಲಕ್ಷ |
|||||
ಝೆಟಾ AT - ರೂ 15.41 ಲಕ್ಷ |
G AT - ರೂ 15.69 ಲಕ್ಷ |
ಸ್ಮಾರ್ಟ್ CVT - ರೂ 15.49 ಲಕ್ಷ |
||||
HTX CVT - ರೂ 16.59 ಲಕ್ಷ |
SX CVT - ರೂ 16.32 ಲಕ್ಷ |
ಶಾರ್ಪ್ ಐವರಿ CVT - ರೂ 16.13 ಲಕ್ಷ / ಶಾರ್ಪ್ ಸಂಗ್ರಿಯಾ CVT - ರೂ 16.23 ಲಕ್ಷ |
||||
ಆಲ್ಫಾ AT - ರೂ 16.91 ಲಕ್ಷ |
ಆ್ಯಂಬಿಷನ್ 1.5L DSG - ರೂ 16.79 ಲಕ್ಷ |
GT 1.5L DSG - ರೂ 16.80 ಲಕ್ಷ |
ಸೇವಿ ಐವರಿ CVT - ರೂ 16.99 ಲಕ್ಷ/ ಸೇವಿ ಸಂಗ್ರಿಯಾ CVT - ರೂ 17.09 ಲಕ್ಷ |
|||
SX (O) CVT - ರೂ 17.53 ಲಕ್ಷ |
V AT - ರೂ 17.24 ಲಕ್ಷ |
ಸ್ಟೈಲ್ 1L AT - ರೂ 17.39 ಲಕ್ಷ |
ಟಾಪ್‌ಲೈನ್ 1L AT - ರೂ 17.35 ಲಕ್ಷ |
ಸ್ಮಾರ್ಟ್ AT = ರೂ 17.10 ಲಕ್ಷ |
||
SX (O) ನೈಟ್ CVT - ರೂ 17.70 ಲಕ್ಷ |
ಮ್ಯಾಟ್ ಆವೃತ್ತಿ 1L AT - ರೂ 17.79 ಲಕ್ಷ |
ಶಾರ್ಪ್ ಐವರಿ AT - ರೂ 17.95 ಲಕ್ಷ |
||||
ಸೇವಿ ಐವರಿ AT - ರೂ 17.95 ಲಕ್ಷ |
||||||
ಮೋಂಟೆ ಕಾರ್ಲೋ 1L AT - ರೂ 18.09 ಲಕ್ಷ |
ಶಾರ್ಪ್ ಸಂಗ್ರಿಯಾ AT - ರೂ 18.05 ಲಕ್ಷ |
|||||
ಸ್ಟೈಲ್ 1.5L DSG - ರೂ 18.99 ಲಕ್ಷ |
GT+ 1.5L DSG (ವಾತಾಯನದ ಸೀಟುಗಳು) - ರೂ 19.06 ಲಕ್ಷ |
ಸೇವಿ ಸಂಗ್ರಿಯಾ AT - ರೂ 18.68 ಲಕ್ಷ |
||||
HTX+ ಟರ್ಬೋ DCT - ರೂ 19.19 ಲಕ್ಷ |
ಸ್ಟೈಲ್ ಲಾವಾ 1.5L ಲಾವಾ ಆವೃತ್ತಿ - ರೂ 19.19 ಲಕ್ಷ |
GT+ ಎಡ್ಜ್ 1.5L DSG - ರೂ 19.26 ಲಕ್ಷ |
||||
ಮ್ಯಾಟ್ ಆವೃತ್ತಿ 1.5L DSG - ರೂ 19.39 ಲಕ್ಷ |
GT+ ಎಡ್ಜ್ ಮ್ಯಾಟ್ 1.5L DSG - ರೂ 19.46 ಲಕ್ಷ |
|||||
GTX+ ಟರ್ಬೋ DCT - ರೂ 19.79 ಲಕ್ಷ |
ಮೋಂಟೆ ಕಾರ್ಲೋ DSG - ರೂ 19.69 ಲಕ್ಷ |
|||||
X-ಲೈನ್ ಟರ್ಬೋ DCT - ರೂ 19.99 ಲಕ್ಷ |
-
ನವೀಕೃತ ಸೆಲ್ಟೋಸ್ ಆಟೋಮ್ಯಾಟಿಕ್ ಶ್ರೇಣಿ ಈಗ ತನ್ನ ವಿಭಾಗದಲ್ಲಿ ರೂ 3 ಲಕ್ಷ ತನಕದ ಅತ್ಯಂತ ಹೆಚ್ಚಿನ ಆರಂಭಿಕ ಬೆಲೆಯನ್ನು ಹೊಂದಿದೆ.
-
ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್ ಮತ್ತು MG ಎಸ್ಟರ್‌ನ ಆಟೋಮ್ಯಾಟಿಕ್ ವೇರಿಯೆಂಟ್‌ಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿದ್ದು, ಅವುಗಳ ಆರಂಭಿಕ ಬೆಲೆ ರೂ 14 ಲಕ್ಷಕ್ಕಿಂತಲೂ ಕಳಗೆ ಬರುತ್ತವೆ.
-
ಇಲ್ಲಿರುವ ಎಲ್ಲಾ SUVಗಳಲ್ಲಿ, ಸೆಲ್ಟೋಸ್, ಕ್ರೆಟಾ ಮತ್ತು ಎಸ್ಟರ್ ಮಾತ್ರವೇ CVT ಆಯ್ಕೆಯನ್ನು (8-ಹಂತ ಯೂನಿಟ್ ಅನ್ನು MG SUV ಜೊತೆಗೆ ನೀಡಲಾಗಿದೆ) ಪಡೆಯುತ್ತವೆ.
-
ಗ್ರ್ಯಾಂಡ್ ವಿಟಾರಾ-ಹೈರೈಡರ್ ಮತ್ತು ಕುಶಕ್-ಟೈಗನ್ ಜರ್ಮನ್ SUVಗಳ ಎರಡು ಜೊತೆಗಳು ಸಣ್ಣ 1-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್‌ಗೆ ಸೀಮಿತವಾಗಿದ್ದರೂ,6-ಸ್ಪೀಡ್ ಟಾರ್ಕ್ ಕಂಟ್ರೋಲರ್ ಆಟೋಮ್ಯಾಟಿಕ್‌ನೊಂದಿಗೆ ಬರುತ್ತವೆ.
-
ಕಿಯಾ, ಸ್ಕೋಡಾ, ಫೋಕ್ಸ್‌ವಾಗನ್ ಕಾರು ತಯಾರಕರು ಮಾತ್ರವೇ 1.5-ಲೀಟರ್ ಟರ್ಬೋ ಪೆಟ್ರೋಲ್-ಇಂಜಿನ್‌ಗಳೊಂದಿಗೆ 7-ಸ್ಪೀಡ್ DCT ಗೇರ್‌ಬಾಕ್ಸ್ ಅನ್ನು ನೀಡುತ್ತವೆ.
-
ಇಲ್ಲಿ MGಯ ಟರ್ಬೋ-ಪೆಟ್ರೋಲ್ ಇಂಜಿನ್ ಅತ್ಯಂತ ಸಣ್ಣದಾಗಿದ್ದರೂ (1.3-ಲೀಟರ್ ಯೂನಿಟ್), ಇದರಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಬರುತ್ತದೆ.
-
ಸೆಲ್ಟೋಸ್ ಇಲ್ಲಿ GTX+ ಮತ್ತು X-ಲೈನ್ ರೂಪದಲ್ಲಿ ಅನುಕ್ರಮವಾಗಿ ರೂ 19.79 ಲಕ್ಷ ಮತ್ತು ರೂ 19.99 ಲಕ್ಷದೊಂದಿಗೆ ಅತ್ಯಂತ ದುಬಾರಿ ವೇರಿಯೆಂಟ್‌ಗಳನ್ನು ಹೊಂದಿದೆ. ಆದರೆ ಆ ಪ್ರೀಮಿಯಂಗೆ ನೀವು ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಪಡೆಯಬಹುದು, ಇದು MG ಎಸ್ಟರ್‌ನ ಸೇವಿ ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ ಹಾಗೂ ಇದು ರೂ 3 ಲಕ್ಷದಷ್ಟು ಕಡಿಮೆ ಬೆಲೆಗೆ ಲಭ್ಯವಿರುತ್ತದೆ.
-
ಹ್ಯುಂಡೈ ಕ್ರೆಟಾ, ನವೀಕೃತ ಸೆಲ್ಟೋಸ್‌ನಲ್ಲಿ ಕಾಣಬಹುದಾದ ಟರ್ಬೋ ಯೂನಿಟ್ ಅನ್ನು ಸದ್ಯಕ್ಕೆ ಪಡೆದಿಲ್ಲ ಆದರೆ ಮುಂದಿನ ವರ್ಷದಲ್ಲಿ ನಿರೀಕ್ಷಿಸಲಾದ ನವೀಕೃತ ಕ್ರೆಟಾದ ಬಿಡುಗಡೆಯಲ್ಲಿ ಇದನ್ನು ನೀಡಲಾಗುತ್ತದೆ.
ಡೀಸೆಲ್-ಮ್ಯಾನುವಲ್
2023 ಕಿಯಾ ಸೆಲ್ಟೋಸ್ |
ಹ್ಯುಂಡೈ ಕ್ರೆಟಾ |
HTE - ರೂ 11.99 ಲಕ್ಷ |
E - ರೂ 11.96 ಲಕ್ಷ |
HTK - ರೂ 13.59 ಲಕ್ಷ |
EX - ರೂ 13.24 ಲಕ್ಷ |
HTK+ - ರೂ 14.99 ಲಕ್ಷ |
S - ರೂ 14.51 ಲಕ್ಷ |
SX ಎಕ್ಸಿಕ್ಯೂಟಿವ್ - ರೂ 15.43 ಲಕ್ಷ |
|
S+ ನೈಟ್ - ರೂ 15.47 ಲಕ್ಷ |
|
HTX - ರೂ 16.69 lakh |
SX - ರೂ 16.31 ಲಕ್ಷ |
SX (O) - ರೂ 17.59 ಲಕ್ಷ |
|
HTX+ - ರೂ 18.29 ಲಕ್ಷ |
-
ಕಾಂಪ್ಯಾಕ್ಟ್ SUVಯಲ್ಲಿ ಸೆಲ್ಟೋಸ್ ಮತ್ತು ಕ್ರೆಟಾ ಮಾತ್ರ ಅದೇ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ನೀಡುತ್ತವೆ.
-
ಎರಡೂ ಕೊರಿಯನ್ SUVಗಳು 1.5-ಲೀಟರ್ ಡೀಸೆಲ್ ಯೂನಿಟ್ ಅನ್ನು ಹಂಚಿಕೊಂಡರೆ, ಸೆಲ್ಟೋಸ್ 6-ಸ್ಪೀಡ್ iMT ಗೇರ್‌ಬಾಕ್ಸ್ ಪಡೆಯುತ್ತದೆ, ಹಾಗೆಯೇ, ಕ್ರೆಟಾ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
-
ಇವೆರಡರಲ್ಲಿ, ಕ್ರೆಟಾ ವಿಶಾಲವಾದ ಡೀಸೆಲ್-ಮ್ಯಾನುವಲ್ ವೇರಿಯಂಟ್ ಲೈನ್ ಅಪ್ ಅನ್ನು ಹೊಂದಿದ್ದು, ಅವುಗಳ ಬೆಲೆಗಳು ನವೀಕೃತ ಸೆಲ್ಟೋಸ್ ಬೆಲೆಗಿಂತ ಹೆಚ್ಚಿದ್ದು, ಇವುಗಳ ಆಯಾ ಶ್ರೇಣಿಯ-ಟಾಪ್ ವೇರಿಯೆಂಟ್‌ಗಳ ನಡುವಿನ ವ್ಯತ್ಯಾಸವು ರೂ 70,000 ದಷ್ಟು ಇದೆ.
ಡೀಸೆಲ್-ಆಟೋ ವರ್ಸಸ್ ಸ್ಟ್ರಾಂಗ್-ಹೈಬ್ರಿಡ್‌ಗಳು
2023 ಕಿಯಾ ಸೆಲ್ಟೋಸ್ |
ಹ್ಯುಂಡೈ ಕ್ರೆಟಾ |
ಮಾರುತಿ ಗ್ರ್ಯಾಂಡ್ ವಿಟಾರಾ |
ಟೊಯೋಟಾ ಹೈರೈಡರ್ |
S - ರೂ 16.46 ಲಕ್ಷ |
|||
HTX AT - ರೂ 18.19 ಲಕ್ಷ |
ಝೆಟಾ+ - ರೂ 18.29 ಲಕ್ಷ |
G - ರೂ 18.49 ಲಕ್ಷ |
|
SX (O) AT - ರೂ 19 ಲಕ್ಷ |
|||
SX (O) ನೈಟ್ AT - ರೂ 19.20 ಲಕ್ಷ |
|||
GTX+ AT - ರೂ 19.79 ಲಕ್ಷ |
ಆಲ್ಫಾ+ - ರೂ 19.79 ಲಕ್ಷ |
||
X-ಲೈಟ್ AT - ರೂ 19.99 ಲಕ್ಷ |
V - ರೂ 19.99 ಲಕ್ಷ |
-
ಸೆಲ್ಟೋಸ್‌ನಲ್ಲಿರುವ 1.5-ಲೀಟರ್ ಡೀಸೆಲ್ ಇಂಜಿನ್ ಅನ್ನು ಹ್ಯುಂಡೈ ಪ್ರತಿರೂಪಿ ಕ್ರೆಟಾದಲ್ಲೂ ಕಾಣಬಹುದು. ಆದಾಗ್ಯೂ, ಈ ಎರಡರಲ್ಲಿ, ಕಿಯಾ SUV ಹೆಚ್ಚುವರಿ ವೇರಿಯೆಂಟ್ ಅನ್ನು ಆಫರ್‌ನಲ್ಲಿ ನೀಡುತ್ತದೆ.
-
ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ನ ಸ್ಟ್ರಾಂಗ್-ಹೈಬ್ರಿಡ್ ವೇರಿಯೆಂಟ್‌ಗಳ ಬೆಲೆಗಳು ಸೆಲ್ಟೋಸ್-ಕ್ರೆಟಾ ಜೋಡಿಯಾ ಡೀಸೆಲ್-ಆಟೋ ವೇರಿಯೆಂಟ್‌ಗಳಂತೆ ಇದ್ದು, ಇವುಗಳಲ್ಲಿ ಹೈರೈಡರ್ ಹೈಬ್ರಿಡ್ ರೂ 2.50 ಲಕ್ಷಕ್ಕಿಂತ ತುಸು ಹೆಚ್ಚಿಗೆ ಲಾಟ್‌ನಲ್ಲಿ ಅತ್ಯಂತ ಕೈಗೆಟುಕುವ ಬೆಲೆಗೆ ದೊರೆಯುತ್ತದೆ.
-
ಟಾಪ್-ಸ್ಪೆಕ್ ಸೆಲ್ಟೋಸ್ ಡೀಸೆಲ್-ಆಟೋ ಮತ್ತು ಹೈರೈಡರ್ ಹೈಬ್ರಿಡ್ ವೇರಿಯೆಂಟ್‌ಗಳನ್ನು ರೂ 20 ಲಕ್ಷಕ್ಕಿಂತ ಕಡಿಮೆಗೆ ಸೀಮಿತಗೊಳಿಸಲಾಗಿದೆ.
ಗಮನಿಸಿ: ಮೇಲೆ ಹೇಳಲಾದ ಹೆಚ್ಚಿನ ಎಲ್ಲಾ SUVಗಳನ್ನು, ಅವುಗಳಲ್ಲಿ ಕೆಲವು ವೇರಿಯೆಂಟ್‌ಗಳನ್ನು ದುಬಾರಿ ಬೆಲೆಗೆ ಡ್ಯುಯಲ್-ಟೋನ್ ಪೇಂಟ್ ಆಯ್ಕೆಯೊಂದಿಗೆ ಪಡೆಯಬಹುದು, ಇದು ಆರಂಭಿಕ ಹಂತದ ಬೆಲೆಗಳನ್ನು ಪರಿಣಾಮಕಾರಿಯಾಗಿ ತಗ್ಗಿಸಬಹುದು. ಉದಾಹರಣೆಗೆ, ಕ್ರೆಟಾದ S+ DCT ಡ್ಯುಯಲ್-ಟೋನ್ (DT) ವೇರಿಯೆಂಟ್ ಅನ್ನು ನೀವು ಆಯ್ಕೆ ಮಾಡಿದರೆ ಇದರ ಆರಂಭಿಕ ಬೆಲೆ ರೂ 15.79ಕ್ಕೆ ಇಳಿಯುತ್ತದೆ.
ಎಲ್ಲಾ ಬೆಲೆಗಳು ಎಕ್ಸ್-ಶೋರೂ ದೆಹಲಿ ಪ್ರಕಾರ
ಇದನ್ನೂ ಓದಿ: ನವೀಕೃತ ಕಿಯಾ ಸೆಲ್ಟೋಸ್ ವೇರಿಯೆಂಟ್‌ವಾರು ಫೀಚರ್‌ಗಳು ಬಹಿರಂಗ
ಇನ್ನಷ್ಟು ಓದಿ : ಕಿಯಾ ಸೆಲ್ಟೋಸ್ ಆಟೋಮ್ಯಾಟಿಕ್