• English
  • Login / Register

ಯಾವುದೇ ಕವರ್‌ ಇಲ್ಲದೇ ಮೊದಲ ಬಾರಿಗೆ ರಸ್ತೆಯಲ್ಲಿ ಹೊಸ Honda Amaze ಪ್ರತ್ಯಕ್ಷ..!

ಹೋಂಡಾ ಅಮೇಜ್‌ 2025 ಗಾಗಿ shreyash ಮೂಲಕ ನವೆಂಬರ್ 26, 2024 06:21 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಈಗ ಮೂರನೇ ಜನರೇಶನ್‌ನ ಅಮೇಜ್, ಅದರ ಎಲ್ಲಾ-ಎಲ್‌ಇಡಿ ಹೆಡ್‌ಲೈಟ್‌ಗಳು, ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳು ಮತ್ತು ಸುತ್ತುವ ಎಲ್‌ಇಡಿ ಟೈಲ್ ಲೈಟ್‌ಗಳಿಂದಾಗಿ ಬೇಬಿ ಹೋಂಡಾ ಸಿಟಿಯಂತೆ ಕಾಣುತ್ತದೆ

New Honda Amaze Spied Uncamouflaged For The First Time

  • ಹೊಸ ಹೋಂಡಾ ಅಮೇಜ್‌ಗಾಗಿ ಆಫ್‌ಲೈನ್ ಬುಕಿಂಗ್‌ಗಳು ಈಗಾಗಲೇ ಕೆಲವು ಡೀಲರ್‌ಶಿಪ್‌ಗಳಲ್ಲಿ ಪ್ರಾರಂಭವಾಗಿದೆ. 

  • ಭಾರತದಲ್ಲಿ ಇದು ಡಿಸೆಂಬರ್ 4 ರಂದು ಮಾರುಕಟ್ಟೆಗೆ ಪ್ರವೇಶಿಸಲಿದೆ.

  • ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

  • ಸುರಕ್ಷತಾ ಫೀಚರ್‌ಗಳು 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ADAS ಅನ್ನು ಒಳಗೊಂಡಿರುತ್ತದೆ.

  • ಹೊರಹೋಗುವ ಮೊಡೆಲ್‌ನಂತೆ ಅದೇ 90 ಪಿಎಸ್‌ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ.

  • 7.50 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಬೆಲೆಗಳು ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಹೊಸ ಜನರೇಶನ್‌ನ ಹೋಂಡಾ ಅಮೇಜ್ ಡಿಸೆಂಬರ್‌ನಲ್ಲಿ ಎಲ್ಲಾ ಹೊಸ ವಿನ್ಯಾಸ ಮತ್ತು ವಿಸ್ತಾರವಾದ ಫೀಚರ್‌ಗಳೊಂದಿಗೆ ಮಾರಾಟಕ್ಕೆ ಸಿದ್ಧವಾಗಿದೆ. ಹೋಂಡಾ ಈಗಾಗಲೇ 2024ರ ಅಮೇಜ್‌ನ ಕೆಲವು ಟೀಸರ್‌ಗಳನ್ನು ವಿನ್ಯಾಸ ರೇಖಾಚಿತ್ರಗಳ ರೂಪದಲ್ಲಿ ಬಿಡುಗಡೆ ಮಾಡಿದೆ, ಅವುಗಳು ಅದರ ಒಳ ಮತ್ತು ಹೊರಭಾಗದ ನೋಟವನ್ನು ನಮಗೆ ನೀಡುತ್ತದೆ. ಇದೀಗ, ಹೊಸ ಅಮೇಜ್ ಮೊದಲ ಬಾರಿಗೆ ಯಾವುದೇ ಕವರ್‌ ಇಲ್ಲದೆ ರಸ್ತೆಯಲ್ಲಿ ಪ್ರತ್ಯಕ್ಷವಾಗಿದೆ. 

ಸ್ಪೈ ಶಾಟ್‌ನಲ್ಲಿ ಏನು ಕಾಣುತ್ತದೆ?

New Honda Amaze Spied Uncamouflaged For The First Time

ಇತ್ತೀಚಿನ ಸ್ಪೈ ಶಾಟ್‌ಗಳ ಪ್ರಕಾರ, ಹೊಸ ಹೋಂಡಾ ಅಮೇಜ್ ಈಗ ಹೋಂಡಾ ಸಿಟಿಯ ವಿನ್ಯಾಸವನ್ನು ಪ್ರತಿಬಿಂಬಿಸುತ್ತದೆ, ಆದರೂ ಹೆಚ್ಚು ಕಾಂಪ್ಯಾಕ್ಟ್ ರೂಪದಲ್ಲಿದೆ. ಇದು ಹೊಸ ಎಲ್‌ಇಡಿ ಡಿಆರ್‌ಎಲ್‌ಗಳ ಜೊತೆಗೆ ನಯವಾದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮತ್ತು ದೊಡ್ಡ ಆಯತಾಕಾರದ ಗ್ರಿಲ್ ಅನ್ನು ಪಡೆಯುತ್ತದೆ. ಆದರೆ, ಎಲ್ಇಡಿ ಫಾಗ್‌ ಲೈಟ್‌ಗಳ ಸ್ಥಾನೀಕರಣವು ಹೊರಹೋಗುವ ಮೊಡೆಲ್‌ನಲ್ಲಿ ಕಂಡುಬರುವಂತೆಯೇ ಇರುತ್ತದೆ.

ಅಮೇಜ್ ಸಬ್-4ಎಮ್‌ ಸೆಡಾನ್ ಆಗಿರುವುದರಿಂದ, ಇದು ಹೆಚ್ಚು ನೇರವಾದ ಟೈಲ್‌ಗೇಟ್ ಅನ್ನು ಹೊಂದಿದ್ದು, ಹಿಂಭಾಗದ ಓವರ್‌ಹ್ಯಾಂಗ್‌ಗಳನ್ನು ಕಡಿಮೆ ಮಾಡುತ್ತದೆ. ಸ್ಪೈ ಶಾಟ್‌ಗಳು ಅದರ ಹೊಸ ಮಲ್ಟಿ-ಸ್ಪೋಕ್ ಅಲಾಯ್‌ ವೀಲ್‌ಗಳನ್ನು ಸಹ ಬಹಿರಂಗಪಡಿಸುತ್ತವೆ, ಇದು ಸಿಟಿಯಲ್ಲಿ ಇರುವುದನ್ನು ಹೋಲುತ್ತದೆ. ವಾಸ್ತವವಾಗಿ, ಸುತ್ತುವ ಎಲ್ಇಡಿ ಟೈಲ್ ಲೈಟ್‌ಗಳು ಸಿಟಿಗೆ ಹೋಲುತ್ತವೆ.

 ಇದ್ನೂ ಓದಿ: ಭಾರತದಲ್ಲಿ ಹೊಸ Toyota Camry ಬಿಡುಗಡೆಗೆ ದಿನಾಂಕ ನಿಗದಿ

ಕ್ಯಾಬಿನ್‌ ಮತ್ತು ಫೀಚರ್‌ಗಳು

2024 Honda Amaze interior design sketch

ಹೊಸ ಜನರೇಶನ್‌ನ ಹೋಂಡಾ ಅಮೇಜ್‌ನ ಕ್ಯಾಬಿನ್‌ ಕುರಿತ ಸ್ಪೈಶಾಟ್‌ಗಳು ಇನ್ನೂ ಸೆರೆಯಾಗದಿದ್ದರೂ, ಈ ಹಿಂದೆ ಬಹಿರಂಗಪಡಿಸಿದ ವಿನ್ಯಾಸದ ರೇಖಾಚಿತ್ರಗಳು ಎಲಿವೇಟ್ ಮತ್ತು ಸಿಟಿಯಲ್ಲಿ ಕಂಡುಬರುವ ರೀತಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿರುತ್ತದೆ ಎಂದು ತೋರಿಸುತ್ತದೆ.

ಫೀಚರ್‌ಗಳ ವಿಷಯದಲ್ಲಿ, ಇದು ಆಟೋ ಎಸಿ ಜೊತೆಗೆ ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಬರಲಿದೆ. ಇದರ ಸುರಕ್ಷತಾ ಕಿಟ್ ಈಗ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಒಳಗೊಂಡಿರುತ್ತದೆ. ರಿಯರ್ ವ್ಯೂ ಕ್ಯಾಮೆರಾ ಮತ್ತು EBD ಜೊತೆಗೆ ABS ನಂತಹ ಫೀಚರ್‌ಗಳನ್ನು ಹೊರಹೋಗುವ ಆವೃತ್ತಿಯಿಂದ ಎರವಲು ಪಡೆಯಲಾಗುತ್ತದೆ. ಡಿಸೈನ್ ಸ್ಕೆಚ್ ಟೀಸರ್‌ನಲ್ಲಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನ ಡಿಸ್ಪ್ಲೇಯಲ್ಲಿ ಸುಳಿವು ನೀಡಿರುವಂತೆ ಅಮೇಜ್ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯಬಹುದು.

ಅದೇ ಎಂಜಿನ್ ಅನ್ನು ಬಳಸುವ ಸಾಧ್ಯತೆ 

ಅಮೇಜ್‌ನ ಹೊರಹೋಗುವ ಆವೃತ್ತಿಯೊಂದಿಗೆ ನೀಡಲಾದ ಅದೇ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ 4-ಸಿಲಿಂಡರ್‌ ಪೆಟ್ರೋಲ್ ಎಂಜಿನ್ ಅನ್ನು ಹೋಂಡಾವು ಉಳಿಸಿಕೊಳ್ಳುವ ಸಾಧ್ಯತೆ ಇದೆ. ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ 4-ಸಿಲಿಂಡರ್‌ ಪೆಟ್ರೋಲ್ ಎಂಜಿನ್

ಪವರ್‌

90 ಪಿಎಸ್‌

ಟಾರ್ಕ್‌

110 ಎನ್‌ಎಮ್‌

ಟ್ರಾನ್ಸ್‌ಮಿಷನ್‌

5-ಸ್ಪೀಡ್‌ ಮ್ಯಾನುವಲ್‌, CVT*

*CVT = ಕಂಟಿನ್ಯೂವಸ್ಲಿ ವೇರಿಯಬಲ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌

2024 ಹೋಂಡಾ ಅಮೇಜ್‌: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2025ರ ಹೋಂಡಾ ಅಮೇಜ್ ಬೆಲೆ 7.5 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಸಬ್‌-4ಎಮ್‌ ಸೆಡಾನ್ ಸೆಗ್ಮೆಂಟ್‌ನಲ್ಲಿ ಟಾಟಾ ಟಿಗೊರ್, ಹ್ಯುಂಡೈ ಔರಾ ಮತ್ತು ಮಾರುತಿ ಡಿಜೈರ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಫೋಟೋಗಳ ಮೂಲ

ಇನ್ನಷ್ಟು ಓದಿ : ಅಮೇಜ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಅಮೇಜ್‌ 2025

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience