• English
    • Login / Register

    ಮಹೀಂದ್ರಾ Thar Roxx ಬೇಸ್ Vs ಟಾಪ್ ವೇರಿಯಂಟ್: ಫೋಟೋಗಳ ಮೂಲಕ ಪ್ರಮುಖ ವ್ಯತ್ಯಾಸಗಳ ವಿವರಗಳು

    ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ shreyash ಮೂಲಕ ಸೆಪ್ಟೆಂಬರ್ 30, 2024 04:06 pm ರಂದು ಪ್ರಕಟಿಸಲಾಗಿದೆ

    • 125 Views
    • ಕಾಮೆಂಟ್‌ ಅನ್ನು ಬರೆಯಿರಿ

    ಟಾಪ್-ಸ್ಪೆಕ್ AX7 L ವೇರಿಯಂಟ್ ಅನೇಕ ಫೀಚರ್‌ನೊಂದಿಗೆ ಬರುತ್ತದೆ, ಹಾಗೆಯೆ ಬೇಸ್-ಸ್ಪೆಕ್ MX1 ವೇರಿಯಂಟ್ ಕೂಡ ಅವಶ್ಯಕವಿರುವ ಫೀಚರ್‌ಗಳನ್ನು ನೀಡುತ್ತದೆ

    Mahindra Thar Roxx Base vs Top Variant: Differences Explained In Images

    ಮಹೀಂದ್ರಾ ಥಾರ್ ರೋಕ್ಸ್ ಮಹೀಂದ್ರಾ ಕಂಪನಿಯ ಹೊಸ ಎಸ್‌ಯುವಿ ಆಗಿದ್ದು, ಇದು ಆರು ವೇರಿಯಂಟ್‌ಗಳಲ್ಲಿ ಲಭ್ಯವಿದೆ: MX1, MX3, MX5, AX3L, AX5L, ಮತ್ತು AX7L. ಬನ್ನಿ, ಥಾರ್ ರೋಕ್ಸ್‌ನ ಎಂಟ್ರಿ ಲೆವೆಲ್ MX1 ವೇರಿಯಂಟ್ ಅನ್ನು ಟಾಪ್-ಸ್ಪೆಕ್ AX7L ವೇರಿಯಂಟ್‌ನೊಂದಿಗೆ ಹೋಲಿಕೆ ಮಾಡಿ ನೋಡೋಣ.

    ಮುಂಭಾಗ

    ಥಾರ್ ರೋಕ್ಸ್‌ನ ಬೇಸ್-ಸ್ಪೆಕ್ MX1 ಎಂಟ್ರಿ ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ ಇದು ಟಾಪ್-ಸ್ಪೆಕ್ AX7L ವೇರಿಯಂಟ್‌ನಲ್ಲಿ ಇರುವಂತೆ LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು LED ಟರ್ನ್ ಇಂಡಿಕೇಟರ್‌ಗಳನ್ನು ಫೆಂಡರ್‌ನಲ್ಲಿ ಇರಿಸಲಾಗಿದೆ. ಆದರೆ, ಥಾರ್ ರೋಕ್ಸ್‌ MX1 ಅದರ ಟಾಪ್ ಸ್ಪೆಕ್‌ನಲ್ಲಿ ಇರುವ C-ಆಕಾರದ LED DRL ಗಳು ಮತ್ತು LED ಫಾಗ್ ಲ್ಯಾಂಪ್‌ಗಳನ್ನು ಹೊಂದಿಲ್ಲ. AX7L ಸಿಲ್ವರ್ ಬಂಪರ್ ಅನ್ನು ಹೊಂದಿದೆ, ಮತ್ತು ಇದು ಬೇಸ್-ಸ್ಪೆಕ್ ಥಾರ್ ರೋಕ್ಸ್‌ನಲ್ಲಿ ಲಭ್ಯವಿಲ್ಲ.

     ಸೈಡ್

     ಥಾರ್ ರೋಕ್ಸ್‌  MX1 18-ಇಂಚಿನ ಸ್ಟೀಲ್ ವೀಲ್ಸ್ ಅನ್ನು ಹೊಂದಿದೆ ಮತ್ತು ಟಾಪ್-ಸ್ಪೆಕ್ AX7L ವೇರಿಯಂಟ್ ದೊಡ್ಡದಾದ ಮತ್ತು ಸ್ಟೈಲಿಶ್ ಆಗಿರುವ 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಅನ್ನು ಪಡೆಯುತ್ತದೆ. ಎಸ್‌ಯುವಿಯ ಟಾಪ್-ಸ್ಪೆಕ್ AX7L ವೇರಿಯಂಟ್ ORVM ನ ಕೆಳಭಾಗದಲ್ಲಿ ಕ್ಯಾಮೆರಾ ಬಂಪ್ ಅನ್ನು ಹೊಂದಿದೆ, ಇದು 360-ಡಿಗ್ರಿ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರುತ್ತದೆ ಎಂದು ತೋರಿಸುತ್ತದೆ. ಥಾರ್ ರೋಕ್ಸ್‌ನ ಎರಡೂ ವೇರಿಯಂಟ್‌ಗಳು ವಾಹನದ ಒಳಗೆ ಮತ್ತು ಹೊರಗೆ ಹೋಗಲು ಸುಲಭವಾಗುವಂತೆ ಸೈಡ್ ಸ್ಟೆಪ್‌ಗಳನ್ನು ಹೊಂದಿವೆ.

     ಮತ್ತೊಂದು ವ್ಯತ್ಯಾಸವೆಂದರೆ ಎಸ್‌ಯುವಿಯ ಟಾಪ್-ಸ್ಪೆಕ್ AX7L ವೇರಿಯಂಟ್ ಪನರೋಮಿಕ್ ಸನ್‌ರೂಫ್ ಅನ್ನು ಹೊಂದಿದೆ, ಆದರೆ MX1 ಸನ್‌ರೂಫ್ ಆಯ್ಕೆಯನ್ನು ಹೊಂದಿಲ್ಲ.

     ಹಿಂಭಾಗ

     ಬೇಸ್-ಸ್ಪೆಕ್ ಮತ್ತು ಟಾಪ್-ಸ್ಪೆಕ್ ಎರಡೂ ವೇರಿಯಂಟ್ ಗಳು ಟೈಲ್ ಲೈಟ್‌ಗಳ ಒಳಗೆ C-ಆಕಾರದ LED ಎಲಿಮೆಂಟ್‌ಗಳನ್ನು ಪಡೆಯುತ್ತದೆ, ಆದರೆ ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್‌ನಿಂದಾಗಿ ಎರಡೂ ವೇರಿಯಂಟ್‌ಗಳ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿ ಕಾಣಸಿಗುತ್ತದೆ. ಟಾಪ್ ಮಾಡೆಲ್ ಅಲೊಯ್ ರಿಮ್‌ನೊಂದಿಗೆ ಬಂದರೆ, ಬೇಸ್-ಸ್ಪೆಕ್ ಸ್ಟೀಲ್ ರಿಮ್‌ನೊಂದಿಗೆ ಬರುತ್ತದೆ. ಅಲ್ಲದೆ, ಟಾಪ್-ಸ್ಪೆಕ್ ಥಾರ್ ರೋಕ್ಸ್‌ನಲ್ಲಿನ ಹಿಂಭಾಗದ ಬಂಪರ್ ಸಿಲ್ವರ್ ಕಲರ್‌ನಲ್ಲಿ ಬರುತ್ತದೆ ಮತ್ತು ಬೇಸ್ ವೇರಿಯಂಟ್ ಆಲ್ ಬ್ಲಾಕ್ ಕಲರ್ ಅನ್ನು ಪಡೆಯುತ್ತದೆ.

     ಇದನ್ನು ಕೂಡ ಓದಿ: 7 ಆನ್ ರೋಡ್ ಫೋಟೋಗಳಲ್ಲಿ ಮಹೀಂದ್ರಾ ಥಾರ್ ರೋಕ್ಸ್ MX5 ವೇರಿಯಂಟ್ ಹೇಗೆ ಕಾಣುತ್ತದೆ ಎಂಬುದು ಇಲ್ಲಿದೆ

     ಒಳಭಾಗ

     ಎರಡೂ ವೇರಿಯಂಟ್‌ಗಳು ಬ್ಲಾಕ್-ವೈಟ್ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿವೆ, ಆದರೆ ಇಲ್ಲಿ ಟಾಪ್-ಸ್ಪೆಕ್ AX7L ವೇರಿಯಂಟ್‌ನ ಕ್ಯಾಬಿನ್ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಏಕೆಂದರೆ ಡ್ಯಾಶ್‌ಬೋರ್ಡ್‌ನ ಮೇಲಿನ ಭಾಗ ಮತ್ತು ಡೋರ್ ಪ್ಯಾಡ್‌ಗಳನ್ನು ಸಾಫ್ಟ್-ಟಚ್ ಮೆಟಿರಿಯಲ್‌ಗಳಿಂದ ತಯಾರಿಸಲಾಗಿದೆ. ಬೇಸ್-ಸ್ಪೆಕ್‌ನಲ್ಲಿ, ಥಾರ್ ರೋಕ್ಸ್ ಬ್ಲಾಕ್ ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿಯನ್ನು ಪಡೆಯುತ್ತದೆ, ಆದರೆ ಅದರ ಟಾಪ್-ಸ್ಪೆಕ್ ಟ್ರಿಮ್ ವೈಟ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಬರುತ್ತದೆ.

     ಎಸ್‌ಯುವಿಯ MX1 ಎಂಟ್ರಿ ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ ಇದು ಹಲವಾರು ಪ್ರಮುಖ ಫೀಚರ್‌ಗಳನ್ನು ಪಡೆಯುತ್ತದೆ. ಥಾರ್ ರೋಕ್ಸ್‌ MX1 10.25-ಇಂಚಿನ ಟಚ್‌ಸ್ಕ್ರೀನ್, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಮ್ಯಾನ್ಯುವಲ್ AC, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಮತ್ತು ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‌ನಂತಹ ಫೀಚರ್‌ನೊಂದಿಗೆ ಬರುತ್ತದೆ. ಆದರೆ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಸಪೋರ್ಟ್ ಮಾಡುವುದಿಲ್ಲ.

     ಮತ್ತೊಂದೆಡೆ, ಟಾಪ್-ಸ್ಪೆಕ್ AX7 L ವೇರಿಯಂಟ್ ಅದೇ ಸೈಜ್‌ನ HD ಟಚ್‌ಸ್ಕ್ರೀನ್‌ನೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಪಡೆಯುತ್ತದೆ, ಅದರೊಂದಿಗೆ ಫುಲ್ ಡಿಜಿಟಲ್ 10.25-ಇಂಚಿನ ಡ್ರೈವರ್ ಡಿಸ್‌ಪ್ಲೇ, ಆಟೋ AC, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 6-ವೇ ಪವರ್ಡ್ ಡ್ರೈವರ್ ಸೀಟ್, ಮತ್ತು 9-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಕೂಡ ನೀಡಲಾಗಿದೆ.

     ಹೆಚ್ಚಿನ ಅನುಕೂಲಕ್ಕಾಗಿ ಎರಡನೇ ಸಾಲಿನ ಸೀಟುಗಳು ಹಿಂಭಾಗದ AC ವೆಂಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ.

     ಎರಡೂ ವೇರಿಯಂಟ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ನೀಡಲಾಗಿದೆ. ಥಾರ್ ರೋಕ್ಸ್‌ AX7L ಹೆಚ್ಚುವರಿಯಾಗಿ 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್‌ಗಳನ್ನು (ADAS) ಪಡೆಯುತ್ತದೆ. 

     ಪವರ್‌ಟ್ರೇನ್ ಆಯ್ಕೆಗಳು

     ಥಾರ್ ರೋಕ್ಸ್‌ ಅನ್ನು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಈ ಎರಡೂ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ:

     

     ಥಾರ್ ರೋಕ್ಸ್ MX1

     ಥಾರ್ ರೋಕ್ಸ್ AX7L

     ಇಂಜಿನ್

     2-ಲೀಟರ್ ಟರ್ಬೊ-ಪೆಟ್ರೋಲ್

     2.2-ಲೀಟರ್ ಡೀಸೆಲ್

     2-ಲೀಟರ್ ಟರ್ಬೊ-ಪೆಟ್ರೋಲ್

     2.2-ಲೀಟರ್ ಡೀಸೆಲ್

     ಪವರ್

    162 PS

    152 PS

    162 PS (MT)/177 PS (AT)

    152 PS (MT ಮತ್ತು AT)/ 175 PS (4X4 AT) ವರೆಗೆ

     ಟಾರ್ಕ್

    330 Nm 

    330 Nm

    330 Nm (MT)/380 Nm (AT)

    330 Nm (MT ಮತ್ತು AT)/ 370 Nm (4X4 AT) ವರೆಗೆ

     ಟ್ರಾನ್ಸ್‌ಮಿಷನ್

     6-ಸ್ಪೀಡ್ MT

     6-ಸ್ಪೀಡ್ MT

     6- ಸ್ಪೀಡ್ MT/6- ಸ್ಪೀಡ್ AT^

     6- ಸ್ಪೀಡ್ MT/6- ಸ್ಪೀಡ್ AT

     ಡ್ರೈವ್ ಪ್ರಕಾರ

    RWD

    RWD

    RWD

    RWD/ 4WD

     AT - ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್

     RWD - ರಿಯರ್-ವೀಲ್-ಡ್ರೈವ್/4WD - 4-ವೀಲ್-ಡ್ರೈವ್

     ಥಾರ್ ರೋಕ್ಸ್‌ನ ಡೀಸೆಲ್ ವೇರಿಯಂಟ್‌ಗಳನ್ನು ಆಪ್ಷನಲ್ 4WD ಡ್ರೈವ್‌ಟ್ರೇನ್‌ನೊಂದಿಗೆ ಕೂಡ ಪಡೆಯಬಹುದು.

     ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು

     ಥಾರ್ ರೋಕ್ಸ್‌ನ ಬೆಲೆಯು ರೂ 12.99 ಲಕ್ಷದಿಂದ ರೂ 22.49 ಲಕ್ಷದವರೆಗೆ ಇದೆ (ಪರಿಚಯಾತ್ಮಕ, ಎಕ್ಸ್-ಶೋ ರೂಂ ಪ್ಯಾನ್-ಇಂಡಿಯಾ). ಇದು ಫೋರ್ಸ್ ಗೂರ್ಖಾ 5-ಡೋರ್ ಮತ್ತು ಮಾರುತಿ ಜಿಮ್ನಿಗೆ ಪ್ರತಿಸ್ಪರ್ಧಿಯಾಗಿದೆ.

     ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು  ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

     ಇನ್ನಷ್ಟು ಓದಿ:  ಮಹೀಂದ್ರಾ ಥಾರ್ ರೋಕ್ಸ್‌ ಡೀಸೆಲ್

    was this article helpful ?

    Write your Comment on Mahindra ಥಾರ್‌ ROXX

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience