Login or Register ಅತ್ಯುತ್ತಮ CarDekho experience ಗೆ
Login

ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್‌ ಇನ್‌ ಇಂಡಿಯಾ ಮಾರುತಿ ಜಿಮ್ನಿ

ಮಾರುತಿ ಜಿಮ್ನಿ ಗಾಗಿ ansh ಮೂಲಕ ಅಕ್ಟೋಬರ್ 13, 2023 04:58 pm ರಂದು ಪ್ರಕಟಿಸಲಾಗಿದೆ

ಲ್ಯಾಟಿನ್‌ ಅಮೇರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾದ ಪ್ರದೇಶಗಳಿಗೆ ಈ ಕಾರನ್ನು ರಫ್ತು ಮಾಡಲಾಗುವುದು

  • ಮೂರು ಬಾಗಿಲುಗಳ ಜಿಮ್ನಿಯನ್ನು 2020ರಿಂದಲೇ ಭಾರತದಿಂದ ರಫ್ತು ಮಾಡಲಾಗುತ್ತಿದೆ.
  • ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ನೊಂದಿಗೆ 1.5 ಲೀಟರಿನ ಪೆಟ್ರೋಲ್‌ ಎಂಜಿನ್‌ ಜೊತೆಗೆ ಬರುತ್ತದೆ.
  • ಒಂಬತ್ತು ಇಂಚಿನ ಟಚ್‌ ಸ್ಕ್ರೀನ್‌ ಇನ್ಫಮೇಶನ್‌ ಡಿಸ್ಪ್ಲೇ, ಕ್ರೂಸ್‌ ಕಂಟ್ರೋಲ್‌, ಅಟೋ AC, ಆರು ಏರ್‌ ಬ್ಯಾಗ್‌ ಗಳು ಮತ್ತು ರಿಯರ್‌ ವ್ಯೂ ಕ್ಯಾಮರಾವನ್ನು ಇದು ಹೊಂದಿದೆ.
  • ರೂ. 12.74 ರಿಂದ ರೂ. 15.05 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-‌ಶೋರೂಂ).

ಹೊಸದಾಗಿ ಹೊರತರಲಾಗಿರುವ 5 ಬಾಗಿಲುಗಳ ಮಾರುತಿ ಜಿಮ್ನಿ ಕಾರನ್ನು ಈ ವರ್ಷದಲ್ಲಿ 2023 ಅಟೋ ಎಕ್ಸ್ಪೋ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಗಿದ್ದು ಇದನ್ನು ಭಾರತದಲ್ಲಿ ಜೂನ್‌ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾರು ತಯಾರಕ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ವಿವಿಧ ಮಾದರಗಳನ್ನು ಭಾರತದಿಂದ ರಫ್ತು ಮಾಡುತ್ತಿದೆ. ಇದರಲ್ಲಿ, 2020ರಿಂದ ರಫ್ತು ಮಾಡಲಾಗುತ್ತಿರುವ, ಈ ವಾಹನದ ಆಫ್‌ ರೋಡರ್‌ ಆವೃತ್ತಿಯೂ ಸೇರಿದೆ. ಈಗ ಮಾರುತಿ ಸಂಸ್ಥೆಯು ಭಾರತದಲ್ಲಿ ತಯಾರಿಸಲಾಗುವ 5 ಬಾಗಿಲುಗಳ ಜಿಮ್ನಿಯನ್ನು ಲ್ಯಾಟಿನ್‌ ಅಮೇರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾಕ್ಕೆ ರಫ್ತು ಮಾಡಲು ಕ್ರಮ ಕೈಗೊಂಡಿದೆ. ಈ 5 ಬಾಗಿಲುಗಳ ಜಿಮ್ನಿಯೊಂದಿಗೆ, ಈ ಕಾರು ತಯಾರಕ ಸಂಸ್ಥೆಯು ನಮ್ಮ ನೆಲದಿಂದ ಇಲ್ಲಿಯತನಕ 17 ಮಾದರಿಗಳನ್ನು ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ.

ಪವರ್‌ ಟ್ರೇನ್‌ ವಿವರಗಳು

ಇಂಡಿಯಾ ಸ್ಪೆಕ್‌ 5 ಬಾಗಿಲುಗಳ ಜಿಮ್ನಿಯು 1.5 ಲೀಟರಿನ ಪೆಟ್ರೋಲ್‌ ಎಂಜಿನ್‌ ಅನ್ನು ಹೊಂದಿದ್ದು, 105PS ಮತ್ತು 134Nm ಅನ್ನು ಹೊರಹಾಕುತ್ತದೆ. ಈ ಎಂಜಿನ್‌ ಅನ್ನು ಪ್ರಮಾಣಿತ 4 ವೀಲ್‌ ಡ್ರೈವ್‌ ಸೇರಿದಂತೆ 5 ಸ್ಪೀಡ್‌ ಮ್ಯಾನುವಲ್‌ ಅಥವಾ 4 ಸ್ಪೀಡ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾಗಿದೆ. ಅದೇ ಪವರ್‌ ಟ್ರೇನ್‌ ಆಯ್ಕೆಕೊಂದಿಗೆ ಮಾರುತಿಯು ಜಿಮ್ನಿಯನ್ನು ರಫ್ತು ಮಾಡಲಿದೆ.

ಇದನ್ನು ಸಹ ಓದಿರಿ: ಮಾರುತಿ ಸುಝುಕಿ eVX ಎಲೆಕ್ಟ್ರಿಕ್ SUV‌ ಕಾನ್ಸೆಪ್ಟ್‌ ನ ಒಳಾಂಗಣದ ಅನಾವರಣ

ಈ ಕಾರು ತಯಾರಕ ಸಂಸ್ಥೆಯು, ಭಾರತದಲ್ಲಿ ಬಿಡುಗಡೆ ಮಾಡಿದ ನಂತರ ಯುರೋಪ್‌ ನಲ್ಲಿಯೂ ಜಿಮ್ನಿಯ ಎಲೆಕ್ಟ್ರಿಕ್‌ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಗುಣಲಕ್ಷಣಗಳು ಮತ್ತು ಸುರಕ್ಷತೆ

ಇದು ವೈರ್‌ ಲೆಸ್‌ ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇ ಜೊತೆಗೆ 9 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ ಮೆಂಟ್‌, ಅನಲಾಗ್‌ ಇನ್ಸ್‌ ಟ್ರುಮೆಂಟ್‌ ಕ್ಲಸ್ಟರ್,‌ ಅಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಕ್ರೂಸ್‌ ಕಂಟ್ರೋಲ್‌ ಅನ್ನು ಹೊಂದಿರಲಿದೆ.

ಸುರಕ್ಷತೆಯ ದೃಷ್ಟಿಯಿಂದ ಹೇಳುವುದಾದರೆ ಜಿಮ್ನಿಯು ಪ್ರಮಾಣಿತ ಆರು ಏರ್‌ ಬ್ಯಾಗ್‌ ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್‌ ಹೋಲ್ಡ್‌ ಅಸಿಸ್ಟ್‌ ಮತ್ತು ರಿಯರ್‌ ಪಾರ್ಕಿಂಗ್‌ ಕ್ಯಾಮರಾ ಇತ್ಯಾದಿಗಳನ್ನು ಹೊಂದಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಐದು ಬಾಗಿಲುಗಳ ಜಿಮ್ನಿಯ ಬೆಲೆಯು ರೂ. 12.74 ಲಕ್ಷದಿಂದ ರೂ. 15.05 ಲಕ್ಷದ ನಡುವೆ ಇದ್ದು (ಎಕ್ಸ್-ಶೋರೂಂ) ಆಫ್‌ ರೋಡರ್‌ ಕಾರುಗಳಾದ ಮಹೀಂದ್ರಾ ಥಾರ್ ಮತ್ತು ಫೋರ್ಸ್‌ ಗೂರ್ಖಾ ಇತ್ಯಾದಿಗಳೊಂದಿಗೆ ಸ್ಪರ್ಧಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಜಿಮ್ನಿ ಆನ್‌ ರೋಡ್‌ ಬೆಲೆ

Share via

Write your Comment on Maruti ಜಿಮ್ನಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
Rs.9 - 17.80 ಲಕ್ಷ*
ಹೊಸ ವೇರಿಯೆಂಟ್
Rs.44.90 - 55.90 ಲಕ್ಷ*
Rs.75.80 - 77.80 ಲಕ್ಷ*
ಹೊಸ ವೇರಿಯೆಂಟ್
Rs.88.70 - 97.85 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ