• English
  • Login / Register

ಮಾರುತಿ ಫ್ರಾಂಕ್ಸ್‌ನ ಬೆಲೆಗಳು ರೂ 7.46 ಲಕ್ಷದಿಂದ ಪ್ರಾರಂಭ

ಮಾರುತಿ ಫ್ರಾಂಕ್ಸ್‌ ಗಾಗಿ tarun ಮೂಲಕ ಏಪ್ರಿಲ್ 24, 2023 11:18 pm ರಂದು ಮಾರ್ಪಡಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯಾಚ್‌ಬ್ಯಾಕ್ ಕ್ರಾಸ್‌ಒವರ್ ನಾಚುರಲಿ ಆಸ್ಪಿರೇಟೆಡ್ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯವಿದೆ

Maruti Fronx

  • ಫ್ರಾಂಕ್ಸ್ ಬೆಲೆ 7.46 ಲಕ್ಷದಿಂದ 13.14 ಲಕ್ಷ ರೂ ನಡುವೆ ಇದೆ.
  • ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ  ವೆರಿಯೆಂಟ್ ಗಳಲ್ಲಿ ಲಭ್ಯವಿದೆ.
  • 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜರ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಒಳಗೊಂಡಿದೆ.
  • ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಇಎಸ್‌ಪಿ ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ ಗಳು ಸುರಕ್ಷತೆಯನ್ನು ಒಳಗೊಂಡಿದೆ.
  • ಇದು 1.2-ಲೀಟರ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಇಂಜಿನ್‌ಗಳಿಂದ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ಹೊಂದಿದೆ.
  • ಇದು ಸಬ್‌ಕಾಂಪ್ಯಾಕ್ಟ್ SUV ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗಗಳಿಗೆ ಪ್ರತಿಸ್ಪರ್ಧಿ.

ಬಲೆನೊ ಆಧಾರಿತ ಫ್ರಾಂಕ್ಸ್ ಎಸ್‌ಯುವಿ ಬೆಲೆಗಳನ್ನು ಮಾರುತಿ ಬಹಿರಂಗಪಡಿಸಿದೆ. ಹ್ಯಾಚ್‌ಬ್ಯಾಕ್-ಎಸ್‌ಯುವಿ ಕ್ರಾಸ್‌ಒವರ್ ಈಗ ರೂ 7.46 ಲಕ್ಷದಿಂದ (ಎಕ್ಸ್ ಶೋ ರೂಂ ದೆಹಲಿ) ಇದೆ. ಗ್ರಾಹಕರು ಐದು ಟ್ರಿಮ್‌ಗಳಲ್ಲಿ ಆಯ್ಕೆ ಮಾಡಬಹುದು - ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ. ವೇರಿಯಂಟ್-ವಾರು ಬೆಲೆಗಳು ಇಲ್ಲಿವೆ:


 

ಬೆಲೆ ಪರಿಶೀಲನೆ

ವೆರಿಯೆಂಟ್

1.2-ಲೀಟರ್ ಪೆಟ್ರೋಲ್-MT

1.2-ಲೀಟರ್ ಪೆಟ್ರೋಲ್-AMT

1- ಲೀಟರ್ ಟರ್ಬೊ-ಪೆಟ್ರೋಲ್ ಎಂಟಿ

1-ಲೀಟರ್ ಟರ್ಬೊ-ಪೆಟ್ರೋಲ್ ಎಟಿ

ಸಿಗ್ಮಾ

7.46 ಲಕ್ಷ ರೂ

-

-

-

ಡೆಲ್ಟಾ

8.33 ಲಕ್ಷ ರೂ

8.88 ಲಕ್ಷ ರೂ

-

-

ಡೆಲ್ಟಾ+

8.73 ಲಕ್ಷ ರೂ

9.28 ಲಕ್ಷ ರೂ

9.73  ಲಕ್ಷ ರೂ

-

ಝೀಟಾ

-

-

10.56 ಲಕ್ಷ ರೂ

12.06 ಲಕ್ಷ ರೂ

ಆಲ್ಫಾ

-

-

11.48 ಲಕ್ಷ ರೂ

12.98 ಲಕ್ಷ ರೂ

ಆಲ್ಫಾ ಡಿಟಿ

-

-

11.64 ಲಕ್ಷ ರೂ

13.14 ಲಕ್ಷ ರೂ

ಸಿಗ್ಮಾ  ವೆರಿಯೆಂಟ್ ಕೇವಲ 1.2-ಲೀಟರ್ ಪೆಟ್ರೋಲ್-ಮಾನ್ಯುಯಲ್ ಟ್ರಾನ್ಸ್ಮಿಷನ್ ಸಂಯೋಜನೆಯನ್ನು ಪಡೆಯುತ್ತದೆ. ಡೆಲ್ಟಾ+ ವೆರಿಯೆಂಟ್ ಎರಡೂ ಪವರ್‌ಟ್ರೇನ್‌ಗಳೊಂದಿಗಿನ ಏಕೈಕ ಆಯ್ಕೆಯಾಗಿದೆ ಆದರೆ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಬಿಟ್ಟುಬಿಡುತ್ತದೆ. ಟರ್ಬೊ ಆಟೋಮ್ಯಾಟಿಕ್ ವೆರಿಯೆಂಟ್ ಗಳು ಮ್ಯಾನುಯಲ್ ವೆರಿಯೆಂಟ್ ಗಳಿಗಿಂತ 1.5 ಲಕ್ಷ ರೂ ದುಬಾರಿಯಾಗಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯು ಮ್ಯಾನುಯಲ್ ಟ್ರಿಮ್‌ಗಳಿಗಿಂತ 55,000 ರೂ.ಗಳಷ್ಟು ದುಬಾರಿಯಾಗಿದೆ.

ಸಂಬಂಧಿತ: ಮಾರುತಿ ಫ್ರಾಂಕ್ಸ್ Vs ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆ ಹೋಲಿಕೆ