ಬಹುನೀರಿಕ್ಷಿತ ಎಂಜಿ ಕಾಮೆಟ್ ಇವಿಯಲ್ಲಿ ಈ ಬಣ್ಣಗಳ ಆಯ್ಕೆ ಲಭ್ಯ..!
ಎಂಜಿ ಕಾಮೆಟ್ ಇವಿ ಗಾಗಿ tarun ಮೂಲಕ ಏಪ್ರಿಲ್ 25, 2023 10:07 pm ರಂದು ಪ್ರಕಟಿಸಲಾಗಿದೆ
- 14 Views
- ಕಾಮೆಂಟ್ ಅನ್ನು ಬರೆಯಿರಿ
ನಾಲ್ಕು ಬಣ್ಣಗಳೊಂದಿಗೆ ನೀವು ವಿವಿಧ ಶೈಲಿಯ ಡೆಕಲ್‌ಗಳ ಹಲವಾರು ಕಸ್ಟಮೈಸೇಶನ್ ಪ್ಯಾಕ್‌ಗಳ ಆಯ್ಕೆಯನ್ನು ಸಹ ಪಡೆದುಕೊಳ್ಳುವಿರಿ.
ಎಂಜಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ತನ್ನ ಅಲ್ಟ್ರಾ ಕಾಂಪ್ಯಾಕ್ಟ್ ಕಾಮೆಟ್ ಇವಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದು ಈಗಾಗಲೇ ವಿಶಿಷ್ಟ ಮತ್ತು ಚಮತ್ಕಾರಿ ಸ್ಟೈಲಿಂಗ್‌ನೊಂದಿಗೆ ಕಂಗೊಳಿಸುತ್ತಿರುವಂತೆಯೇ, ಎಂಜಿ ಅನೇಕ ಬಾಹ್ಯ ವಿಷುಯಲ್ ಆಯ್ಕೆಗಳೊಂದಿಗೆ ಎಲೆಕ್ಟ್ರಿಕ್ ಹ್ಯಾಚ್ ಅನ್ನು ಒದಗಿಸುತ್ತದೆ. ಐದು ಮೂಲ ಬಣ್ಣದ ಆಯ್ಕೆಗಳು ಮತ್ತು ಥೀಮ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ಒಳಗೊಂಡಂತೆ 15 ಕ್ಕೂ ಹೆಚ್ಚು ಕಸ್ಟಮೈಸೇಶನ್ ಪ್ಯಾಕ್‌ಗಳಲ್ಲಿ ಲಭ್ಯವಿರುತ್ತವೆ!
ಬಣ್ಣದ ಆಯ್ಕೆಗಳು
ಕಾಮೆಟ್ ಇವಿ ಮೂರು ಮೊನೊಟೋನ್ ಶೇಡ್‌ಗಳು ಮತ್ತು ಎರಡು ಡ್ಯುಯಲ್-ಟೋನ್ ಶೇಡ್‌ಗಳ ಆಯ್ಕೆಯನ್ನು ಪಡೆಯುತ್ತದೆ. ಅವು ಈ ಕೆಳಗಿನಂತಿವೆ:
ಇದು ಸ್ಕಲ್ ಪ್ಯಾಕ್ ಸ್ಟಿಕ್ಕರ್ ಪ್ಯಾಕ್‌ನೊಂದಿಗೆ ಪ್ರದರ್ಶಿಸಲಾದ ಅದರ ಕ್ಯಾಂಡಿ ವೈಟ್ ಬಣ್ಣವಾಗಿದೆ.
ಯಾವುದೇ ಸ್ಟಿಕ್ಕರ್‌ಗಳಿಲ್ಲದೆ ಪ್ರದರ್ಶಿಸಲಾದ ಕಾಮೆಟ್ ಇವಿಗೆ ಅರೋರಾ ಸಿಲ್ವರ್ ಫಿನಿಶ್ ನೀಡಲಾಗಿದೆ.
ಕಾಮೆಟ್ ಇವಿಯನ್ನು ಸ್ಟಾರಿ ಬ್ಲ್ಯಾಕ್ ಕಲರ್‌ನಲ್ಲಿ ಕೆಂಪು ಹೈಲೈಟ್‌ಗಳು ಮತ್ತು ಫ್ಲಾಕ್ಸ್ ಆಕ್ಸೆಸರೀಸ್ ಪ್ಯಾಕ್‌ನೊಂದಿಗೆ ಪ್ರದರ್ಶಿಸಲಾಗಿದೆ.
ಇದು ಸ್ಟಾರಿ ಬ್ಲ್ಯಾಕ್ ರೂಫ್‌ನೊಂದಿಗೆ ಕ್ಯಾಂಡಿ ವೈಟ್ ಶೇಡ್ ಮತ್ತು ಬೀಚ್ ಬೇ ಆಕ್ಸೆಸರೀಸ್ ಪ್ಯಾಕ್‌ನೊಂದಿಗೆ ಕೂಲ್ ಸಿಯಾನ್ ಎಲಿಮೆಂಟ್‌ಗಳನ್ನು ಪಡೆದುಕೊಂಡಿದೆ.
ಸ್ಟಾರಿ ಬ್ಲ್ಯಾಕ್ ರೂಫ್‌ನೊಂದಿಗೆ ಆಪಲ್ ಗ್ರೀನ್ ಶೇಡ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್‌ನ ಅಧಿಕೃತ ಚೊಚ್ಚಲ ಶೇಡ್ ಆಗಿದೆ.
ಇದನ್ನೂ ಓದಿ: ಈ 10 ಇಮೇಜ್‌ಗಳಿಂದ ಎಂಜಿ ಕಾಮೆಟ್ ಇವಿಯ ಹೊರಭಾಗದ ಚಿತ್ರಣ ಪಡೆದುಕೊಳ್ಳಿ
ಸ್ಟಿಕ್ಕರ್ ಪ್ಯಾಕ್ ಮತ್ತು ಥೀಮ್ ಕಸ್ಟಮೈಜೇಶನ್
ಈ ಪ್ರತಿಯೊಂದು ಬಣ್ಣಗಳೊಂದಿಗೆ ನೀವು 16 ಸ್ಟಿಕ್ಕರ್ ಅಥವಾ ಗ್ರಾಫಿಕ್ ಪ್ಯಾಕ್‌ಗಳನ್ನು ಆಯ್ಕೆ ಮಾಡಬಹುದು. ಅದರಲ್ಲಿ ಕಂಪನಿಯು ಈ ಕೆಳಗಿನವುಗಳನ್ನು ಪ್ರದರ್ಶಿಸಿದೆ:
- ಗೇಮರ್ ಪ್ಯಾಕ್
- ನೈಟ್ ಕೆಫೆ
- ನೈಟ್ ಕೆಫೆ
- ಬ್ಲಾಸಮ್
- ಫ್ಲೋರೆಸ್ಟಾ
ಈ ಕಸ್ಟಮೈಸೇಶನ್‌ಗಳು ಮತ್ತು ವೈಯಕ್ತೀಕರಿಸಿದ ಪ್ಯಾಕ್‌ಗಳೊಂದಿಗೆ, ಎಂಜಿ ಕಾಮೆಟ್ ಇವಿಯು ರಸ್ತೆಯಲ್ಲಿ ಎದ್ದು ಕಾಣುವಂತೆ ಮಾಡಲು 20 ಕ್ಕೂ ಹೆಚ್ಚು ಆಯ್ಕೆಗಳನ್ನು ನೀಡುತ್ತಿದೆ.
ಸ್ಪೆಕ್‌ಗಳು ಮತ್ತು ವೈಶಿಷ್ಟ್ಯಗಳು
ನಾವು ಹಿಂದೆ ವರದಿ ಮಾಡಿದ ಸೋರಿಕೆಯಾದ ದಾಖಲೆಯ ಪ್ರಕಾರ, ಕಾಮೆಟ್ ಇವಿ 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಸಂಪೂರ್ಣ ಚಾರ್ಜ್‌ನಲ್ಲಿ 230 ಕಿಮೀ ವ್ಯಾಪ್ತಿಯನ್ನು ಹೊಂದಿರುತ್ತದೆ. ಡ್ಯುಯಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳು, 10.25-ಇಂಚಿನ ಡಿಸ್‌ಪ್ಲೇಗಳು (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ಸ್ ಡಿಸ್ಪ್ಲೇ), ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.
ಎಂಜಿ ಕಾಮೆಟ್ ಇವಿಯ ಬೆಲೆಯನ್ನು 10 ಲಕ್ಷ ರೂ.ದಿಂದ 15 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ನಿರೀಕ್ಷಿಸಲಾಗಿದೆ, ಇದು ಟಾಟಾ ಟಿಯಾಗೊ ಇವಿ ಮತ್ತು ಸಿಟ್ರಾನ್ eC3 ಗೆ ಪ್ರತಿಸ್ಪರ್ಧಿಯಾಗಿದೆ.
0 out of 0 found this helpful