Login or Register ಅತ್ಯುತ್ತಮ CarDekho experience ಗೆ
Login

MG Comet ಮತ್ತು ZS EV ಯ ಬೆಲೆಯಲ್ಲಿ 4.99 ಲಕ್ಷ ರೂ.ವರೆಗೆ ಕಡಿತ, ಆದರೆ ಒಂದು ಟ್ವಿಸ್ಟ್‌ ಇದೆ!

ಎಂಜಿ ಕಾಮೆಟ್ ಇವಿ ಗಾಗಿ rohit ಮೂಲಕ ಸೆಪ್ಟೆಂಬರ್ 20, 2024 09:30 pm ರಂದು ಪ್ರಕಟಿಸಲಾಗಿದೆ

ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಕಾರ್ಯಕ್ರಮದಡಿಯಲ್ಲಿ MG ಕಾಮೆಟ್‌ನ ಆರಂಭಿಕ ಬೆಲೆಯಲ್ಲಿ 2 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ, ಹಾಗೆಯೇ ಝೆಡ್‌ಎಸ್‌ ಇವಿಯ ಬೆಲೆಯಲ್ಲಿ ಸುಮಾರು 5 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ

  • ಎಮ್‌ಜಿಯು ಉದ್ಯಮದ-ಮೊದಲ BaaS ಕಾರ್ಯಕ್ರಮವನ್ನು ವಿಂಡ್ಸರ್ ಇವಿಯೊಂದಿಗೆ ಪರಿಚಯಿಸಿತ್ತು.
  • ಅದೇ ಸೇವೆಯನ್ನು ಇದೀಗ ಕಾಮೆಟ್ ಇವಿ ಮತ್ತು ಜೆಡ್‌ಎಸ್‌ ಇವಿಯೊಂದಿಗೆ ಪರಿಚಯಿಸಲಾಗಿದೆ.
  • ಕಾಮೆಟ್‌ನ ಬೆಲೆ ಈಗ 4.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ಅದರ ಬಾಸ್ ಕಾರ್ಯಕ್ರಮದಡಿ ಪ್ರತಿ ಕಿಮೀಗೆ 2.5 ರೂ.ನಷ್ಟು ವೆಚ್ಚವಾಗುತ್ತದೆ.
  • ಜೆಡ್‌ಎಸ್‌ ಇವಿಯ ಹೊಸ ಆರಂಭಿಕ ಬೆಲೆ 13.99 ಲಕ್ಷ ರೂ.ನಿಂದ ಪ್ರಾರಂಭವಾಗಲಿದ್ದು, ಅದರ BaaS ಪ್ರೋಗ್ರಾಂ ಪ್ರತಿ ಕಿಮೀಗೆ ರೂ 4.5 ರಿಂದ ಪ್ರಾರಂಭವಾಗುತ್ತದೆ.
  • ಎರಡೂ ಮೊಡೆಲ್‌ಗಳನ್ನು 3-ವರ್ಷದಲ್ಲಿ 60 ಪ್ರತಿಶತ ಬೈಬ್ಯಾಕ್ ಗ್ಯಾರಂಟಿ ಆಯ್ಕೆಯೊಂದಿಗೆ ಹೊಂದಬಹುದು.
  • ಎರಡು ಇವಿಗಳ ಪವರ್‌ಟ್ರೇನ್ ಅಥವಾ ಫೀಚರ್‌ಗಳ ವಿಭಾಗಕ್ಕೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಎಮ್‌ಜಿ ವಿಂಡ್ಸರ್ ಇವಿಯೊಂದಿಗೆ ಉದ್ಯಮ-ಮೊದಲ ಬ್ಯಾಟರಿ-ಆಸ್-ಸರ್ವೀಸ್‌ (BaaS) ಕಾರ್ಯಕ್ರಮದ ಪರಿಚಯದ ನಂತರ, ಕಾರು ತಯಾರಕರು ಇದೀಗ ಎಮ್‌ಜಿ ಕಾಮೆಟ್ ಮತ್ತು ಜೆಡ್‌ಎಸ್‌ ಇವಿಯೊಂದಿಗೆ ಅದೇ ಆಯ್ಕೆಯನ್ನು ಒದಗಿಸಲು ಆಯ್ಕೆ ಮಾಡಿದ್ದಾರೆ. ಇದರೊಂದಿಗೆ, ಎಮ್‌ಜಿಯು ಎರಡೂ ಇವಿ ಕಾರುಗಳ ಆರಂಭಿಕ ಬೆಲೆಯನ್ನು ಕಡಿಮೆ ಮಾಡಿದೆ. ಇದರ ವಿವರವಾದ ನೋಟ ಇಲ್ಲಿದೆ:

ಮೊಡೆಲ್‌

ಹಳೆಯ ಬೆಲೆಗಳು (BaaS ಇಲ್ಲದೆ)

BaaS ನೊಂದಿಗೆ ಪರಿಷ್ಕೃತ ಬೆಲೆಗಳು

ವ್ಯತ್ಯಾಸ

ಕಾಮೆಟ್‌ ಇವಿ

6.99 ಲಕ್ಷ ರೂ

4.99 ಲಕ್ಷ ರೂ

2 ಲಕ್ಷ ರೂ

ಜೆಡ್‌ಎಸ್‌ ಇವಿ

18.98 ಲಕ್ಷ ರೂ.

13.99 ಲಕ್ಷ ರೂ.

4.99 ಲಕ್ಷ ರೂ.

ಕಾಮೆಟ್ ಈಗ BaaS ಪ್ರೋಗ್ರಾಂ ಆಡಿಯಲ್ಲಿ ಪ್ರತಿ ಕಿ.ಮೀಗೆ 2.5 ರೂ.ನಂತೆ ನೀಡುತ್ತದೆ. ಕಾಮೆಟ್ ಇವಿಯ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗೆ ಯಾವುದೇ ಆಪ್‌ಡೇಟ್‌ ಅನ್ನು ಮಾಡಲಾಗಿಲ್ಲ. ಎಮ್‌ಜಿಯು ಇದನ್ನು 17.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ 230 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತಿದೆ. ಕಾಮೆಟ್ ಹಿಂಬದಿ-ಚಕ್ರ ಡ್ರೈವ್‌ ಎಲೆಕ್ಟ್ರಿಕ್ ಮೋಟಾರ್ (42 ಪಿಎಸ್‌ ಮತ್ತು 110 ಎನ್‌ಎಮ್‌) ಅನ್ನು ಪಡೆಯುತ್ತದೆ.

ಜೆಡ್‌ಎಸ್‌ ಇವಿಯು BaaS ಪ್ರೋಗ್ರಾಂ ಅಡಿಯಲ್ಲಿ ಪ್ರತಿ ಕಿಮೀಗೆ 4.5 ರೂ.ನಲ್ಲಿ ಲಭ್ಯವಿದೆ. ಎಮ್‌ಜಿಯು ಈ ಎಸ್‌ಯುವಿಯ ಎಲೆಕ್ಟ್ರಿಕ್ ಪವರ್‌ಟ್ರೇನ್ ಸೆಟಪ್‌ನೊಂದಿಗೆ ಯಾವುದೇ ಬದಲಾವಣೆ ಮಾಡಿಲ್ಲ. ಜೆಡ್‌ಎಸ್‌ ಇವಿಯು 50.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಿ, 177 ಪಿಎಸ್‌ ಮತ್ತು 280 ಎನ್‌ಎಮ್‌ ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಎಮ್‌ಜಿ ಇವಿಯು 461 ಕಿಮೀ.ವರೆಗೆ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ಹೊಂದಿದೆ.

Share via

Write your Comment on M g ಕಾಮೆಟ್ ಇವಿ

S
saravanan
Dec 27, 2024, 12:46:52 PM

மாற்றுத்திறனாளிகள் பயன்பாட்டுக்கு ஏற்றார் போல மாற்றிமைக்கு வசதி செய்யவேண்டும் மாற்றுத்திறனாளிகள் சலுகைகள் 1. 2. 3. 4.

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ