• English
  • Login / Register

ಜುಲೈ 9 ರಿಂದ ಸ್ಟ್ಯಾಂಡರ್ಡ್ ವಾರಂಟಿ ಕವರೇಜ್ ಅನ್ನು ಹೆಚ್ಚಿಸಿದ Maruti

published on ಜುಲೈ 10, 2024 08:43 pm by shreyash for ಮಾರುತಿ ಸ್ವಿಫ್ಟ್

  • 37 Views
  • ಕಾಮೆಂಟ್‌ ಅನ್ನು ಬರೆಯಿರಿ

ಹಿಂದಿನ 2-ವರ್ಷ/40,000 ಕಿಮೀ ವಾರಂಟಿಯನ್ನು 3-ವರ್ಷ/1 ಲಕ್ಷ ಕಿಮೀ ಪ್ಯಾಕೇಜ್‌ಗೆ ಹೊಸ ವಿಸ್ತೃತ ವಾರಂಟಿ ಆಯ್ಕೆಗಳೊಂದಿಗೆ ಸ್ಟ್ಯಾಂಡರ್ಡ್‌ ಆಗಿ ಸುಧಾರಿಸಲಾಗಿದೆ 

Maruti Suzuki Logo

  • ಇದು 2024ರ ಜುಲೈ 9ರಿಂದ ಮಾಡಿದ ಎಲ್ಲಾ ವಿತರಣೆಗಳಿಗೆ ಅನ್ವಯಿಸುತ್ತದೆ.

  • ಸ್ಟ್ಯಾಂಡರ್ಡ್ ವಾರಂಟಿ ಇಂಜಿನ್, ಟ್ರಾನ್ಸ್ಮಿಷನ್, ಮೆಕ್ಯಾನಿಕಲ್ ಘಟಕಗಳು, ಎಲೆಕ್ಟ್ರಿಕಲ್‌ ಸಿಸ್ಟಮ್‌ಗಳು ಮತ್ತು ಹವಾನಿಯಂತ್ರಣಕ್ಕೆ ಕವರೇಜ್ ನೀಡುತ್ತದೆ. 

  • ಗ್ರಾಹಕರು ತಮ್ಮ ಕಾರುಗಳ ವಾರಂಟಿಯನ್ನು 6 ವರ್ಷಗಳು/1.60 ಲಕ್ಷ ಕಿಮೀ ವರೆಗೆ (ಯಾವುದು ಮೊದಲು ಬರುತ್ತದೋ ಅದಕ್ಕೆ) ವಿಸ್ತರಿಸಬಹುದು

ಮಾರುತಿ ಸುಜುಕಿಯನ್ನು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‌ಗಳಲ್ಲಿ ಒಂದು ಎಂದು ಪರಿಗಣಿಸಬಹುದು, ಇದು ಅದರ ವಿಶ್ವಾಸಾರ್ಹ, ಕಡಿಮೆ-ನಿರ್ವಹಣೆಯ ಕಾರುಗಳು ಮತ್ತು ವ್ಯಾಪಕವಾದ ಮಾರಾಟದ ನಂತರದ ಸರ್ವೀಸ್‌ಗೆ ಹೆಸರುವಾಸಿಯಾಗಿದೆ. ಈ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಲು, ಮಾರುತಿ ತನ್ನ ಕಾರುಗಳ ಮೇಲಿನ ಸ್ಟ್ಯಾಂಡರ್ಡ್‌ ವಾರಂಟಿಯನ್ನು 2 ವರ್ಷಗಳು/40,000 ಕಿಮೀಗಳಿಂದ 3 ವರ್ಷಗಳು/1 ಲಕ್ಷ ಕಿಮೀವರೆಗೆ ವಿಸ್ತರಿಸಿದೆ. 2024ರ ಜುಲೈ 9ರಿಂದ, ಅಂದರೆ ನಿನ್ನೆಯಿಂದ ಮಾಡಿದ ಎಲ್ಲಾ ಡೆಲಿವರಿಗಳಿಗೆ ಇದು ಅನ್ವಯಿಸುತ್ತದೆ.

ಉಪಭೋಗ್ಯ (ಕನ್ಸುಮೆಬಲ್‌) ಐಟಮ್‌ಗಳನ್ನು ಹೊರತುಪಡಿಸಿ, ಸ್ಟ್ಯಾಂಡರ್ಡ್ ವಾರಂಟಿಯು ಇಂಜಿನ್, ಗೇರ್‌ಬಾಕ್ಸ್‌, ಮೆಕ್ಯಾನಿಕಲ್ ಘಟಕಗಳು, ಇಲೆಕ್ಟ್ರಿಕಲ್‌ ಸಿಸ್ಟಮ್‌ಗಳು ಮತ್ತು ಹವಾನಿಯಂತ್ರಣಕ್ಕೆ ಕವರೇಜ್ ನೀಡುತ್ತದೆ. ನಿಮ್ಮ ವಾರಂಟಿ ಅವಧಿಯಲ್ಲಿ ಲೇಬರ್‌ ವೆಚ್ಚದಲ್ಲಿ ರಿಯಾಯಿತಿಗಳನ್ನು ಸಹ ನೀವು ಪಡೆಯುತ್ತೀರಿ.

ಹೊಸ ವಿಸ್ತೃತ ವಾರಂಟಿ ಪ್ಯಾಕೇಜುಗಳು

ವಾಹನ ತಯಾರಕರು ಹೊಸ ವಿಸ್ತೃತ ವಾರಂಟಿ ಪ್ಯಾಕೇಜ್‌ಗಳನ್ನು ಸಹ ಪರಿಚಯಿಸಿದ್ದಾರೆ, ಅವುಗಳ ಕುರಿತು ಕೆಳಗೆ ವಿವರಿಸಲಾಗಿದೆ. 

ವಾರೆಂಟಿ ಪ್ಯಾಕೇಜ್

ವರ್ಷ/ಕಿ.ಮೀ

ಪ್ಲಾಟಿನಂ ಪ್ಯಾಕೇಜ್

4 ವರ್ಷಗಳು/ 1.20 ಲಕ್ಷ ಕಿ.ಮೀ

ರಾಯಲ್ ಪ್ಲಾಟಿನಂ ಪ್ಯಾಕೇಜ್

5 ವರ್ಷಗಳು/ 1.40 ಲಕ್ಷ ಕಿ.ಮೀ

ಸಾಲಿಟೈರ್ ಪ್ಯಾಕೇಜ್

6 ವರ್ಷಗಳು/ 1.60 ಲಕ್ಷ ಕಿ.ಮೀ

Maruti Alto K10

ಈ ಹೊಸ ಹೆಜ್ಜೆಯ ಕುರಿತು ಪ್ರತಿಕ್ರಿಯಿಸಿದ MSILನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ಪಾರ್ಥೋ ಬ್ಯಾನರ್ಜಿ, "ಮಾರುತಿ ಸುಜುಕಿಯಲ್ಲಿ, ನಾವು ಜೀವನದುದ್ದಕ್ಕೂ ಗ್ರಾಹಕರನ್ನು ಹೊಂದಲು ಪ್ರಯತ್ನಿಸುತ್ತೇವೆ. ಈ ಬದ್ಧತೆಗೆ ಅನುಗುಣವಾಗಿ, ನಮ್ಮ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸಲು ನಾವು ನಮ್ಮ ಸ್ಟ್ಯಾಂಡರ್ಡ್‌ ವಾರಂಟಿ ಅವಧಿಯನ್ನು 3 ವರ್ಷಗಳು ಅಥವಾ 1,00,000 ಕಿಮೀಗೆ ಹೆಚ್ಚಿಸಿದ್ದೇವೆ. ಇದಲ್ಲದೆ, ನಾವು 6 ವರ್ಷಗಳವರೆಗೆ ಅಥವಾ 1,60,000 ಕಿಮೀ ವರೆಗೆ ವಿಸ್ತೃತ ವಾರಂಟಿ ಪ್ಯಾಕೇಜ್‌ಗಳನ್ನು ಪರಿಚಯಿಸಿದ್ದೇವೆ ಮತ್ತು 4 ನೇ ವರ್ಷ ಮತ್ತು 5 ನೇ ವರ್ಷದ ವಿಸ್ತೃತ ವಾರಂಟಿ ಪ್ಯಾಕೇಜ್‌ಗಳ ವ್ಯಾಪ್ತಿಯನ್ನು ಪರಿಷ್ಕರಿಸಿದ್ದೇವೆ. ಹೆಚ್ಚಾದ ಸ್ಟ್ಯಾಂಡರ್ಡ್‌ ವಾರಂಟಿ ಮತ್ತು ನವೀಕರಿಸಿದ ವಿಸ್ತೃತ ವ್ಯಾರಂಟಿ ಪ್ಯಾಕೇಜ್‌ಗಳು ನಮ್ಮ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಮತ್ತು ಮನಸ್ಸಿನ ಶಾಂತಿಯನ್ನು ನೀಡುತ್ತದೆ, ಅಂತಿಮವಾಗಿ ಅವರ ಒಟ್ಟಾರೆ ಮಾಲೀಕತ್ವದ ಅನುಭವವನ್ನು ಹೆಚ್ಚಿಸುತ್ತದೆ." 

ಭಾರತದಲ್ಲಿ ಮಾರುತಿಯ ಭವಿಷ್ಯದ ಯೋಜನೆಗಳು

Maruti eVX

 ಪ್ರಸ್ತುತ, ಮಾರುತಿಯು ಭಾರತದಲ್ಲಿ 18 ಮೊಡೆಲ್‌ಗಳನ್ನು ಮಾರಾಟ ಮಾಡುತ್ತಿದೆ, ಅದರ ಅರೆನಾ ಪಟ್ಟಿಯಲ್ಲಿ 9 ಮತ್ತು ನೆಕ್ಸಾ ಡೀಲರ್‌ಶಿಪ್‌ಗಳಲ್ಲಿ 8 ಅನ್ನು ವಿತರಿಸಲಾಗುತ್ತಿದೆ. 2031ರ ವೇಳೆಗೆ ತನ್ನ ಭಾರತದ ಕಾರುಗಳ ಸಂಖ್ಯೆಯನ್ನು 18 ರಿಂದ 28 ಮಾದರಿಗಳಿಗೆ ವಿಸ್ತರಿಸಲು ವಾಹನ ತಯಾರಕರು ಯೋಜಿಸಿದ್ದಾರೆ, ಇದು eVX ಎಲೆಕ್ಟ್ರಿಕ್ ಎಸ್‌ಯುವಿಯಿಂದ ಪ್ರಾರಂಭವಾಗುವ ಇವಿಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಮುಂದಿನ ದಿನಗಳಲ್ಲಿ ಹೊಸ ತಲೆಮಾರಿನ ಡಿಜೈರ್ ಅನ್ನು ಬಿಡುಗಡೆ ಮಾಡಲು ಮಾರುತಿಯು ತಯಾರಿ ನಡೆಸುತ್ತಿದೆ.

ರೆಗುಲರ್‌ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಎಎಂಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಸ್ವಿಫ್ಟ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಎಂಜಿ windsor ev
    ಎಂಜಿ windsor ev
    Rs.20 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಸೆಪಟೆಂಬರ್, 2024
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ಕಿಯಾ clavis
    ಕಿಯಾ clavis
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಲೆಕ್ಸಸ್ lbx
    ಲೆಕ್ಸಸ್ lbx
    Rs.45 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
×
We need your ನಗರ to customize your experience