Mahindra Thar Roxxಗೆ ಈಗ ಮೂರು ಹೊಸ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳ ಸೇರ್ಪಡೆ
ಈ ಸಣ್ಣ ಆಪ್‌ಡೇಟ್‌ಗಳು ನಗರ ಕೇಂದ್ರಿತ ಥಾರ್ ರಾಕ್ಸ್‌ನ ಅನುಕೂಲತೆಯನ್ನು ಹೆಚ್ಚಿಸುತ್ತವೆ, ಇದು ನಗರದ ಸವಾರಿಯನ್ನು ಹೆಚ್ಚು ಪ್ರಾಯೋಗಿಕವಾಗಿಸುತ್ತದೆ
-
ಆಪ್‌ಡೇಟ್‌ಗಳಲ್ಲಿ ಕೀ-ಲೆಸ್ ಎಂಟ್ರಿ, ಸ್ಲೈಡಿಂಗ್ ಪ್ಯಾಸೆಂಜರ್ ಸೈಡ್ ಫ್ರಂಟ್ ಆರ್ಮ್‌ರೆಸ್ಟ್ ಮತ್ತು ಏರೋಡೈನಾಮಿಕ್ ವೈಪರ್‌ಗಳು ಸೇರಿವೆ.
-
ಎಕ್ಸ್‌ಟೀರಿಯರ್‌ನ ಹೈಲೈಟ್‌ಗಳಲ್ಲಿ ಸಂಪೂರ್ಣ-ಎಲ್‌ಇಡಿ ಲೈಟ್‌ಗಳು, 19-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಸೇರಿವೆ.
-
4WD ವೇರಿಯೆಂಟ್‌ಗಳೊಂದಿಗೆ ಮೋಚಾ ಬ್ರೌನ್ ಮತ್ತು ಐವರಿ ವೈಟ್ ಇಂಟೀರಿಯರ್ ಥೀಮ್‌ಗಳ ನಡುವೆ ಆಯ್ಕೆಯನ್ನು ಪಡೆಯುತ್ತದೆ.
-
ಸೌಲಭ್ಯಗಳಲ್ಲಿ 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್ ಸೇರಿವೆ.
-
ಸುರಕ್ಷತಾ ಜಾಲವು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿದೆ.
-
2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ನಡುವೆ ಆಯ್ಕೆಯೊಂದಿಗೆ ಬರುತ್ತದೆ.
-
ಬೆಲೆಗಳು ಬದಲಾಗದೆ ಉಳಿದಿದ್ದು, 12.99 ಲಕ್ಷ ರೂ.ನಿಂದ 23.09 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇರುತ್ತವೆ.
ಮಹೀಂದ್ರಾ ಥಾರ್ ರಾಕ್ಸ್ ತನ್ನ ದೃಢವಾದ ಸಾಮರ್ಥ್ಯವನ್ನು ಹೊಸ ಮಟ್ಟದ ಸೌಕರ್ಯ ಮತ್ತು ಅನುಕೂಲತೆಯೊಂದಿಗೆ ಸಂಯೋಜಿಸುವ ಮೂಲಕ ಥಾರ್‌ನ ಗರಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಇದು ಡ್ಯುಯಲ್ ಡಿಜಿಟಲ್ ಸ್ಕ್ರೀನ್‌ಗಳು, 5-ಸೀಟ್‌ಗಳ ವಿನ್ಯಾಸ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್‌ಗಳೊಂದಿಗೆ ಬರುತ್ತದೆ, ಇದು ನಗರ ಜನತೆಗೆ ಸೂಕ್ತವಾದ ಎಸ್‌ಯುವಿಯನ್ನಾಗಿ ಮಾಡುತ್ತದೆ. ಆದರೂ, ಥಾರ್ ರಾಕ್ಸ್ ಅನ್ನು ಮೂರು ಹೊಸ ಸೌಲಭ್ಯಗಳೊಂದಿಗೆ ಆಪ್‌ಡೇಟ್ ಮಾಡಲಾಗಿದೆ, ಅದು ಸೌಕರ್ಯ ಮತ್ತು ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಆಪ್‌ಡೇಟ್‌ಗಳನ್ನು ವಿವರವಾಗಿ ಪರಿಶೀಲಿಸೋಣ.
ಅಪ್‌ಡೇಟ್‌ಗಳು ಯಾವುವು?
ಮಹೀಂದ್ರಾ ಥಾರ್ ರಾಕ್ಸ್, ಫೀಚರ್‌ಗಳಿಂದ ತುಂಬಿದ್ದರೂ, ಈ ಹಿಂದೆ ಕೀ-ಲೆಸ್ ಎಂಟ್ರಿಯ ಕೊರತೆಯಿತ್ತು, ಆದ್ದರಿಂದ ಎಸ್‌ಯುವಿಯನ್ನು ಅನ್‌ಲಾಕ್ ಮಾಡಲು ಚಾಲಕನು ಕೀಲಿಯನ್ನು ಬಳಸಬೇಕಾಗಿತ್ತು. ಆದರೆ, ಮಹೀಂದ್ರಾ ಈಗ ಥಾರ್ ರಾಕ್ಸ್ ಅನ್ನು ಕೀಲೆಸ್ ಎಂಟ್ರಿಯ ಫೀಚರ್‌ಅನ್ನು ಸೆರ್ಪಡೆಗೊಳಿಸಿದೆ, ಹೀಗಾಗಿ ಅನುಕೂಲತೆಯನ್ನು ಹೆಚ್ಚಿಸುತ್ತದೆ.
ಇದಲ್ಲದೆ, ಹೆಚ್ಚುವರಿ ಸೌಕರ್ಯಕ್ಕಾಗಿ ಪ್ರಯಾಣಿಕರ ಬದಿಯ ಮುಂಭಾಗದ ಆರ್ಮ್‌ರೆಸ್ಟ್‌ಗೆ ಚಾಲಕ-ಬದಿಯ ಆರ್ಮ್‌ರೆಸ್ಟ್‌ನಂತೆಯೇ ಸ್ಲೈಡಿಂಗ್ ಫಂಕ್ಷನ್‌ಅನ್ನು ಒದಗಿಸಲಾಗಿದೆ.
ಮತ್ತೊಂದು ಪರಿಷ್ಕರಣೆಯೆಂದರೆ ಥಾರ್ ರಾಕ್ಸ್ ಈಗ ಏರೋಡೈನಾಮಿಕ್ ವೈಪರ್‌ಗಳೊಂದಿಗೆ ಬರುತ್ತದೆ, ಇದು ಕ್ಯಾಬಿನ್ ಶಬ್ದವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಆಪ್‌ಡೇಟ್‌ಗಳು ಚಿಕ್ಕದಾಗಿ ಕಂಡರೂ, ಥಾರ್ ರಾಕ್ಸ್ ದೈನಂದಿನ ಚಾಲನಾ ಅಗತ್ಯಗಳಿಗೆ ಇನ್ನಷ್ಟು ಉತ್ತಮ ಆಯ್ಕೆಯಾಗಲು ಅನುವು ಮಾಡಿಕೊಟ್ಟಿದೆ.
ಇದನ್ನೂ ಓದಿ: ಈ ರಾಜ್ಯದಲ್ಲಿ ಶೀಘ್ರದಲ್ಲೇ ದುಬಾರಿಯಾಗಲಿವೆ ಸಿಎನ್‌ಜಿ, ಎಲ್‌ಪಿಜಿ ಹಾಗೂ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳು
ಇತರ ಫೀಚರ್‌ಗಳು ಮತ್ತು ಸುರಕ್ಷತೆ
ಮೊದಲೇ ಹೇಳಿದಂತೆ, ಮಹೀಂದ್ರಾ ಥಾರ್ ರಾಕ್ಸ್ 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 9-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಸೇರಿದಂತೆ ಸೌಲಭ್ಯಗಳನ್ನು ಹೊಂದಿರುವ ಫೀಚರ್-ಭರಿತ ಎಸ್‌ಯುವಿ ಆಗಿದೆ. ಇದು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 6-ವೇ ಪವರ್ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ ಎಸಿ, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳನ್ನು ಸಹ ಒಳಗೊಂಡಿದೆ.
ಇದರ ಸುರಕ್ಷತಾ ಸೂಟ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್ ಕಾರ್ಯದೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿವೆ. ಇದು ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಕೆಲವು ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳ (ADAS) ಫೀಚರ್‌ಗಳನ್ನು ಹೊಂದಿದೆ.
ಪವರ್‌ಟ್ರೈನ್ ಆಯ್ಕೆಗಳು
ಮಹೀಂದ್ರಾ ಥಾರ್ ರಾಕ್ಸ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಅವುಗಳ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
2- ಲೀಟರ್ ಟರ್ಬೋ ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
177 ಪಿಎಸ್ ವರೆಗೆ |
175 ಪಿಎಸ್ ವರೆಗೆ |
ಟಾರ್ಕ್ |
380 ಎನ್‌ಎಮ್ ವರೆಗೆ |
370 ಎನ್‌ಎಮ್ ವರೆಗೆ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನ್ಯುವಲ್/ 6-ಸ್ಪೀಡ್ AT^ |
6-ಸ್ಪೀಡ್ ಮ್ಯಾನ್ಯುವಲ್/ 6-ಸ್ಪೀಡ್ AT^ |
ಡ್ರೈವ್‌ಟ್ರೈನ್* |
RWD |
RWD/4WD |
* RWD = ರಿಯರ್ ವೀಲ್ ಡ್ರೈವ್, 4WD = 4 ವೀಲ್ ಡ್ರೈವ್
^AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಥಾರ್ ರಾಕ್ಸ್ ಬೆಲೆ 12.99 ಲಕ್ಷ ರೂ.ನಿಂದ 23.09 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಇದೆ. ಇದು ಮಾರುತಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾ 5-ಡೋರ್‌ನಂತಹ ಇತರ 5-ಡೋರ್‌ನ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ