ಹೊಸ Suzuki Swift Concept ಬಿಡುಗಡೆ, ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಪ್ರದರ್ಶನ
ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ಅಕ್ಟೋಬರ್ 04, 2023 03:32 pm ರಂದು ಪ್ರಕಟಿಸಲಾಗಿದೆ
- 165 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಸ್ವಿಫ್ಟ್ ಮಾದರಿಯು ಮೊದಲ ಬಾರಿಗೆ ಒಂದಷ್ಟು ADAS ತಂತ್ರಜ್ಞಾನವನ್ನು ಪಡೆಯಲಿದ್ದರೂ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯಲ್ಲಿ ಇದು ದೊರೆಯುವ ಸಾಧ್ಯತೆ ಕಡಿಮೆ
- 2023ರ ಸುಝುಕಿ ಸ್ವಿಫ್ಟ್ ಕಾನ್ಸೆಪ್ಟ್ ಅನ್ನು ಅಕ್ಟೋಬರ್ ತಿಂಗಳ 26ರಿಂದ ನವೆಂಬರ್ ತಿಂಗಳ 5ರ ತನಕ ನಡೆಯಲಿರುವ ಜಪಾನ್ ಮೊಬಿಲಿಟಿ ಶೋ ಕಾರ್ಯಕ್ರಮದಲ್ಲಿ ಬಹಿರಂಗಗೊಳಿಸಲಾಗುತ್ತದೆ.
- ಇದು ಹೆಚ್ಚು ವಿಕಸಿತ ವಿನ್ಯಾಸವನ್ನು ಹೊಂದಿದ್ದು ಫ್ಲೋಟಿಂಗ್ ರೂಫ್ ಸೇರಿದಂತೆ ಸ್ವಿಫ್ಟ್ ಕಾರಿನ ವಿಶಿಷ್ಟ ಗುಣಲಕ್ಷಣಗಳನ್ನು ಉಳಿಸಿಕೊಂಡಿದೆ.
- ಇದರ ಕ್ಯಾಬಿನ್, ಹೊಸ ಮಾರುತಿ ಸುಝುಕಿ ಮಾದರಿಗಳಿಗೆ ಅನುಗುಣವಾಗಿ ಇದ್ದು, 9 ಇಂಚಿನ ಟಚ್ ಸ್ಕ್ರೀನ್ ಮತ್ತು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಇದರಲ್ಲಿ ಕಾಣಬಹುದು.
- ಇದು 1.2 ಲೀಟರ್ ಪೆಟ್ರೋಲ್ ಮೂಲಕ ಚಲಿಸಲಿದ್ದು ಮೈಲ್ಡ್-ಹೈಬ್ರೀಡ್ ನೆರವನ್ನು ಪಡೆಯುವ ಸಾಧ್ಯತೆ ಇದೆ.
- ಭಾರತದಲ್ಲಿ ಈ ಕಾರು 2024ರ ಆರಂಭದಲ್ಲಿ ರಸ್ತೆಗಿಳಿಯಲಿದ್ದು, ಈಗ ಇರುವ ಮಾದರಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ.
ನಾವು ನಾಲ್ಕನೇ ತಲೆಮಾರಿನ ಸ್ವಿಫ್ಟ್ ಕಾರಿನ ಮೊದಲ ಸ್ಪೈ ಶಾಟ್ ಗಳನ್ನು ಕಂಡ ಒಂದು ವರ್ಷದ ನಂತರ, ಸುಝುಕಿ ಸಂಸ್ಥೆಯು ಅದನ್ನು ಪರಿಕಲ್ಪನೆಯ ರೂಪದಲ್ಲಿ ಅನಾವರಣಗೊಳಿಸಲಿದೆ. ಆದರೆ ಅದಕ್ಕಿಂತಲೂ ಮೊದಲು ಈ ಕಾರಿನ ಚಿತ್ರಗಳು ಆನ್ಲೈನ್ ನಲ್ಲಿ ಕಾಣಸಿಕ್ಕಿವೆ. ಹೊಸ ಸ್ವಿಫ್ಟ್ ಕಾರನ್ನು ಅಕ್ಟೋಬರ್ 26ರಿಂದ ನವೆಂಬರ್ 5ರ ತನಕ ನಡೆಯಲಿರುವ ಜಪಾನ್ ಮೊಬಿಲಿಟಿ ಶೋ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ.
ಏನೆಲ್ಲ ಬದಲಾವಣೆ ಉಂಟಾಗಿದೆ?
ಸುಝುಕಿ ಸಂಸ್ಥೆಯು ಸ್ವಿಫ್ಟ್ ಮಾದರಿಯ ಕಾನ್ಸೆಪ್ಟ್ ವರ್ಶನ್ ಅನ್ನು ಮಾತ್ರವೇ ಬಹಿರಂಗಗೊಳಿಸಿದ್ದರೂ ಇದು ಉತ್ಪಾದನೆಗೆ ಸಿದ್ಧವಾಗಿರುವಂತೆ ಕಾಣುತ್ತದೆ. ಮೊದಲ ನೋಟದಲ್ಲಿ, ಇದರ ವಿನ್ಯಾಸವು ಹಠಾತ್ ಬದಲಾವಣೆಗಿಂತಲೂ ಹೆಚ್ಚು ವಿಕಸಿತಗೊಂಡಂತೆ ಕಂಡರೂ, ಈ ಹಿಂದಿನ ತಲೆಮಾರಿನ ಮಾದರಿಯೊಂದಿಗೆ ಅನೇಕ ಸಾಮ್ಯತೆಗಳಿರುವುದನ್ನು ನಾವು ಕಾಣಬಹುದು. ಇದರ ದೃಢವಾದ ಪ್ಯಾನೆಲ್ ಗಳು ವಿಂಡೋಲೈನ್ ಹೊರತುಪಡಿಸಿ ಒಟ್ಟಾರೆ ಚಿತ್ರಣ ಮತ್ತು ಗಾತ್ರವು ಸರಿಸುಮಾರು ಈಗಿನ ಆವೃತ್ತಿಯನ್ನೇ ಹೋಲುತ್ತದೆ.
ಮೊನಚಾದ LED ಹೆಡ್ ಲೈಟ್ ಗಳು ಮತ್ತು LED DRL ಗಳು ಮತ್ತು ಹನಿಕೋಂಬ್ ಮಾದರಿಯೊಂದಿಗೆ ಸಣ್ಣ ಅಂಡಾಕಾರದ ಗ್ರಿಲ್ ಇತ್ಯಾದಿ ಹೊಸ ವೈಶಿಷ್ಟ್ಯಗಳನ್ನು ಇದು ಹೊಂದಿರಲಿದೆ. ಪ್ರೊಫೈಲ್ ನಲ್ಲಿ, ಈ ಹ್ಯಾಚ್ ಬ್ಯಾಕ್ ಕಾರು ಹೆಚ್ಚು ಸಾಂಪ್ರದಾಯಿಕ ಡೋರ್ ಹ್ಯಾಂಡಲ್ ಗಳನ್ನು ಹೊಂದಿದ್ದರೆ, ʻಫ್ಲೋಟಿಂಗ್ ರೂಫ್ʼ ಇಫೆಕ್ಟ್ ಅನ್ನು ಮುಂದುವರಿಸಲಿದೆ. ಇದರ ಹಿಂಭಾಗವು ಮರುವಿನ್ಯಾಸಕ್ಕೆ ಒಳಗಾದ ಟೇಲ್ ಗೇಟ್, ಬಂಪರ್ ಮತ್ತು ಟೇಲ್ ಲೈಟ್ ಗಳನ್ನು ಹೊಂದಿದ್ದು ಇವು ಇನ್ವರ್ಟೆಡ್ C ಆಕಾರದ ಲೈಟಿಂಗ್ ಎಲಿಮೆಂಟ್ ಗಳು ಮತ್ತು ಬ್ಲ್ಯಾಕ್ ಇನ್ಸರ್ಟ್ ಗಳೊಂದಿಗೆ ಬರಲಿವೆ.
ಇದನ್ನು ಸಹ ಓದಿರಿ: ಮಾರುತಿ ಸ್ವಿಫ್ಟ್ ಅವಲೋಕನ: ಕಾಂಪ್ಯಾಕ್ಟ್ ಪ್ಯಾಕೇಜ್ ನಲ್ಲಿ ಆಕರ್ಷಕ ನೋಟ
ಕ್ಯಾಬಿನ್ ನಲ್ಲೂ ಮಾರ್ಪಾಡು
ಹೊಸ ಸ್ವಿಫ್ಟ್ ಕಾರಿನ ಕ್ಯಾಬಿನ್, ಮಾರುತಿ ಸುಝುಕಿ ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಿರುವ ಹೊಸ ಮಾದರಿಗಳಾದ ಮಾರುತಿ ಫ್ರಾಂಕ್ಸ್ ಮತ್ತು ಮಾರುತಿ ಗ್ರಾಂಡ್ ವಿಟಾರ ಇತ್ಯಾದಿಗಳ ಕ್ಯಾಬಿನ್ ಅನ್ನು ಹೋಲುತ್ತಿದ್ದರೂ ಡ್ಯಾಶ್ ಬೋರ್ಡ್ ವಿನ್ಯಾಸದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ನಾವು ಕಾಣಬಹುದು. ಹೊಸ ಸ್ವಿಫ್ಟ್ ಕಾನ್ಸೆಪ್ಟ್ ನ ಕ್ಯಾಬಿನ್ ಬಣ್ಣದಲ್ಲಿ ಕಪ್ಪು, ಗ್ಲಾಸ್ ಬ್ಲ್ಯಾಕ್ ಮತ್ತು ಬಿಳಿಯ ಅಂಶಗಳು ಸೇರ್ಪಡೆಗೊಂಡಿದ್ದು, ಭಾರತದಲ್ಲಿ ಹೊರತರುವ ಮಾದರಿಯು ಒಟ್ಟಾರೆಯಾಗಿ ಬೇರೆಯೇ ಬಣ್ಣವನ್ನು ಹೊಂದಿರುವ ಸಾಧ್ಯತೆ ಇದೆ.
ಹೊಸ ಸ್ವಿಫ್ಟ್ ಕಾರಿನ ಎಲ್ಲಾ ವಿಶೇಷತೆಗಳನ್ನು ಬಹಿರಂಗಪಡಿಸದೆ ಇದ್ದರೂ, 9 ಇಂಚಿನ ಫ್ರೀ-ಫ್ಲೋಟಿಂಗ್ ಟಚ್ ಸ್ಕ್ರೀನ್ ಕೇಂದ್ರ ಸ್ಥಾನವನ್ನು ಪಡೆದಿರುವುದನ್ನು ಕ್ಯಾಬಿನ್ ನ ಚಿತ್ರವು ತೋರಿಸುತ್ತದೆ. ಅಲ್ಲದೆ ಟ್ವಿನ್ ಪಾಡ್ ಅನಲಾಗ್ ಇನ್ಸ್ ಟ್ರುಮೆಂಟ್ ಅನ್ನು ಸಹ ನೀವು ಇದರನ್ನು ಗಮನಿಸಬಹುದು. ಜೊತೆಗೆ ಹೊಸ ಸ್ವಿಫ್ಟ್ ಕಾರು ಪುಶ್ ಬಟ್ನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಮತ್ತು ಅಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಮುಂದುವರಿಸಲಿದೆ.
ಈ ಮಾದರಿಯು ಅನೇಕ ಏರ್ ಬ್ಯಾಗುಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರಿವರ್ಸಿಂಗ್ ಕ್ಯಾಮರಾವನ್ನು ಸಹ ಹೊಂದಿರಲಿದೆ. ಅಷ್ಟೇ ಅಲ್ಲದೆ, ಹೈ ಬೀಮ್ ಅಸಿಸ್ಟ್ ಮತ್ತು ಅಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB) ಮುಂತಾದ ಕೆಲವೊಂದು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳೊಂದಿಗೆ ಈ ಹ್ಯಾಚ್ ಬ್ಯಾಕ್ ಕಾರು ರಸ್ತೆಗಿಳಿಯಲಿದೆ ಎಂದು ಈ ಕಾರು ತಯಾರಕ ಸಂಸ್ಥೆಯು ಹೇಳಿದೆ.
ಇದರ ಎಂಜಿನ್ ಹೇಗಿರಲಿದೆ?
ನಾಲ್ಕನೇ ತಲೆಮಾರಿ ಸ್ವಿಫ್ಟ್ ಕಾರು ಅದೇ 1.2-ಲೀಟರಿನ ಡ್ವುವಲ್ ಜೆಟ್ ಪೆಟ್ರೋಲ್ ಎಂಜಿನ್ (90PS/113Nm) ಹೊಂದಿರಲಿದ್ದು, ಬಹುಶಃ ಮೈಲ್ಡ್ ಹೈಬ್ರೀಡ್ ಸೆಟಪ್ ನಂತಹ ವಿದ್ಯುದೀಕರಣವನ್ನು ಪಡೆಯುವ ಸಾಧ್ಯತೆ ಇದೆ. ಇದರಲ್ಲಿ ಪ್ರಮಾಣಿತ 5-ಸ್ಪೀಡ್ MT ಮತ್ತು 5-ಸ್ಪೀಡ್ AMT ನಡುವಿನ ಆಯ್ಕೆಯು ಗ್ರಾಹಕರಿಗೆ ಲಭಿಸಲಿದೆ. ಐಚ್ಛಿಕ CNG ಕಿಟ್ ಸಹ ಭವಿಷ್ಯದಲ್ಲಿ ಲಭ್ಯವಾಗಲಿದೆ.
ಇದನ್ನು ಸಹ ಓದಿರಿ: ಹೆಚ್ಚು ಇಂಧನ ದಕ್ಷತೆ ಪಡೆಯುವುದಕ್ಕಾಗಿ AC ಇಲ್ಲದೆ ವಾಹನ ಚಾಲನೆ ಮಾಡುವುದು ಸಮರ್ಥನೀಯವೇ? ಇಲ್ಲಿ ಕಂಡುಹಿಡಿಯಿರಿ
ಬಿಡುಗಡೆಯ ನಿರೀಕ್ಷಿತ ಸಮಯ
ತಯಾರಿಗೆ ಸಿದ್ಧವಾಗಿರುವ ಆವೃತ್ತಿಯು ಸದ್ಯದಲ್ಲೇ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಮಾರುತಿ ಸುಝುಕಿ ಸಂಸ್ಥೆಯು ಹೊಸ ಸ್ವಿಫ್ಟ್ ಕಾರನ್ನು ಭಾರತದಲ್ಲಿ 2024ರ ಆರಂಭದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು (ರೂ. 5.99 ಲಕ್ಷದಿಂದ 9.03 ಲಕ್ಷದ ತನಕ, ಎಕ್ಸ್ - ಶೋರೂಂ, ದೆಹಲಿ) ನಿಗದಿಪಡಿಸುವ ಸಾಧ್ಯತೆ ಇದೆ. ಈ ಮಾರುತಿ ಹ್ಯಾಚ್ ಬ್ಯಾಕ್ ಕಾರು ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಜೊತೆಗೆ ಮಾತ್ರವಲ್ಲದೆ, ಸರಿಸುಮಾರು ತನ್ನದೇ ಬೆಲೆಯನ್ನು ಹೊಂದಿರುವ ರೆನೋ ಟ್ರೈಬರ್ ಕ್ರಾಸ್ ಓವರ್ MPV ಜೊತೆಗೂ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ವಿಫ್ಟ್ AMT
0 out of 0 found this helpful