10 ಲಕ್ಷ ಮಾರಾಟದ ದಾಖಲೆ ಸೃಷ್ಟಿಸಿದ Maruti Ertiga , 2020 ರಿಂದ ಬರೋಬ್ಬರಿ 4 ಲಕ್ಷ ಕಾರುಗಳು ಮಾರಾಟ

published on ಫೆಬ್ರವಾರಿ 12, 2024 12:40 pm by shreyash for ಮಾರುತಿ ಎರ್ಟಿಗಾ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೆಚ್ಚು ಜನಪ್ರಿಯವಾಗಿರುವ ಮಾರುತಿ ಈ ಎಮ್‌ಪಿವಿಯು ಸುಮಾರು 12 ವರ್ಷಗಳಿಂದ ಮಾರಾಟದಲ್ಲಿದೆ

Maruti Ertiga 

ಮಾರುತಿ ಎರ್ಟಿಗಾ ಎಂಬ ಮಲ್ಟಿ ಪರ್ಪಸ್‌ ವೆಹಿಕಲ್‌ (ಎಮ್‌ಪಿವಿ) ಅನ್ನು  2012 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಲಾಯಿತು.  7-ಆಸನಗಳ ಈ ಎಮ್‌ಪಿವಿಯು ಪ್ರಾರಂಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ಹೊಂದಿತ್ತು. 2018 ರಲ್ಲಿ, ಎರ್ಟಿಗಾದ ವೈಶಿಷ್ಟ್ಯ ಮತ್ತು ಪವರ್‌ಟ್ರೇನ್‌ಗಳಲ್ಲಿ ಅನೇಕ ರೀತಿಯ ಆಪ್‌ಗ್ರೇಡ್‌ಗಳನ್ನು ನೀಡಲಾಯಿತು. ಇದಕ್ಕೆ ಪೂರಕ ಎಂಬಂತೆ 2020 ರಲ್ಲಿ, ಕಟ್ಟುನಿಟ್ಟಾದ ಹೊಗೆಹೊರಸೂಸುವಿಕೆಯ ಮಾನದಂಡಗಳಿಂದಾಗಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಹಂತಹಂತವಾಗಿ ತೆಗೆದುಹಾಕಲಾಯಿತು. 2022 ರಲ್ಲಿ ಮತ್ತೆ ಮಾರುತಿ ಮಿಡ್‌ಲೈಫ್ ಅಪ್‌ಡೇಟ್‌ನೊಂದಿಗೆ ಈ ಎಮ್‌ಪಿವಿಯನ್ನು ಅನ್ನು ರಿಫ್ರೆಶ್ ಮಾಡಿದೆ. ಹಾಗೆಯೇ ಇದೀಗ 2024 ರಲ್ಲಿ, ಮಾರುತಿ ಎರ್ಟಿಗಾ 10 ಲಕ್ಷ  ಕಾರುಗಳ ಗಮನಾರ್ಹ ಮಾರಾಟದ ಮೈಲಿಗಲ್ಲನ್ನು ತಲುಪಿದೆ. ಪ್ರಾರಂಭವಾದಾಗಿನಿಂದ ಈ ಎಂಪಿವಿಯ ಮಾರಾಟದ ಮೈಲಿಗಲ್ಲುಗಳ ಕಿರು ಹಿನ್ನೋಟ ಇಲ್ಲಿದೆ:

ವರ್ಷ

ಮಾರಾಟ

2013

1 ಲಕ್ಷ

2019

5 ಲಕ್ಷ

2020

6 ಲಕ್ಷ

2024

10 ಲಕ್ಷ

 

ಎರ್ಟಿಗಾ 1 ಲಕ್ಷ ಯುನಿಟ್‌ಗಳ ಮಾರಾಟವನ್ನು ಗಳಿಸಲು ಕೇವಲ ಒಂದು ವರ್ಷವನ್ನಷ್ಟೇ ತೆಗೆದುಕೊಂಡಿತ್ತು. ಆದರೆ ನಂತರ ಅದನ್ನು 5 ಲಕ್ಷ ಯುನಿಟ್‌ಗಳಿಗೆ ಕೊಂಡೊಯ್ಯಲು 2019 ರವರೆಗೆ ಕಾಯಬೇಕಿತ್ತು. 2020 ರಲ್ಲಿ ನಂತರದ ಒಂದು ಲಕ್ಷ ಕಾರುಗಳ ಮಾರಾಟವನ್ನು ಕಾಣುವ ಮೂಲಕ ಎಮ್‌ಪಿವಿಗಾಗಿ ಜನರ ಬೇಡಿಕೆಯು ಹೆಚ್ಚದ್ದನ್ನು ಗಮನಿಸಬಹುದು. ಅಂದಿನಿಂದ, ಮಾರುತಿ ಪ್ರತಿ ವರ್ಷ ಸರಾಸರಿ 1.3 ಲಕ್ಷ ಯುನಿಟ್ ಎರ್ಟಿಗಾವನ್ನು ಮಾರಾಟ ಮಾಡಿತು ಮತ್ತು ಇದೀಗ 10 ಲಕ್ಷ ಮಾರಾಟದ ಇತ್ತೀಚಿನ ಮೈಲಿಗಲ್ಲನ್ನು ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ.

ಇದನ್ನು ಸಹ ಪರಿಶೀಲಿಸಿ: ಆಪ್‌ಡೇಟ್‌: ಟೊಯೋಟಾದಿಂದ ತನ್ನ ಡೀಸೆಲ್-ಚಾಲಿತ ಮೊಡೆಲ್‌ಗಳ ಉತ್ಪಾದನೆಯ ಪುನರಾರಂಭ 

ಪವರ್‌ಟ್ರೇನ್‌ಗಳ ವಿಕಾಸ

Maruti Ertiga Side

ಅದರ ಬಹು ಪುನರಾವರ್ತನೆಗಳ ಮೇಲೆ, ಮಾರುತಿ ಎರ್ಟಿಗಾ ಭಾರತೀಯ ಖರೀದಿದಾರರಿಗೆ ವಿವಿಧ ರೀತಿಯ ಪವರ್‌ಟ್ರೇನ್ ಆಯ್ಕೆಗಳನ್ನು ನೀಡಿದೆ. 2012 ರಲ್ಲಿ ಬಿಡುಗಡೆಯಾದ ಮೊದಲ ತಲೆಮಾರಿನ ಎರ್ಟಿಗಾವನ್ನು 1.4-ಲೀಟರ್ K14B ಪೆಟ್ರೋಲ್ ಎಂಜಿನ್ (95 ಪಿಎಸ್ / 130 ಎನ್‌ಎಮ್‌) ಮತ್ತು 1.3-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ (90 ಪಿಎಸ್‌ / 200 ಎನ್‌ಎಮ್‌) ನೊಂದಿಗೆ ನೀಡಲಾಯಿತು. ಇದು ತನ್ನ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಪವರ್‌ಟ್ರೇನ್‌ನ ಆಯ್ಕೆಯನ್ನು ಹೊಂದಿತ್ತು, 82 ಪಿಎಸ್‌ ಮತ್ತು 110 ಎನ್‌ಎಮ್‌ ನ ಕಡಿಮೆ ಉತ್ಪಾದನೆಯನ್ನು ಹೊಂದಿದೆ. ಈ ಎಲ್ಲಾ ಪವರ್‌ಟ್ರೇನ್ ಆಯ್ಕೆಗಳನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ನಂತರ, ಇದು ಪೆಟ್ರೋಲ್ ಆಯ್ಕೆಗಾಗಿ 4-ಸ್ಪೀಡ್ ಟಾರ್ಕ್ ಟಾರ್ಕ್‌ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನ ಆಯ್ಕೆಯನ್ನು ಸಹ ಪಡೆಯಿತು.

2018 ರಲ್ಲಿ, ಮಾರುತಿ ತನ್ನ ಎಮ್‌ಪಿವಿಗೆ ಜನರೇಶನ್‌ನ ಆಪ್‌ಡೇಟ್‌ ಅನ್ನುನೀಡಿತು ಮತ್ತು ಪೆಟ್ರೋಲ್ ಎಂಜಿನ್ ಅನ್ನು ಹೊಸ 1.5-ಲೀಟರ್ ಘಟಕದೊಂದಿಗೆ ಬದಲಾಯಿಸಿತು. 2019 ರಲ್ಲಿ ಸ್ವಲ್ಪ ಸಮಯದ ನಂತರ, ಎರ್ಟಿಗಾ ಹೊಸದಾಗಿ ಅಭಿವೃದ್ಧಿಪಡಿಸಿದ 1.5-ಲೀಟರ್ ಡೀಸೆಲ್ ಎಂಜಿನ್ ನ ಪರಿಚಯಿಸುವುದರೊಂದಿಗೆ 1.3-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಹೊರಹಾಕಿತು. ಆದರೆ ಅದರ ಉಪಸ್ಥಿತಿಯು ಅಲ್ಪಕಾಲಿಕವಾಗಿತ್ತು. 2020 ರಲ್ಲಿ, ಬಿಎಸ್6 ಹೊರಸೂಸುವಿಕೆಯ ಮಾನದಂಡಗಳ ಅನುಷ್ಠಾನದ ಮೊದಲು ಡೀಸೆಲ್ ಆವೃತ್ತಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ನಂತರ 2022ರಲ್ಲಿ, ಎರಡನೇ ತಲೆಮಾರಿನ ಎರ್ಟಿಗಾ ಮತ್ತೊಂದು ಮಿಡ್‌ಲೈಫ್ ಆಪ್‌ಗ್ರೇಡ್‌ಗೆ ಒಳಗಾಯಿತು. ಸುಧಾರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ (103 ಪಿಎಸ್‌/ 137 ಎನ್‌ಎಮ್‌) ಜೊತೆಗೆ, 4-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಅನ್ನು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಬದಲಾಯಿಸಲಾಗಿದೆ ಮತ್ತು ಪ್ರಸ್ತುತ ಲಭ್ಯವಿರುವ ಏಕೈಕ ಎಂಜಿನ್ ಆಗಿದೆ. ಅದೇ ಎಂಜಿನ್ ಅನ್ನು ಸಿಎನ್‌ಜಿಯಲ್ಲಿ 88 ಪಿಎಸ್‌ ಮತ್ತು 121.5 ಎನ್‌ಎಮ್‌ (ಸಿಎನ್‌ಜಿ ಮೋಡ್) ಕಡಿಮೆ ಔಟ್‌ಪುಟ್‌ನೊಂದಿಗೆ ನೀಡಲಾಗುತ್ತದೆ, ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.

ಇದನ್ನು ಸಹ ಪರಿಶೀಲಿಸಿ: ಈ 7 ಚಿತ್ರಗಳಲ್ಲಿ Maruti Fronx Delta Plus Velocity ಆವೃತ್ತಿಯನ್ನು ನೋಡೋಣ

ಇದು ಯಾವ ವೈಶಿಷ್ಟ್ಯಗಳನ್ನು ನೀಡುತ್ತದೆ?

Maruti Ertiga Interior

ಮಾರುತಿ ಎರ್ಟಿಗಾ ಪ್ರಸ್ತುತ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆಟೋಮ್ಯಾಟಿಕ್‌ ಎಸಿ, ಪ್ಯಾಡಲ್ ಶಿಫ್ಟರ್‌ಗಳು ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸೌಕರ್ಯಗಳನ್ನು ಹೊಂದಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಸೆನ್ಸಾರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವು ಸೇರಿವೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ದೆಹಲಿಯಲ್ಲಿ ಮಾರುತಿ ಎರ್ಟಿಗಾದ ಎಕ್ಸ್ ಶೋರೂಂ ಬೆಲೆಯು 8.69 ಲಕ್ಷ ರೂ.ನಿಂದ 13.03 ಲಕ್ಷ ರೂ. ವರೆಗೆ ಇದೆ. ಇದನ್ನು ರೆನಾಲ್ಟ್ ಟ್ರೈಬರ್‌ಗೆ ಪ್ರೀಮಿಯಂ ಪರ್ಯಾಯವಾಗಿ ಪರಿಗಣಿಸಬಹುದು, ಆದರೆ ಕಿಯಾ ಕ್ಯಾರೆನ್ಸ್ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ಹೋಲಿಸಿದರೆ ಇದು ಕೈಗೆಟುಕುವ ಪರ್ಯಾಯವಾಗಿದೆ.

ಇನ್ನಷ್ಟು ಓದಿ : ಮಾರುತಿ ಎರ್ಟಿಗಾ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಎರ್ಟಿಗಾ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience