• English
    • Login / Register

    2025ರ Toyota Hyryderನಲ್ಲಿ ಈಗ AWD ಸೆಟಪ್‌ನೊಂದಿಗೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಲಭ್ಯ

    ಏಪ್ರಿಲ್ 09, 2025 12:50 pm ರಂದು dipan ಮೂಲಕ ಪ್ರಕಟಿಸಲಾಗಿದೆ

    24 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹೊಸ ಗೇರ್‌ಬಾಕ್ಸ್ ಆಯ್ಕೆಯ ಜೊತೆಗೆ, ಹೈರೈಡರ್ ಈಗ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತದೆ

    2025 Toyota Hyryder Gets An Automatic Transmission With The AWD Setup Now

     ಟೊಯೋಟಾ ಹೈರೈಡರ್‌ಗೆ 2025 ರ ಮೊಡೆಲ್‌ ಇಯರ್‌ನ (MY25) ಸಮಗ್ರ ಆಪ್‌ಡೇಟ್‌ಅನ್ನು ನೀಡಲಾಗಿದೆ, ಇದು ವರ್ಧಿತ ಸುರಕ್ಷತಾ ಸೂಟ್ ಮತ್ತು ಫೀಚರ್‌ ಆಪ್‌ಡೇಟ್‌ಗಳೊಂದಿಗೆ ಅದನ್ನು ಒದಗಿಸಿದೆ. ಇದು ಈಗ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಮತ್ತು ಚಾಲಿತ ಚಾಲಕನ ಸೀಟು ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳನ್ನು ಒಳಗೊಂಡಂತೆ ಫೀಚರ್‌ಗಳನ್ನು ಪಡೆಯುತ್ತದೆ. ಇದು ಈಗ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಮತ್ತು ಚಾಲಿತ ಚಾಲಕನ ಸೀಟು ಮತ್ತು  ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳನ್ನು ಒಳಗೊಂಡಂತೆ ಫೀಚರ್‌ಗಳನ್ನು ಪಡೆಯುತ್ತದೆ. ಇದಲ್ಲದೆ, ಇದು ಈಗ ಆಲ್-ವೀಲ್-ಡ್ರೈವ್ (AWD) ಸೆಟಪ್‌ನೊಂದಿಗೆ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ. ಇದರೊಂದಿಗೆ, ಆಪ್‌ಡೇಟ್‌ ಮಾಡಿದ ಹೈರೈಡರ್ ಬೆಲೆಗಳು ಈಗ 11.34 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ), ಇದು ಮೊದಲಿಗಿಂತ 20,000 ರೂ. ಹೆಚ್ಚಾಗಿದೆ.

    ಟೊಯೋಟಾ ಹೈರೈಡರ್: ಪವರ್‌ಟ್ರೇನ್ ಆಯ್ಕೆಗಳು

    Toyota Urban Cruiser Hyryder automatic gearbox

    ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಸ್ಟ್ರಾಂಗ್‌ ಹೈಬ್ರಿಡ್ ಮತ್ತು ಮೈಲ್ಡ್‌ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದ್ದು, ಮೊದಲನೆಯದರಲ್ಲಿ ಸಿಎನ್‌ಜಿ ಆಯ್ಕೆಯನ್ನೂ ಸಹ ನೀಡಲಾಗಿದೆ. ಇದರ ವಿವರವಾದ ವಿಶೇಷಣಗಳು ಇಲ್ಲಿವೆ:

    ಎಂಜಿನ್‌

    1.5-ಲೀಟರ್ ಮೈಲ್ಡ್ ಹೈಬ್ರಿಡ್

    1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್

    1.5-ಲೀಟರ್ ಪೆಟ್ರೋಲ್-ಸಿಎನ್‌ಜಿ

    ಪವರ್‌

    103 ಪಿಎಸ್‌

    116 ಪಿಎಸ್‌ (ಸಂಯೋಜಿತ)

    88 ಪಿಎಸ್‌

    ಟಾರ್ಕ್‌

    137 ಎನ್‌ಎಮ್‌

    141 ಎನ್‌ಎಮ್‌ (ಹೈಬ್ರಿಡ್‌)

    121.5 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    5-ಸ್ಪೀಡ್‌ ಮ್ಯಾನ್ಯುವಲ್‌ / 6-ಸ್ಪೀಡ್‌ ಆಟೋಮ್ಯಾಟಿಕ್‌

    e-ಸಿವಿಟಿ (ಸಿಂಗಲ್-ಸ್ಪೀಡ್‌ ಗೇರ್‌ಬಾಕ್ಸ್)

    5-ಸ್ಪೀಡ್‌ ಮ್ಯಾನ್ಯುವಲ್‌

    ಡ್ರೈವ್‌ಟ್ರೈನ್‌*

    FWD / AWD (ಆಟೋಮ್ಯಾಟಿಕ್‌ ಮಾತ್ರ)

    FWD

    FWD

    *FWD = ಫ್ರಂಟ್-ವೀಲ್-ಡ್ರೈವ್; AWD = ಆಲ್-ವೀಲ್-ಡ್ರೈವ್

    ಎಲ್ಲಾ ಎಂಜಿನ್ ಆಯ್ಕೆಗಳ ಔಟ್‌ಪುಟ್ ಮೊದಲಿನಂತೆಯೇ ಇದೆ. ಹಾಗೆಯೇ, ಬದಲಾಗಿರುವ ಅಂಶವೆಂದರೆ, ಹೆಚ್ಚುವರಿ ಅನುಕೂಲಕ್ಕಾಗಿ AWD ಸೆಟಪ್ ಅನ್ನು ಈಗ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಎಕ್ಸ್‌ಕ್ಲೂಸಿವ್‌ ಆಗಿ ನೀಡಲಾಗುತ್ತಿದೆ. ಈ ಹಿಂದೆ, ಅಂತಹ ಡ್ರೈವ್‌ಟ್ರೇನ್ ಅನ್ನು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಸಲಾಗಿತ್ತು.

    ಇದನ್ನೂ ಓದಿ: 2025ರ ಏಪ್ರಿಲ್‌ನಲ್ಲಿ Maruti Arena ಮೊಡೆಲ್‌ಗಳ ಮೇಲೆ 67,100 ರೂ. ವರೆಗೆ ಭರ್ಜರಿ ಡಿಸ್ಕೌಂಟ್‌

    ಟೊಯೋಟಾ ಹೈರೈಡರ್: ಹೊಸ ಫೀಚರ್‌ಗಳು ಮತ್ತು ಸುರಕ್ಷತಾ ತಂತ್ರಜ್ಞಾನ

    Toyota Urban Cruiser Hyryder front seats

    ಪವರ್‌ಟ್ರೇನ್ ಆಪ್‌ಡೇಟ್‌ನ ಜೊತೆಗೆ, ಈ ಕಾಂಪ್ಯಾಕ್ಟ್ ಎಸ್‌ಯುವಿಗೆ ಬಹಳಷ್ಟು ಹೊಸ ಫೀಚರ್‌ಗಳು ಮತ್ತು ಸುರಕ್ಷತಾ ತಂತ್ರಜ್ಞಾನವನ್ನು ಸೇರಿಸಲಾಗಿದೆ. ವಿವರವಾದ ಪಟ್ಟಿ ಇಲ್ಲಿದೆ:

    ಹೊಸ ಫೀಚರ್‌ಗಳು

    ಹೊಸ ಸುರಕ್ಷತಾ ತಂತ್ರಜ್ಞಾನ

    8-ರೀತಿಯಲ್ಲಿ ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು

    6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ)

    ಹಿಂಭಾಗದ ಬಾಗಿಲಿನ ಸನ್‌ಶೇಡ್

    ಆಟೋ ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್(EPB) (ಆಟೋಮ್ಯಾಟಿಕ್‌ ವೇರಿಯೆಂಟ್‌ನಲ್ಲಿ ಮಾತ್ರ)

    15-ವ್ಯಾಟ್ ಟೈಪ್-ಸಿ ಫಾಸ್ಟ್‌ ಚಾರ್ಜಿಂಗ್ USB ಪೋರ್ಟ್‌ಗಳು

     

    ಏರ್‌ ಕ್ವಾಲಿಟಿ ಇಂಡೆಕ್ಸ್‌ (AQI) ಡಿಸ್‌ಪ್ಲೇ

     

    ಇದರೊಂದಿಗೆ, ಜಪಾನಿನ ಕಾರು ತಯಾರಕರು ಮಿಡ್‌-ಸ್ಪೆಕ್‌ ವೇರಿಯೆಂಟ್‌ಗಳಿಗೂ ಟೈರ್ ಪ್ರೆಷರ್‌ ಮಾನಿಟರಿಂಗ್‌ ಸಿಸ್ಟಮ್‌ಅನ್ನು (TPMS) ಪರಿಚಯಿಸಿದ್ದಾರೆ. ಇದಲ್ಲದೆ, ಮಿಡ್‌ ಮತ್ತು ಟಾಪ್‌-ಎಂಡ್‌ ವೇರಿಯೆಂಟ್‌ಗಳೊಂದಿಗೆ ನೀಡಲಾಗುವ ಎಲ್‌ಇಡಿ ಸ್ಪಾಟ್ ಮತ್ತು ರೀಡಿಂಗ್ ಕ್ಯಾಬಿನ್ ಲೈಟ್‌ಗಳನ್ನು ಈಗ ಎಲ್ಲಾ ಟ್ರಿಮ್‌ಗಳಲ್ಲಿ ಪ್ರಮಾಣಿತ ಫಿಟ್‌ಮೆಂಟ್‌ ಆಗಿ ನೀಡಲಾಗುತ್ತಿದ್ದು, ಕ್ಯಾಬಿನ್ ಹೆಚ್ಚು ಆಧುನಿಕ ಮತ್ತು ದುಬಾರಿಯಾಗಿ ಕಾಣುವಂತೆ ಮಾಡುತ್ತದೆ.

    Toyota Urban Cruiser Hyryder heads-up-display

    ಇತರ ಫೀಚರ್‌ಗಳಲ್ಲಿ 9-ಇಂಚಿನ ಟಚ್‌ಸ್ಕ್ರೀನ್, ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳು, ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ ಎಸಿ, ಹೆಡ್ಸ್-ಅಪ್ ಡಿಸ್‌ಪ್ಲೇ (HUD), ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿವೆ. ಸುರಕ್ಷತಾ ಸೂಟ್ 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಆಟೋ-ಡಿಮ್ಮಿಂಗ್ ಇನ್‌ಸೈಡ್ ರಿಯರ್‌ವ್ಯೂ ಮಿರರ್ (IRVM) ನೊಂದಿಗೆ ಮುಂದುವರಿಯುತ್ತದೆ.

    ಟೊಯೋಟಾ ಹೈರೈಡರ್: ಪ್ರತಿಸ್ಪರ್ಧಿಗಳು

    Toyota Urban Cruiser Hyryder rear

    ಟೊಯೋಟಾ ಹೈರೈಡರ್, ಹುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಎಂಜಿ ಆಸ್ಟರ್ ಸೇರಿದಂತೆ ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಟಾಟಾ ಕರ್ವ್ ಮತ್ತು ಸಿಟ್ರೊಯೆನ್ ಬಸಾಲ್ಟ್ ಸೇರಿದಂತೆ ಎಸ್‌ಯುವಿ-ಕೂಪ್ ಮೊಡೆಲ್‌ಗಳೊಂದಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. 

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Toyota hyryder

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience