Tata Tiago EV ಮತ್ತು MG Comet EV ಗಳ ಬೆಲೆ ಕಡಿತ, ಎರಡರ ಹೋಲಿಕೆ ಇಲ್ಲಿದೆ
ಟಾಟಾ ಟಿಯಾಗೋ ಇವಿ ಗಾಗಿ shreyash ಮೂಲಕ ಫೆಬ್ರವಾರಿ 19, 2024 01:37 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಟಿಯಾಗೋ EV ಈಗ 70,000 ರೂ.ಗಳವರೆಗೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಇನ್ನೊಂದೆಡೆ ಕಾಮೆಟ್ EV 1.4 ಲಕ್ಷ ರೂ.ಗಳವರೆಗೆ ಬೆಲೆ ಕಡಿತ ಘೋಷಿಸಿದೆ.
ಭಾರತದ ಅತ್ಯಂತ ಕೈಗೆಟುಕುವ ದರದ ಎರಡು ಎಲೆಕ್ಟ್ರಿಕ್ ಕಾರುಗಳಾದ ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EV ದರಗಳು ಇತ್ತೀಚೆಗೆ ಗಮನಾರ್ಹವಾಗಿ ಕಡಿತಗೊಂಡಿವೆ. ಕಡಿಮೆ ಬ್ಯಾಟರಿ ಪ್ಯಾಕ್ ವೆಚ್ಚದ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಿರುವುದಾಗಿ ಎಂದು ಟಾಟಾ ಹೇಳಿದೆ. ಆದರೆ MG ತನ್ನ ಬೆಲೆಗಳನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸುವ ಮೂಲಕ ಮಾರಾಟದ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಪರಿಷ್ಕೃತ ಬೆಲೆಗಳ ಹಿನ್ನೆಲೆಯಲ್ಲಿ EV ಗಳಿಗೆ ಬದಲಾಗುವ ಮಾದರಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಇವೆರಡರಲ್ಲಿ ಯಾವ EV ತನ್ನ ಮೌಲ್ಯಕ್ಕೆ ತಕ್ಕನಾದ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬ ಕುತೂಹಲವಿದೆಯೇ? ಈಗ ನಾವು ಟಿಯಾಗೋ EV ಮತ್ತು ಕಾಮೆಟ್ EV ಗಳ ಹೊಸ ಬೆಲೆಗಳನ್ನು ಹೋಲಿಕೆ ಮಾಡೋಣ. ಎರಡರ ನಡುವಿನ ಅನುಕೂಲತೆಗಳು ಮತ್ತು ಅನಾನುಕೂಲತೆಗಳನ್ನು ಅರಿಯಲು.
ಅದಕ್ಕೂ ಮುನ್ನ, ನಾವು ಎರಡೂ EV ಗಳ ಬ್ಯಾಟರಿ ಪ್ಯಾಕ್ ವೈಶಿಷ್ಟ್ಯಗಳನ್ನು ನೋಡೋಣ:
ವೈಶಿಷ್ಟ್ಯಗಳು |
ಟಾಟಾ ಟಿಯಾಗೋ EV |
MG ಕಾಮೆಟ್ EV |
|
ಬ್ಯಾಟರಿ ಪ್ಯಾಕ್ |
19.2 kWh (ಮಧ್ಯಮ ಶ್ರೇಣಿ) |
24 kWh (ದೀರ್ಘ ಶ್ರೇಣಿ) |
17.3 kWh |
ಶಕ್ತಿ |
61 PS |
75 PS |
42 PS |
ಟಾರ್ಕ್ |
110 Nm |
114 Nm |
110 Nm |
ಕ್ಲೈಮ್ ಮಾಡಿರುವ ರೇಂಜ್ |
250 km |
315 km |
230 km |
-
ಟಾಟಾ ಟಿಯಾಗೋ EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ. ಆದರೆ ಕಾಮೆಟ್ EV ಒಂದೇ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬರುತ್ತದೆ.
-
ಟಿಯಾಗೋ EVಯ ಮಧ್ಯಮ ಶ್ರೇಣಿಯ ಆವೃತ್ತಿಯು MG ಕಾಮೆಟ್ EVಗಿಂತ ದೊಡ್ಡದಾದ 19.2 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಹೆಚ್ಚಿನ ಕಾರ್ಯಕ್ಷಮತೆ ಮತ್ತು ಶ್ರೇಣಿಯನ್ನು ನೀಡುತ್ತದೆ.
ಇವುಗಳನ್ನೂ ಓದಿ: ಹೊಸ ಕಾರು ಖರೀದಿಸಲು ಯೋಚಿಸುತ್ತಿರುವಿರಾ? ನಿಮ್ಮ ಹಳೆಯದನ್ನು ಗುಜರಿಗೆ ಹಾಕುವುದರಿಂದಾಗುವ ಎಲ್ಲಾ ಪ್ರಯೋಜನಗಳನ್ನು ಗಮನಿಸಿ
ಚಾರ್ಜರ್ |
ಚಾರ್ಜಿಂಗ್ ಸಮಯ |
||
ಟಿಯಾಗೋ EV |
MG ಕಾಮೆಟ್ EV |
||
19.2 kWh |
24 kWh |
17.3 kWh |
|
3.3 kW AC ಚಾರ್ಜರ್ |
6.9 ಗಂಟೆಗಳು (10-100%) |
8.7 ಗಂಟೆಗಳು (10-100%) |
7 ಗಂಟೆಗಳು (0-100%) |
7.2 kW AC ಚಾರ್ಜರ್ |
N.A. |
3.6 ಗಂಟೆಗಳು (10-100%) |
N.A. |
50 kW DC ತ್ವರಿತ ಚಾರ್ಜರ್ |
58 ನಿಮಿಷಗಳು (10-80%) |
58 ನಿಮಿಷಗಳು (10-80%) |
N.A. |
ಟಿಯಾಗೋ EV ಮತ್ತು MG ಕಾಮೆಟ್ EV ಯ ಮಧ್ಯಮ-ಶ್ರೇಣಿಯ ಆವೃತ್ತಿಯು 3.3 kW AC ಚಾರ್ಜರ್ ಅನ್ನು ಬಳಸುತ್ತವೆ ಮತ್ತು ಚಾರ್ಜಿಂಗ್ ಸಮಯ ಬಹುತೇಕ ಸಮಾನವಾಗಿರುತ್ತದೆ. ಆದರೆ, MG ಕಾಮೆಟ್ EVಗಿಂತ ಭಿನ್ನವಾಗಿ, ಟಿಯಾಗೋ EV 50 kW ಡಿಸಿ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ಕೇವಲ 58 ನಿಮಿಷಗಳಲ್ಲಿ ಅದರ ಬ್ಯಾಟರಿಯನ್ನು ಶೇ.10 ರಿಂದ ಶೇ.80ರಷ್ಟು ಚಾರ್ಜ್ ಮಾಡಬಲ್ಲದು.
ಟಿಯಾಗೋ EVಯ ದೀರ್ಘ ಶ್ರೇಣಿಯ ಆವೃತ್ತಿಯು, ಕಡಿಮೆ ಚಾರ್ಜಿಂಗ್ ಸಮಯಕ್ಕಾಗಿ 7.2 kW AC ಚಾರ್ಜರ್ ಅನ್ನು ಕೂಡ ಬಳಸಬಹುದು.
ದರ ಪಟ್ಟಿ
ಟಾಟಾ ಟಿಯಾಗೋ EV |
MG ಕಾಮೆಟ್ EV |
ಪೇಸ್ - 6.99 ಲಕ್ಷ ರೂ. |
|
XE ಮಧ್ಯಮ ಶ್ರೇಣಿ - 7.99 ಲಕ್ಷ ರೂ. |
ಪ್ಲೇ - 7.88 ಲಕ್ಷ ರೂ. |
XT ಮಧ್ಯಮ ಶ್ರೇಣಿ - 8.99 ಲಕ್ಷ ರೂ. |
ಪ್ಲಷ್ - 8.58 ಲಕ್ಷ ರೂ. |
XT ದೀರ್ಘ ಶ್ರೇಣಿ - 9.99ಲಕ್ಷ ರೂ. |
ಎಲ್ಲಾ ದರಗಳು ದೆಹಲಿ ಎಕ್ಸ್-ಶೋರೂಂ ದರಗಳಾಗಿವೆ
- ಮಧ್ಯಮ-ಶ್ರೇಣಿಯ XE ವೇರಿಯಂಟ್‌ಗೆ ಹೋಲಿಸಿದರೆ MG ಕಾಮೆಟ್ EVಯ ಬೇಸ್-ಸ್ಪೆಕ್ ವೇರಿಯಂಟ್ 1 ಲಕ್ಷ ರೂ. ಕಡಿಮೆ ದರದಲ್ಲಿದೆ. ಈ ನಡುವೆ, ಎರಡು-ಡೋರ್‌ನ ಮೈಕ್ರೋ EVಯ ಟಾಪ್ ಎಂಡ್ ವೇರಿಯಂಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಟಾಪ್-ಸ್ಪೆಕ್ ಲಾಂಗ್ ರೇಂಜ್ ವೇರಿಯಂಟ್‌ಗಿಂತ ಸುಮಾರು 3 ಲಕ್ಷ ರೂ. ಅಗ್ಗದ ದರದಲ್ಲಿ ದೊರೆಯಲಿದೆ.
- ಆದರೆ, ಟಿಯಾಗೋ EVಯ ಮಧ್ಯಮ ಶ್ರೇಣಿಯ ವೇರಿಯಂಟ್‌ಗಳು ಮತ್ತು ಮಿಡ್-ಸ್ಪೆಕ್ ಮತ್ತು ಟಾಪ್-ಸ್ಪೆಕ್ ಕಾಮೆಟ್ EVಯ ವೇರಿಯಂಟ್‌ಗಳ ಬೆಲೆ ಆಸುಪಾಸುನಲ್ಲಿದೆ. (ಪರಸ್ಪರ 50,000 ರೂ. ಒಳಗೆ) ಎರಡನೆಯದು ಇನ್ನೂ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ.
- ಟಾಟಾದ ಪ್ರವೇಶ ಮಟ್ಟದ EVಯ ದರ ಮಿಡ್-ಸ್ಪೆಕ್ ಕಾಮೆಟ್ EVಗಿಂತ 11,000 ರೂ. ಹೆಚ್ಚಿದೆ. ಎಂಜಿ ಕಾಮೆಟ್ ಇವಿಯ ಟಾಪ್-ಸ್ಪೆಕ್ ಪ್ಲಶ್ ವೇರಿಯಂಟ್ ಕೂಡ ಟಿಯಾಗೋ EV XT ಮಧ್ಯಮ ಶ್ರೇಣಿಯ ವೇರಿಯಂಟ್ ಗೆ ಹೋಲಿಸಿದರೆ 41,000 ರೂ.ಗಳಷ್ಟು ಕಡಿತಗೊಳಿಸಿದೆ.
-
ಮಿಡ್-ಸ್ಪೆಕ್ ಕಾಮೆಟ್ EV ಪ್ಲೇ ವೇರಿಯಂಟ್, ಡ್ಯುಯಲ್ 10.25-ಇಂಚಿನ ಪರದೆಗಳು ( ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇ), 2-ಸ್ಪೀಕರ್ ಸೌಂಡ್ ಸಿಸ್ಟಂ ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ORVM ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ವೈಶಿಷ್ಟ್ಯಗಳು. ಟಿಯಾಗೋ EV ಯ ಬೇಸ್-ಸ್ಪೆಕ್ XE ವೇರಿಯಂಟ್‌ನಲ್ಲಿ ಇಲ್ಲ.
- ಮಿಡ್-ಸ್ಪೆಕ್ XT ಮಧ್ಯಮ ಶ್ರೇಣಿಯ ಟಿಯಾಗೋ EV, 7-ಇಂಚಿನ ಟಚ್‌ಸ್ಕ್ರೀನ್, 4-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಎಲೆಕ್ಟ್ರಾನಿಕ್ ORVM ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆದರೆ, ಟಿಯಾಗೊ EV ಯ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್ ಇರುವ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಕಾಮೆಟ್ ಇವಿಯಲ್ಲಿ ವೈರ್‌ಲೆಸ್ ಬೆಂಬಲವನ್ನು ಹೊಂದಿದೆ.
- ಟಿಯಾಗೋ EV ತನ್ನ ಬೇಸ್-ಸ್ಪೆಕ್ ವೇರಿಯಂಟ್ ಸ್ವಯಂಚಾಲಿತ AC ಯೊಂದಿಗೆ ಬರುತ್ತದೆ. MG ಕಾಮೆಟ್ EV ಇದನ್ನು ಹೊಂದಿಲ್ಲ.
- MG ಕಾಮೆಟ್ EV ಯ ಟಾಪ್-ಸ್ಪೆಕ್ ಟ್ರಿಮ್ ಸ್ಮಾರ್ಟ್ ಸ್ಟಾರ್ಟ್ ಸಿಸ್ಟಮ್ ಅನ್ನು ಹೊಂದಿದೆ. (ಇದರಲ್ಲಿ ಯಾವುದೇ ಬಟನ್ ಇಲ್ಲ. ಇದನ್ನು ಪ್ರಾರಂಭಿಸಲು ಕಾರಿನಲ್ಲಿರುವ ಕೀಲಿಯೊಂದಿಗೆ ಅಕ್ಸಲೇಟರ್ ಪೆಡಲ್ ಅನ್ನು ಒತ್ತಬೇಕು.) ಜೊತೆಗೆ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟಿಲ್ಟ್ ಹೊಂದಾಣಿಕೆ ಸ್ಟೀರಿಂಗ್ ವೀಲ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.
- ಸುರಕ್ಷತೆಯ ದೃಷ್ಟಿಯಿಂದ, ಎರಡೂ EVಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತವೆ. ಟಿಯಾಗೋ EV ಯ ಮಿಡ್-ಸ್ಪೆಕ್ XT ವೇರಿಯಂಟ್ ರಿಯರ್ ಪಾರ್ಕಿಂಗ್ ಕ್ಯಾಮೆರಾ ಹೊಂದಿಲ್ಲ.
- ಟಾಟಾ ಟಿಯಾಗೊ EV ಯ ಪ್ರವೇಶ ಮಟ್ಟದ ದೀರ್ಘ ಶ್ರೇಣಿಯ ವೇರಿಯಂಟ್, ಕಾಮೆಟ್ EV ಯ ಟಾಪ್-ಸ್ಪೆಕ್ ಪ್ಲಶ್ ವೇರಿಯಂಟ್‌ಗಿಂತ 1.41 ಲಕ್ಷ ರೂ. ಹೆಚ್ಚಿದೆ.
ಮುಕ್ತಾಯ
MG ಕಾಮೆಟ್ EV ಟಾಟಾ ಟಿಯಾಗೊ EV ಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತದೆ ಎಂಬುದು ಸ್ಪಷ್ಟವಾಗಿದೆ. ಆದರೆ ಇದರಲ್ಲಿ ಕ್ಯಾಬಿನ್ ಗಾತ್ರ ಮತ್ತು ಶ್ರೇಣಿಯ ಅನನುಕೂಲತೆಗಳು ಇವೆ. ಎರಡೂ ವಾಹನಗಳು 300 ಕಿಲೋಮೀಟರ್‌ಗಿಂತ ಕಡಿಮೆ ಶ್ರೇಣಿಯನ್ನು ಹೊಂದಿವೆ. ಎರಡೂ ಪ್ರಾಥಮಿಕವಾಗಿ ಸಿಟಿ ಡ್ರೈವಿಂಗ್‌ಗೆ ಸೂಕ್ತವಾಗಿದೆ. ಆದರೆ ಈ ಪ್ರವೇಶ ಮಟ್ಟದ EV ಆಯ್ಕೆಗಳು ಇದಕ್ಕೆ ವಿಭಿನ್ನ ಧೋರಣೆಗಳನ್ನೂ ಹೊಂದಿವೆ.
ನೀವು ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸುತ್ತಿದ್ದು ಮತ್ತು ರಾತ್ರಿಯಿಡೀ ಚಾರ್ಜ್ ಮಾಡುವ ಆಯ್ಕೆಯ EV ಅನ್ನು ನೀವು ಬಯಸುತ್ತಿದ್ದರೆ, MG ಕಾಮೆಟ್ EV ಸೂಕ್ತ. ಇದು ನೀವು ನೀಡುವ ಹಣಕ್ಕೆ ಹೆಚ್ಚು ಮೌಲ್ಯದ ಆಯ್ಕೆಯನ್ನು ಒದಗಿಸುತ್ತದೆ. ಆದರೆ, ನೀವು ವಿಸ್ತೃತ ಶ್ರೇಣಿ, ಶಕ್ತಿ ಮತ್ತು ಹೆಚ್ಚಿನ ಸ್ಥಳಾವಕಾಶಕ್ಕೆ ಆದ್ಯತೆ ನೀಡಿದರೆ, ಪ್ರೀಮಿಯಂನಲ್ಲಿದ್ದರೂ ಟಿಯಾಗೋ EV ಅನ್ನು ಪರಿಗಣಿಸಬಹುದು. ನೀವು ನಗರ ಪ್ರಯಾಣಕ್ಕಿಂತ ದೀರ್ಘಾವಧಿಯ ಪ್ರಯಾಣಕ್ಕೆ ಅನುಕೂಲಕರವಾದ ಮತ್ತು ವೇಗವಾದ ಚಾರ್ಜಿಂಗ್ ಅವಕಾಶ ಕಲ್ಪಿಸುವ ಪ್ರವೇಶ ಮಟ್ಟದ EV ಗಾಗಿ ಹುಡುಕುತ್ತಿದ್ದರೆ, ಟಿಯಾಗೋ EV ಯ ದೀರ್ಘ ಶ್ರೇಣಿಯ ವೇರಿಯಂಟ್‌ಗಳು ಬಜೆಟ್‌ನಲ್ಲಿವೆ.
ಆದ್ದರಿಂದ ನೀವು ಟಿಯಾಗೋ EV ಮತ್ತು ಕಾಮೆಟ್ EV ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ ಮತ್ತು ಏಕೆ? ಕೆಳಗಿನ ಕಾಮೆಂಟ್‌ಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.
ಇದನ್ನೂ ಓದಿ :ಟಾಟಾ ಟಿಯಾಗೋ ಇವಿ ಆಟೋಮ್ಯಾಟಿಕ್