Login or Register ಅತ್ಯುತ್ತಮ CarDekho experience ಗೆ
Login

ಆಯ್ದ ಡೀಲರ್‌ಶಿಪ್‌ಗಳಲ್ಲಿ ಮಾರುತಿ ಇನ್ವಿಕ್ಟೋ MPV ಬುಕಿಂಗ್ ಪ್ರಾರಂಭ

ಮಾರುತಿ ಇನ್ವಿಕ್ಟೋ ಗಾಗಿ tarun ಮೂಲಕ ಜೂನ್ 15, 2023 02:00 pm ರಂದು ಪ್ರಕಟಿಸಲಾಗಿದೆ

ಮಾರುತಿ ಇನ್ವಿಕ್ಟೊ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್‌ನಂತೆಯೇ ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿದೆ.

  • ಮಾರುತಿ ಇನ್ವಿಕ್ಟೋ ಬೆಲೆ ಜುಲೈ 5 ರಂದು ಬಹಿರಂಗವಾಗಲಿದೆ.

  • ಸ್ಟ್ರಾಂಗ್-ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯೊಂದಿಗೆ ಹೈಕ್ರಾಸ್‌ನ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳುತ್ತದೆ.

  • ಪನೋರಮಿಕ್ ಸನ್‌ರೂಫ್, 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಒಳಗೊಂಡಿರುತ್ತದೆ.

  • ಬೆಲೆ ಸುಮಾರು 19 ಲಕ್ಷ ರೂಪಾಯಿಯಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ಮಾರುತಿ ಇನ್ವಿಕ್ಟೊ MPV ಯ ಆಫ್‌ಲೈನ್ ಪೂರ್ವ-ಬುಕಿಂಗ್ ಅನ್ನು ಪ್ರಸ್ತುತ ಆಯ್ದ ಡೀಲರ್‌ಶಿಪ್‌ಗಳಲ್ಲಿ ತೆರೆಯಲಾಗಿದೆ. MPV ಜುಲೈ 5 ರಂದು ಅನಾವರಣಗೊಳ್ಳಲಿದೆ ಮತ್ತು ಅದೇ ದಿನ ಮಾರಾಟಕ್ಕೆ ಲಭ್ಯವಾಗಲಿದೆ.

ಬಲೆನೊ/ಗ್ಲಾನ್ಜಾ ಮತ್ತು ಗ್ರ್ಯಾಂಡ್ ವಿಟಾರಾ/ಹೈರೈಡರ್ ನಂತೆಯೇ ಮಾರುತಿ ಇನ್ವಿಕ್ಟೊ ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿದೆ. ಆದಾಗ್ಯೂ, ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ ಕಂಡುಬರುವಂತೆ, ಬಾಹ್ಯ ವಿನ್ಯಾಸವು ಟೊಯೋಟಾ MPV ಗಿಂತ ಸ್ವಲ್ಪ ಭಿನ್ನವಾಗಿರಲಿದೆ.

ಇದನ್ನೂ ಓದಿ: ಕಿಯಾ ಕ್ಯಾರೆನ್ಸ್ ಲಕ್ಸುರಿ ಪ್ಲಸ್ Vs ಟೊಯೋಟಾ ಇನ್ನೋವಾ ಹೈಕ್ರಾಸ್ GX: ನಿರ್ದಿಷ್ಟ ವಿವರಣೆಗಳ ಹೋಲಿಕೆ

ಇನ್ವಿಕ್ಟೋ ಕಾರಿಗೆ ಇನ್ನೋವಾ ಹೈಕ್ರಾಸ್‌ನಂತೆಯೇ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ, ಇದು 174PS ಪವರ್ ಮತ್ತು 205Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೋವಾ ಹೈಕ್ರಾಸ್‌ನಲ್ಲಿ 186PS ಪವರ್ ಅನ್ನು ಉತ್ಪಾದಿಸುವ ಸ್ಟ್ರಾಂಗ್-ಹೈಬ್ರಿಡ್ ಎಂಜಿನ್‌ನ ಆಯ್ಕೆಯೂ ಇರುತ್ತದೆ. ಹೈಕ್ರಾಸ್ ಹೈಬ್ರಿಡ್‌ನ ಪ್ರಮಾಣೀಕೃತ ಮೈಲೇಜ್ 23.24 kmpl ಆಗಿದೆ. ಇನ್ವಿಕ್ಟೋ ಕಾರು ಕೂಡ ಇಷ್ಟೇ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ.

ಇದು ಪನೋರಮಿಕ್ ಸನ್‌ರೂಫ್, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಪಡೆಯುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ಫೀಚರ್‌ಗಳನ್ನು ಪಡೆಯುತ್ತದೆ. ರಾಡಾರ್ ಆಧಾರಿತ ಸುರಕ್ಷತಾ ತಂತ್ರಜ್ಞಾನ ADAS ಅನ್ನು ಒಳಗೊಂಡಿರುವ ಮೊದಲನೇ ಮಾರುತಿ ಕಾರು ಇದಾಗಿದೆ.

ಸಂಬಂಧಿತ: ಸಿಡಿ ಸ್ಪೀಕ್: ಮಾರುತಿ ಶೀಘ್ರದಲ್ಲೇ 30 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಹೊಸ MPV ಕಾರನ್ನು ಪರಿಚಯಿಸುತ್ತಿದೆ

ಮಾರುತಿ ಇನ್ವಿಕ್ಟೋ ಬೆಲೆಯು ಹೈಕ್ರಾನ್‌ನ ಬೆಲೆಗಿಂತ ಅಂದರೆ, 18.55 ಲಕ್ಷ ರೂ.ದಿಂದ 29.99 ಲಕ್ಷ ರೂ.ವರೆಗಿಂತ (ಎಕ್ಸ್ ಶೋ ರೂಂ ದೆಹಲಿ) ಸ್ವಲ್ಪ ಹೆಚ್ಚಾಗಿರುವ ನಿರೀಕ್ಷೆಯಿದೆ. ಇದು ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲವಾದರೂ ಕಿಯಾ ಕರೆನ್ಸ್ ಮತ್ತು ಮಾರುತಿ XL6 ಗಿಂತ ದುಬಾರಿ ಮತ್ತು ಹೆಚ್ಚು ಪ್ರೀಮಿಯಂ ಪರ್ಯಾಯವಾಗಿದೆ.

Share via

Write your Comment on Maruti ಇನ್ವಿಕ್ಟೊ

D
dataniya vijay bhai
Jun 16, 2023, 3:43:41 PM

the best Indian car

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.26.90 - 29.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10.60 - 19.70 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ