Login or Register ಅತ್ಯುತ್ತಮ CarDekho experience ಗೆ
Login

ಸಮೀಪಿಸುತ್ತಿದೆ ಮಾರುತಿ ಫ್ರಾಂಕ್ಸ್ ನ ಬಿಡುಗಡೆಯ ದಿನ

ಮಾರುತಿ ಫ್ರಾಂಕ್ಸ್‌ ಗಾಗಿ ansh ಮೂಲಕ ಮಾರ್ಚ್‌ 17, 2023 07:15 pm ರಂದು ಪ್ರಕಟಿಸಲಾಗಿದೆ

ಈ ಕಾರು ತಯಾರಕರು ತಮ್ಮ ಕ್ರಾಸ್‌ಒವರ್ ಬೆಲೆಯನ್ನು ಏಪ್ರಿಲ್‌ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.

  • ಆಟೋ ಎಕ್ಸ್‌ಪೋ 2023 ರಲ್ಲಿ ಇದು ಪ್ರದರ್ಶನಗೊಂಡಾಗಿನಿಂದ ಇದರ ಬುಕಿಂಗ್ ಪ್ರಾರಂಭವಾಗಿದೆ.
  • ಎರಡು ಎಂಜಿನ್ ಆಯ್ಕೆಯೊಂದಿಗೆ ಬರುತ್ತಿದೆ: 90PS, 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 100PS, 1.0-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್.
  • ಫೀಚರ್ ಲಿಸ್ಟ್ ಒಂಬತ್ತು ಇಂಚಿನ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್ ಅಪ್ ಡಿಸ್‌ಪ್ಲೇ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.
  • ಇದುವರೆಗೆ 10,000 ಕ್ಕೂ ಹೆಚ್ಚು ಮುಂಗಡ ಆರ್ಡರ್‌ಗಳನ್ನು ಹೊಂದಿರುವ ಸಾಧ್ಯತೆಯಿದೆ.
  • ರೂ. 8 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ನಿರೀಕ್ಷಿಸಲಾಗಿದೆ.

ಮಾರುತಿ 2023ರ ಆಟೋ ಎಕ್ಸ್‌ಪೋದಲ್ಲಿ ಫೈವ್-ಡೋರ್ ಜಿಮ್ನಿ ಜೊತೆಗೆ ಫ್ರಾಂಕ್ಸ್ ಅನ್ನು ಪ್ರದರ್ಶಿಸಿತು ಮತ್ತು ಅಂದಿನಿಂದ ನಾವು ಅದರ ಬೆಲೆಗಳ ಘೋಷಣೆಗೆ ಕಾಯುತ್ತಿದ್ದೆವು. ಈ ಕ್ರಾಸ್‌ಒವರ್ ಎಸ್‌ಯುವಿ ಈಗಾಗಲೇ ಡೀಲರ್‌ಶಿಪ್‌ಗಳನ್ನು ತಲುಪಿದೆ ಮತ್ತು ನಮ್ಮ ಮೂಲಗಳ ಪ್ರಕಾರ, ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಫ್ರಾಂಕ್ಸ್ ಪವರ್‌ಟ್ರೇನ್‌ಗಳು

ವಿಶೇಷಣಗಳು

ಎಂಜಿನ್

1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್

1.0-ಲೀಟರ್ ಟರ್ಬೋ-ಪೆಟ್ರೋಲ್

ಟ್ರಾನ್ಸ್‌ಮಿಷನ್

ಫೈವ್-ಸ್ಪೀಡ್ ಮ್ಯಾನ್ಯುವಲ್/ ಫೈವ್-ಸ್ಪೀಡ್ AMT

ಫೈವ್-ಸ್ಪೀಡ್ ಮ್ಯಾನ್ಯುವಲ್/ ಸಿಕ್ಸ್-ಸ್ಪೀಡ್ ಆಟೋಮ್ಯಾಟಿಕ್

ಪವರ್

90PS

100PS

ಟಾರ್ಕ್

113Nm

148Nm

ಬಲೆನೊ-ಬೆಸ್ಡ್ ಫ್ರಾಂಕ್ಸ್ ಮಾರುತಿಯ ಕಾರುಗಳ ಪಟ್ಟಿಗೆ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಮರಳಿ ಸ್ವಾಗತಿಸುತ್ತಿದೆ ಈ ಬಾರಿ ಗ್ರಾಹಕರ ಆದ್ಯತೆಯ ಮೇರೆಗೆ ಇದನ್ನು ಫೈವ್-ಸ್ಪೀಡ್ ಮ್ಯಾನ್ಯುವಲ್ ಅಥವಾ ಸಿಕ್ಸ್-ಸ್ಪೀಡ್ ಟಾರ್ಕ್ ಪರಿವರ್ತಕ ಆಟೋಮ್ಯಾಟಿಕ್ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ನೀಡಲಾಗುತ್ತಿದೆ. ಬಲೆನೊ ಹ್ಯಾಚ್‌ಬ್ಯಾಕ್‌ನಂತೆಯೇ ಫ್ರಾಂಕ್ಸ್ ಸಿಎನ್‌ಜಿ ಆಯ್ಕೆಯನ್ನು ಸಹ ಪಡೆಯಬಹುದು.

ಫೀಚರ್‌ಗಳು ಮತ್ತು ಸುರಕ್ಷತೆ

ಈ ಫ್ರಾಂಕ್ಸ್ ಬಲೆನೊ ತರಹದ ಫೀಚರ್‌ಗಳನ್ನು ಪಡೆದಿದೆ. ಇದು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ ಒಂಬತ್ತು ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್ ಅಪ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್ ARKAMYS ಸೌಂಡ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಹೊಂದಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮರಾವನ್ನು ಹೊಂದಿದೆ.

ಇದನ್ನೂ ಓದಿ: ಚಾಟ್‌ಜಿಪಿಟಿ ಪ್ರಕಾರ 4 ಉತ್ತಮ ಭಾರತೀಯ ಕಾರುಗಳು

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಾರು ತಯಾರಕರು ಈ ಎಸ್‌ಯುವಿಯ ಬೆಲೆಯನ್ನ ರೂ. 8 ಲಕ್ಷದಿಂದ (ಎಕ್ಸ್-ಶೋರೂಮ್) ಆರಂಭಿಸುವ ನಿರೀಕ್ಷೆಯಿದೆ ಮತ್ತು ಇದು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳು ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಾದ ಕಿಯಾ ಸೋನೆಟ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯು, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ i20 ಗಳು ಇದಕ್ಕೆ ಪ್ರತಿಸ್ಪರ್ಧಿಯಾಗಿವೆ.

ಇದನ್ನೂ ಓದಿ: ಮಾರುತಿ ಫ್ರಾಂಕ್ಸ್‌ನ ನಿರೀಕ್ಷಿತ ಬೆಲೆಗಳು: ಬಲೆನೊಗಿಂತ ಇದೆಷ್ಟು ದುಬಾರಿ?

Share via

Write your Comment on Maruti ಫ್ರಾಂಕ್ಸ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ