Maruti Suzuki Grand Vitara ಭಾರತ್ NCAP ಕ್ರ್ಯಾಶ್ ಟೆಸ್ಟ್ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್; ಫಲಿತಾಂಶಗಳು ಹೇಗಿವೆ? ಎಷ್ಟಿದೆ ರ‍್ಯಾಂಕಿಂಗ್ ?
ಈ ಸುದ್ದಿ ನಿಜವಾಗಿದ್ದರೆ, ಇದು ಭಾರತ್ NCAP ನಿಂದ ಟೆಸ್ಟ್ ಮಾಡಿರುವ ಮೊದಲ ಮಾರುತಿ ಸುಜುಕಿ ಮಾಡೆಲ್ ಆಗಲಿದೆ
- ಮಾರುತಿ ಸುಜುಕಿ ಗ್ರಾಂಡ್ ವಿಟಾರಾದ ಭಾರತ್ NCAP ಕ್ರ್ಯಾಶ್ ಟೆಸ್ಟ್ ಚಿತ್ರಗಳು ಲೀಕ್ ಆಗಿವೆ.
- ಮುಂಭಾಗ ಮತ್ತು ಸೈಡ್ ಇಂಪ್ಯಾಕ್ಟ್ ಗಳಿಗಾಗಿ SUV ಮೇಲೆ ನಡೆದ ಟೆಸ್ಟ್ ಅನ್ನು ಚಿತ್ರಗಳು ತೋರಿಸುತ್ತವೆ.
- ಮಾರುತಿ ಮತ್ತು BNCAP ಇನ್ನೂ ಅಧಿಕೃತವಾಗಿ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳನ್ನು ಪ್ರಕಟಿಸಿಲ್ಲ.
- ಅದರ ಪ್ರತಿಸ್ಪರ್ಧಿಗಳಾದ ಸ್ಕೋಡಾ ಕುಶಾಕ್ ಮತ್ತುVW ಟೈಗುನ್ ಗ್ಲೋಬಲ್ NCAPಯಲ್ಲಿ ಐದು ಸ್ಟಾರ್ ಗಳಿಸಿವೆ.
ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್ (BNCAP) ಭಾರತದಲ್ಲಿ ಕಾರು ಸುರಕ್ಷತೆಯನ್ನು ಟೆಸ್ಟ್ ಮಾಡುವ ಪ್ರೋಗ್ರಾಮ್ ಆಗಿದೆ. ಇದು ದೇಶದಲ್ಲಿ ಮಾರಾಟವಾಗುವ ಕಾರುಗಳ ಮೇಲೆ ಕ್ರ್ಯಾಶ್ ಪರೀಕ್ಷೆಗಳನ್ನು ಮಾಡುತ್ತದೆ ಮತ್ತು ಭಾರತದಲ್ಲಿ ಗ್ಲೋಬಲ್ NCAP ಬದಲಿಗೆ ಬಳಸಲಾಗುತ್ತದೆ. ಫೇಸ್‌ಲಿಫ್ಟ್ ಆಗಿರುವ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಈ ಹೊಸ ಪ್ರೋಗ್ರಾಮ್ ಅಡಿಯಲ್ಲಿ ಟೆಸ್ಟ್ ಮಾಡಲಾದ ಮೊದಲ ಕಾರುಗಳಾಗಿವೆ ಮತ್ತು ಗ್ರ್ಯಾಂಡ್ ವಿಟಾರಾ BNCAP ನಿಂದ ಪರೀಕ್ಷಿಸಲ್ಪಟ್ಟ ಮೊದಲ ಮಾರುತಿ ಕಾರು ಆಗಲಿದೆ. ಗ್ರ್ಯಾಂಡ್ ವಿಟಾರಾದ ಕ್ರ್ಯಾಶ್ ಟೆಸ್ಟ್ ಚಿತ್ರಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ, ಮತ್ತು ಚಿತ್ರಗಳಲ್ಲಿ SUV ಯ ಮುಂಭಾಗ ಮತ್ತು ಸೈಡ್ ಇಂಪ್ಯಾಕ್ಟ್ ಗಳನ್ನು ಟೆಸ್ಟ್ ಮಾಡುತ್ತಿರುವುದನ್ನು ನೋಡಲಾಗಿದೆ.
ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಬಗ್ಗೆ ಮಾರುತಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ, ಹಾಗೆಯೆ NCAP ವೆಬ್‌ಸೈಟ್‌ನಲ್ಲಿ ಕೂಡ ಯಾವುದೇ ಚಿತ್ರವನ್ನು ಪೋಸ್ಟ್ ಮಾಡಲಾಗಿಲ್ಲ. ಆದರೆ, ಫಲಿತಾಂಶಗಳು ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ. ಈ SUV ಯ ಕ್ರ್ಯಾಶ್ ಟೆಸ್ಟ್ ರೇಟಿಂಗ್ ನಮಗೆ ಇನ್ನೂ ತಿಳಿದಿಲ್ಲ, ಆದರೆ ಉತ್ತಮ ರೇಟಿಂಗ್ ಬರುವ ಸಾಧ್ಯತೆಯಿದೆ. ಏಕೆಂದರೆ, ಗ್ರ್ಯಾಂಡ್ ವಿಟಾರಾವನ್ನು ಹಿಂದಿನ ಜನರೇಷನ್ ನ ವಿಟಾರಾ ಬ್ರೆಝಾ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಮತ್ತು 2018 ರ ಗ್ಲೋಬಲ್ NCAP ಪರೀಕ್ಷೆಯಲ್ಲಿ ವಿಟಾರಾ ಬ್ರೆಝಾ ನಾಲ್ಕು ಸ್ಟಾರ್‌ಗಳನ್ನು ಪಡೆದುಕೊಂಡಿದೆ.
ಭಾರತ್ NCAP ಟೆಸ್ಟ್ ಗೆ ಕನಿಷ್ಠ ಮೂರು ಮಾಡೆಲ್ ಗಳನ್ನು ಕಳುಹಿಸುವುದಾಗಿ ಮಾರುತಿ ಈ ಹಿಂದೆ ತಿಳಿಸಿದೆ ಮತ್ತು ಗ್ರ್ಯಾಂಡ್ ವಿಟಾರಾ ಅವುಗಳಲ್ಲಿ ಒಂದಾಗಿರಬಹುದು ಎಂದು ನಮ್ಮ ಅನಿಸಿಕೆಯಾಗಿದೆ. ಇದು 5 ಸ್ಟಾರ್ ರೇಟಿಂಗ್ ಅನ್ನು ಪಡೆದರೆ, ಈ ಮೈಲಿಗಲ್ಲನ್ನು ಸಾಧಿಸುವ ಮೊದಲ ಮಾರುತಿ ಕಾರು ಆಗಲಿದೆ. ಇದು ಖರೀದಿ ಮಾಡುವವರಿಗೆ ಹೆಚ್ಚಿನ ವಿಶ್ವಾಸವನ್ನು ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಬಹುದು. ಅಧಿಕೃತ ಫಲಿತಾಂಶಗಳಿಗಾಗಿ ನಾವು ಕಾಯಬೇಕಾಗಿದೆ, ಆದರೆ ಅಲ್ಲಿಯವರೆಗೆ, ಗ್ರಾಂಡ್ ವಿಟಾರಾದ BNCAP ಸ್ಕೋರ್ ಕುರಿತು ನಿಮ್ಮ ಊಹೆಗಳನ್ನು ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಮಾರುತಿ ಸುಜುಕಿ ಗ್ರಾಂಡ್ ವಿಟಾರಾವನ್ನು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ: 103 PS 1.5-ಲೀಟರ್ ಪೆಟ್ರೋಲ್ ಜೊತೆಗೆ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಮತ್ತು 116 PS 1.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್. ಇದು ವೈರ್‌ಲೆಸ್ ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಫೀಚರ್ ಗಳನ್ನು ಪಡೆಯುತ್ತದೆ. ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ನೀಡಲಾಗಿದೆ.
ಗ್ರ್ಯಾಂಡ್ ವಿಟಾರಾ ಬೆಲೆಯು ರೂ 10.99 ಲಕ್ಷದಿಂದ ಪ್ರಾರಂಭವಾಗಿ ರೂ 20.09 ಲಕ್ಷದವರೆಗೆ (ಎಕ್ಸ್ ಶೋರೂಂ ದೆಹಲಿ) ಇದೆ. ಇದು MG ಆಸ್ಟರ್, ಹೋಂಡಾ ಎಲಿವೇಟ್, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಟೊಯೋಟಾ ಹೈರ್ಡರ್, VW ಟೈಗುನ್ ಮತ್ತು ಸ್ಕೋಡಾ ಕುಶಾಕ್‌ಗೆ ಪ್ರತಿಸ್ಪರ್ಧಿಯಾಗಿದೆ.
ನಿರಂತರ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಗ್ರಾಂಡ್ ವಿಟಾರಾ ಆನ್ ರೋಡ್ ಬೆಲೆ