• English
  • Login / Register

ದೋಷಪೂರಿತ ಏರ್‌ಬ್ಯಾಗ್ ಕಂಟ್ರೋಲರ್ ಸರಿಪಡಿಸಲು ಮಾರುತಿ ಸುಝುಕಿ ಹಿಂಪಡೆಯುತ್ತಿದೆ ಸುಮಾರು 17,000 ವಾಹನಗಳು

ಮಾರುತಿ ಗ್ರಾಂಡ್ ವಿಟರಾ ಗಾಗಿ ansh ಮೂಲಕ ಜನವರಿ 19, 2023 04:47 pm ರಂದು ಪ್ರಕಟಿಸಲಾಗಿದೆ

  • 52 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಕಾರುತಯಾರಕರು ದೋಷಪೂರಿತ ಭಾಗವನ್ನು ಬದಲಾಯಿಸುವವರೆಗೆ ವಾಹನಗಳನ್ನು ಓಡಿಸದಂತೆ ಶಂಕೆಯಿರುವ ವಾಹನಗಳ ಮಾಲೀಕರಿಗೆ ಸಲಹೆ ನೀಡುತ್ತಿದೆ.

 

Maruti Grand Vitara 6 Airbags

  • ಒಟ್ಟು 17,362 ಯೂನಿಟ್‌ಗಳನ್ನು ಹಿಂಪಡೆಯಲಾಗಿದೆ.

  • ಆಲ್ಟೋ K10, ಎಸ್-ಪ್ರೆಸ್ಸೋ, ಈಕೋ, ಬ್ರೆಝಾ, ಬಲೆನೋ ಮತ್ತು ಗ್ರ್ಯಾಂಡ್ ವಿಟಾರಾ ದೋಷಪೂರಿತ ಮಾಡೆಲ್‌ಗಳಾಗಿವೆ

  • ಶಂಕಿತ ದೋಷವು ಈ ಮಾಡೆಲ್‌ಗಳ ಏರ್‌ಬ್ಯಾಗ್ ಕಂಟ್ರೋಲರ್‌ನಲ್ಲಿ ಉಂಟಾಗಿದೆ.

  • ದೋಷವು ಕ್ರ್ಯಾಶ್‌ಗಳಲ್ಲಿ ಏರ್‌ಬ್ಯಾಗ್‌ಗಳು ಮತ್ತು ಸೀಟ್‌ಬೆಲ್ಟ್ ಪ್ರಿಟೆನ್ಷನರ್‌ಗಳು ನಿಯೋಜನೆಯಾಗದಿರುವುದರಿಂದ ಉಂಟಾಗಬಹುದು. 

  • ಮಾರುತಿಯು ಪರಿಶೀಲನೆಗಾಗಿ ವಾಹನಗಳ ಮಾಲೀಕರನ್ನು ಸಂಪರ್ಕಿಸುತ್ತದೆ.

 

ಮಾರುತಿಯ ಮಾರಾಟದಲ್ಲಿರುವ 17 ಮಾಡೆಲ್‌ಗಳಲ್ಲಿ, ಏರ್‌ಬ್ಯಾಗ್ ಕಂಟ್ರೋಲರ್‌ನಲ್ಲಿನ ಶಂಕಿತ ದೋಷದಿಂದಾಗಿ ಕೇವಲ ಆರನ್ನು ಹಿಂಪಡೆಯಬೇಕಾಗಿ ಬಂದಿದೆ. ಹಿಂಪಡೆಯಲಾದ ಈ 17,362 ಯೂನಿಟ್‌ಗಳು ಡಿಸೆಂಬರ್ 8, 2022 ಮತ್ತು ಜನವರಿ 12, 2023 ರ ನಡುವೆ ತಯಾರಿಸಲಾದ ಆಲ್ಟೋ K10, ಎಸ್-ಪ್ರೆಸ್ಸೋ, ಈಕೋ, ಬ್ರೆಝಾ, ಬಲೆನೋ ಮತ್ತು ಗ್ರ್ಯಾಂಡ್ ವಿಟಾರಾ ಇವುಗಳದ್ದಾಗಿದೆ.

 

Maruti Eeco, S-Presso, Baleno, Brezza, Grand Vitara And Alto K10

 

ತಮ್ಮ ವಾಹನಗಳ ಪರಿಶೀಲನೆಗಾಗಿ ಈ ದೋಷಪೂರಿತ ವಾಹನಗಳ ಮಾಲೀಕರನ್ನು ಮಾರುತಿ ಸಂಪರ್ಕಿಸಲಿದೆ. ದೋಷವು ಕಂಡುಬಂದಲ್ಲಿ, ಈ ಕಾರುತಯಾರಕರು ಅದನ್ನು ಉಚಿತವಾಗಿ ಸರಿಪಡಿಸುತ್ತಾರೆ ಅಥವಾ ಬದಲಾಯಿಸಿಕೊಡುತ್ತಾರೆ. ಅಲ್ಲದೇ ಈ ಸಮಸ್ಯೆಯನ್ನು ಸರಿಪಡಿಸುವವರೆಗೆ ಮಾಲೀಕರು ವಾಹನಗಳನ್ನು ಓಡಿಸದಂತೆ ಮಾರುತಿ ಸಲಹೆ ನೀಡಿದೆ.

 ಏರ್‌ಬ್ಯಾಗ್ ಕಂಟ್ರೋಲರ್ ಎಂದರೇನು?

Airbags

ಏರ್‌ಬ್ಯಾಗ್ ಕಂಟ್ರೋಲರ್ ಅಥವಾ ಏರ್‌ಬ್ಯಾಗ್ ಕಂಟ್ರೋಲ್ ಮಾಡ್ಯೂಲ್ ಒಂದು ಇಲೆಕ್ಟ್ರಾನಿಕ್ ಉಪಕರಣವಾಗಿದ್ದು ಇದು ನಿಮ್ಮ ಕಾರಿನ ಬಹು ಸೆನ್ಸಾರ್‌ಗಳಿಂದ ಡೇಟಾ ಪಡೆದುಕೊಂಡು ಕ್ರ್ಯಾಶ್‌ನ ಸಂದರ್ಭದಲ್ಲಿ ಏರ್‌ಬ್ಯಾಗ್‌ನ ನಿಯೋಜನೆಗೆ ನೆರವಾಗುತ್ತದೆ. ಈ ಉಪಕರಣವು ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ, ನಿಮ್ಮ ಕಾರಿನಲ್ಲಿನ ಏರ್‌ಬ್ಯಾಗ್‌ಗಳು ಅಗತ್ಯವಿದ್ದಾಗ ನಿಯೋಜನೆಯಾಗದಿರಬಹುದು.

ಇದನ್ನೂ ಓದಿ: ಮಾರುತಿ ಸುಝುಕಿ ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಿದ ವಾಹನಗಳ ಪೂರ್ಣ ವಿವರ

ಆದ್ದರಿಂದ ಕೊಟ್ಟಿರುವ ಈ ದಿನಾಂಕಗಳ ನಡುವೆ ತಯಾರಾದ ವಾಹನಗಳಲ್ಲಿ  ನೀವು ಯಾವುದಾದರೂ ಒಂದನ್ನು ಹೊಂದಿದ್ದರೆ ಅಥವಾ ಈ ಸಮಸ್ಯೆಗಾಗಿ ಈ ಕಾರುತಯಾರಕರಿಂದ ಸಂಪರ್ಕಿಸಲ್ಪಟ್ಟಿದ್ದರೆ, ನಿಮ್ಮ ವಾಹನವನ್ನು ಆದಷ್ಟು ಬೇಗನೆ ಪರಿಶೀಲನೆಗೆ ಒಳಡಿಸಬೇಕೆಂದು ನಾವು ಸಲಹೆ ನೀಡುತ್ತೇವೆ. ಕಳೆದ ಎರಡು ತಿಂಗಳುಗಳಲ್ಲಿ ಇದು ಮಾರುತಿಯ ಎರಡನೇ ಅತಿ ದೊಡ್ಡ ಹಿಂಪಡೆಯುವಿಕೆಯಾಗಿದೆ.

ಇನ್ನಷ್ಟು ಓದಿ: ಗ್ರ್ಯಾಂಡ್ ವಿಟಾರಾದ ಆನ್‌ರೋಡ್ ಬೆಲೆ

was this article helpful ?

Write your Comment on Maruti ಗ್ರಾಂಡ್ ವಿಟರಾ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience