ಕಳಪೆ ಪ್ರದರ್ಶನ; ಗ್ಲೋಬಲ್ NCAP ನಲ್ಲಿ Mahindra Bolero Neoಗೆ 1 ಸ್ಟಾರ್ ರೇಟಿಂಗ್..!
ಮಹೀಂದ್ರ ಬೊಲೆರೋ ನಿಯೋ ಗಾಗಿ cardekho ಮೂಲಕ ಏಪ್ರಿಲ್ 25, 2024 04:00 pm ರಂದು ಪ್ರಕಟಿಸಲಾಗಿದೆ
- 32 Views
- ಕಾಮೆಂಟ್ ಅನ್ನು ಬರೆಯಿರಿ
ವಯಸ್ಕ ಮತ್ತು ಸಣ್ಣ ಪ್ರಾಯದ ಪ್ರಯಾಣಿಕರ ರಕ್ಷಣೆಯ ಪರೀಕ್ಷೆಗಳ ನಂತರ, ಫುಟ್‌ವೆಲ್ ಮತ್ತು ಬಾಡಿಶೆಲ್ ಸಮಗ್ರತೆಯನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ
- ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (AOP-ಆಡಲ್ಟ್ ಒಕ್ಯುಪೆಂಟ್ ಪ್ರೊಟೆಕ್ಷನ್) ಈ ಎಸ್‌ಯುವಿಯು 34 ರಲ್ಲಿ 20.26 ಅಂಕಗಳನ್ನು ಗಳಿಸಿತು, ಇದರ ಪರಿಣಾಮವಾಗಿ AOP ಯಲ್ಲಿ 1-ಸ್ಟಾರ್ ರೇಟಿಂಗ್ ದೊರೆಯಿತು.
- ಇದು ಮಕ್ಕಳ ಕುರಿತ ಸೇಫ್ಟಿಯಲ್ಲಿ (COP) 49 ರಲ್ಲಿ 12.71 ಅಂಕಗಳನ್ನು ಪಡೆದುಕೊಂಡಿತು, ಇದರ ಪರಿಣಾಮವಾಗಿ COPಯಲ್ಲಿ 1 ಸ್ಟಾರ್ ರೇಟಿಂಗ್ ದೊರೆಯಿತು.
- ಪರೀಕ್ಷೆಗಳ ನಂತರ, ಅದರ ಬಾಡಿಶೆಲ್ ಸಮಗ್ರತೆಯನ್ನು ಅಸ್ಥಿರವೆಂದು ರೇಟ್ ಮಾಡಲಾಗಿದೆ.
- ಇದರ ಬೇಸಿಕ್ ಸುರಕ್ಷತಾ ಕಿಟ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಮುಂಭಾಗಕ್ಕೆ ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ಒಳಗೊಂಡಿದೆ.
Mahindra Bolero Neo ವನ್ನು ಇತ್ತೀಚೆಗೆ ಗ್ಲೋಬಲ್ NCAP (ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ನಲ್ಲಿ ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಅದರ ಸುರಕ್ಷತಾ ಪ್ಯಾಕೇಜ್ ಕಳಪೆ ಪ್ರದರ್ಶನ ನೀಡುವುದರೊಂದಿಗೆ ಉತ್ತಮ ಅಂಕವನ್ನು ಪಡೆಯಲಿಲ್ಲ. ರಗಡ್ ಆಗಿರುವ ಈ ಎಸ್‌ಯುವಿಯನ್ನು ಮುಂಭಾಗ, ಸೈಡ್ ಮತ್ತು ಸೈಡ್ ಪೋಲ್ ಪರಿಣಾಮಗಳಲ್ಲಿ ಪರೀಕ್ಷಿಸಲಾಯಿತು ಮತ್ತು ಇದು ಕೇವಲ 1-ಸ್ಟಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಅನ್ನು ಪಡೆದಿದೆ. ಪ್ರತಿ ಪರೀಕ್ಷೆಯಲ್ಲಿ ಅದು ಹೇಗೆ ಪ್ರದರ್ಶನ ನೀಡಿದೆ ಎಂಬುದನ್ನು ನೋಡೋಣ.
ವಯಸ್ಕ ಪ್ರಯಾಣಿಕರ ರಕ್ಷಣೆ (34 ರಲ್ಲಿ 20.26 ಅಂಕಗಳು)
ಮುಂಭಾಗದ ಡಿಕ್ಕಿ (64 kmph ವೇಗದಲ್ಲಿ)
ಮುಂಭಾಗದ ಡಿಕ್ಕಿಯ ಪರೀಕ್ಷೆಯಲ್ಲಿ, ಬೊಲೆರೊ ನಿಯೊ ಚಾಲಕನ ತಲೆಗೆ 'ಸರಾಸರಿ' ರಕ್ಷಣೆಯನ್ನು ಮತ್ತು ಮುಂಭಾಗದ ಪ್ರಯಾಣಿಕರ ತಲೆಗೆ 'ಉತ್ತಮ' ರಕ್ಷಣೆಯನ್ನು ನೀಡಿತು. ಚಾಲಕ ಮತ್ತು ಪ್ರಯಾಣಿಕ ಇಬ್ಬರ ಕುತ್ತಿಗೆಗೂ ‘ಉತ್ತಮ’ ರಕ್ಷಣೆ ಸಿಕ್ಕಿದೆ. ಚಾಲಕನ ಎದೆಭಾಗವು 'ಕಡಿಮೆ' ರಕ್ಷಣೆಯನ್ನು ಪಡೆದುಕೊಂಡಿದೆ ಮತ್ತು ಪ್ರಯಾಣಿಕರ ಎದೆಯ ಭಾಗದ ರಕ್ಷಣೆಯನ್ನು 'ಸಮರ್ಪಕ' ಎಂದು ರೇಟ್ ಮಾಡಲಾಗಿದೆ.
ಇದನ್ನು ಓದಿ: ಈ 10 ಚಿತ್ರಗಳಲ್ಲಿ Mahindra Scorpio N Z8 ಸೆಲೆಕ್ಟ್ ಆವೃತ್ತಿಯ ವಿವರಣೆ
ಚಾಲಕ ಮತ್ತು ಪ್ರಯಾಣಿಕ ಇಬ್ಬರ ಮೊಣಗಂಟುಗಳು 'ಸರಾಸರಿ' ರಕ್ಷಣೆಯನ್ನು ಹೊಂದಿದ್ದವು. ಚಾಲಕನ ಮೊಣಕಾಲಿಗೆ 'ಸರಾಸರಿ' ರಕ್ಷಣೆ ಇತ್ತು ಮತ್ತು ಪ್ರಯಾಣಿಕರ ಮೊಣಕಾಲಿನ ರಕ್ಷಣೆ 'ಸಮರ್ಪಕ' ಮತ್ತು 'ಉತ್ತಮ'ವಾಗಿತ್ತು. ಫುಟ್‌ವೆಲ್ ಅನ್ನು ಸಹ ಅಸ್ಥಿರ ಎಂದು ರೇಟ್ ಮಾಡಲಾಗಿದೆ.
ಬದಿಯಿಂದ ಡಿಕ್ಕಿ (50 kmph ವೇಗದಲ್ಲಿ)
ಸೈಡ್ ಡಿಕ್ಕಿ ಪರೀಕ್ಷೆಯಲ್ಲಿ, ಚಾಲಕನ ತಲೆ, ಸೊಂಟ ಮತ್ತು ಸೊಂಟದ ಕೆಳಭಾಗದಲ್ಲಿ 'ಉತ್ತಮ' ರಕ್ಷಣೆ ಸಿಕ್ಕಿತು. ಆದಾಗಿಯೂ, ಎದೆಯ ಮೇಲಿನ ರಕ್ಷಣೆ 'ಸಾಕಷ್ಟು' ಆಗಿತ್ತು.
ಬದಿಯಲ್ಲಿ ಕಂಬಕ್ಕೆ ಡಿಕ್ಕಿ
ಕರ್ಟನ್ ಏರ್‌ಬ್ಯಾಗ್‌ಗಳ ಇಲ್ಲದಿರುವ ಕಾರಣ ಬದಿಯಿಂದ ಕಂಬಕ್ಕೆ ಡಿಕ್ಕಿ ಹೊಡೆಯುವ ಟೆಸ್ಟ್ ಅನ್ನು ನಡೆಸಲಾಗಿಲ್ಲ.
ಮಕ್ಕಳು ಪ್ರಯಾಣಿಸುವಾಗಿನ ರಕ್ಷಣೆ (49 ರಲ್ಲಿ 12.71 ಅಂಕಗಳು)
ಮುಂಭಾಗದ ಡಿಕ್ಕಿ (64 kmph ವೇಗದಲ್ಲಿ)
18 ತಿಂಗಳ ಮಗುವಿನ ರಕ್ಷಣೆಯನ್ನು ಗಮನಿಸಲಾಗಿದ್ದು, ಈ ಮಗುವಿನ ಆಸನವನ್ನು ಹಿಂಬದಿಯಲ್ಲಿ ಜೋಡಿಸಲಾಗಿದೆ ಮತ್ತು ಅದು ಚಾಲಕನ ತಲೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಮತ್ತು ಸೀಮಿತ ರಕ್ಷಣೆಯನ್ನು ಮಾತ್ರ ನೀಡಿತು. ಮತ್ತೊಂದೆಡೆ, 3 ವರ್ಷ ವಯಸ್ಸಿನ ಮಗುವಿನ ಆಸನವನ್ನು ಮುಂದಕ್ಕೆ ಅಳವಡಿಸಲಾಗಿದೆ ಮತ್ತು ಮುಂಭಾಗದ ಡಿಕ್ಕಿಯ ಸಮಯದಲ್ಲಿ ತಲೆಗೆ ಬಡಿದುಕೊಳ್ಳುವುದನ್ನು ತಡೆಯಲು ಸಾಧ್ಯವಾಯಿತು, ಇದು ಬಹುತೇಕ ಸಂಪೂರ್ಣ ರಕ್ಷಣೆ ನೀಡುತ್ತದೆ.
ಸೈಡ್‌ನಿಂದ ಡಿಕ್ಕಿ (50 kmph ವೇಗದಲ್ಲಿ)
ಎರಡೂ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಮ್‌ಗಳು (CRS) ಬದಿಯಿಂದ ಡಿಕ್ಕಿಯ ಪರೀಕ್ಷೆಯ ಸಮಯದಲ್ಲಿ ಸಂಪೂರ್ಣ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದೆ.
ಮಹೀಂದ್ರ ಬೊಲೆರೊ ನಿಯೋದಲ್ಲಿರುವ ಸುರಕ್ಷತಾ ಪ್ಯಾಕೇಜ್
ಮಹೀಂದ್ರಾವು ತನ್ನ ಬೊಲೆರೊ ನಿಯೊಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಅಸಿಸ್ಟ್‌ನೊಂದಿಗೆ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ISOFIX ಚೈಲ್ಡ್ ಮೌಂಟ್‌ಗಳನ್ನು ಒಳಗೊಂಡಿರುವ ಬೇಸಿಕ್ ಸುರಕ್ಷತಾ ಕಿಟ್ ಅನ್ನು ಒದಗಿಸಿದೆ.
ಈ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಕುರಿತು ಚರ್ಚಿಸುವುದಾದರೆ, ಮಹೀಂದ್ರಾ ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ, "ಮಹೀಂದ್ರಾದಲ್ಲಿ ನಾವು ನಮ್ಮ ಗ್ರಾಹಕರು ಮತ್ತು ಬಳಕೆದಾರರ ಸುರಕ್ಷತೆ ಮತ್ತು ತೃಪ್ತಿಯನ್ನು ಖಾತ್ರಿಪಡಿಸುವ ವಾಹನಗಳನ್ನು ನೀಡುವಲ್ಲಿ ಬದ್ಧರಾಗಿದ್ದೇವೆ. ಶಕ್ತಿಯುತವಾದ ಬಾಡಿ, ಹೆಚ್ಚು ವಿಶ್ವಾಸಾರ್ಹ ಸ್ವಭಾವ ಮತ್ತು ವಿವಿಧ ರೀತಿಯ ಬಳಕೆಯನ್ನು ನಿಭಾಯಿಸುವ ಅದರ ಸಹಜ ಸಾಮರ್ಥ್ಯದಿಂದಾಗಿ ಬೊಲೆರೊ ನಿಯೊವು ಭಾರತದಲ್ಲಿ ಆಯ್ಕೆಯ ವಿಶ್ವಾಸಾರ್ಹ ಎಸ್‌ಯುವಿ ಆಗಿದೆ. ಬೊಲೆರೊ ನಿಯೊವು ಯಾವಾಗಲೂ ಸುರಕ್ಷತಾ ನಿಯಮಗಳಿಗೆ ಬದ್ಧವಾಗಿದೆ ಮತ್ತು ಇತ್ತೀಚಿನ ಭಾರತೀಯ ಸುರಕ್ಷತಾ ಮಾನದಂಡಗಳಿಗೆ ಸಂಪೂರ್ಣವಾಗಿ ಅನುಸರಿಸುವುದನ್ನು ಮುಂದುವರೆಸುತ್ತದೆ.
ಇದನ್ನೂ ಓದಿ: ಫೋರ್ಸ್ ಗೂರ್ಖಾ 5-ಡೋರ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
"ಸುರಕ್ಷತಾ ನಿಯಮಗಳಿಗೆ ಸರಿಹೊಂದುವಂತೆ, ನಾವು ನಿರಂತರವಾಗಿ ನಮ್ಮ ವಾಹನಗಳನ್ನು ಆವಿಷ್ಕರಿಸುತ್ತಿರುವುದರಿಂದ ಮತ್ತು ಸುಧಾರಿಸುತ್ತಿರುವುದರಿಂದ, ನಮ್ಮ ಇತ್ತೀಚಿನ ಎಲ್ಲಾ ಮೊಡೆಲ್‌ಗಳ ಬಿಡುಗಡೆಯಲ್ಲಿ ಮಹೀಂದ್ರಾವು ಗಮನಾರ್ಹವಾಗಿ ಸುರಕ್ಷತಾ ವೈಶಿಷ್ಟ್ಯಗಳನ್ನು ಹೆಚ್ಚಿಸಿದೆ ಎಂದು ನಮ್ಮ ಗ್ರಾಹಕರು ಮತ್ತು ಮಾರಾಟಗಾರರಿಗೆ ನಾವು ಭರವಸೆ ನೀಡಲು ಬಯಸುತ್ತೇವೆ. ಥಾರ್, ಎಕ್ಸ್‌ಯುವಿ700, ಎಕ್ಸ್‌ಯುವಿ300 ಮತ್ತು ಸ್ಕಾರ್ಪಿಯೋ-ಎನ್‌ನಂತಹ ಮೊಡೆಲ್‌ಗಳು ಗ್ಲೋಬಲ್ ಎನ್‌ಸಿಎಪಿಯಿಂದ 4 ಮತ್ತು 5 ಸ್ಟಾರ್‌ಗಳ ಹೆಚ್ಚಿನ ಸುರಕ್ಷತಾ ರೇಟಿಂಗ್‌ಗಳೊಂದಿಗೆ ಗುರುತಿಸಲ್ಪಟ್ಟಿದೆ, ಇದು ಸುರಕ್ಷತೆಗೆ ನಾವು ವ್ಯಕ್ತಪಡಿಸುತ್ತಿರುವ ಬದ್ಧತೆಯ ಪ್ರತಿಬಿಂಬವಾಗಿದೆ. ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ನಾವು ಗೌರವಿಸುತ್ತೇವೆ ಮತ್ತು ವಾಹನ ಸುರಕ್ಷತೆ ಮತ್ತು ತಂತ್ರಜ್ಞಾನದಲ್ಲಿನ ನಿರಂತರ ಪ್ರಗತಿಗಳ ಮೂಲಕ ಅದನ್ನು ಇನ್ನಷ್ಟು ಹೆಚ್ಚು ಮಾಡಲು ಸಮರ್ಪಿತರಾಗಿದ್ದೇವೆ” ಎಂದು ಕಂಪೆನಿ ಹೇಳಿದೆ.
ಗ್ಲೋಬಲ್‌ಎನ್‌ಸಿಎಪಿ ಪರೀಕ್ಷೆಗಳಲ್ಲಿ ಸ್ಕಾರ್ಪಿಯೊ ಎನ್, ಎಕ್ಸ್‌ಯುವಿ700 ಮತ್ತು ಥಾರ್ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಮಹೀಂದ್ರಾವು ತನ್ನ ಸಾಮರ್ಥ್ಯವನ್ನು ತೋರಿಸಿದೆ. ಆದರೆ ಬೊಲೆರೋ ನಿಯೊದ ಫಲಿತಾಂಶವು ಆಶ್ಚರ್ಯಕರವಾಗಿ ಮತ್ತು ನಂಬಲು ಸಾಧ್ಯವಾಗದ ರೀತಿಯಲ್ಲಿ ಬಂದಿದೆ ಮತ್ತು ಮಹೀಂದ್ರಾ ಈ ಉಪಯುಕ್ತ ವರ್ಕ್‌ಹಾರ್ಸ್‌ನ ಸುರಕ್ಷತಾ ಅಂಶವನ್ನು ಸುಧಾರಿಸುತ್ತದೆ ಎಂದು ನಾವು ಭಾವಿಸುತ್ತೇವೆ.
ಮಹೀಂದ್ರಾ ಬೊಲೆರೊ ನಿಯೋವು N4, N8, N10, ಮತ್ತು N10(O) ಎಂಬ ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ. ಮತ್ತು ಭಾರತದಾದ್ಯಂತ ಇದರ ಬೆಲೆಗಳು 9.90 ಲಕ್ಷ ರೂ.ನಿಂದ 12.15 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ.
ಇಲ್ಲಿ ಇನ್ನಷ್ಟು ಓದಿ : ಬೊಲೆರೊ ನಿಯೋ ಡೀಸೆಲ್