Login or Register ಅತ್ಯುತ್ತಮ CarDekho experience ಗೆ
Login

ಬಿಡುಗಡೆಗೂ ಮುನ್ನವೇ 6,000ಕ್ಕೂ ಹೆಚ್ಚು ಬುಕಿಂಗ್ ಪಡೆದ ಮಾರುತಿ ಇನ್ವಿಕ್ಟೋ

ಮಾರುತಿ ಇನ್ವಿಕ್ಟೋ ಗಾಗಿ rohit ಮೂಲಕ ಜುಲೈ 06, 2023 06:41 pm ರಂದು ಪ್ರಕಟಿಸಲಾಗಿದೆ

ಈ ಮಾರುತಿ ಇನ್‌ವಿಕ್ಟೋ ಕೆಲವು ಕಾಸ್ಮೆಟಿಕ್ ಮತ್ತು ಫೀಚರ್‌ ವ್ಯತ್ಯಾಸಗಳೊಂದಿಗೆ ಮೂಲಭೂತವಾಗಿ ಟೋಯೋಟಾ ಇನ್ನೋವಾ ಹೈಕ್ರಾಸ್ ಆಗಿದೆ

  • ಈ ಮಾರುತಿ ಇನ್ವಿಕ್ಟೋ ಕಾರುತಯಾರಕರ ನೆಕ್ಸಾ ಲೈನ್ಅಪ್‌ನಲ್ಲಿ ಎಂಟನೇ ಮಾಡೆಲ್ ಆಗಿದೆ; MPV ಶ್ರೇಣಿಯಲ್ಲಿ XL6ಗಿಂತ ಮೇಲೆ ಇಡಲಾಗಿದೆ.

  • ಈ ಹೊಸ MPV ಯನ್ನು ಮಾರುತಿ :ಝೀಟಾ+ ಮತ್ತು ಆಲ್ಫಾ+ ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ.

  • 7- ಮತ್ತು 8- ಸೀಟರ್ ಲೇಔಟ್‌ಗಳೆರಡರಲ್ಲಿಯೂ ಲಭ್ಯವಿದೆ ಮತ್ತು ಮೊದಲನೆಯದಕ್ಕೆ ಕ್ಯಾಪ್ಟನ್ ಸೀಟ್ ಮಧ್ಯದ ಸಾಲಿನಲ್ಲಿ ಇರುತ್ತದೆ.

  • 10-ಇಂಚು ಟಚ್‌ಸ್ಕ್ರೀನ್, ಪವರ್ ಟೇಲ್‌ಗೇಟ್ ಮತ್ತು ವಿಹಂಗಮ ಸನ್‌ರೂಫ್ ಪಡೆದಿದೆ.

  • ಟೊಯೋಟಾ MPVಯಲ್ಲಿರುವ ಕ್ಯಾಪ್ಟನ್ ಸೀಟುಗಳ ಅಟ್ಟೋಮನ್ ಕಾರ್ಯ ಮತ್ತು ADAS ಇದರಲ್ಲಿ ಇರುವುದಿಲ್ಲ.

  • ಇನ್ನೋವಾ ಹೈಕ್ರಾಸ್‌ನಲ್ಲಿರುವಂತೆಯೇ 2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದೆ.

  • ಬೆಲೆಗಳು 24.79 ಲಕ್ಷದಿಂದ 28.42 ಲಕ್ಷದ ತನಕ ಇದೆ.

ಮಾರುತಿ ಇನ್ವಿಕ್ಟೋ ರೂಪದಲ್ಲಿ ಎಂಟನೇ ಸದಸ್ಯನಾಗುವ ಮೂಲಕ ಮಾರುತಿಯ ನೆಕ್ಸಾ ಲೈನ್ಅಪ್‌ ತನ್ನ ಸಂಖ್ಯೆನ್ನು ಈಗಷ್ಟೇ ಹೆಚ್ಚಿಸಿಕೊಂಡಿದೆ. ಈ ಇನ್ವಿಕ್ಟೋ ತನ್ನ ಡಿಸೈನ್ ಮತ್ತು ಫೀಚರ್‌ ಪಟ್ಟಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಮೂಲಭೂತವಾಗಿ ಟೊಯೋಟಾ ಇನ್ನೋವಾ ಹೈಕ್ರಾಸ್ ಆಗಿದೆ. ತನ್ನ ಈ ಹೊಸ, ಮುಂಚೂಣಿಯಲ್ಲಿರುವ ಮಾಡೆಲ್ ಬೆಲೆ ಪ್ರಕಟಣೆಯ ತನಕ, ಬಿಡುಗಡೆಗೂ ಮುನ್ನವೇ 6,200 ಆರ್ಡರ್‌ಗಳನ್ನು ಪಡೆದಿವೆ ಎಂಬುದನ್ನು ಕಾರುತಯಾರಕರು ಬಿಡುಗಡೆಯ ಸಂದರ್ಭದಲ್ಲಿ ಬಹಿರಂಗಪಡಿಸಿದರು.

ಮಾರುತಿಯ ಹೊಸ ಪ್ರೀಮಿಯಂ MPVಯ ಎಲ್ಲಾ ಪ್ರಮುಖ ವಿವರಗಳ ಕ್ಷಿಪ್ರನೋಟವನ್ನು ಈ ಕೆಳಗೆ ನೀಡಲಾಗಿದೆ.

ವೇರಿಯೆಂಟ್‌ಗಳು ಮತ್ತು ಸೀಟಿಂಗ್ ಕಾನ್ಫಿಗರೇಶನ್

ಮಾರುತಿಯು ಈ ಇನ್ವಿಕ್ಟೋ ಅನ್ನು ಕೇವಲ ಎರಡು ವೇರಿಯೆಂಟ್‌ಗಳಲ್ಲಿ ಮಾತ್ರವೇ ನೀಡುತ್ತಿದೆ: ಝೀಟಾ+ ಮತ್ತು ಆಲ್ಫಾ+, ಇದರಲ್ಲಿ ಮೊದಲನೆಯದು 7- ಮತ್ತು 8- ಸೀಟರ್ ಲೇಔಟ್ ಎರಡರಲ್ಲಿಯೂ ಲಭ್ಯವಿದೆ. ಟೊಯೋಟಾ MPVಗಿಂತ ಭಿನ್ನವಾಗಿ, ಮಾರುತಿ MPVಯ 7-ಸೀಟರ್ ಆವೃತ್ತಿಯಲ್ಲಿ ಮಧ್ಯದ ಸಾಲಿನ ಕ್ಯಾಪ್ಟನ್ ಸೀಟುಗಳಲ್ಲಿ ಅಟ್ಟೋಮನ್ ಕಾರ್ಯ ಇರುವುದಿಲ್ಲ.

ನೀಡಲಾಗುತ್ತಿರುವ ಫೀಚರ್‌ಗಳು

ಈ ಇನ್ವಿಕ್ಟೋಗೆ ವಾತಾಯನದ ಮುಂಭಾಗದ ಸೀಟುಗಳು, 10-ಇಂಚು ಟಚ್‌ಸ್ಕ್ರೀನ್ ಮತ್ತು ವಿಹಂಗಮ ಸನ್‌ರೂಫ್ ಅನ್ನು ನೀಡಲಾಗಿದೆ. ಅಲ್ಲದೇ ಮಾರುತಿಯು ಇದಕ್ಕೆ 8-ವೇ ಪವರ್ ಅಡ್ಜಸ್ಟೇಬಲ್ ಡ್ರೈವರ್ ಸೀಟ್ ಅನ್ನು ಮೆಮೋರಿ ಫಂಕ್ಷನ್, ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್ ಮತ್ತು ಪವರ್ ಟೇಲ್‌ಗೇಟ್‌ನೊಂದಿಗೆ ನೀಡುತ್ತಿದ್ದು, ಇವೆಲ್ಲವನ್ನೂ ಮಾರುತಿ ಕಾರಿನಲ್ಲಿ ಮೊದಲ ಬಾರಿಗೆ ನೀಡಲಾಗಿದೆ.

ಪ್ರಯಾಣಿಕ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮರಾ ಸೆಟಪ್, ISOFIX ಸೀಟ್ ಆ್ಯಂಕೋರೇಜ್‌ಗಳು ಮತ್ತು ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸನ್ಸರ್‌ಗಳು ವಹಿಸಿಕೊಂಡಿವೆ.

ಇದನ್ನೂ ಓದಿ: ಜೂನ್ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ವಿವರಗಳು

ಹೈಬ್ರಿಡ್ ಪವರ್‌ಟ್ರೇನ್ ಮಾತ್ರ

ಈ ಮಾರುತಿ ಮತ್ತು ಟೊಯೋಟಾ MPVಗಳಲ್ಲಿನ ಪ್ರಮುಖ ವ್ಯತ್ಯಾಸಗಳೆಂದರೆ, ಇನ್ವಿಕ್ಟೋಗೆ ಕೇವಲ ಇನ್ನೋವಾ ಹೈಕ್ರಾಸ್‌ನ 186PS (ಸಂಯೋಜಿತ) 2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ನೀಡಲಾಗಿದ್ದು ಇದನ್ನು e-CVT ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ. ಇದು 23.24kmpl ಕ್ಲೈಮ್ ಮಾಡಲಾದ ಮೈಲೇಜ್ ಅನ್ನು ನೀಡುತ್ತದೆ.

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಮಾರುತಿಯು ಈ ಇನ್ವಿಕ್ಟೋ ಬೆಲೆಯನ್ನು ರೂ 24.79 ಲಕ್ಷ ಮತ್ತು ರೂ 28.42 ಲಕ್ಷದ ನಡುವೆ (ಎಕ್ಸ್-ಶೋ ರೂಂ) ನಿಗದಿಪಡಿಸಿದೆ. ಇದರ ನೇರ ಪ್ರತಿಸ್ಪರ್ಧಿ ಟೊಯೋಟಾ ಇನ್ನೋವಾ ಹೈಕ್ರಾಸ್ ಆಗಿದ್ದು ಮಾತ್ರವಲ್ಲ ಇದು ಕಿಯಾ ಕಾರನ್ಸ್‌ಗೆ ದುಬಾರಿ ಪರ್ಯಾಯವಾಗಿದೆ.

ಇನ್ನಷ್ಟು ಓದಿ : ಮಾರುತಿ ಇನ್ವಿಕ್ಟೋ ಆಟೋಮ್ಯಾಟಿಕ್

Share via

Write your Comment on Maruti ಇನ್ವಿಕ್ಟೊ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.26.90 - 29.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10.60 - 19.70 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ