FY25ರಲ್ಲಿನ ಮಾರಾಟದಲ್ಲಿಯೂ Marutiಯೇ ನಂ.1, ಹಾಗೆಯೇ Toyota ಮತ್ತು ಮಹಿಂದ್ರಾ ಮಾರಾಟದಲ್ಲೂ ಏರಿಕೆ
ಮಾರುತಿ, ಮಹೀಂದ್ರಾ, ಟೊಯೋಟಾ, ಕಿಯಾ, ಎಂಜಿ ಮೋಟಾರ್ ಮತ್ತು ಸ್ಕೋಡಾ ಮಾರಾಟದಲ್ಲಿ ಬೆಳವಣಿಗೆ ಕಂಡಿದ್ದರೆ, ಹ್ಯುಂಡೈ, ಟಾಟಾ, ವೋಕ್ಸ್‌ವ್ಯಾಗನ್ ಮತ್ತು ಹೋಂಡಾದಂತಹ ಕಾರು ತಯಾರಕರು ಕುಸಿತ ಕಂಡಿದ್ದಾರೆ
ಭಾರತೀಯ ಆಟೋಮೋಟಿವ್ ಮಾರುಕಟ್ಟೆಯು ಕಾರು ಬ್ರಾಂಡ್ ಪರ್ಫಾರ್ಮೆನ್ಸ್‌ನಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ FY25 ಅನ್ನು ಮುಕ್ತಾಯಗೊಳಿಸಿತು. ಮಾರುತಿ ಕಂಪನಿಯು ಪ್ರಬಲ ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇದ್ದರೂ, ಟೊಯೋಟಾ ಮತ್ತು ಮಹೀಂದ್ರಾದಂತಹ ಬ್ರ್ಯಾಂಡ್‌ಗಳ ವರ್ಷದಿಂದ ವರ್ಷಕ್ಕೆ (YoY) ಬೆಳವಣಿಗೆ ಪ್ರಭಾವಶಾಲಿಯಾಗಿದೆ. ಆದರೆ, ಹ್ಯುಂಡೈ, ಟಾಟಾ ಮತ್ತು ಹೋಂಡಾದಂತಹ ಕೆಲವು ದೊಡ್ಡ ಹೆಸರುಗಳು ಈ ಬಾರಿ ಮಾರಾಟದಲ್ಲಿ ಕುಸಿತ ಕಂಡಿವೆ. ಪ್ರತಿಯೊಂದು ಬ್ರ್ಯಾಂಡ್ ಹೇಗೆ ಕಾರ್ಯನಿರ್ವಹಿಸಿತು ಎಂಬುದರ ವಿವರಗಳು ಇಲ್ಲಿದೆ.
ಬ್ರ್ಯಾಂಡ್ |
FY 2025 |
FY 2024 |
YoY ಏರಿಕೆ/ ಇಳಿಕೆ (%) |
ಮಾರುಕಟ್ಟೆ ಪಾಲು FY 2025 (%) |
ಮಾರುಕಟ್ಟೆ ಪಾಲು FY 2024 (%) |
ಮಾರುತಿ |
17,60,765 |
17,59,882 |
0.1 |
40.8 |
41.4 |
ಹ್ಯುಂಡೈ |
5,98,666 |
6,14,721 |
-2.6 |
13.9 |
14.6 |
ಟಾಟಾ |
5,53,591 |
5,70,979 |
-3 |
12.8 |
13.5 |
ಮಹೀಂದ್ರಾ |
5,51,487 |
4,59,864 |
19.9 |
12.8 |
10.9 |
ಟೊಯೋಟಾ |
3,09,508 |
2,46,129 |
25.8 |
7.2 |
5.8 |
ಕಿಯಾ |
2,55,207 |
2,45,634 |
3.9 |
5.9 |
5.8 |
ಹೋಂಡಾ |
65,925 |
86,584 |
-23.9 |
1.5 |
2.1 |
ಎಮ್‌ಜಿ |
62,167 |
55,549 |
11.9 |
1.4 |
1.3 |
ಸ್ಕೋಡಾ |
44,862 |
44,520 |
0.8 |
1 |
1.1 |
ವೋಕ್ಸ್‌ವ್ಯಾಗನ್ |
42,230 |
43,197 |
-2.2 |
1 |
1 |
ಗಮನಿಸಿದ ಪ್ರಮುಖ ಅಂಶಗಳು
-
ವರ್ಷದಿಂದ ವರ್ಷದ (YoY) ಅಂಕಿಅಂಶಗಳು ಬಹುತೇಕ ಸಮತಟ್ಟಾಗಿದ್ದರೂ, ಮಾರುತಿ FY25 ರಲ್ಲಿ 17 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟದೊಂದಿಗೆ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಅವರ ಜನಪ್ರಿಯ ಹ್ಯಾಚ್‌ಬ್ಯಾಕ್, ಮಾರುತಿ ವ್ಯಾಗನ್ ಆರ್, ಮಾರಾಟದಲ್ಲಿ ಮುಂಚೂಣಿಯಲ್ಲಿದೆ, ಮಾರುತಿ ಎರ್ಟಿಗಾ ಮತ್ತು ಮಾರುತಿ ಫ್ರಾಂಕ್ಸ್‌ನಂತಹ ಮೊಡೆಲ್‌ಗಳು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಉತ್ತಮ ಏರಿಕೆ ಕಂಡಿವೆ.
-
2024ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಹುಂಡೈ ಮತ್ತು ಟಾಟಾ ಮೋಟಾರ್ಸ್ ಮಾರಾಟದಲ್ಲಿ ಕ್ರಮವಾಗಿ ಶೇ.2.6 ಮತ್ತು ಶೇ.3 ರಷ್ಟು ಕುಸಿತ ಕಂಡಿವೆ. ಹ್ಯುಂಡೈಗೆ ಸಂಬಂಧಿಸಿದಂತೆ, ಕ್ರೆಟಾ ಮತ್ತು ವೆನ್ಯೂದಂತಹ ಮೊಡೆಲ್‌ಗಳು ಉತ್ತಮ ಪ್ರದರ್ಶನ ನೀಡುತ್ತಲೇ ಇದ್ದವು, ಆದರೆ ಕಾರು ತಯಾರಕರು ಹ್ಯಾಚ್‌ಬ್ಯಾಕ್, ಮಧ್ಯಮ ಗಾತ್ರದ ಎಸ್‌ಯುವಿ ಮತ್ತು EV ಸೆಗ್ಮೆಂಟ್‌ನಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಿದ್ದಾರೆ. ಮತ್ತೊಂದೆಡೆ, ಟಾಟಾ ಮೋಟಾರ್ಸ್, ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೂ, ಹ್ಯಾಚ್‌ಬ್ಯಾಕ್‌ಗಳು ಮತ್ತು ಮಧ್ಯಮ ಗಾತ್ರದ ಎಸ್‌ಯುವಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಮಾರಾಟ ಕುಸಿಯುತ್ತಿದೆ.
-
2025 ರ ಹಣಕಾಸು ವರ್ಷದಲ್ಲಿ ಮಹೀಂದ್ರಾ ಮತ್ತು ಟೊಯೋಟಾ ಎಲ್ಲಾ ಕಾರು ತಯಾರಕರಲ್ಲಿ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದ್ದು, ಕ್ರಮವಾಗಿ ಶೇ. 19.9 ಮತ್ತು ಶೇ. 25.8 ರಷ್ಟು ಸಾಲಿಡ್ ಆದ ಜಿಗಿತವನ್ನು ಕಂಡಿವೆ. ಮಹೀಂದ್ರಾದ ಈ ಬೆಳವಣಿಗೆಗೆ ಅದರ ಜನಪ್ರಿಯ ಎಸ್‌ಯುವಿಗಳಾದ ಸ್ಕಾರ್ಪಿಯೋ N, ಥಾರ್ ಮತ್ತು XUV700 ಗಳು ಕಾರಣವಾಗಿದೆ, ಇವೆಲ್ಲವೂ ಹೆಚ್ಚಿನ ಬೇಡಿಕೆಯನ್ನು ಕಂಡಿವೆ. ಟೊಯೋಟಾದ ಪ್ರಭಾವಶಾಲಿ ಬೆಳವಣಿಗೆಯು ಆದರ ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಗ್ಲಾಂಜಾದಂತಹ ಬ್ಯಾಡ್ಜ್-ಎಂಜಿನಿಯರಿಂಗ್ ಮೊಡೆಲ್‌ಗಳನ್ನು ಒಳಗೊಂಡಂತೆ ಈ ಎಮ್‌ಪಿವಿಗಳಿಂದ ಅದು ಸಾಧ್ಯವಾಯಿತು.
-
ಕಿಯಾ ಮತ್ತು ಎಂಜಿ ಮೋಟಾರ್ ಇಂಡಿಯಾ ಕೂಡ ತಮ್ಮ ಮಾರಾಟದಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಕಂಡಿವೆ. 2025 ರ ಹಣಕಾಸು ವರ್ಷದಲ್ಲಿ ಕಿಯಾ 2.5 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದೆ, ಸೋನೆಟ್ ಮತ್ತು ಸೆಲ್ಟೋಸ್ ಅದರ ಹೆಚ್ಚಿನ ಮಾರಾಟವನ್ನು ಹೊಂದಿವೆ, ಮತ್ತು ಹೊಸ ಕಿಯಾ ಸೈರೋಸ್ ಕೂಡ ಕೆಲವು ಉತ್ತಮ ಸಂಖ್ಯೆಗಳನ್ನು ಸೇರಿಸಿದೆ. MGಯಲ್ಲಿ, ಅದರ ಅತ್ಯುತ್ತಮ ಮಾರಾಟವಾದ MG ವಿಂಡ್ಸರ್ EV ಹೆಚ್ಚಿನ ಹೊರೆಯನ್ನು ಹೊತ್ತಿತ್ತು, ನಂತರ MG ಹೆಕ್ಟರ್ ಮತ್ತು MG ಕಾಮೆಟ್‌ನಂತಹ ಮೊಡೆಲ್‌ಗಳು ಇದಕ್ಕೆ ಸಹಕಾರಿಯಾಗಿದೆ.
-
ವೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ 40,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಸ್ಥಿರವಾದ ಪಥವನ್ನು ಕಾಯ್ದುಕೊಂಡವು. ಕುಶಾಕ್ ಮತ್ತು ಸ್ಲಾವಿಯಾ ಕಾರುಗಳು ಸ್ಕೋಡಾದ ಭಾರತದ ಕಾರ್ಯಾಚರಣೆಗಳ ಬೆನ್ನೆಲುಬಾಗಿ ಮುಂದುವರೆದಿವೆ. ಈ ಪಟ್ಟಿಯಲ್ಲಿ ಎರಡೂ ಬ್ರಾಂಡ್‌ಗಳು ತಲಾ 1 ಪ್ರತಿಶತದಷ್ಟು ಕಡಿಮೆ ಮಾರುಕಟ್ಟೆ ಪಾಲನ್ನು ಹೊಂದಿವೆ.
-
ಈ ಪಟ್ಟಿಯಲ್ಲಿರುವ ಇತರ ಎಲ್ಲಾ ಕಾರು ತಯಾರಕರಲ್ಲಿ ಹೋಂಡಾ ಅತ್ಯಂತ ಕುಸಿತವನ್ನು ಅನುಭವಿಸಿದೆ, ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಶೇಕಡಾ 23.9 ರಷ್ಟು ಕುಸಿತ ಕಂಡುಬಂದಿದೆ. FY25 ರಲ್ಲಿ ಬ್ರ್ಯಾಂಡ್ ಸುಮಾರು 65,000 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡುವಲ್ಲಿ ಯಶಸ್ವಿಯಾಯಿತು. ಹೋಂಡಾ ಅಮೇಜ್ ಇದರ ಪ್ರಮುಖ ಮೊಡೆಲ್ ಆಗಿದ್ದು, ನಂತರದ ಸ್ಥಾನದಲ್ಲಿ ಸಿಟಿ ಮತ್ತು ಎಲಿವೇಟ್ ಸ್ಥಾನವನ್ನು ಪಡೆಯುತ್ತದೆ.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ