Login or Register ಅತ್ಯುತ್ತಮ CarDekho experience ಗೆ
Login

2024ರ ಮಾರ್ಚ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ Marutiಯೇ ನಂ.1

ಮಾರುತಿ ವ್ಯಾಗನ್ ಆರ್‌ ಗಾಗಿ shreyash ಮೂಲಕ ಏಪ್ರಿಲ್ 22, 2024 04:29 pm ರಂದು ಪ್ರಕಟಿಸಲಾಗಿದೆ

ಒಟ್ಟು ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ಮಾರಾಟದಲ್ಲಿ ಮಾರುತಿ ಕೊಡುಗೆ ಶೇಕಡಾ 60 ಕ್ಕಿಂತ ಹೆಚ್ಚಿದೆ

ಮಾರ್ಚ್ 2024 ರ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ಮಾರಾಟ ವರದಿಯು ಹೊರಬಿದ್ದಿದೆ ಮತ್ತು ಎಂದಿನಂತೆ ಮಾರುತಿ ಹ್ಯಾಚ್‌ಬ್ಯಾಕ್‌ಗಳು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯವನ್ನು ಸಾಧಿಸಿವೆ. ಈ ಪಟ್ಟಿಯಲ್ಲಿರುವ ಆರು ಹ್ಯಾಚ್‌ಬ್ಯಾಕ್‌ಗಳಲ್ಲಿ ನಾಲ್ಕು ಮಾರುತಿ, ಒಂದು ಟಾಟಾ ಮತ್ತು ಒಂದು ಹುಂಡೈ ಸೇರಿದೆ. ಬನ್ನಿ, ಕಳೆದ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ನೋಡೋಣ.

ಮಾಡೆಲ್ ಗಳು

ಮಾರ್ಚ್ 2024

ಮಾರ್ಚ್ 2023

ಫೆಬ್ರವರಿ 2024

ಮಾರುತಿ ವ್ಯಾಗನ್ R

16,368

17,305

19,412

ಮಾರುತಿ ಸ್ವಿಫ್ಟ್

15,728

17,559

13,165

ಟಾಟಾ ಟಿಯಾಗೋ

6,381

7,366

6,947

ಹುಂಡೈ ಗ್ರಾಂಡ್ i10 ನಿಯೋಸ್

5,034

9,034

4,947

ಮಾರುತಿ ಸೆಲೆರಿಯೊ

3,478

4,646

3,586

ಮಾರುತಿ ಇಗ್ನಿಸ್

2,788

2,760

2,110

ಗಮನಿಸಿದ ಪ್ರಮುಖ ಅಂಶಗಳು

  • ಮಾರುತಿ ವ್ಯಾಗನ್ R ನ, 16,000 ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದ್ದು, ಇದು ಮಾರ್ಚ್ 2024 ರಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಆಗಿದೆ. ಆದರೆ ಅದರ ಮಾರಾಟವು ಹಿಂದಿನ ತಿಂಗಳಿಗಿಂತ 16 ಪ್ರತಿಶತದಷ್ಟು ಮತ್ತು ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ಶೇಕಡಾ 5 ರಷ್ಟು ಕಡಿಮೆಯಾಗಿದೆ.

  • ವ್ಯಾಗನ್ R ನಂತರ, ಮಾರುತಿ ಸ್ವಿಫ್ಟ್ 10,000 ಯುನಿಟ್‌ಗಳನ್ನು ಮಾರಾಟ ಮಾಡಿದ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ. ಮಾರ್ಚ್ 2024 ರಲ್ಲಿ, 15,700 ಕ್ಕೂ ಹೆಚ್ಚು ಸ್ವಿಫ್ಟ್‌ಗಳನ್ನು ಮಾರಾಟ ಮಾಡಲಾಗಿದೆ, ಇದು ಹಿಂದಿನ ತಿಂಗಳಿಗಿಂತ 19 ಶೇಕಡಾ ಹೆಚ್ಚಳವನ್ನು ತೋರಿಸುತ್ತದೆ.

ಇದನ್ನು ಕೂಡ ಓದಿ: ಫೋಕ್ಸ್‌ವ್ಯಾಗನ್ ವರ್ಟಸ್ ಮಾರ್ಚ್ 2024 ರಲ್ಲಿ ಹುಂಡೈ ವೆರ್ನಾಕ್ಕಿಂತ ಹೆಚ್ಚಿನ ಯೂನಿಟ್ ಗಳನ್ನು ಮಾರಾಟ ಮಾಡಿದೆ

  • ಮಾರ್ಚ್ 2024 ರಲ್ಲಿ, ಟಾಟಾ ಟಿಯಾಗೊ ಹ್ಯುಂಡೈ ಗ್ರಾಂಡ್ i10 ನಿಯೋಸ್‌ಗಿಂತ 1,300 ಯುನಿಟ್‌ಗಳನ್ನು ಹೆಚ್ಚು ಮಾರಾಟ ಮಾಡಿತು, ಆ ಮೂಲಕ ತನ್ನ ಮುನ್ನಡೆಯನ್ನು ಉಳಿಸಿಕೊಂಡಿದೆ. ಟಾಟಾ ಕಳೆದ ತಿಂಗಳು 6,000 ಕ್ಕೂ ಹೆಚ್ಚು ಟಿಯಾಗೊ ಯುನಿಟ್‌ಗಳನ್ನು ಮಾರಾಟ ಮಾಡಿದೆ, ಆದರೆ ಅದರ ಮಾಸಿಕ ಮಾರಾಟವು ಸುಮಾರು 500 ಯುನಿಟ್‌ಗಳಷ್ಟು ಕಡಿಮೆಯಾಗಿದೆ.

  • ಹ್ಯುಂಡೈ ಗ್ರಾಂಡ್ i10 ನಿಯೋಸ್ ಮಾರ್ಚ್ 2024 ರಲ್ಲಿ 5,000 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅದರ ಮಾಸಿಕ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ 46 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.

  • ಸುಮಾರು 3,500 ಯೂನಿಟ್‌ಗಳ ಮಾರಾಟದೊಂದಿಗೆ, ಮಾರುತಿ ಸೆಲೆರಿಯೊ ಮಾರ್ಚ್ ತಿಂಗಳ ಮಾರಾಟದಲ್ಲಿ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಆದರೆ, ಅದರ ವಾರ್ಷಿಕ ಮಾರಾಟವು 1,000 ಯುನಿಟ್‌ಗಳಷ್ಟು ಕಡಿಮೆಯಾಗಿದೆ.

  • ಕೊನೆಯದಾಗಿ, ಮಾರುತಿ ಇಗ್ನಿಸ್ ಮಾರ್ಚ್ 2024 ರಲ್ಲಿ 2,700 ಕ್ಕೂ ಹೆಚ್ಚು ಖರೀದಿದಾರರನ್ನು ಸೆಳೆಯಿತು, ಆದರೂ ಇದು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ 32 ಪ್ರತಿಶತದಷ್ಟು ಇಳಿಕೆಯನ್ನು ಕಂಡಿದೆ.

ಇನ್ನಷ್ಟು ಓದಿ: ವ್ಯಾಗನ್ R ಆನ್ ರೋಡ್ ಬೆಲೆ

Share via

Write your Comment on Maruti ವ್ಯಾಗನ್ ಆರ್‌

explore similar ಕಾರುಗಳು

ಟಾಟಾ ಟಿಯಾಗೋ

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.49 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಸ್ವಿಫ್ಟ್

ಪೆಟ್ರೋಲ್24.8 ಕೆಎಂಪಿಎಲ್
ಸಿಎನ್‌ಜಿ32.85 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಸೆಲೆರಿಯೊ

ಪೆಟ್ರೋಲ್25.24 ಕೆಎಂಪಿಎಲ್
ಸಿಎನ್‌ಜಿ34.43 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ವ್ಯಾಗನ್ ಆರ್‌

ಪೆಟ್ರೋಲ್24.35 ಕೆಎಂಪಿಎಲ್
ಸಿಎನ್‌ಜಿ34.05 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ