ಮಾರುತಿ ಜಿಮ್ನಿಯ ಪರಿಚಯ: ನಿಮ್ಮ ನಗರದಲ್ಲಿ ಇದು ಯಾವಾಗ ಲಭ್ಯವಾಗಬಹುದೆಂಬ ಮಾಹಿತಿ ಇಲ್ಲಿದೆ
ಮಾರುತಿ ಜಿಮ್ನಿ ಗಾಗಿ ansh ಮೂಲಕ ಮಾರ್ಚ್ 28, 2023 06:05 pm ರಂದು ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಕಾರು ತಯಾರಕರು ಜಿಮ್ನಿಯನ್ನು ನೆಕ್ಸಾ ಡೀಲರ್‌ಗಳ ಬಳಿ ಮೊದಲು ತೆಗೆದುಕೊಂಡು ಹೋಗುವ ಒಂಬತ್ತು ನಗರಗಳು
-
ಫೈವ್-ಡೋರ್ ಜಿಮ್ನಿ ಮಾರ್ಚ್ 26 ರಿಂದ ಏಪ್ರಿಲ್ 7 ರವರೆಗೆ ನೆಕ್ಸಾ ಡೀಲರ್‌ಶಿಪ್‌ಗಳಲ್ಲಿ ಪ್ರದರ್ಶನಗೊಳ್ಳಲಿದೆ.
-
ಮ್ಯಾನ್ಯುಯೆಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದೆ.
-
ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, 4WD ಅನ್ನು ಪ್ರಮಾಣಿತವಾಗಿ ಹೊಂದಿದೆ.
-
ನಿರೀಕ್ಷಿತ ಬೆಲೆ 10 ರೂ. ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು.
ಮಾರುತಿ ಜಿಮ್ನಿ ಆಟೋ ಎಕ್ಸ್‌ಪೋ 2023 ರಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿದ ಬಳಿಕ ಜನಪ್ರಿಯತೆಯನ್ನು ಗಳಿಸುತ್ತಿದೆ. ನಾವು ಲೈಫ್‌ಸ್ಟೈಲ್ ಎಸ್‌ಯುವಿ ಬೆಲೆಗಳಿಗಾಗಿ ನಿರೀಕ್ಷಿಸುತ್ತಿರುವಂತೆಯೇ, ಸ್ಟ್ಯಾಟಿಕ್ ಪ್ರಾತ್ಯಕ್ಷಿಕೆಗಳಿಗಾಗಿ ದೇಶಾದ್ಯಂತ ನೆಕ್ಸಾ ಡೀಲರ್‌ಶಿಪ್‌ಗಳಲ್ಲಿ ಇದನ್ನು ಪ್ರದರ್ಶಿಸಲಾಗುತ್ತದೆ. ಕೆಲವರಿಗೆ, ಕಾರನ್ನು ನೇರವಾಗಿ ನೋಡಲು ಇದು ಚೊಚ್ಚಲ ಅವಕಾಶವಾಗಿದೆ, ಅದರಲ್ಲಿಯೂ ಇದು ಮುಂಗಡ ಬುಕ್ ಮಾಡಿದ ಅನೇಕರಿಗೆ ವಿಶೇಷವಾಗಿ ಉಪಯುಕ್ತವಾಗಿದೆ.
ಇಲ್ಲಿಯವರೆಗೆ ಘೋಷಿಸಲಾದ ಕೆಳಕಂಡ ಒಂಬತ್ತು ನಗರಗಳಲ್ಲಿ ನೀವು ಫೈವ್-ಡೋರ್ ಜಿಮ್ನಿಯ ಪ್ರತ್ಯಕ್ಷ ಅನುಭವವನ್ನು ಪಡೆದುಕೊಳ್ಳಬಹುದು:
ದೆಹಲಿ ಎನ್‌ಸಿಆರ್ |
|
ಮಾರ್ಚ್ 26 - 27 |
ನೆಕ್ಸಾ ವಜೀರ್‌ಪುರ್ |
ಮಾರ್ಚ್ 28 - 29 |
ನೆಕ್ಸಾ ದ್ವಾರಕಾ ಸೆಕ್ಟರ್ 9 |
ಮಾರ್ಚ್ 30 - 31 |
ನೆಕ್ಸಾ ರಜೌರಿ ಗಾರ್ಡನ್ |
ಏಪ್ರಿಲ್ 1 - 2 |
ನೆಕ್ಸಾ ಪೂರ್ವ ಕೈಲಾಶ್ |
ಏಪ್ರಿಲ್ 3 - 4 |
ನೆಕ್ಸಾ ಪಂಜಾಬಿ ಬಾಗ್ |
ಏಪ್ರಿಲ್ 5 - 6 |
ನೆಕ್ಸಾ ಮೋತಿನಗರ |
ಅಹಮದಬಾದ್ |
|
ಮಾರ್ಚ್ 26 - 27 |
ನೆಕ್ಸಾ ಅಮರೈವಾಡಿ |
ಮಾರ್ಚ್ 28 - 29 |
ನೆಕ್ಸಾ ಆಶ್ರಮ್ ರಸ್ತೆ |
ಮಾರ್ಚ್ 31 - ಏಪ್ರಿಲ್ 2 |
ನೆಕ್ಸಾ ಇನ್ಫೋಸಿಟಿ |
ಏಪ್ರಿಲ್ 3 - 5 |
ನೆಕ್ಸಾ ನರೋಡಾ |
ಚಂಡೀಗಢ/ ಮೊಹಾಲಿ/ ಲುಧಿಯಾನ |
|
ಮಾರ್ಚ್ 27 - 29 |
ನೆಕ್ಸಾ 27/1 ಕೈಗಾರಿಕಾ ಪ್ರದೇಶ ಹಂತ 2 |
ಮಾರ್ಚ್ 30 - ಏಪ್ರಿಲ್ 1 |
ನೆಕ್ಸಾ ಹಂತ 7 |
ಏಪ್ರಿಲ್ 2 - 4 |
ನೆಕ್ಸಾ ಕೈಗಾರಿಕಾ ಪ್ರದೇಶ ಹಂತ 2 |
ಏಪ್ರಿಲ್ 5 - 7 |
ನೆಕ್ಸಾ ಮಾಡೆಲ್ ಟೌನ್ |
ರಾಯಪುರ/ ಭುವನೇಶ್ವರ |
|
ಮಾರ್ಚ್ 26 - 27 |
ಆಟೋ ಎಕ್ಸ್‌ಪೋ |
ಮಾರ್ಚ್ 28 - 29 |
ನೆಕ್ಸಾ ಸುಪೆಲಾ |
ಮಾರ್ಚ್ 30 - 31 |
ನೆಕ್ಸಾ ದುರ್ಗ್ ಬೈಪಾಸ್ |
ಏಪ್ರಿಲ್ 1 - 2 |
ನೆಕ್ಸಾ ಒನ್ ರಿಂಗ್ ರೋಡ್ |
ಏಪ್ರಿಲ್ 3 - 4 |
ನೆಕ್ಸಾ ಮ್ಯಾಗ್ನೆಟೋ |
ಏಪ್ರಿಲ್ 5 - 6 |
ನೆಕ್ಸಾ ವಿಧಾನ ಸಭಾ ರಸ್ತೆ |
ಮುಂಬೈ |
|
ಮಾರ್ಚ್ 27 - 28 |
ನೆಕ್ಸಾ ಅಂಧೇರಿ ಪೂರ್ವ |
ಮಾರ್ಚ್ 29 - 30 |
ನೆಕ್ಸಾ ಥಾಣೆ ದಕ್ಷಿಣ |
ಮಾರ್ಚ್ 31 - ಏಪ್ರಿಲ್ 1 |
ನೆಕ್ಸಾ ಖರ್‌ಘರ್ |
ಏಪ್ರಿಲ್ 2 - 3 |
ನೆಕ್ಸಾ ನೆರೂಲ್ |
ಏಪ್ರಿಲ್ 4 - 5 |
ನೆಕ್ಸಾ ಕಾಂದಿವಲಿ ಎಸ್.ವಿ. ರಸ್ತೆ |
ಬೆಂಗಳೂರು |
|
ಮಾರ್ಚ್ 26 - 28 |
ನೆಕ್ಸಾ ಆರ್‌ಆರ್ ನಗರ |
ಮಾರ್ಚ್ 29 - 30 |
ನೆಕ್ಸಾ ಜೆಪಿ ನಗರ |
ಮಾರ್ಚ್ 31 - ಏಪ್ರಿಲ್ 1 |
ನೆಕ್ಸಾ ಸರ್ಜಾಪುರ ರಸ್ತೆ |
ಏಪ್ರಿಲ್ 2 - 3 |
ನೆಕ್ಸಾ ಎಲೆಕ್ಟ್ರಾನಿಕ್ ಸಿಟಿ |
ಏಪ್ರಿಲ್ 4 - 5 |
ನೆಕ್ಸಾ ರಾಜಾಜಿನಗರ |
ಕಾರುತಯಾರಕರು ತನ್ನ ಮುಂಬರುವ ಲೈಫ್‌ಸ್ಟೈಲ್ ಎಸ್‌ಯುವಿ ಅನ್ನು ಈ ನಗರಗಳಲ್ಲಿ ಏಕಕಾಲದಲ್ಲಿ ಮಾರ್ಚ್ 26 ಮತ್ತು ಏಪ್ರಿಲ್ 7 ರ ನಡುವೆ ಪ್ರದರ್ಶಿಸುತ್ತದೆ. ಕಾರನ್ನು ಸ್ಟ್ಯಾಟಿಕ್ ಪ್ರಾತ್ಯಕ್ಷಿಕೆಗಾಗಿ ಮಾತ್ರ ಪ್ರದರ್ಶಿಸಲಾಗುತ್ತದೆ, ಟೆಸ್ಟ್ ಡ್ರೈವ್‌ಗಳ ಅವಕಾಶ ಲಭ್ಯವಿರುವಿದಿಲ್ಲ. ಶೀಘ್ರದಲ್ಲೇ ಹೆಚ್ಚಿನ ನಗರಗಳು ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ.
ಪವರ್‌ಟ್ರೇನ್
ಫೈವ್-ಡೋರ್ ಜಿಮ್ನಿಯು 105PS ಮತ್ತು 134Nm ಸಾಮರ್ಥ್ಯದ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಯುನಿಟ್ ಫೈವ್-ಸ್ಪೀಡ್ ಮ್ಯಾನ್ಯುಯೆಲ್ ಅಥವಾ ಫೋರ್-ಸ್ಫೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಲಾಗಿದೆ. ಜಿಮ್ನಿ ನಾಲ್ಕು-ವ್ಹೀಲ್-ಡ್ರೈವ್ ವ್ಯವಸ್ಥೆಯನ್ನು ಪ್ರಮಾಣಿತವಾಗಿ ಪಡೆದಿದೆ.
ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ಆಫ್-ರೋಡ್-ಸಾಮರ್ಥ್ಯದ ಎಸ್‌ಯುವಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆಟೋಮ್ಯಾಟಿಕ್ ಹವಾಮಾನ ನಿಯಂತ್ರಣ, ಕ್ರೂಸ್ ಕಂಟ್ರೋಲ್ ಮತ್ತು ನಾಲ್ಕು-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ ಸುಸಜ್ಜಿತವಾಗಿದೆ. ಇದು ರಿಯರ್ ಡೋರ್‌ಗಳು ಮತ್ತು ಬಳಸಬಹುದಾದ ಬೂಟ್ ಸ್ಪೇಸ್ ಅನ್ನು ಪಡೆದಿದ್ದರೂ, ಇದು ನಾಲ್ಕು-ಆಸನಗಳ ವಿನ್ಯಾಸವನ್ನು ಹೊಂದಿದೆ.
ಇದನ್ನೂ ಓದಿ: ಏಪ್ರಿಲ್ 2023 ರಿಂದ ಹೆಚ್ಚಲಿರುವ ಮಾರುತಿ ಮತ್ತು ಹೋಂಡಾ ಕಾರುಗಳ ಜನಪ್ರಿಯತೆ
ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಆರು ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಯರ್‌ವ್ಯೂ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಆಂಕಾರೇಜ್‌ಗಳನ್ನು ಪಡೆದುಕೊಂಡಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಜಿಮ್ನಿಯನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಮತ್ತು ಅದರ ಬೆಲೆ 10 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಬಿಡುಗಡೆಯಾದ ಬಳಿಕ ಇದು ಮಹೀಂದ್ರ ಥಾರ್ ಮತ್ತು ಫೋರ್ಸ್ ಗೂರ್ಖಾದೊಂದಿಗೆ ಸ್ಪರ್ಧಿಸುತ್ತದೆ.