• English
  • Login / Register

ಹೊಸ ಜನರೇಶನ್‌ನ Honda Amaze ಕುರಿತ ಮೊದಲ ಫೋಟೋ ಬಿಡುಗಡೆ, ಏನಿದೆ ವಿಶೇಷತೆ ?

ಹೋಂಡಾ ಅಮೇಜ್‌ 2021-2024 ಗಾಗಿ shreyash ಮೂಲಕ ನವೆಂಬರ್ 04, 2024 08:59 pm ರಂದು ಪ್ರಕಟಿಸಲಾಗಿದೆ

  • 162 Views
  • ಕಾಮೆಂಟ್‌ ಅನ್ನು ಬರೆಯಿರಿ

ತಾಜಾ ವಿನ್ಯಾಸದ ಹೊರತಾಗಿ, ಹೊಸ ಜನ್ ಹೋಂಡಾ ಅಮೇಜ್ ಹೊಸ ಕ್ಯಾಬಿನ್ ವಿನ್ಯಾಸ ಮತ್ತು ಹೆಚ್ಚುವರಿ ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ

New-gen Honda Amaze Teased For The First Time, Launched Expected In 2025

  • ಹೊಸ-ಜನರೇಶನ್‌ನ ಅಮೇಜ್ ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳು ಮತ್ತು ಹೊಸ ಗ್ರಿಲ್‌ನೊಂದಿಗೆ ತೀಕ್ಷ್ಣವಾದ ಮುಂಭಾಗದ ವಿನ್ಯಾಸವನ್ನು ಹೊಂದಿರುತ್ತದೆ.

  • ಒಳಭಾಗದಲ್ಲಿ, ಇದು ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್‌ನೊಂದಿಗೆ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯಬಹುದು.

  • ದೊಡ್ಡ ಟಚ್‌ಸ್ಕ್ರೀನ್, ಸಿಂಗಲ್ ಪೇನ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಹೊಸ ಫೀಚರ್‌ಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

  • ಸುರಕ್ಷತಾ ಪ್ಯಾಕೇಜ್‌ನಲ್ಲಿ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿರಬಹುದು.

  • 7.50 ಲಕ್ಷ ರೂ.ನಿಂದ ಬೆಲೆಗಳು (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

 ಪ್ರಸ್ತುತ ಅದರ ಎರಡನೇ ತಲೆಮಾರಿನ ಹೋಂಡಾ ಅಮೇಜ್, 2021 ರಲ್ಲಿ ಫೇಸ್‌ಲಿಫ್ಟ್ ರೂಪದಲ್ಲಿ ತನ್ನ ಕೊನೆಯ ಆಪ್‌ಡೇಟ್‌ ಅನ್ನು ಪಡೆದುಕೊಂಡಿತ್ತು. ಹೋಂಡಾದ ಈ ಸಬ್‌ಕಾಂಪ್ಯಾಕ್ಟ್ ಸೆಡಾನ್ ಈಗ ಜನರೇಶನ್‌ನ ಅಪ್‌ಡೇಟ್‌ಗೆ ಸಿದ್ಧವಾಗಿದೆ, ಇದು ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬರಲಿದೆ ಮತ್ತು ವಾಹನ ತಯಾರಕರು ಈಗ ಹೊಸ-ಜನರೇಶನ್‌ನ ಅಮೇಜ್‌ನ ಮುಂಭಾಗದ ವಿನ್ಯಾಸವನ್ನು ಸ್ಕೆಚ್ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹೊಸ ಅಮೇಜ್ ಅನ್ನು 2024 ರಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ ಮತ್ತು ಇದನ್ನು 2025 ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಲಿದೆ. 

ಇದು ಹೇಗೆ ಕಾಣುತ್ತದೆ?

ಹೊಸ-ಜನರೇಶನ್‌ನ ಹೋಂಡಾ ಅಮೇಜ್‌ನ ತೀಕ್ಷ್ಣವಾದ ವಿನ್ಯಾಸದ ಬಗ್ಗೆ ವಿನ್ಯಾಸದ ಸ್ಕೆಚ್ ಸುಳಿವು ನೀಡುತ್ತದೆ. ಹೆಡ್‌ಲೈಟ್‌ಗಳು ಈಗ ನಯವಾಗಿ ಕಾಣುತ್ತವೆ ಮತ್ತು ಎಲಿವೇಟ್‌ನಲ್ಲಿರುವಂತೆ ಹೋಲುವ ಹೊಸ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿವೆ. ಗ್ರಿಲ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಎಂದು ತೋರುತ್ತದೆ, ಆದರೆ ಫಾಗ್‌ ಲೈಟ್‌ಗಳ ಸ್ಥಾನವು ಬದಲಾಗದೆ ಉಳಿದಿದೆ. ಈ ಬದಲಾವಣೆಗಳೊಂದಿಗೆ, ಹೊಸ-ಜನ್ ಅಮೇಜ್ ಹೆಚ್ಚು ಆಕ್ರಮಣಕಾರಿ ಕಾಣುವ ಮುಂಭಾಗವನ್ನು ಹೊಂದಿರುತ್ತದೆ.

ಹೊಸ-ಜನರೇಶನ್‌ನ ಅಮೇಜ್‌ನ ಬದಿ ಮತ್ತು ಹಿಂಭಾಗದ ಪ್ರೊಫೈಲ್‌ಗಳನ್ನು ಹೋಂಡಾ ಬಹಿರಂಗಪಡಿಸಿಲ್ಲ, ಆದರೆ ಇದು ಹೊಸ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ ಎಂದು ನಾವು ನಿರೀಕ್ಷಿಸಬಹುದು ಮತ್ತು ಹಿಂಭಾಗದ ಬಂಪರ್ ಮತ್ತು ಟೈಲ್ ಲೈಟ್‌ಗಳನ್ನು ಸಹ ಮಾರ್ಪಾಡು ಮಾಡಲಾಗುತ್ತದೆ. 

ಕ್ಯಾಬಿನ್ ಅಪ್‌ಡೇಟ್‌ಗಳು

ಹೊಸ ತಲೆಮಾರಿನ ಅಮೇಜ್‌ನ ಕ್ಯಾಬಿನ್ ಅನ್ನು ಹೋಂಡಾ ಇನ್ನೂ ಬಹಿರಂಗಪಡಿಸದಿದ್ದರೂ, ಹೊಸ ಡ್ಯಾಶ್‌ಬೋರ್ಡ್ ಲೇಔಟ್ ಮತ್ತು ಹೊಸ ಕ್ಯಾಬಿನ್ ಥೀಮ್ ಅನ್ನು ಪಡೆಯಬಹುದೆಂದು ನಾವು ನಿರೀಕ್ಷಿಸುತ್ತೇವೆ. ಅಮೇಜ್ ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನಂತಹ ಹೊಸ ಫೀಚರ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿರಬಹುದು.

ಇದನ್ನೂ ಓದಿ: 2024ರ ಮಾರುತಿ ಡಿಜೈರ್‌ಗಾಗಿ ಬುಕಿಂಗ್‌ಗಳು ಪ್ರಾರಂಭ, ಬಿಡುಗಡೆಗೆ ಮುಂಚಿತವಾಗಿಯೇ ಇಂಟೀರಿಯರ್ ಫೋಟೋಗಳು ಲೀಕ್‌..!

ಅದೇ ಎಂಜಿನ್ ಅನ್ನು ಬಳಸುವ ಸಾಧ್ಯತೆ

ಸದ್ಯ ಮಾರಾಟದಲ್ಲಿರುವ ಅಮೇಜ್‌ನೊಂದಿಗೆ ನೀಡಲಾದ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೋಂಡಾ ಉಳಿಸಿಕೊಳ್ಳುವ ಸಾಧ್ಯತೆಯಿದೆ. ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

ಪವರ್‌

90 ಪಿಎಸ್‌

ಟಾರ್ಕ್‌

110 ಎನ್‌ಎಮ್‌

ಟ್ರಾನ್ಸ್‌ಮಿಷನ್‌

5-ಸ್ಪೀಡ್‌ ಮ್ಯಾನುವಲ್‌, CVT*

*CVT - ಕಂಟಿನ್ಯೂವಸ್ಲಿ ವೇರಿಯೆಬಲ್‌ ಟ್ರಾನ್ಸ್‌ಮಿಷನ್‌

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಹೊಸ ತಲೆಮಾರಿನ ಹೋಂಡಾ ಅಮೇಜ್ ಬೆಲೆ 7.50 ಲಕ್ಷ ರೂಪಾಯಿಯಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಹೊಸ-ಜನರೇಶನ್‌ನ ಮಾರುತಿ ಡಿಜೈರ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾ ವಿರುದ್ಧ ಸ್ಪರ್ಧೆಯನ್ನು ನೀಡುತ್ತದೆ. 

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಹೆಚ್ಚು ಓದಿ: ಅಮೇಜ್ ಆಟೋಮ್ಯಾಟಿಕ್‌  

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಅಮೇಜ್‌ 2021-2024

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience