• English
  • Login / Register

Maruti Jimny ಮ್ಯಾನುವಲ್ Vs ಆಟೋಮ್ಯಾಟಿಕ್: ಯಾವುದು ಹೆಚ್ಚು ಚುರುಕು?

ಮಾರುತಿ ಜಿಮ್ನಿ ಗಾಗಿ ansh ಮೂಲಕ ಡಿಸೆಂಬರ್ 15, 2023 03:44 pm ರಂದು ಪ್ರಕಟಿಸಲಾಗಿದೆ

  • 68 Views
  • ಕಾಮೆಂಟ್‌ ಅನ್ನು ಬರೆಯಿರಿ

5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್‌ ಆಯ್ಕೆಯೊಂದಿಗೆ ಜಿಮ್ನಿ1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ

Maruti Jimny

  •  ಜಿಮ್ನಿಯ 1 1.5-ಲೀಟರ್ ಪೆಟ್ರೋಲ್ ಇಂಜಿನ್, 105 PS ಮತ್ತು 134 Nm ಉತ್ಪಾದಿಸುತ್ತದೆ.
  •  ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವೇರಿಯೆಂಟ್‌ಗಳೆರಡನ್ನೂ ಒಂದೇ ಪರಿಸ್ಥಿತಿಯಲ್ಲಿ ಜೊತೆ ಜೊತೆಯಾಗಿ ಪರೀಕ್ಷಿಸಲಾಯಿತು.
  •  ನಡೆಸಲಾದ ಪರೀಕ್ಷೆಗಳು 0-100 kmph ಆ್ಯಕ್ಸಲರೇಷನ್, ಕ್ವಾರ್ಟರ್ ಮೈಲ್ ರನ್ ಮತ್ತು ಬ್ರೇಕಿಂಗ್ ಪರ್ಫಾರ್ಮೆನ್ಸ್ ಅನ್ನು ಒಳಗೊಂಡಿದ್ದವು.
  • ಮಾರುತಿ ಜಿಮ್ನಿ ಬೆಲೆಯನ್ನು ರೂ10.74 ಲಕ್ಷದಿಂದ ರೂ 15.05 ತನಕ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ.

ಮಾರುತಿ ಜಿಮ್ನಿ ಅನ್ನು ಈ ವರ್ಷ ಮಾರುಕಟ್ಟೆಯ ಇತ್ತೀಚಿನ ಆಫ್‌ರೋಡರ್ ಆಗಿ ಮತ್ತು ಮಹೀಂದ್ರಾ ಥಾರ್‌ಗೆ ಪ್ರಮುಖ ಸ್ಪರ್ಧಿಯಾಗಿ ಬಿಡುಗಡೆ ಮಾಡಲಾಯಿತು. ಈ 5-ಡೋರ್ SUV ಕೇವಲ ಒಂದು ಇಂಜಿನ್ ಆಯ್ಕೆಯೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆಯೊಂದಿಗೆ ಬರುತ್ತದೆ. ನಾವು ಇತ್ತೀಚೆಗೆ ಜಿಮ್ನಿಯ ಎರಡೂ ವೇರಿಯೆಂಟ್‌ಗಳನ್ನು ಪಡೆದಿದ್ದು, ಇವುಗಳಲ್ಲಿ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ನಮ್ಮ ನೈಜ-ಜಗತ್ತಿನ ಕಾರ್ಯಕ್ಷಮತೆ ಪರೀಕ್ಷೆಯ ಮೂಲಕ ಅವುಗಳನ್ನು ಪರೀಕ್ಷಿಸಲು ನಿರ್ಧರಿಸಿದೆವು. ಆದರೆ, ಫಲಿತಾಂಶಕ್ಕೂ ಮುನ್ನ, ಈ ಮಾರುತಿ ಜಿಮ್ನಿಯ ಪವರ್‌ಟ್ರೇನ್ ವಿವರಗಳನ್ನು ನೋಡೋಣ.

ನಿರ್ದಿಷ್ಠತೆಗಳು

ಇಂಜಿನ್

1.5-ಲೀಟರ್ ಪೆಟ್ರೋಲ್

ಪವರ್

105 PS

ಟಾರ್ಕ್

134 Nm

ಡ್ರೈವ್‌ಟ್ರೇನ್

4WD (ಸ್ಟಾಂಡರ್ಡ್)

ಟ್ರಾನ್ಸ್‌ಮಿಷನ್

5MT / 4AT

 

ಕಾರ್ಯಕ್ಷಮತೆ: ಆ್ಯಕ್ಸಲರೇಷನ್

Maruti Jimny Acceleration

ಪರೀಕ್ಷೆಗಳು

ಜಿಮ್ನಿ ಮ್ಯಾನುವಲ್ 

ಜಿಮ್ನಿ ಆಟೋಮ್ಯಾಟಿಕ್

0-100 kmph

13.64 ಸೆಕೆಂಡುಗಳು

15.73 ಸೆಕೆಂಡುಗಳು

ಕ್ವಾರ್ಟರ್ ಮೈಲ್ 

18.99 ಸೆಕೆಂಡುಗಳು @ 115.83 kmph

19.79 ಸೆಕೆಂಡುಗಳು @ 111.82 kmph

ಟಾಪ್ ಸ್ಪೀಡ್

126.46 kmph

135.86 kmph

 ನಮ್ಮ ಆ್ಯಕ್ಸಲರೇಷನ್ ಪರೀಕ್ಷೆಗಳಲ್ಲಿ, 0-100 kmph ನಲ್ಲಿ ಆಟೋಮ್ಯಾಟಿಕ್ ವೇರಿಯೆಂಟ್‌ಗಿಂತಲೂ ಜಿಮ್ನಿಯ ಮ್ಯಾನುವಲ್ ವೇರಿಯೆಂಟ್ 2 ಸೆಕೆಂಡುಗಳಷ್ಟು ಚುರುಕಾಗಿದ್ದು, ಸ್ಪಷ್ಟವಾಗಿ ಮುಂಚೂಣಿಯಲ್ಲಿತ್ತು. ಕ್ವಾರ್ಟರ್ ಮೈಲ್ ರನ್‌ನಲ್ಲಿ, ಎರಡರ ನಡುವೆ ಅಷ್ಟೊಂದು ವ್ಯತ್ಯಾಸವಿಲ್ಲದಿದ್ದರೂ, ಮ್ಯಾನುವಲ್ ವೇರಿಯೆಂಟ್ ಓಟವನ್ನು ಹೆಚ್ಚಿನ ವೇಗದಲ್ಲಿ ಪೂರ್ಣಗೊಳಿಸಿತು. ಟಾಪ್ ಸ್ಪೀಡ್‌ಗೆ ಬಂದಾಗ, ನಮ್ಮ ಪರೀಕ್ಷಾ ಮಾನದಂಡಗಳಲ್ಲಿ ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಹೆಚ್ಚಿನ ಅಂಕಿಯನ್ನು ತಲುಪಲು ಸಾಧ್ಯವಾಯಿತು.

ಪರೀಕ್ಷೆಗಳು

ಜಿಮ್ನಿ ಮ್ಯಾನುವಲ್

ಜಿಮ್ನಿ ಆಟೋಮ್ಯಾಟಿಕ್

ಗೇರ್ ಆ್ಯಕ್ಸಲರೇಷನ್‌ನಲ್ಲಿ

30-80 kmph (3ನೇ ಗೇರ್) - 10.27 ಸೆಕೆಂಡುಗಳು

40-100 kmph (4ನೇ ಗೇರ್) - 19.90 ಸೆಕೆಂಡುಗಳು

-

ಕಿಕ್‌ಡೌನ್

-

20-80 kmph - 9.29 ಸೆಕೆಂಡುಗಳು

 ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವೇರಿಯೆಂಟ್‌ಗಳ ಗೇರ್ ಸ್ಪೀಡ್‌ಗಳು ಮತ್ತು ಕಿಕ್‌ಡೌನ್‌ ನಡುವೆ ಯಾವುದೇ ಹೋಲಿಕೆ ಇಲ್ಲದಿದ್ದರೂ, 3ನೇ ಗೇರ್‌ನಲ್ಲಿ 30 ಇಂದ 80 kmphಗೆ ಹೋಗಲು ಮ್ಯಾನುವಲ್‌ ತೆಗೆದುಕೊಳ್ಳುವ ಸಮಯಕ್ಕಿಂತ ಆಟೋಮ್ಯಾಟಿಕ್ 20 ಇಂದ 80 kmph ಗೆ ಹೋಗಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿ ಗಮನಾರ್ಹ. ಈ ಫಲಿತಾಂಶಗಳಿಂದ ಓವರ್‌ಟೇಕ್ ಮಾಡುವಾಗ ಆಟೋಮ್ಯಾಟಿಕ್ ತುಸು ಹೆಚ್ಚು ಬೇಗನೆ ವೇಗ ಪಡೆದುಕೊಳ್ಳುತ್ತದೆ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳಬಹುದು.

 

ಕಾರ್ಯಕ್ಷಮತೆ: ಬ್ರೇಕಿಂಗ್ 

Maruti Jimny Braking

ಪರೀಕ್ಷೆಗಳು

ಜಿಮ್ನಿ ಮ್ಯಾನುವಲ್

ಜಿಮ್ನಿ ಆಟೋಮ್ಯಾಟಿಕ್

80-0 kmph

43.94 ಮೀಟರ್‌ಗಳು

43.99 ಮೀಟರ್‌ಗಳು

100-0 kmph

28.75 ಮೀಟರ್‌ಗಳು

28.38 ಮೀಟರ್‌ಗಳು

 ಹಾಗೆಯೇ ಆ್ಯಕ್ಸಲರೇಷನ್ ಪರೀಕ್ಷೆಗಳಲ್ಲಿ ಎರಡರ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬಂದರೆ, ಬ್ರೇಕಿಂಗ್‌ ಪರೀಕ್ಷೆಗಳಲ್ಲಿ ಅಂತಹ ವ್ಯತ್ಯಾಸಗಳೇನೂ ಕಂಡುಬರಲಿಲ್ಲ. ಜಿಮ್ನಿಯು ಡಿಸ್ಕ್ ಬ್ರೇಕ್‌ ಮುಂಭಾಗದಲ್ಲಿ ಮಾತ್ರವೇ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದ್ದು, ಆಟೋಮ್ಯಾಟಿಕ್‌ನ ತೂಕ ಕೇವಲ 10 kgಯಷ್ಟು ಹೆಚ್ಚಿದೆ (ಕರ್ಬ್ ತೂಕ). 80-0 kmph ಪರೀಕ್ಷೆಯಲ್ಲಿ, ಮ್ಯಾನುವಲ್ ವೇರಿಯೆಂಟ್ ಕೆಲವೇ ಸೆಂಟಿಮೀಟರ್‌ಗಳಷ್ಟು ಕಡಿಮೆ ನಿಲ್ಲುವ ದೂರ ಹೊಂದಿದ್ದು, 100-0 kmph ಪರೀಕ್ಷೆಗಳಲ್ಲಿ ಆಟೋಮ್ಯಾಟಿಕ್ ವೇರಿಯೆಂಟ್ ತುಸು ಕಡಿಮೆ ನಿಲ್ಲುವ ದೂರವನ್ನು ಹೊಂದಿತ್ತು. 

 ಇದನ್ನೂ ಓದಿ:  ಭಾರತ ಸ್ಪೆಕ್ ಮತ್ತು ಆಸ್ಟ್ರೇಲಿಯಾ ಸ್ಪೆಕ್ 5-ಡೋರ್ ಮಾರುತಿ ಸುಝುಕಿ ಜಿಮ್ನಿ ನಡುವೆ 5 ಪ್ರಮುಖ ವ್ಯತ್ಯಾಸಗಳು

 ಗಮನಿಸಿ:- ವಾಹನದ ಸ್ಥಿತಿ, ಟೆರೈನ್, ಪರಿಸರ ಮತ್ತು ಟೈರ್ ಸವೆತಗಳಂತಹ ಅಂಶಗಳನ್ನು ಆಧರಿಸಿ ಆ್ಯಕ್ಸಿಲರೇಷನ್ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆಗಳೆರಡೂ ವ್ಯತ್ಯಾಸಗೊಳ್ಳಬಹುದು. ಆದ್ದರಿಂದ, ನೀವು ಒಂದೇ ಮಾಡೆಲ್‌ನ ಬೇರೆ ಬೇರೆ ಯೂನಿಟ್‌ಗಳಲ್ಲಿ ತುಸು ಭಿನ್ನ ಫಲಿತಾಂಶದ ಅನುಭವ ಪಡೆಯಬಹುದು.

ಬೆಲೆ

Maruti Jimny

 ಮಾರುತಿ ಜಿಮ್ನಿ ಬೆಲೆಯನ್ನು ರೂ 10.74 ಲಕ್ಷ ಮತ್ತು 15.05 ಲಕ್ಷದ ನಡುವೆ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ ಹಾಗೂ ಆಟೋಮ್ಯಾಟಿಕ್ ವೇರಿಯೆಂಟ್‌ಗಳ ಬೆಲೆ ರೂ13.94 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಪ್ರಸ್ತುತ ಇದು 2.3 ಲಕ್ಷದ ತನಕದ ದೊಡ್ಡ ವರ್ಷಾಂತ್ಯದ ರಿಯಾಯಿತಿಗಳೊಂದಿಗೆ ಲಭ್ಯವಿದೆ. ಈ ಸಬ್‌ಕಾಂಪ್ಯಾಕ್ಟ್ ಆಫ್‌ರೋಡರ್ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗುರ್ಖಾಗೆ ಪೈಪೋಟಿ ನೀಡುತ್ತದೆ.

 ಇನ್ನಷ್ಟು ಬೆಲೆ : ಜಿಮ್ನಿ ಆನ್ ರೋಡ್ ಬೆಲೆ

was this article helpful ?

Write your Comment on Maruti ಜಿಮ್ನಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience