MG Windsor EVಯ ಹೊರಭಾಗದ ವಿನ್ಯಾಸದ ಮತ್ತೊಂದು ಟೀಸರ್ ಔಟ್
ಎಮ್‌ಜಿ ವಿಂಡ್ಸರ್ ಇವಿಯ ಟೀಸರ್ ಅನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗಿದೆ, ಈ ಬಾರಿ ಅದರ ಬಾಹ್ಯ ವಿನ್ಯಾಸದ ಒಂದು ನೋಟವನ್ನು ನೀಡುತ್ತದೆ
-
ವಿಂಡ್ಸರ್ ಇವಿ ಭಾರತದಲ್ಲಿ ಎಮ್‌ಜಿಯ ಮೂರನೇ ಇವಿ ಆಗಿರುತ್ತದೆ.
-
ಹೊಸ ಟೀಸರ್ ಎಲ್‌ಇಡಿ ಹೆಡ್‌ಲೈಟ್‌ಗಳು, ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳು ಮತ್ತು 18-ಇಂಚಿನ ಅಲಾಯ್ ವೀಲ್ ಇರುವುದನ್ನು ಖಚಿತಪಡಿಸುತ್ತದೆ.
-
ಹಿಂದಿನ ಟೀಸರ್‌ಗಳು 15.6-ಇಂಚಿನ ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಫಿಕ್ಸ್ ಆದ ಪನೋರಮಿಕ್ ಸನ್‌ರೂಫ್ ಮತ್ತು 135-ಡಿಗ್ರಿ ಒರಗುವ ಹಿಂಬದಿಯ ಸೀಟ್ ಇರುವುದನ್ನು ದೃಢಪಡಿಸಿವೆ.
-
ಇತರ ನಿರೀಕ್ಷಿತ ಫೀಚರ್‌ಗಳಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, 6 ಏರ್‌ಬ್ಯಾಗ್‌ಗಳು ಮತ್ತು ADAS ಸೇರಿವೆ.
-
ಇದು ಪರಿಷ್ಕೃತ ARAI-ರೇಟೆಡ್ ರೇಂಜ್‌ನೊಂದಿಗೆ 50.6 ಕಿ.ವ್ಯಾಟ್ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ.
-
ಇದರ ಬೆಲೆಗಳು 20 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 11ರಂದು ನಿಗದಿಯಾಗಿರುವ ಎಮ್‌ಜಿ ವಿಂಡ್ಸರ್ ಇವಿಯ ಬಿಡುಗಡೆಗಾಗಿ ದಿನಗಣನೆ ಪ್ರಾರಂಭವಾಗಿದ್ದು, ಈ ಕಾರು ತಯಾರಕರು ಈ ಮುಂಬರುವ ಇವಿಯ ಕುರಿತ ಮಾಹಿತಿಯನ್ನು ಒಳಗೊಂಡ ಕೆಲವು ಟೀಸರ್‌ಗಳನ್ನು ಈಗಾಗಳೆ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಎಮ್‌ಜಿಯು ಈ ಕ್ರಾಸ್ಒವರ್ ಇವಿಯ ಹೊರಭಾಗದ ಟೀಸರ್‌ನ ಬಿಡುಗಡೆ ಮಾಡಿದ್ದು, ಇದರಲ್ಲಿ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳ ಗ್ಲಿಂಪ್ಸಸ್ ಮತ್ತು ಉತ್ಪಾದನೆಗೆ ಅಂತಿಮವಾಗಿರುವ ಮೊಡೆಲ್‌ನ ಭಾಗವಾಗಲಿರುವ ಅಲಾಯ್ ವೀಲ್ ವಿನ್ಯಾಸವನ್ನು ತೋರಿಸುತ್ತದೆ. ಈ ಹೊಸ ಟೀಸರ್‌ನಿಂದ ನಾವು ಗುರುತಿಸಬಹುದಾದ ಎಲ್ಲವನ್ನೂ ವಿವರವಾಗಿ ತಿಳಿಯೋಣ:
ನಾವು ಗಮನಿಸಿದ್ದು ಏನು?
ಎಂಜಿ ವಿಂಡ್ಸರ್ ಇವಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವುಲಿಂಗ್ ಕ್ಲೌಡ್ ಇವಿ ಆಧರಿಸಿದೆ. ಹೊಸ ಟೀಸರ್ ಭಾರತೀಯ ಮೊಡೆಲ್‌ನ ವಿನ್ಯಾಸವು ಅಂತರರಾಷ್ಟ್ರೀಯ ಮೊಡೆಲ್ ಅನ್ನು ಹೋಲುತ್ತದೆ ಎಂದು ಖಚಿತಪಡಿಸುತ್ತದೆ. ಅದರಂತೆಯೇ, ಮುಂಭಾಗದಲ್ಲಿ ಇದು ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಕನೆಕ್ಟೆಡ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆಯುತ್ತದೆ. ವಿಭಿನ್ನವಾದ ಸಂಗತಿಯೆಂದರೆ, ಇಂಡಿಯಾ-ಸ್ಪೆಕ್ ಕ್ಲೌಡ್ ಇವಿಯು ಮುಂಭಾಗದ ಬಂಪರ್‌ನ ಮೇಲೆ ಮೋರಿಸ್ ಗ್ಯಾರೇಜ್ ಅಕ್ಷರವನ್ನು ಪಡೆಯುತ್ತದೆ. ಹಾಗೆಯೇ, ಎಮ್‌ಜಿ ಲೋಗೋ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್‌ನ ಕೆಳಗೆ ಇರಿಸಲಾಗಿದೆ.
ಅದರ ಮುಕ್ತ-ಹರಿಯುವ ವಿನ್ಯಾಸ ಮತ್ತು ಏರೋಡೈನಾಮಿಕಲಿ ವಿನ್ಯಾಸಗೊಳಿಸಲಾದ 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು (ಅಂತರರಾಷ್ಟ್ರೀಯ-ಸ್ಪೆಕ್ ಕ್ಲೌಡ್ ಇವಿಯಂತೆಯೇ ವಿನ್ಯಾಸ) ನಮಗೆ ನೀಡುವುದನ್ನು ಹೊರತುಪಡಿಸಿ, ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚಿನದನ್ನು ಬಹಿರಂಗಪಡಿಸಲಾಗಿಲ್ಲ. ಚಾರ್ಜಿಂಗ್ ಫ್ಲಾಪ್ ಅನ್ನು ಮುಂಭಾಗದ ಫೆಂಡರ್‌ನಲ್ಲಿ ನೀಡಲಾಗಿದೆ. ಹಿಂಭಾಗದಲ್ಲಿ, ವಿಂಡ್ಸರ್ ಇವಿಯು ಕನೆಕ್ಟೆಡ್ ಎಲ್‌ಇಡಿ ಟೈಲ್ ಲೈಟ್ ಸೆಟಪ್ ಅನ್ನು ಪಡೆಯುತ್ತದೆ, ಅದು ಇವಿಯ ಹಿಂಭಾಗದ ಬಂಪರ್‌ನಾದ್ಯಂತ ವ್ಯಾಪಿಸುತ್ತದೆ. ಇದು ಟೈಲ್ ಲೈಟ್‌ಗಳ ಅಡಿಯಲ್ಲಿ ವಿಂಡ್ಸರ್ ಬ್ಯಾಡ್ಜಿಂಗ್ ಅನ್ನು ಸಹ ಪಡೆಯುತ್ತದೆ.
ಇದನ್ನು ಸಹ ಓದಿ: ಬಿಡುಗಡೆಗೆ ಮೊದಲೇ MG Windsor EVಯ ಆಫ್‌ಲೈನ್ ಬುಕಿಂಗ್‌ಗಳು ಪ್ರಾರಂಭ
ಎಮ್‌ಜಿ ವಿಂಡ್ಸರ್ ಇವಿ: ಸಮಗ್ರ ಚಿತ್ರಣ
ಜೆಡ್‌ಎಸ್ ಇವಿ ಮತ್ತು ಕಾಮೆಟ್ ಇವಿಯ ನಂತರ ಎಮ್‌ಜಿ ವಿಂಡ್ಸರ್ ಇವಿ ಭಾರತದಲ್ಲಿ ಎಮ್‌ಜಿಯಿಂದ ನೀಡಲಾಗುತ್ತಿರುವ ಮೂರನೇ ಇವಿ ಕೊಡುಗೆಯಾಗಿದೆ. ಹಿಂದಿನ ಸ್ಪೈ ಶಾಟ್‌ಗಳು ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಬಹಿರಂಗಪಡಿಸಿವೆ. 15.6-ಇಂಚಿನ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ( ಅಂದಾಜು 8.8-ಇಂಚಿನ ಸ್ಕ್ರೀನ್) ಮತ್ತು ಫಿಕ್ಸ್ ಆಗಿರುವ ಪನರೋಮಿಕ್ ಸನ್‌ರೂಫ್ ಇರುವುದನ್ನು ದೃಢೀಕರಿಸಲಾಗಿದೆ. ಇದು 135 ಡಿಗ್ರಿ ರಿಕ್ಲೈನಿಂಗ್ ಹಿಂಭಾಗದ ಬೆಂಚ್ ಸೀಟ್ ಮತ್ತು ಹಿಂಭಾಗದ ಎಸಿ ವೆಂಟ್‌ಗಳನ್ನು ಸಹ ಪಡೆಯುತ್ತದೆ. ಇದು ವೈರ್‌ಲೆಸ್ ಫೋನ್ ಚಾರ್ಜರ್, ಎಲೆಕ್ಟ್ರಿಕಲ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಆರು ಏರ್‌ಬ್ಯಾಗ್‌ಗಳು (ಎಲ್ಲಾ ಆವೃತ್ತಿಗಳಲ್ಲಿ), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸಹ ಪಡೆಯಬಹುದು. ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಫೀಚರ್‌ಗಳನ್ನು ಸಹ ನೀಡಬಹುದು.
ಎಂಜಿ ವಿಂಡ್ಸರ್ ಇವಿ ಎಲೆಕ್ಟ್ರಿಕ್ ಪವರ್‌ಟ್ರೇನ್
ಎಮ್‌ಜಿ ವಿಂಡ್ಸರ್ ಇವಿ 50.6 ಕಿ.ವ್ಯಾಟ್ ಬ್ಯಾಟರಿಯನ್ನು (ಅಂತರರಾಷ್ಟ್ರೀಯ ಮೊಡೆಲ್‌ನಂತೆಯೇ) ಪಡೆಯುವ ನಿರೀಕ್ಷೆಯಿದೆ, ಇದು ಫ್ರಂಟ್-ವೀಲ್-ಡ್ರೈವ್ ಮೋಟರ್ ಅನ್ನು ಪವರ್ ಮಾಡುತ್ತದೆ, 136 ಪಿಎಸ್ ಮತ್ತು 200 ಎನ್‌ಎಮ್ ಅನ್ನು ಉತ್ಪಾದಿಸುತ್ತದೆ. ಇಂಡೋನೇಷ್ಯಾ-ಸ್ಪೆಕ್ ಆವೃತ್ತಿಯು 460 ಕಿಮೀ ರೇಂಜ್ ಅನ್ನು ನೀಡುತ್ತದೆ ಎಂದು ಕ್ಲೈಮ್ ಮಾಡಲಾಗಿದೆ, ಆದರೆ ಭಾರತೀಯ ಮೊಡೆಲ್ ARAI ಪರೀಕ್ಷೆಯ ನಂತರ ಹೆಚ್ಚಿದ ರೆಂಜ್ ಅನ್ನು ಪಡೆಯಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
MG ವಿಂಡ್ಸರ್ EV ಯ ಬೆಲೆಯು ರೂ 20 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್-ಶೋರೂಮ್), ಇದು ಎಮ್‌ಜಿ ಜೆಡ್‌ಎಸ್ ಇವಿ ಗೆ ಹೋಲಿಸಿದರೆ ಹೆಚ್ಚು ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಲಿದೆ ಮತ್ತು ಟಾಟಾ ನೆಕ್ಸಾನ್ EV, ಮಹೀಂದ್ರಾ XUV400 EV ಮತ್ತು ಟಾಟಾ ಕರ್ವ್ ನ ಕೆಲವು ವೇರಿಯಂಟ್ ಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
ಎಮ್‌ಜಿ ವಿಂಡ್ಸರ್ ಇವಿಯ ಹೊರಭಾಗದ ವಿನ್ಯಾಸದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ