ಮತ್ತೊಮ್ಮೆ ಹಿಂಪಡೆಯಲಾಗಿದೆ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೋಯೋಟಾ ಹೈರೈಡರ್
ಈ ಬಾರಿ ಕಾಂಪ್ಯಾಕ್ಟ್ ಎಸ್‌ಯುವಿಗಳ ರಿಯರ್ ಸೀಟ್‌ಬೆಲ್ಟ್ ಮೌಂಟಿಂಗ್ ಬ್ರ್ಯಾಕೆಟ್‌ಗಳಲ್ಲಿ ಸಂಭವನೀಯ ದೋಷ ಹೊಂದಿವೆ ಎಂದು ಶಂಕಿಸಲಾಗಿದೆ
ಮಾರುತಿ ಗ್ರ್ಯಾಂಡ್ ವಿಟಾರಾ ಅನ್ನು ಮೂರನೇ ಬಾರಿ ಹಿಂಪಡೆಯಲಾಗಿದ್ದು, ಈ ಸಂದರ್ಭದಲ್ಲಿ ಈ ಕಾರು ತಯಾರಕ ಕಂಪನಿಯು ಕಾಂಪ್ಯಾಕ್ಟ್ ಎಸ್‌ಯುವಿಯ ಇನ್ನೂ 11,177 ಹೆಚ್ಚುವರಿ ಯೂನಿಟ್‌ಗಳನ್ನು ಹಿಂಪಡೆದಿದೆ. ರಿಯರ್ ಸೀಟ್‌ಬೆಲ್ಟ್ ಮೌಂಟಿಂಗ್ ಬ್ರ್ಯಾಕೆಟ್‌ಗಳಲ್ಲಿನ ಸಂಭವನೀಯ ದೋಷದ ಕಾರಣಕ್ಕಾಗಿ ಈ ಹೊಸ ಹಿಂಪಡೆಯುವಿಕೆಯನ್ನು ಮಾಡಲಾಗಿದೆ, ಈ ಬ್ರ್ಯಾಕೆಟ್ ಲಾಂಗ್ ರನ್‌ನಲ್ಲಿ ಸಡಿಲಗೊಂಡು ಕಾರಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.
ಇದರ ಟೊಯೋಟಾದ ಪ್ರತಿರೂಪದ ಮೇಲೂ ಪರಿಣಾಮ ಬೀರಿದೆ
ಈ ಗ್ರ್ಯಾಂಡ್ ವಿಟಾರಾದ ಪ್ರತಿರೂಪ ಟೋಯೋಟಾದ ಅರ್ಬನ್ ಕ್ರ್ಯೂಸರ್ ಹೈರೈಡರ್ ಅನ್ನೂ ಅದೇ ಸಂಭಾವ್ಯ ದೋಷದಿಂದಾಗಿ ಹಿಂಪಡೆಯಲಾಗಿದೆ. ಈ ಕಾರುತಯಾರಕರು ಎಸ್‌ಯುವಿಯ 4,026 ಯೂನಿಟ್‌ಗಳನ್ನು ಹಿಂಪಡೆದ ಸಂದರ್ಭದಲ್ಲಿ, ಇಲ್ಲಿಯ ತನಕ ದೋಷಪೂರಿತ ಭಾಗದ ವೈಫಲ್ಯದ ಯಾವುದೇ ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಯಾವ ಯೂನಿಟ್‌ಗಳ ಮೇಲೆ ಪರಿಣಾಮ ಬೀರಿದೆ?
ಎರಡೂ ಕಾರು ತಯಾರಕರು ಆಗಸ್ಟ್ 8 ಮತ್ತು ನವೆಂಬರ್ 15,2022 ರ ನಡುವೆ ತಯಾರಿಸಲಾದ ಎರಡು ಎಸ್‌ಯುವಿಗಳ ಎಲ್ಲಾ ಯೂನಿಟ್‌ಗಳನ್ನು ಹಿಂಪಡೆದಿದ್ದಾರೆ. ಈ ಅವಧಿಯಲ್ಲಿ ತಯಾರಾದ ದೋಷಪೂರಿತ ವಾಹನಗಳ ಮಾಲೀಕರು ಈ ಭಾಗವನ್ನು ಪರಿಶೀಲಿಸಲು ತಮ್ಮ ಎಸ್‌ಯುವಿ ಅನ್ನು ವರ್ಕ್‌ಶಾಪ್‌ಗೆ ಒಯ್ಯಬಹುದು, ಹಾಗೆಯೇ ಮಾರುತಿ ಮತ್ತು ಟೋಯೋಟಾ ದೋಷಪೂರಿತ-ವಾಹನದ ಮಾಲೀಕರನ್ನು ಸಂಪರ್ಕಿಸುವ ಕಾರ್ಯವನ್ನೂ ಮಾಡಲಿವೆ. ದೋಷ ಕಂಡುಬಂದಲ್ಲಿ, ಯಾವುದೇ ವೆಚ್ಚವಿಲ್ಲದೇ ಆ ಭಾಗವನ್ನು ಬದಲಾಯಿಸಿ ಕೊಡಲಾಗುತ್ತದೆ.
ಸಂಬಂಧಿತ: ಟೋಯೋಟಾ ಹಿಂಪಡೆಯುತ್ತಿದೆ ಸುಮಾರು 1,400 ಯೂನಿಟ್‌ಗಳಷ್ಟು ಗ್ಲಾನ್ಜಾ ಮತ್ತು ಹೈರೈಡರ್
ಹಿಂದಿನ ಹಿಂಪಡೆಯುವಿಕೆಗಳು
ಎಸ್‌ಯುವಿಗಳ ಇಂದಿನ ತನಕದ ಹಿಂಪಡೆಯುವಿಕೆಗಳು ತಮ್ಮ ‘ಸುರಕ್ಷತಾ’ ಫೀಚರ್‌ಗಳಿಗೆ ಸಂಬಂಧಿಸಿದವು ಎಂಬುದನ್ನು ಅವಶ್ಯವಾಗಿ ಗಮನಿಸಬೇಕು. ಅವುಗಳ ಮೊಟ್ಟಮೊದಲ ಹಿಂಪಡೆಯುವಿಕೆಯು ಡಿಸೆಂಬರ್ 2022 ರಲ್ಲಿ, (ಫ್ರಂಟ್-ರೋ ಸೀಟ್ ಬೆಲ್ಟ್‌ಗಳ ಶೋಲ್ಡರ್ ಹೈಟ್ ಅಡ್ಜಸ್ಟರ್ ಅಸೆಂಬ್ಲಿಯ ಒಂದು ಸಣ್ಣ ಭಾಗದಲ್ಲಿ ಸಂಭಾವ್ಯ ದೋಷದ ಕಾರಣದಿಂದಾಗಿ), ಹಾಗೆಯೇ ಎರಡನೆಯದು ಜನವರಿ 2023 ರಲ್ಲಿ ಆಗಿತ್ತು (ಏರ್‌ಬ್ಯಾಗ್ ಕಂಟ್ರೋಲರ್‌ನಲ್ಲಿನ ಶಂಕಿತ ದೋಷದಿಂದಾಗಿ).
ಇದನ್ನೂ ಓದಿ: ಬ್ರೇಕಿಂಗ್: ಟೊಯೋಟಾ ಹಿಂಪಡೆಯುತ್ತಿದೆ ಹೈರೈಡರ್ ಎಸ್‌ಯುವಿಯ ಆಯ್ದ ಯೂನಿಟ್‌ಗಳು
ನಮ್ಮ ಸಲಹೆ ಏನು
ಮಾರುತಿ ಅಥವಾ ಟೊಯೋಟಾ ತಮ್ಮ ಪ್ರಸ್ತುತ ಸ್ಥಿತಿಯಲ್ಲಿ ಎಸ್‌ಯುವಿಗಳನ್ನು ಓಡಿಸುವುದು ಸುರಕ್ಷಿತವೇ ಎಂಬುದನ್ನು ನಿರ್ದಿಷ್ಟಪಡಿಸದಿದ್ದರೂ, ನಿಮ್ಮ ವಾಹನವು ಹಿಂಪಡೆಯುವಿಕೆಯ ಅಡಿಯಲ್ಲಿ ಬರುತ್ತದೆಯೇ ಎಂಬುದನ್ನು ಕಂಡುಹಿಡಿಯಲು ನಾವು ಶಿಫಾರಸು ಮಾಡುತ್ತೇವೆ. ಹೌದಾದಲ್ಲಿ, ನಿಮ್ಮ ವಾಹನದ ಸುರಕ್ಷತೆಯ ನಿಟ್ಟಿನಲ್ಲಿ ಆದಷ್ಟು ಬೇಗನೆ ತಪಾಸಣೆಗೆ ಒಳಪಡಿಸಿ.
ಇನ್ನಷ್ಟು ಓದಿ : ಗ್ರ್ಯಾಂಡ್ ವಿಟಾರಾದ ಆನ್ ರೋಡ್ ಬೆಲೆ