ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ ಮಾರುತಿ ಇನ್ವಿಕ್ಟೋದ ಅತ್ಯಂತ ಸ್ಪಷ್ಟ ಚಿತ್ರಗಳು
ಮಾರುತಿ ಇನ್ವಿಕ್ಟೋ ತನ್ನ ಫೀಚರ್‌ಗಳು ಮತ್ತು ಪವರ್‌ಟ್ರೇನ್ ಅನ್ನು ಟೊಯೋಟಾದೊಂದಿಗೆ ಹಂಚಿಕೊಳ್ಳಲಿದೆ
-
ಇನ್ನೋವಾ ಹೈಕ್ರಾಸ್‌ಗೆ ಹೋಲಿಸಿದರೆ, ಮಾರುತಿ ಇನ್ವಿಕ್ಟೋ ನೋಟದಲ್ಲಿ ವ್ಯತ್ಯಾಸಗಳನ್ನು ಪಡೆಯುತ್ತದೆ.
-
ಈ MPVಗೆ ಮಾರುತಿಯು ರೂ 25,000 ಕ್ಕೆ ಬುಕಿಂಗ್‌ಗಳನ್ನು ತೆರೆದಿದೆ.
-
ಹೊಸ ಚಿತ್ರಗಳು ಈಗ ಕ್ರೋಮ್ ಸ್ಲ್ಯಾಬ್‌ಗಳು ಮತ್ತು ಅಂಡರ್‌ಲೈನಿಂಗ್ ಹಾಗೂ ಟೇಲ್‌ಲೈಟ್ ಒಳಗೆ ಟ್ರೈ-ಪೀಸ್ LED ಎಲಿಮೆಂಟ್‌ಗಳೊಂದಿಗೆ ಪರಿಷ್ಕೃತ ಗ್ರಿಲ್ ಅನ್ನು ತೋರಿಸುತ್ತವೆ.
-
ಅಲ್ಲದೇ ವಿವಿಧ ಅಲಾಯ್ ವ್ಹೀಲ್‌ಗಳನ್ನೂ ಪಡೆದಿದ್ದು ಟೇಲ್‌ಗೇಟ್‌ನಲ್ಲಿ ವೇರಿಯೆಂಟ್ ಬ್ಯಾಡ್ ಅನ್ನು ಹೊಂದಿರುವುದಿಲ್ಲ.
-
ಒಳಗಿನ ಬದಲಾವಣೆಯೆಂದರೆ ಟೋಯೋಟಾ MPVಯಲ್ಲಿರುವ ಟ್ಯಾನ್ ಅಪ್‌ಹೋಲ್ಸ್‌ಟ್ರಿಗೆ ಬದಲಾಗಿ ಬ್ಲ್ಯಾಕ್ ಥೀಮ್ ಇರುತ್ತದೆ.
-
ಕೇವಲ 2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಬರುತ್ತದೆ ಎಂದು ಹೇಳಲಾಗಿದೆ.
-
ನಿರೀಕ್ಷಿತ ಫೀಚರ್‌ಗಳು 10-ಇಂಚು ಟಚ್‌ಸ್ಕ್ರೀನ್, ಡ್ಯುಯಲ್-ಝೋನ್ AC ಮತ್ತು 360-ಡಿಗ್ರಿ ಕ್ಯಾಮರಾವನ್ನು ಒಳಗೊಂಡಿದೆ.
ಟೊಯೋಟಾ ಇನ್ನೋವಾ ಹೈಕ್ರಾಸ್-ಆಧಾರಿತ ಮಾರುತಿ ಇನ್ವಿಕ್ಟೋ ಬಿಡುಗಡೆಗೆ ಕೇವಲ 10 ದಿನಗಳು ಬಾಕಿ ಇವೆ. ರೂ 25,000 ಕ್ಕೆ ಇದರ ಬುಕಿಂಗಳು ನಡೆಯುತ್ತಿದ್ದು, ಬಿಡುಗಡೆ ಜುಲೈ 5 ಕ್ಕೆ ನಿಗದಿಯಾಗಿದೆ. ಬೆಲೆ ಘೋಷಣೆಗೆ ಮುಂಚಿತವಾಗಿ, ಈ ಪ್ರೀಮಿಯಂ ಮಾರುತಿ MPVಯನ್ನು ಮತ್ತೊಮ್ಮೆ ಮುಚ್ಚಿಕೆ ಇಲ್ಲದೇ ಗುರುತಿಸಲಾಗಿದ್ದು, ಈ ಬಾರಿ ಇದರ ಡಿಸೈನ್‌ನ ಸ್ಪಷ್ಟ ನೋಟವನ್ನು ನೀಡಿದೆ.
ಯಾವುದೇ ಗೋಚರ ಬದಲಾವಣೆಗಳಿವೆಯೇ?
ಈ ಮಾರುತಿ MPV ಅನ್ನು ವೈಟ್ ಶೇಡ್‌ನಲ್ಲಿ ನೀಡಲಾಗಿದ್ದು, ಇನ್ವಿಕ್ಟೋ ಮತ್ತು ಇನ್ನೋವಾ ಹೈಕ್ರಾಸ್ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ಟ್ವೀಕ್ ಮಾಡಲಾದ ಗ್ರಿಲ್, ಇದು ಈಗ ಅವಳಿ ಕ್ರೋಮ್ ಸ್ಲ್ಯಾಟ್‌ಗಳು ಮತ್ತು ದಪ್ಪನೆಯ ಕ್ರೋಮ್ ಅಂಡರ್‌ಲೈನಿಂಗ್ ಅನ್ನು ಹೊಂದಿರಲಿದೆ. ಈ ಗುರುತಿಸಲಾದ ಮಾಡೆಲ್ ಇನ್ವಿಕ್ಟೋದ ಆರಂಭಿಕ ವೇರಿಯೆಂಟ್ ಆಗಿದ್ದು, ಇದರಲ್ಲಿ ಫಾಗ್ ಲ್ಯಾಂಪ್‌ಗಳು ಮತ್ತು ವಿಹಂಗಮ ಸನ್‌ರೂಫ್ ಇರುವುದಿಲ್ಲ, ಈ ಎರಡೂ ಟಾಪ್-ಸ್ಪೆಕ್ ಇನ್ನವಾ ಹೈಕ್ರಾಸ್‌ನಲ್ಲಿ ಲಭ್ಯವಿದೆ.
ಈ ಇನ್ವಿಕ್ಟೋ ವಿವಿಧ ಜೊತೆಯ ಅಲಾಯ್ ವ್ಹೀಲ್‌ಗಳನ್ನು ಪಡೆದಿದ್ದು, ಉಳಿದಂತೆ ಇದರ ಸಂಪೂರ್ಣ ಪ್ರೊಫೈಲ್ ಹಾಗೆಯೇ ಇರುತ್ತದೆ. ಹಿಂಬದಿಯಲ್ಲಿ, LED ಟೇಲ್‌ಲೈಟ್‌ಗಳು ಇತ್ತೀಚಿನ ನೆಕ್ಸಾ ಆಫರಿಂಗ್‌ಗಳಲ್ಲಿ ಇರುವಂತೆಟ್ರೈ-ಪೀಸ್ ಎಲಿಮೆಂಟ್ ಹೊಂದಿರುವುದನ್ನು ನೀವು ಗಮನಿಸಬಹುದು. ಹಿಂಭಾಗದ ಇತರ ಪ್ರೊಫೈಲ್‌ಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ (ಸಹಜವಾಗಿ ‘ಇನ್ವಿಕ್ಟೋ’ ಮೋನಿಕರ್ ಅನ್ನು ಸೇರಿಸುವುದರ ಹೊರತಾಗಿ). ಅಲ್ಲದೇ, ತನ್ನ ಟೊಯೋಟಾ ಪ್ರತಿರೂಪಿಯಲ್ಲಿರುವ ವೇರಿಯೆಂಟ್ ಬ್ಯಾಡ್ಜ್ ಇದರಲ್ಲಿ ಇರುವುದಿಲ್ಲ.
ಕ್ಯಾಬಿನ್ ಒಳಗಡೆಯ ವ್ಯತ್ಯಾಸ
ಮಾರುತಿ ನೆಕ್ಸಾ ಕಾರುಗಳಲ್ಲಿ ಪ್ರಮುಖವಾಗಿರುವ ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಥೀಮ್ (ಇದರ ಇತ್ತೀಚಿನ ಟೀಸರ್‌ಗಳೊಂದರಲ್ಲಿ ಖಚಿತಪಡಿಸಿದಂತೆ) ಇನ್ವಿಕ್ಟೋದಲ್ಲೂ ಬರುತ್ತದೆ. ಎರಡು MPVಗಳ ಇಂಟೀರಿಯರ್‌ಗಳ ನಡುವೆ ಇತರ ಯಾವುದೇ ಬದಲಾವಣೆಗಳನ್ನು ನಾವು ನಿರೀಕ್ಷಿಸುವುದಿಲ್ಲ.
ಮಾರುತಿಯು ಇನ್ವಿಕ್ಟೋಗೆ ಹೈಕ್ರಾಸ್‌ನ ಫೀಚರ್‌ಗಳಾದ ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್, 10-ಇಂಚು ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳಿಗೆ ಅಟ್ಟೋಮನ್ ಫಂಕ್ಷನ್ ಮುಂತಾದವನ್ನು ನೀಡುವ ನಿರೀಕ್ಷೆ ಇದೆ.
ಸುರಕ್ಷತೆಯ ವಿಷಯಕ್ಕೆ ಬಂದರೆ, ಇನ್ವಿಕ್ಟೋ ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360-ಡಿಗ್ರಿ ಕ್ಯಾಮರಾವನ್ನು ನಾವು ನಿರೀಕ್ಷಿಸುತ್ತೇವೆ. ಹೈಕ್ರಾಸ್ ಕೂಡಾ ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಮ್‌ಗಳು) ಅನ್ನು ಹೊಂದಿದ್ದು, ಸ್ಪೈ ಮಾಡಲಾದ ಇನ್ವಿಕ್ಟೋ ಯೂನಿಟ್‌ನಲ್ಲಿ ಇದು ಲಭ್ಯವಿರುವಂತೆ ಕಾಣುವುದಿಲ್ಲ.
ಇದನ್ನೂ ನೋಡಿ:ಮಾರುತಿ ಸುಝುಕಿeVXಇಲೆಕ್ಟ್ರಿಕ್ SUV ಪರೀಕ್ಷೆ ಆರಂಭವಾಗಿದೆ, ಇಂಟೀರಿಯರ್ ಡಿಸೈನ್‌ಗಳನ್ನೂ ಕಾಣಬಹುದು
ಸ್ಟ್ರಾಂಗ್-ಹೈಬ್ರಿಡ್ ಮಾತ್ರ
ವರದಿಗಳು ಮತ್ತು ಡೀಲರ್ ಮೂಲಗಳನ್ನು ನಂಬುವುದಾದರೆ, ಈ ಇನ್ವಿಕ್ಟೋದಲ್ಲಿ ಇನ್ನೋವಾ ಹೈಕ್ರಾಸ್‌ನ184PS 2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಪಡೆದಿದೆ. ಇದು e-CVT ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ ಮತ್ತು 21.1kmplನ ಕ್ಲೇಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
ಆದಾಗ್ಯೂ, ಈ ನೋಟವು ಬುಕಿಂಗ್‌ಗೆ ಲಭ್ಯವಿರುವ ಒಂದೇ ಪೂರ್ಣ ಲೋಡಡ್ ವೇರಿಯೆಂಟ್‌ನಲ್ಲಿ ನೀಡಲಾಗುತ್ತಿರುವ ಮಾರುತಿ ಇನ್ವಿಕ್ಟೋವು ಅದರ ಕುರಿತ ಈ ಮೊದಲಿನ ವರದಿಗೆ ವಿರುದ್ಧವಾಗಿದೆ. ಇದು ಅಥವಾ ಮರುಬ್ಯಾಡ್ಜ್ ಮಾಡಲಾದ MPV ತನ್ನ ಬೆಲೆಯನ್ನು ಕಡಿಮೆಗೊಳಿಸಲು ಟೊಯೋಟಾ MPVಯ ಸಲಕರಣೆ ಪಟ್ಟಿಯನ್ನು ರಿಶಫಲ್ ಮಾಡುತ್ತದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಹೈಬ್ರಿಡ್-ಮಾತ್ರ ಮಾಡೆಲ್‌ನಂತೆ ನೀಡಿದರೆ, ಮಾರುತಿಯು ಇನ್ವಿಕ್ಟೋ MPV ಬೆಲೆಯನ್ನು ರೂ 22 ಲಕ್ಷಕ್ಕಿಂತ ದುಬಾರಿಗೊಳಿಸಬಹುದು. ಇದರ ಏಕಮಾತ್ರ ನೇರ ಪ್ರತಿಸ್ಪರ್ಧಿಯು ಟೊಯೋಟಾ ಇನ್ನೋವಾ ಹೈಕ್ರಾಸ್ಆಗಿರಲಿದ್ದು MPV ವರ್ಗದಲ್ಲಿ ಇದನ್ನು ಮಾರುತಿ XL6 ಮತ್ತುಕಿಯಾ ಕಾರೆನ್ಸ್‌ಗಿಂತ ಮೇಲಿನ ಸ್ಥಾನದಲ್ಲಿ ಇರಿಸಲಾಗುತ್ತದೆ.