ಈ ಜೂನ್‌ನಲ್ಲಿ ಎಂಟ್ರಿ-ಲೆವೆಲ್ ಇವಿಯನ್ನು ಮನೆಗೆ ತರಲು 4 ತಿಂಗಳವರೆಗೆ ಕಾಯಲು ಸಿದ್ಧರಾಗಿ..!
ಟಾಟಾ ಟಿಯಾಗೋ ಇವಿ ಗಾಗಿ yashika ಮೂಲಕ ಜೂನ್ 11, 2024 09:59 pm ರಂದು ಪ್ರಕಟಿಸಲಾಗಿದೆ
- 42 Views
- ಕಾಮೆಂಟ್ ಅನ್ನು ಬರೆಯಿರಿ
ಪಟ್ಟಿಯಲ್ಲಿರುವ 20 ನಗರಗಳ ಪೈಕಿ ಮೂರರಲ್ಲಿ ವೈಟಿಂಗ್ ಪಿರೇಡ್ ಅನ್ನು ಹೊಂದಿರದ ಏಕೈಕ ಇವಿ ಎಂಜಿ ಕಾಮೆಟ್ ಆಗಿದೆ
15 ಲಕ್ಷ ರೂ.ಗಳ ಒಳಗಿನ ಇವಿ ಕಾರುಗಳ ಪಟ್ಟಿಯಲ್ಲಿ ಟಾಟಾ ಟಿಯಾಗೊ ಇವಿ, ಎಂಜಿ ಕಾಮೆಟ್ ಇವಿ ಮತ್ತು ಟಾಟಾ ಪಂಚ್ ಇವಿಗಳನ್ನು ಒಳಗೊಂಡಿದೆ. ನೀವು 2024ರ ಜೂನ್‌ನಲ್ಲಿ ಇವುಗಳಲ್ಲಿ ಯಾವುದನ್ನಾದರೂ ಖರೀದಿಸಲು ಯೋಜಿಸುತ್ತಿದ್ದರೆ, ಎಲೆಕ್ಟ್ರಿಕ್ ಕಾರನ್ನು ಮನೆಗೆ ತೆಗೆದುಕೊಂಡು ಹೋಗಲು ನಾಲ್ಕು ತಿಂಗಳವರೆಗೆ ಕಾಯಲು ಸಿದ್ಧರಾಗಿರಿ. ಈ ಲೇಖನದಲ್ಲಿ, ನಾವು 15 ಲಕ್ಷ ರೂ.ಕ್ಕಿಂತ ಕಡಿಮೆ ಬೆಲೆಯ ನಾಲ್ಕು ಜನಪ್ರಿಯ ಇವಿಗಳ ಮೇಲಿನ 20 ನಗರವಾರು ವೈಟಿಂಗ್ ಪಿರೇಡ್ ಅನ್ನು ವಿವರಿಸಿದ್ದೇವೆ. ನಾವು ಟಾಟಾ ನೆಕ್ಸಾನ್ ಇವಿಯನ್ನು ಈ ಹೋಲಿಕೆಯಲ್ಲಿ ಸೇರಿಸಿಲ್ಲ, ಏಕೆಂದರೆ ಅದರ ಬೇಸ್ ಮೊಡೆಲ್ ಮಾತ್ರ 15 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ.
ಗಮನಿಸಿ: ಸಿಟ್ರೊಯೆನ್ eC3 ಅನ್ನು ನಾವು ಪಟ್ಟಿಯಲ್ಲಿ ಸೇರಿಸಿಲ್ಲ ಏಕೆಂದರೆ ಅದರ ಯಾವುದೇ ಮಾಹಿತಿ ಲಭ್ಯವಿಲ್ಲ.
ನಗರ |
ಎಂಜಿ ಕಾಮೆಟ್ ಇವಿ |
ಟಾಟಾ ಟಿಯಾಗೊ ಇವಿ |
ಟಾಟಾ ಟಿಗೋರ್ ಇವಿ |
ಟಾಟಾ ಪಂಚ್ ಇವಿ |
ನವದೆಹಲಿ |
ಕಾಯಬೇಕಾಗಿಲ್ಲ |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
ಬೆಂಗಳೂರು |
2 ತಿಂಗಳುಗಳು |
3 ತಿಂಗಳುಗಳು |
2 ತಿಂಗಳುಗಳು |
3 ತಿಂಗಳುಗಳು |
ಮುಂಬೈ |
2-3 ತಿಂಗಳುಗಳು |
1.5-2 ತಿಂಗಳುಗಳು |
1.5-2 ತಿಂಗಳುಗಳು |
1.5-2 ತಿಂಗಳುಗಳು |
ಹೈದರಾಬಾದ್ |
1.5 ತಿಂಗಳುಗಳು |
2 ತಿಂಗಳುಗಳು |
2-3 ತಿಂಗಳುಗಳು |
2 ತಿಂಗಳುಗಳು |
ಪುಣೆ |
1-2 ತಿಂಗಳುಗಳು |
2 ತಿಂಗಳುಗಳು |
2-3 ತಿಂಗಳುಗಳು |
1 ತಿಂಗಳು |
ಚೆನ್ನೈ |
1.5-2 ತಿಂಗಳುಗಳು |
2.5 ತಿಂಗಳುಗಳು |
2-2.5 ತಿಂಗಳುಗಳು |
2-2.5 ತಿಂಗಳುಗಳು |
ಜೈಪುರ |
ಕಾಯಬೇಕಾಗಿಲ್ಲ |
2 ತಿಂಗಳುಗಳು |
2-3 ತಿಂಗಳುಗಳು |
2 ತಿಂಗಳುಗಳು |
ಅಹಮದಾಬಾದ್ |
ಕಾಯಬೇಕಾಗಿಲ್ಲ |
2 ತಿಂಗಳುಗಳು |
2 ತಿಂಗಳುಗಳು |
2.5 ತಿಂಗಳುಗಳು |
ಗುರುಗ್ರಾಮ್ |
1-2 ತಿಂಗಳುಗಳು |
2 ತಿಂಗಳುಗಳು |
1.5 ತಿಂಗಳುಗಳು |
2.5 ತಿಂಗಳುಗಳು |
ಲಕ್ನೋ |
2 ತಿಂಗಳುಗಳು |
2-3 ತಿಂಗಳುಗಳು |
2-3 ತಿಂಗಳುಗಳು |
2-3 ತಿಂಗಳುಗಳು |
ಕೋಲ್ಕತ್ತಾ |
1.5 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
ಥಾಣೆ |
2-2.5 ತಿಂಗಳುಗಳು |
2 ತಿಂಗಳುಗಳು |
2-3 ತಿಂಗಳುಗಳು |
2 ತಿಂಗಳುಗಳು |
ಸೂರತ್ |
1-1.5 ತಿಂಗಳುಗಳು |
2 ತಿಂಗಳುಗಳು |
1.5 ತಿಂಗಳುಗಳು |
2.5 ತಿಂಗಳುಗಳು |
ಗಾಜಿಯಾಬಾದ್ |
1.5 ತಿಂಗಳುಗಳು |
2 ತಿಂಗಳುಗಳು |
2-3 ತಿಂಗಳುಗಳು |
1 ತಿಂಗಳು |
ಚಂಡೀಗಢ |
3-4 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
1.5-2.5 ತಿಂಗಳುಗಳು |
ಕೊಯಮತ್ತೂರು |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
ಪಾಟ್ನಾ |
1.5-2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
1.5-2.5 ತಿಂಗಳುಗಳು |
ಫರಿದಾಬಾದ್ |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
ಇಂದೋರ್ |
1-2 ತಿಂಗಳುಗಳು |
1.5-2 ತಿಂಗಳುಗಳು |
1.5-2 ತಿಂಗಳುಗಳು |
1.5-2 ತಿಂಗಳುಗಳು |
ನೋಯ್ಡಾ |
2 ತಿಂಗಳುಗಳು |
2-3 ತಿಂಗಳುಗಳು |
2 ತಿಂಗಳುಗಳು |
2-3 ತಿಂಗಳುಗಳು |
ಗಮನಿಸಿದ ಪ್ರಮುಖ ಅಂಶಗಳು
ಈ ಪಟ್ಟಿಯಲ್ಲಿರುವ ಅತ್ಯಂತ ಕೈಗೆಟುಕುವ ಇವಿಯಾಗಿರುವ MG ಕಾಮೆಟ್ ಇವಿ, ಬಹುತೇಕ ಟಾಪ್ ನಗರಗಳಲ್ಲಿ ಸುಮಾರು ಎರಡು ತಿಂಗಳುಗಳಲ್ಲಿ ಲಭ್ಯವಿದೆ, ಆದರೆ ಚಂಡೀಗಢದಲ್ಲಿ, ನೀವು ಗರಿಷ್ಠ ನಾಲ್ಕು ತಿಂಗಳವರೆಗೆ ಕಾಯಬೇಕಾಗುತ್ತದೆ. ದೆಹಲಿ, ಜೈಪುರ ಮತ್ತು ಅಹಮದಾಬಾದ್‌ನಲ್ಲಿ ಖರೀದಿದಾರರಿಗೆ ಯಾವುದೇ ವೈಟಿಂಗ್ ಪಿರೇಡ್ ಇಲ್ಲ.
ಟಾಟಾದ ಎಂಟ್ರಿ ಲೆವೆಲ್ ಇವಿಯಾಗಿರುವ ಟಾಟಾ ಟಿಯಾಗೋ ಇವಿಯನ್ನು ಖರೀದಿಸಲು ಬಯಸುವವರು ಹೆಚ್ಚಿನ ನಗರಗಳಲ್ಲಿ ಎರಡು ತಿಂಗಳವರೆಗೆ ಕಾಯಬೇಕಾಗುತ್ತದೆ. ಬೆಂಗಳೂರು, ಲಕ್ನೋ ಮತ್ತು ನೋಯ್ಡಾದ ಜನರು ಮೂರು ತಿಂಗಳು ಕಾಯಬೇಕಾಗುತ್ತದೆ.
2024ರ ಜೂನ್‌ನಲ್ಲಿ ಪಟ್ಟಿ ಮಾಡಲಾದ ಆರು ನಗರಗಳಲ್ಲಿ ಟಾಟಾ ಟಿಗೋರ್ ಇವಿಯು ಸುಮಾರು ಎರಡರಿಂದ ಮೂರು ತಿಂಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಆದಾಗಿಯೂ, ಮುಂಬೈ, ಗುರುಗ್ರಾಮ್, ಸೂರತ್ ಮತ್ತು ಇಂದೋರ್‌ನಲ್ಲಿನ ಖರೀದಿದಾರರು ಒಂದೂವರೆ ತಿಂಗಳಲ್ಲಿ ಬೇಗನೆ ಡೆಲಿವರಿ ಪಡೆಯಬಹುದು.
ಟಾಟಾ ಪಂಚ್ EV ಗಾಗಿ ಸರಾಸರಿ ವೈಟಿಂಗ್ ಪಿರೇಡ್ ಸುಮಾರು ಎರಡರಿಂದ ಮೂರು ತಿಂಗಳುಗಳವರೆಗೆ ಇದೆ, ಆದರೆ ಪುಣೆ ಮತ್ತು ಗಾಜಿಯಾಬಾದ್‌ನಂತಹ ನಗರಗಳಲ್ಲಿ ಖರೀದಿದಾರರು ಒಂದು ತಿಂಗಳಲ್ಲಿ ವಿತರಣೆಯನ್ನು ಪಡೆಯಬಹುದು.
ಹೊಸ ಕಾರಿನ ಆಯ್ಕೆಯ ಆವೃತ್ತಿ ಮತ್ತು ಬಣ್ಣವನ್ನು ಆಧರಿಸಿ ನಿಖರವಾದ ವೈಟಿಂಗ್ ಪಿರೇಡ್ ಬದಲಾಗಬಹುದು ಮತ್ತು ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್ ಅನ್ನು ದಯವಿಟ್ಟು ಗಮನಿಸಿ.
ಇನ್ನಷ್ಟು ಓದಿ: ಟಿಯಾಗೋ ಇವಿ ಆಟೋಮ್ಯಾಟಿಕ್