Login or Register ಅತ್ಯುತ್ತಮ CarDekho experience ಗೆ
Login

ತನ್ನ ಭಾರತೀಯ ಕಾರುಗಳಿಗೆ ಬ್ರಿಟೀಷ್‌ ರೇಸಿಂಗ್‌ ಸೊಬಗನ್ನು ನೀಡಿದ MG ಸಂಸ್ಥೆ

published on ಮೇ 14, 2024 10:59 am by ansh for ಎಂಜಿ ಹೆಕ್ಟರ್

ಈ ಕಾರು ತಯಾರಕ ಸಂಸ್ಥೆಯು ಆಸ್ಟರ್‌, ಹೆಕ್ಟರ್‌, ಕೋಮೆಟ್‌ EV ಮತ್ತು ZS EV ಗಳಿಗೆ 100ನೇ ವರ್ಷದ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ

  • ಕೋಮೆಟ್‌ EV ಹೊರತುಪಡಿಸಿ ಉಳಿದ ಎಲ್ಲಾ ಮಾದರಿಗಳ ವಿಶೇಷ ಆವೃತ್ತಿಗಳು ಪ್ರಮಾಣಿತ ಮಾದರಿಗಿಂತ ರೂ. 20,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ.
  • ಕೋಮೆಟ್ EV‌ ಯ ವಿಶೇಷ ಆವೃತ್ತಿಗೆ ರೂ. 16,000 ದಷ್ಟು ಹೆಚ್ಚಿನ ಬೆಲೆಯನ್ನು ನೀಡಬೇಕು.
  • ನೂರನೇ ವರ್ಷದ ಆವೃತ್ತಿಯು, ಹೊರಾಂಗಣದ ಹೊಸ ಬಣ್ಣ, ಬ್ಲ್ಯಾಕ್ಡ್‌ ಔಟ್‌ ಕ್ಯಾಬಿನ್‌ ಮತ್ತು ಕಸ್ಟಮೈಸ್ಡ್‌ ಇನ್ಫಟೈನ್‌ ಮೆಂಟ್‌ ಟಚ್‌ ಸ್ಕ್ರೀನ್‌ ಜೊತೆಗೆ ಬರುತ್ತದೆ.

MG ಸಂಸ್ಥೆಯು ಗ್ಲೋಸ್ಟರ್ ಹೊರತುಪಡಿಸಿ ಉಳಿದ ಎಲ್ಲಾ ತನ್ನ ಮಾದರಿಗಳಿಗೆ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದನ್ನು 100ನೇ ವರ್ಷದ ಸೀಮಿತ ಆವೃತ್ತಿ ಎಂದು ಕರೆಯಲಾಗಿದ್ದು MG ಆಸ್ಟರ್, ಹೆಕ್ಟರ್, ಹೆಕ್ಟರ್‌ ಪ್ಲಸ್, ಕೋಮೆಟ್ EV, ಮತ್ತು ZS EV ಮಾದರಿಗಳಲ್ಲಿ ಇದು ಲಭಿಸಲಿದೆ. ಈ ವಿಶೇಷ ಆವೃತ್ತಿಯು, ಸುಮಾರು ಒಂದು ಶತಮಾನದ ಕಾಲ MG ಸಂಸ್ಥೆಯು ಮುನ್ನಡೆಸಿದ ರೇಸಿಂಗ್‌ ಇತಿಹಾಸವನ್ನು ಸಂಭ್ರಮಿಸುತ್ತದೆ. ವಿಶೇಷ ಆವೃತ್ತಿಗಳು ಬೆಲೆಗಳು ಹೇಗಿದೆ ಹಾಗೂ ಅವುಗಳಲ್ಲಿ ಏನೆಲ್ಲ ವಿಶೇಷತೆ ಇದೆ ಎಂಬುದರ ಪಟ್ಟಿ ಇಲ್ಲಿದೆ.

ಬೆಲೆ

ಮಾದರಿ

ವೇರಿಯಂಟ್‌

ವಿಶೇಷ ಆವೃತ್ತಿ

ಪ್ರಮಾಣಿತ ವೇರಿಯಂಟ್

ವ್ಯತ್ಯಾಸ

MG ಆಸ್ಟರ್‌

ಶಾರ್ಪ್‌ ಪ್ರೊ 1.5 ಪೆಟ್ರೋಲ್ MT

ರೂ 14.81 ಲಕ್ಷ

ರೂ 14.61 ಲಕ್ಷ

+ ರೂ 20,000

ಶಾರ್ಪ್‌ ಪ್ರೊ 1.5 ಪೆಟ್ರೋಲ್ CVT

ರೂ 16.08 ಲಕ್ಷ

ರೂ 15.88 ಲಕ್ಷ

+ ರೂ 20,000

MG ಹೆಕ್ಟರ್‌

ಶಾರ್ಪ್‌ ಪ್ರೊ ಪೆಟ್ರೋಲ್ CVT 5 ಸೀಟರ್

ರೂ 21.20 ಲಕ್ಷ

ರೂ 21 ಲಕ್ಷ

+ ರೂ 20,000

ಶಾರ್ಪ್‌ ಪ್ರೊ ಪೆಟ್ರೋಲ್ CVT 7 ಸೀಟರ್

ರೂ 21.93 ಲಕ್ಷ

ರೂ 21.73 ಲಕ್ಷ

+ ರೂ 20,000

MG ಕೋಮೆಟ್ EV

ಎಕ್ಸ್‌ ಕ್ಲೂಸಿವ್‌ FC

ರೂ 9.40 ಲಕ್ಷ

ರೂ 9.24 ಲಕ್ಷ

+ ರೂ 16,000

MG ZS EV

ಎಕ್ಸ್‌ ಕ್ಲೂಸಿವ್‌ ಪ್ಲಸ್

ರೂ 24.18 ಲಕ್ಷ

ರೂ 23.98 ಲಕ್ಷ

+ ರೂ 20,000

ಆಸ್ಟರ್‌, ಹೆಕ್ಟರ್‌ ಮತ್ತು ZS EV ಗಳಲ್ಲಿ ವಿಶೇಷ ಆವೃತ್ತಿಯು ಮಿಡ್‌ ಸ್ಪೆಕ್‌ ವೇರಿಯಂಟ್‌ ಗಳನ್ನು ಆಧರಿಸಿದ್ದು, ಕೋಮೆಟ್ EV‌ ಯಲ್ಲಿ ಇದು ಕೆಲ ಕಾಲದ ಹಿಂದೆಯಷ್ಟೇ ಸೇರ್ಪಡೆಗೊಳಿಸಲಾದ ಟಾಪ್‌ ಸ್ಪೆಕ್‌ ಎಕ್ಸ್‌ ಕ್ಲೂಸಿವ್ FC‌ ವೇರಿಯಂಟ್‌ ನಲ್ಲಿ ಲಭ್ಯ=. MG ಸಂಸ್ಥೆಯು ಈ ವಿಶೇಷ ಆವೃತ್ತಿಯನ್ನು ಆಸ್ಟರ್‌ ಕಾಂಪ್ಯಾಕ್ಟ್ SUV‌ ಯ ಮ್ಯಾನುವಲ್‌ ಮತ್ತು CVT ವೇರಿಯಂಟ್‌ ಗಳೆರಡರಲ್ಲೂ ಒದಗಿಸುತ್ತಿದೆ.

ಇದನ್ನು ಸಹ ಓದಿರಿ: ವೀಕ್ಷಿಸಿ: MG ಕೋಮೆಟ್‌ EV ಯು ಹಿಂಭಾಗದಲ್ಲಿ 5 ಬ್ಯಾಗ್‌ ಗಳನ್ನು ಹೊತ್ತೊಯ್ಯಬಲ್ಲದು

ಹೆಕ್ಟರ್‌ ಮಾದರಿಯು ತನ್ನ 5 ಮತ್ತು 7 ಸೀಟರ್‌ (ಹೆಕ್ಟರ್‌ ಪ್ಲಸ್)‌ ಆವೃತ್ತಿಗಳೆರಡರಲ್ಲೂ ಈ ವಿಶೇಷ ಆವೃತ್ತಿಯನ್ನು ಪಡೆಯಲಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಪವರ್‌ ಟ್ರೇನ್‌ ಗಳಲ್ಲಿ ಇದು ಲಭ್ಯ. ಆದರೆ ಹೆಕ್ಟರ್‌ ಮತ್ತು ಹೆಕ್ಟರ್‌ ಪ್ಲಸ್‌ ನ ಪೆಟ್ರೋಲ್‌ ಮ್ಯಾನುವಲ್‌ ವೇರಿಯಂಟ್‌ ಗಳಲ್ಲಿ ಈ ವಿಶೇಷ ಆವೃತ್ತಿಯು ಲಭ್ಯವಿಲ್ಲ. ಅಲ್ಲದೆ MG ಸಂಸ್ಥೆಯು ಡೀಸೆಲ್‌ ವೇರಿಯಂಟ್‌ ಗಳ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.

ಬದಲಾವಣೆಗಳು

ವಿಶೇಷ ಆವೃತ್ತಿಯೊಂದಿಗೆ ಹೊರಬರಲಿರುವ MG ಯ ಎಲ್ಲಾ ಮಾದರಿಗಳು ಒಂದೇ ಬಗೆಯ ಬದಲಾವಣೆಗಳನ್ನು ಹೊಂದಿವೆ. ಹೊರಾಂಗಣವು ಬ್ರಿಟೀಷ್‌ ರೇಸಿಂಗ್‌ ಹಸಿರು ಬಣ್ಣದಿಂದ ಪ್ರೇರಣೆ ಪಡೆದ ʻಎವರ್‌ ಗ್ರೀನ್‌ʼ ಛಾಯೆ, ಮತ್ತು ಇತರ ಬ್ಲ್ಯಾಕ್ಡ್‌ ಔಟ್‌ ನೋಟಗಳೊಂದಿಗೆ ಕಪ್ಪು ಬಣ್ಣದ ಮೇಲ್ಛಾವಣಿಯೊಂದಿಗೆ ನಳನಳಿಸಲಿದೆ. ಹೊರಾಂಗಣದ ಕ್ರೋಮ್ಡ್‌ ಎಲಿಮೆಂಟ್‌ ಗಳನ್ನು ಕಡಿಮೆ ಮಾಡಲಾಗಿದ್ದು, ಬದಲಿಗೆ ಕಪ್ಪು ಅಥವಾ ಗಾಢ ಬಣ್ಣದ ಕ್ರೋಮ್‌ ಬಿಟ್‌ ಗಳನ್ನು ನೀಡಲಾಗಿದೆ. ಎಲ್ಲಾ ಮಾದರಿಗಳು ಟೇಲ್‌ ಗೇಟ್‌ ನಲ್ಲಿ ‘100-Year Edition’ ಬ್ಯಾಜಿಂಗ್‌ ಅನ್ನು ಪಡೆಯಲಿವೆ.

ಒಳಗಡೆಗೆ ಈ ಆವೃತ್ತಿಗಳು ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್‌ ಅನ್ನು ಪಡೆಯಲಿದ್ದು ಇದರಲ್ಲಿ ಕಪ್ಪು ಬಣ್ಣದ ಡ್ಯಾಶ್‌ ಬೋರ್ಡ್‌ ಮತ್ತು ಹಸಿರು ಹಾಗೂ ಕಪ್ಪು ಬಣ್ಣದ ಅಫೋಲ್ಸ್ಟರಿ ಒಳಗೊಂಡಿದೆ. ಜತೆಗೆ ಮುಂಭಾಗದ ಹೆಡ್‌ ರೆಸ್ಟ್‌ ಗಳು ‘100-Year Editionʼ ಬ್ಯಾಜಿಂಗ್‌ ಅನ್ನು ಪಡೆದಿವೆ. ಅಲ್ಲದೆ ಈ ವಿಶೇಷ ಆವೃತ್ತಿಗಳ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ವ್ಯವಸ್ಥೆಯು, ಕಸ್ಟಮೈಸ್‌ ಮಾಡಬಹುದಾದ ವಿಡ್ಜೆಟ್‌ ಜೊತೆಗೆ ʻಎವರ್‌ ಗ್ರೀನ್‌ʼ ಬಣ್ಣದ ಥೀಮ್‌ ನೊಂದಿಗೆ ಬರುತ್ತದೆ.

ಇತರ ವಿಶೇಷ ಆವೃತ್ತಿಗಳು

MG ಕಾರುಗಳ ವಿಶೇಷ ಆವೃತ್ತಿಯು ಇಷ್ಟಕ್ಕೇ ಸೀಮಿತವಾಗಿಲ್ಲ. ಏಕೆಂದರೆ ಆಸ್ಟರ್‌, ಹೆಕ್ಟರ್‌ ಮತ್ತು ಗ್ಲೋಸ್ಟರ್‌ ಗಳು ʻಬ್ಲ್ಯಾಕ್‌ ಸ್ಟೋರ್ಮ್‌ʼ ಆವೃತ್ತಿಯನ್ನು ಸಹ ಹೊರತರುತ್ತಿದ್ದು, ಇವು ಸಂಪೂರ್ಣ ಕಪ್ಪು ಬಣ್ಣದ ಹೊರಾಂಗಣ ಮತ್ತು ಕೆಂಪು ಇನ್ಸರ್ಟ್‌ ಗಳ ಒಳಾಂಗಣವನ್ನು ಹೊಂದಿವೆ. ಆದರೆ ಈ ವಿಶೇಷ ಆವೃತ್ತಿಗಳು ಈ 100 ವರ್ಷಗಳ ಆವೃತ್ತಿಯಷ್ಟು ವಿಶಿಷ್ಟತೆಯನ್ನು ಹೊಂದಿಲ್ಲ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹೆಕ್ಟರ್‌ ಅಟೋಮ್ಯಾಟಿಕ್

a
ಅವರಿಂದ ಪ್ರಕಟಿಸಲಾಗಿದೆ

ansh

  • 29 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on M ಜಿ ಹೆಕ್ಟರ್

Read Full News

explore similar ಕಾರುಗಳು

ಎಂಜಿ ಹೆಕ್ಟರ್

ಡೀಸಲ್13.79 ಕೆಎಂಪಿಎಲ್
ಪೆಟ್ರೋಲ್13.79 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಸಪ್ಟೆಂಬರ್ ಕೊಡುಗೆಗಳು

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ