MG Hector Style ವರ್ಸಸ್‌ Mahindra XUV700 MX 5-ಸೀಟರ್: ಸ್ಪೆಸಿಫಿಕೇಷನ್ ಗಳ ಹೋಲಿಕೆ ಇಲ್ಲಿದೆ

published on ಮಾರ್ಚ್‌ 21, 2024 06:56 pm by shreyash for ಮಹೀಂದ್ರ ಎಕ್ಸ್‌ಯುವಿ 700

  • 37 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಮಿಡ್ ಸೈಜ್ SUV ಗಳ ಎಂಟ್ರಿ ಲೆವೆಲ್ ಪೆಟ್ರೋಲ್ ವೇರಿಯಂಟ್ ಗಳು ಬಹುತೇಕ ಒಂದೇ ಬೆಲೆಯನ್ನು ಹೊಂದಿವೆ, ಆದರೆ ಈ ಬೆಲೆಗೆ ಯಾವುದು ಉತ್ತಮ ಮೌಲ್ಯವನ್ನು ನೀಡುತ್ತದೆ? ಬನ್ನಿ ನೋಡೋಣ ...

XUV700 and Hector

ನೀವು 15 ಲಕ್ಷಕ್ಕಿಂತ ಕಡಿಮೆ ಬೆಲೆಯ ಮತ್ತು ಹ್ಯುಂಡೈ ಕ್ರೆಟಾ ಅಥವಾ ಮಾರುತಿ ಗ್ರ್ಯಾಂಡ್ ವಿಟಾರಾಗಿಂತ ದೊಡ್ಡದಾದ 5 ಸೀಟರ್ SUV ಗಾಗಿ ಹುಡುಕುತ್ತಿದ್ದರೆ, ಇಲ್ಲಿ ಕೆಲವು ಆಯ್ಕೆಗಳು ಲಭ್ಯವಿದೆ. ಇತ್ತೀಚಿನ ಬೆಲೆ ಕುಸಿತದಿಂದಾಗಿ, MG ಹೆಕ್ಟರ್‌ನ ಬೇಸ್-ಸ್ಪೆಕ್ ಪೆಟ್ರೋಲ್ ವೇರಿಯಂಟ್ ಈಗ 96,000 ರೂಪಾಯಿ ಅಗ್ಗವಾಗಿದೆ. ಈಗ, ಹೆಕ್ಟರ್‌ನ ಬೇಸ್-ಸ್ಪೆಕ್ ಸ್ಟೈಲ್ ವೇರಿಯಂಟ್ ಮಹೀಂದ್ರಾ XUV700 MX 5-ಸೀಟರ್‌ಗೆ ನೇರ ಸ್ಪರ್ಧಿಯಾಗಿದೆ. ಈ ಎರಡು ಮಧ್ಯಮ ಸೈಜ್ SUV ಗಳ ಸ್ಪೆಸಿಫಿಕೇಷನ್ ಗಳನ್ನು ಹೋಲಿಸಿ ನೋಡೋಣ.

 ಬೆಲೆ

 MG ಹೆಕ್ಟರ್ ಸ್ಟೈಲ್ ಪೆಟ್ರೋಲ್

 ಮಹೀಂದ್ರ XUV700 MX 5-ಸೀಟರ್ ಪೆಟ್ರೋಲ್

 ರೂ. 13.99 ಲಕ್ಷ

 ರೂ. 13.99 ಲಕ್ಷ

 ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ

 MG ಮತ್ತು ಮಹೀಂದ್ರ SUVಗಳ ಬೇಸ್-ಸ್ಪೆಕ್ ಪೆಟ್ರೋಲ್ ವೇರಿಯಂಟ್ ಗಳು ಒಂದೇ ಬೆಲೆಯನ್ನು ಹೊಂದಿವೆ.

 ಡೈಮೆನ್ಷನ್ ಗಳು

 

 MG ಹೆಕ್ಟರ್

 ಮಹೀಂದ್ರ XUV700

 ಉದ್ದ

 4655 ಮಿ.ಮೀ

 4695 ಮಿ.ಮೀ

 ಅಗಲ

 1835 ಮಿ.ಮೀ

 1890 ಮಿ.ಮೀ

 ಎತ್ತರ

 1760 ಮಿ.ಮೀ

 1755 ಮಿ.ಮೀ

 ವೀಲ್ ಬೇಸ್

 2750 ಮಿ.ಮೀ

 2750 ಮಿ.ಮೀ

MG Hector Style Variant

  •  MG ಹೆಕ್ಟರ್ ನ ಬೇಸ್-ಸ್ಪೆಕ್ ಸ್ಟೈಲ್ ವೇರಿಯಂಟ್ ಗಿಂತ ಮಹೀಂದ್ರ XUV700 40 ಮಿ.ಮೀ ಉದ್ದ ಮತ್ತು 55 ಮಿ.ಮೀ ಅಗಲವಿದೆ.

  •  ದಯವಿಟ್ಟು ಗಮನಿಸಿ, ಹೆಕ್ಟರ್‌ನ ಮೇಲೆ ತಿಳಿಸಲಾದ ಉದ್ದವು ಅದರ ಬೇಸ್-ಸ್ಪೆಕ್ ವೇರಿಯಂಟ್ ಗೆ ಮಾತ್ರ ಅನ್ವಯಿಸುತ್ತದೆ. SUV ಯ ಎಲ್ಲಾ ಇತರ ವೇರಿಯಂಟ್ ಗಳ ಉದ್ದವು 4,699 ಮಿ.ಮೀ ಆಗಿದೆ.

  •  ಬೇಸ್-ಸ್ಪೆಕ್ ಹೆಕ್ಟರ್ ಮತ್ತು ಅದರ ಇತರ ವೇರಿಯಂಟ್ ಗಳ ನಡುವಿನ ಉದ್ದದಲ್ಲಿನ ವ್ಯತ್ಯಾಸಕ್ಕೆ ಕಾರಣ, MG ಅದರ ಹೆಕ್ಟರ್‌ನ ಬೇಸ್-ಸ್ಪೆಕ್ ಸ್ಟೈಲ್ ವೇರಿಯಂಟ್ ಅನ್ನು ಪ್ರಿ-ಫೇಸ್ ಲಿಫ್ಟ್ ವರ್ಷನ್ ನಲ್ಲಿ ನೀಡುತ್ತದೆ.

  •  ಹೆಕ್ಟರ್ XUV700 ಗಿಂತ 5 ಮಿಮೀ ಎತ್ತರವಾಗಿದೆ, ಆದರೆ ಎರಡೂ SUV ಗಳ ವೀಲ್‌ಬೇಸ್ ಒಂದೇ ಆಗಿದೆ.

 ಇದನ್ನು ಕೂಡ ಓದಿ: ಫೋರ್ಡ್ ಎಂಡೀವರ್ ವರ್ಸಸ್ ಟೊಯೋಟಾ ಫಾರ್ಚುನರ್: ಸ್ಪೆಸಿಫಿಕೇಷನ್ ಗಳ ಹೋಲಿಕೆ ಇಲ್ಲಿದೆ

 ಪವರ್‌ಟ್ರೇನ್

 ಸ್ಪೆಸಿಫಿಕೇಷನ್ ಗಳು

 MG ಹೆಕ್ಟರ್ ಸ್ಟೈಲ್ ಪೆಟ್ರೋಲ್

 ಮಹೀಂದ್ರ XUV700 MX 5-ಸೀಟರ್ ಪೆಟ್ರೋಲ್

 ಇಂಜಿನ್

 1.5-ಲೀಟರ್ ಟರ್ಬೊ-ಪೆಟ್ರೋಲ್

 2-ಲೀಟರ್ ಟರ್ಬೊ-ಪೆಟ್ರೋಲ್

 ಪವರ್

143 PS

200 PS

 ಟಾರ್ಕ್

250 Nm

380 Nm

 ಟ್ರಾನ್ಸ್‌ಮಿಷನ್

 6-ಸ್ಪೀಡ್ MT

 6-ಸ್ಪೀಡ್ MT

  •  ಎರಡೂ SUV ಗಳು ಇಲ್ಲಿ ಟರ್ಬೋಚಾರ್ಜ್ ಆಗಿರುವ ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯುತ್ತವೆ, ಆದರೆ XUV700 ಇಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ ಏಕೆಂದರೆ ಇದು ದೊಡ್ಡ 2-ಲೀಟರ್ ಯೂನಿಟ್ ಅನ್ನು ಪಡೆಯುತ್ತದೆ, ಇದು ಹೆಕ್ಟರ್‌ನ 1.5-ಲೀಟರ್ ಎಂಜಿನ್‌ಗೆ ಹೋಲಿಸಿದರೆ 57 PS ಮತ್ತು 130 Nm ಅನ್ನು ಉತ್ಪಾದಿಸುತ್ತದೆ.

  •  ಹೆಕ್ಟರ್ ಮತ್ತು XUV700, ಎರಡೂ ಬೇಸ್-ಸ್ಪೆಕ್ ವೇರಿಯಂಟ್ ಗಳನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

 ಇದನ್ನು ಕೂಡ ಓದಿ: ಮಹೀಂದ್ರಾ XUV300 ಫೇಸ್‌ಲಿಫ್ಟ್: ಇದಕ್ಕಾಗಿ ನೀವು ಕಾಯಬೇಕೇ ಅಥವಾ ಬದಲಿಗೆ ನೀವು ಅದರ ಪ್ರತಿಸ್ಪರ್ಧಿಗಳನ್ನು ಖರೀದಿಸಬೇಕೇ?

 ಪ್ರಮುಖ ಫೀಚರ್ ಗಳು

 

 MG ಹೆಕ್ಟರ್ ಸ್ಟೈಲ್

 ಮಹೀಂದ್ರ XUV700 MX

ಹೊರಭಾಗ

  • LED DRL ಗಳೊಂದಿಗೆ  ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ ಗಳು
  • ಸೆಮಿ LED ಟೈಲ್ ಲ್ಯಾಂಪ್ ಗಳು
  • ORVM ಗಳಲ್ಲಿ ಟರ್ನ್ ಇಂಡಿಕೇಟರ್ ಗಳು
  • ಶಾರ್ಕ್-ಫಿನ್ ಆಂಟೆನಾ (ಮೈಕ್ರೋ-ಟೈಪ್)
  • ರೂಫ್ ರೈಲ್ ಗಳು
  • ವೀಲ್ ಕವರ್ ನೊಂದಿಗೆ 17-ಇಂಚಿನ ಸ್ಟೀಲ್ ವೀಲ್ಸ್
  • ಫಾಲೋ ಮಿ ಹೋಮ್ ಫಂಕ್ಷನ್‌ನೊಂದಿಗೆ ಹ್ಯಾಲೊಜೆನ್ ಹೆಡ್‌ಲೈಟ್‌ಗಳು
  • LED ಟೈಲ್ ಲೈಟ್ ಗಳು 
  • ರೂಫ್ ಆಂಟೆನಾ
  • ORVM ಗಳಲ್ಲಿ ಟರ್ನ್ ಇಂಡಿಕೇಟರ್ ಗಳು
  • ಫ್ಲಶ್ ಮಾದರಿಯ ಡೋರ್ ಹ್ಯಾಂಡಲ್ ಗಳು
  • ಸಾಂಪ್ರದಾಯಿಕ ರೂಫ್ ಆಂಟೆನಾ
  • 17 ಇಂಚಿನ ಸ್ಟೀಲ್ ವೀಲ್ಸ್

 ಒಳಭಾಗ

  • ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ
  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್
  • ಹಿಂಭಾಗದ ಆರ್ಮ್ ರೆಸ್ಟ್
  • ಮುಂಭಾಗ ಮತ್ತು ಹಿಂಭಾಗದ ರೀಡಿಂಗ್ ಲೈಟ್ಸ್
  • ಎಲ್ಲಾ ಸೀಟ್ ಗಳಿಗೆ ಎತ್ತರ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು
  • 2 ನೇ ಸಾಲಿನ ಸೀಟ್ ರಿಕ್ಲೈನ್
  • ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ
  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್
  • ಮುಂಭಾಗ ಮತ್ತು ಹಿಂಭಾಗದ ರೀಡಿಂಗ್ ಲೈಟ್ಸ್
  • ಎಲ್ಲಾ ವಿಂಡೋ ಸೀಟ್‌ಗಳಿಗೆ ಎತ್ತರ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

 ಆರಾಮ ಮತ್ತು ಅನುಕೂಲತೆ

  •  ಮ್ಯಾನುಯಲ್ AC
  • ರಿಯರ್ AC ವೆಂಟ್‌ಗಳು
  • ಟಿಲ್ಟ್ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್
  • ಸ್ಟೋರೇಜ್ ನೊಂದಿಗೆ ಡ್ರೈವರ್ ಆರ್ಮ್‌ರೆಸ್ಟ್
  • ಡ್ರೈವರ್ ಬದಿಯ ಆಟೋ-ಡೌನ್ ಫಂಕ್ಷನ್‌ನೊಂದಿಗೆ ಎಲ್ಲಾ ನಾಲ್ಕು ಪವರ್ ವಿಂಡೋಗಳು
  • ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು
  • ರಿಯರ್ ಡಿಫಾಗರ್
  • ರಿಯರ್ ವೈಪರ್ ಮತ್ತು ವಾಷರ್
  • USB ಚಾರ್ಜಿಂಗ್ ಪೋರ್ಟ್‌ಗಳು
  • ಮ್ಯಾನುಯಲ್ AC
  • ರಿಯರ್ AC ವೆಂಟ್‌ಗಳು
  • ಟಿಲ್ಟ್ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್
  • ಸ್ಟೋರೇಜ್ ನೊಂದಿಗೆ ಡ್ರೈವರ್ ಆರ್ಮ್‌ರೆಸ್ಟ್
  • ಎಲ್ಲಾ ನಾಲ್ಕು ಪವರ್ ವಿಂಡೋಗಳು
  • ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು
  • ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ ಗಳು
  • ಡೇ/ನೈಟ್ IRVM
  • USB ಚಾರ್ಜಿಂಗ್ ಪೋರ್ಟ್‌ಗಳು

 ಇನ್ಫೋಟೈನ್ಮೆಂಟ್

  • USB, FM ಮತ್ತು ಬ್ಲೂಟೂತ್ ಜೊತೆಗೆ ಆಡಿಯೋ ಸಿಸ್ಟಮ್
  • 4-ಸ್ಪೀಕರ್ ಸೌಂಡ್ ಸಿಸ್ಟಮ್
  • 3.5-ಇಂಚಿನ ಮಲ್ಟಿ ಇನ್ಫೋರ್ಮೇಷನ್ ಡಿಸ್ಪ್ಲೇಯೊಂದಿಗೆ ಅನಲಾಗ್ ಕ್ಲಸ್ಟರ್
  • 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
  • 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ
  • ಆಂಡ್ರಾಯ್ಡ್ ಆಟೋ
  • 4-ಸ್ಪೀಕರ್ ಸೌಂಡ್ ಸಿಸ್ಟಮ್

 ಸುರಕ್ಷತೆ

  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು
  • EBD ಜೊತೆಗೆ ABS
  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
  • ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು
  • ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್ ಗಳು
  • ISOFIX ಚೈಲ್ಡ್ ಸೀಟ್ ಅನ್ಕರೇಜ್
  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು
  • EBD ಜೊತೆಗೆ ABS
  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
  • ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು
  • ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್ ಗಳು
  • ISOFIX ಚೈಲ್ಡ್ ಸೀಟ್ ಅನ್ಕರೇಜ್

MG Hector Style Interior

  •  ಅದೇ ಬೆಲೆಯಲ್ಲಿ, ಬೇಸ್-ಸ್ಪೆಕ್ MG ಹೆಕ್ಟರ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ನೀಡುತ್ತಿಲ್ಲ, ಆದರೆ ಎರಡೂ SUV ಗಳು ಕೆಲವು ರೀತಿಯ ಆಡಿಯೊ ಎಂಟರ್‌ಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿವೆ.

  •  ಎರಡೂ SUV ಗಳ ಬೇಸ್-ಸ್ಪೆಕ್ ವೇರಿಯಂಟ್ ಗಳು ಎಲ್ಲಾ ನಾಲ್ಕು ಪವರ್ ವಿಂಡೋಗಳು, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು, ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಟಿಲ್ಟ್ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್‌ನಂತಹ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆಯುತ್ತವೆ.

  •  ಹೆಕ್ಟರ್ ಬೇಸ್-ಸ್ಪೆಕ್ ವೇರಿಯಂಟ್ ರಿಯರ್ ಡಿಫಾಗರ್ ಮತ್ತು ರಿಯರ್ ವೈಪರ್ ಮತ್ತು ವಾಷರ್ ಅನ್ನು ಕೂಡ ಪಡೆಯುತ್ತದೆ, ಇದು XUV700 ನ MX ವೇರಿಯಂಟ್ ನಲ್ಲಿ ಲಭ್ಯವಿಲ್ಲ.

  •  ಎರಡೂ SUVಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಪಡೆಯುತ್ತವೆ.

 ಅಂತಿಮ ಟೇಕ್ಅವೇ

 ಎರಡೂ SUVಗಳ ಬೇಸ್-ಸ್ಪೆಕ್ ವೇರಿಯಂಟ್ ಗಳು ಮೂಲಭೂತ ಸೌಕರ್ಯಗಳನ್ನು ಮಾತ್ರ ನೀಡುತ್ತವೆ, XUV700 ನ ಬೇಸ್-ಸ್ಪೆಕ್ ಟ್ರಿಮ್ ಆಂಡ್ರಾಯ್ಡ್ ಆಟೋ ಒಳಗೊಂಡಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಹೆಚ್ಚುವರಿ ಫೀಚರ್ ಗಳನ್ನು ಒದಗಿಸುತ್ತದೆ. ಆದರೆ, MG SUV ರಿಯರ್ ವೈಪರ್ ಮತ್ತು ಡಿಫಾಗರ್ ಅನ್ನು ಕೂಡ ಹೊಂದಿದೆ, ಇದು ಮಹೀಂದ್ರಾ SUV ಯಲ್ಲಿ ಲಭ್ಯವಿಲ್ಲ.

 ಇದಲ್ಲದೆ, XUV700 ಹೆಕ್ಟರ್‌ಗಿಂತ ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಆದರೆ ಉತ್ತಮ ಇಂಧನ ದಕ್ಷತೆಗಾಗಿ ನೀವು ಹೆಕ್ಟರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

 ಒಟ್ಟಾರೆಯಾಗಿ, ನೀವು ಹಾಕುವ ದುಡ್ಡಿಗೆ ಮಹೀಂದ್ರಾ XUV700 ನ MX 5-ಸೀಟರ್ ಪೆಟ್ರೋಲ್ ವೇರಿಯಂಟ್ MG ಹೆಕ್ಟರ್‌ನ ಸ್ಟೈಲ್ ವೇರಿಯಂಟ್ ಗಿಂತ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ, ಆದರೆ ವ್ಯತ್ಯಾಸವು ಅಷ್ಟೊಂದು ಜಾಸ್ತಿಯೇನಿಲ್ಲ.

 ಇವೆರಡರಲ್ಲಿ ನೀವು ಯಾವುದನ್ನು ಆಯ್ಕೆ ಮಾಡಲು ಬಯಸುತ್ತೀರಿ? ಕೆಳಗೆ ಕಾಮೆಂಟ್‌ ಮಾಡಿ ನಮಗೆ ತಿಳಿಸಿ.

 ಇನ್ನಷ್ಟು ಓದಿ: ಮಹೀಂದ್ರ XUV700 ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಎಕ್ಸ್‌ಯುವಿ 700

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience