ಹೊಸ ಇಂಡಿಯಾ-ಸ್ಪೆಕ್ Maruti Swiftನ ಇಂಟೀರಿಯರ್‌ನ ಸ್ಪೈ ಶಾಟ್‌ಗಳು, ಶೀಘ್ರದಲ್ಲೇ ಲಾಂಚ್ ಆಗುವ ಸಾಧ್ಯತೆ
ಮಾರುತಿ ಸ್ವಿಫ್ಟ್ ಗಾಗಿ ansh ಮೂಲಕ ಏಪ್ರಿಲ್ 12, 2024 06:20 pm ರಂದು ಪ್ರಕಟಿಸಲಾಗಿದೆ
- 70 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಪೈ ಮಾಡಿರುವ ಕ್ಯಾಬಿನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುವ ಹೊಸ-ಜೆನ್ ಸ್ವಿಫ್ಟ್‌ನಲ್ಲಿರುವಂತೆಯೇ ಕಾಣುತ್ತದೆ
- ಭಾರತದಲ್ಲಿ ಬರಲಿರುವ ಹೊಸ-ಜೆನ್ ಸ್ವಿಫ್ಟ್ ದೊಡ್ಡದಾದ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯಲಿದೆ.
- ಇದು ಹೊಸ ಡ್ಯಾಶ್‌ಬೋರ್ಡ್, ಸ್ಲೀಕ್ ಆಗಿರುವ AC ವೆಂಟ್‌ಗಳು ಮತ್ತು ಹೊಸ ಕ್ಯಾಬಿನ್ ಥೀಮ್ ಹೊಂದಿರುವ ರೀಡಿಸೈನ್ ಗೊಳಿಸಲಾದ ಕ್ಯಾಬಿನ್‌ನೊಂದಿಗೆ ಬರಲಿದೆ.
- ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಹೊಸ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಸಾಧ್ಯತೆಯಿದೆ.
- ಬೆಲೆಯು 6 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ನಾಲ್ಕನೇ ಜನರೇಷನ್ ನ ಮಾರುತಿ ಸ್ವಿಫ್ಟ್ ಅನ್ನು 2023 ರ ಕೊನೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಯಿತು ಮತ್ತು ಹ್ಯಾಚ್‌ಬ್ಯಾಕ್‌ನ ಈ ಅಪ್ಡೇಟ್ ಆಗಿರುವ ವರ್ಷನ್ ಸದ್ಯದಲ್ಲಿಯೇ ಭಾರತಕ್ಕೆ ಬರಲಿದೆ. ಈಗಾಗಲೇ ಹಲವಾರು ಬಾರಿ, ನಾವು 2024 ಸ್ವಿಫ್ಟ್‌ನ ಪ್ರೊಟೋಟೈಪ್ ಕಾರುಗಳನ್ನು ನೋಡಿದ್ದೇವೆ, ಹಾಗಾಗಿ ಇದು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಸೂಚಿಸುತ್ತದೆ. ರಹಸ್ಯವಾಗಿ ತೆಗೆದ ಇತ್ತೀಚಿನ ಫೋಟೋವೊಂದರಲ್ಲಿ, ಅಪ್ಡೇಟ್ ಆಗಿರುವ ಈ ಸಣ್ಣ ಕಾರಿನ ಒಳಭಾಗವನ್ನು ನಾವು ನೋಡಬಹುದು.
ಏನೇನು ನೋಡಬಹುದು
ಈ ಸ್ಪೈ ಶಾಟ್ ಗಳು ಅಷ್ಟೊಂದು ಸ್ಪಷ್ಟವಾಗಿಲ್ಲದಿದ್ದರೂ ಕೂಡ, ಅಪ್ಡೇಟ್ ಆಗಿರುವ ಸ್ವಿಫ್ಟ್‌ನಲ್ಲಿ ಏನೇನಿದೆ ಎಂಬುದರ ಒಂದು ನೋಟವನ್ನು ಅದು ನೀಡುತ್ತದೆ. ಮೊದಲನೆಯದಾಗಿ, ಇದು ಅಂತಾರಾಷ್ಟ್ರೀಯ-ಸ್ಪೆಕ್ ಮಾಡೆಲ್‌ನಿಂದ ಪಡೆದ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯನ್ನು ನೀಡುವ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ.
ಇದನ್ನು ಕೂಡ ಓದಿ: ಭಾರತದಲ್ಲಿ ಹೈಬ್ರಿಡ್‌ಗಳನ್ನು ಹೆಚ್ಚು ಕೈಗೆಟುಕುವ ಬೆಲೆಗೆ ನೀಡಲು 3 ರೀತಿಗಳು
ಎರಡನೆಯದಾಗಿ, ಚಿತ್ರಗಳು ಅಷ್ಟೊಂದು ಸ್ಪಷ್ಟವಾಗಿಲ್ಲದಿದ್ದರೂ ಕೂಡ, ಭಾರತದಲ್ಲಿ ಬರಲಿರುವ ಅಪ್ಡೇಟ್ ಆಗಿರುವ ಹ್ಯಾಚ್‌ಬ್ಯಾಕ್ ಅಂತರಾಷ್ಟ್ರೀಯ-ಸ್ಪೆಕ್ ನಲ್ಲಿ ಇರುವ ಅದೇ ರೀತಿಯ ಕ್ಯಾಬಿನ್‌ನೊಂದಿಗೆ ಬರಬಹುದು ಎಂದು ನಾವು ಭಾವಿಸುತ್ತೇವೆ. ಇದು ಸ್ವಲ್ಪ ಮಟ್ಟಿಗೆ ರೀಡಿಸೈನ್ ಗೊಳಿಸಲಾದ ಡ್ಯಾಶ್‌ಬೋರ್ಡ್, ಸ್ಲಿಮ್ ಆಗಿರುವ AC ವೆಂಟ್‌ಗಳು ಮತ್ತು ಲೈಟ್ ಆಗಿರುವ ಕ್ಯಾಬಿನ್ ಥೀಮ್ ಅನ್ನು ಕೂಡ ಪಡೆಯಬಹುದು.
ಹೊರಭಾಗದ ಬದಲಾವಣೆಗಳು
ಹೊಸ ಸ್ವಿಫ್ಟ್‌ನ ಹೊರಭಾಗದಲ್ಲಿ ಕೂಡ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇವುಗಳಲ್ಲಿ ಅಪ್ಡೇಟ್ ಆಗಿರುವ ಗ್ರಿಲ್, ಸ್ಲೀಕ್ ಆಗಿರುವ ಬಂಪರ್‌ಗಳು, ರೀಡಿಸೈನ್ ಗೊಳಿಸಲಾದ 15-ಇಂಚಿನ ಅಲೊಯ್ ವೀಲ್ ಗಳು, ಅಪ್ಡೇಟ್ ಆಗಿರುವ ಟೈಲ್ ಲೈಟ್ ಸೆಟಪ್ ಮತ್ತು ಸ್ಪೋರ್ಟಿಯರ್ ಆಗಿರುವ ರಿಯರ್ ಸ್ಪಾಯ್ಲರ್ ಸೇರಿವೆ.
ಅಲ್ಲದೆ, ಈಗಿರುವ ಸ್ವಿಫ್ಟ್‌ನಲ್ಲಿ, ಹಿಂಭಾಗದ ಡೋರ್ ಹ್ಯಾಂಡಲ್‌ಗಳನ್ನು C-ಪಿಲ್ಲರ್‌ನ ಮೇಲೆ ಜೋಡಿಸಲಾಗಿದೆ. ಆದರೆ, ನಾಲ್ಕನೇ-ಜೆನ್ ಮಾಡೆಲ್ ನಲ್ಲಿ, ಡೋರ್ ನ ಮೇಲೆಯೇ ಡೋರ್-ಮೌಂಟೆಡ್ ಹ್ಯಾಂಡಲ್‌ಗಳನ್ನು ನೀಡಲಾಗಿದೆ.
ಫೀಚರ್ ಗಳು ಮತ್ತು ಸುರಕ್ಷತೆ
ಭಾರತದಲ್ಲಿ ಬರಲಿರುವ ಹೊಸ ಸ್ವಿಫ್ಟ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನ ಜೊತೆಗೆ ಹೆಡ್-ಅಪ್ ಡಿಸ್ಪ್ಲೇಯನ್ನು ಕೂಡ ಪಡೆಯಬಹುದು. ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ AC ವೆಂಟ್ಸ್ ಮತ್ತು ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ಉಳಿದ ಫೀಚರ್ ಗಳು ಹಾಗೆಯೇ ಇರಲಿವೆ.
ಇದನ್ನು ಕೂಡ ಓದಿ: 2024 ಮಾರುತಿ ಸ್ವಿಫ್ಟ್ ಮಾರುತಿ ಫ್ರಾಂಕ್ಸ್‌ನಿಂದ ಪಡೆಯಬಹುದಾದ 5 ಫೀಚರ್ ಗಳು
ಪ್ರಯಾಣಿಸುವವರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ನೀಡಬಹುದು. ಸ್ವಿಫ್ಟ್‌ನ ಅಂತಾರಾಷ್ಟ್ರೀಯ ವರ್ಷನ್ ನಲ್ಲಿ ADAS ಎಂಬ ಸುಧಾರಿತ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ. ಹಿಂದಿನ ಟೆಸ್ಟ್ ಕಾರಿನಲ್ಲಿ ಕಂಡುಬಂದಿರುವ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಫೀಚರ್ ಗಳನ್ನು ಭಾರತೀಯ ವರ್ಷನ್ ನಲ್ಲಿ ಕೂಡ ಸೇರಿಸುವ ಸಾಧ್ಯತೆಯಿದೆ.
ಪವರ್‌ಟ್ರೇನ್
ಈ ಅಪ್ಡೇಟ್ ನೊಂದಿಗೆ, ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಕೂಡ ಪಡೆದುಕೊಂಡಿದೆ. ಈ ಎಂಜಿನ್ 82 PS ಮತ್ತು 112 Nm ವರೆಗಿನ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ, ನೀವು 5-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತೀರಿ. ಅಂತಾರಾಷ್ಟ್ರೀಯ ಮಾಡೆಲ್ ಗಳಿಗಾಗಿ ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್ ವರ್ಷನ್ ಕೂಡ ಲಭ್ಯವಿದೆ.
ಇದನ್ನು ಕೂಡ ಓದಿ: 2024 ಮಾರುತಿ ಸುಜುಕಿ ಸ್ವಿಫ್ಟ್ UK ಮಾರುಕಟ್ಟೆ ಸ್ಪೆಸಿಫಿಕೇಷನ್ ಗಳು ಬಹಿರಂಗಗೊಂಡಿವೆ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ
ಈಗಿರುವ ಇಂಡಿಯಾ-ಸ್ಪೆಕ್ ವರ್ಷನ್ ನಲ್ಲಿ 4-ಸಿಲಿಂಡರ್ 1.2-ಲೀಟರ್ ಪೆಟ್ರೋಲ್ ಎಂಜಿನ್ (90 PS/113 Nm) ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೆ ಜೋಡಿಸಲಾಗಿದೆ. ಈ ಎಂಜಿನ್‌ನೊಂದಿಗೆ, ಸ್ವಿಫ್ಟ್ 77.5 PS ಮತ್ತು 98.5 Nm ನ CNG ಪವರ್‌ಟ್ರೇನ್ ಅನ್ನು ಕೂಡ ನೀಡುತ್ತದೆ, ಆದರೆ ಇದು ಸ್ವಲ್ಪ ಕಡಿಮೆ ಶಕ್ತಿಯನ್ನು ಹೊಂದಿದೆ ಮತ್ತು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
2024 ರ ಮಾರುತಿ ಸ್ವಿಫ್ಟ್ ಮುಂದಿನ ಕೆಲವು ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರಬಹುದು ಮತ್ತು ಇದರ ಬೆಲೆಯು ರೂ. 6 ಲಕ್ಷ ಗಳಿಂದ (ಎಕ್ಸ್ ಶೋರೂಂ) ಶುರುವಾಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದು ಹುಂಡೈ ಗ್ರಾಂಡ್ i10 ನಿಯೋಸ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ.
ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ AMT