ಮಾರುತಿ ಫ್ರಾಂಕ್ಸ್ Vs ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆ ಹೋಲಿಕೆ
ಮಾರುತಿ ಬಾಲೆನೋ ಗಾಗಿ tarun ಮೂಲಕ ಏಪ್ರಿಲ್ 11, 2023 09:08 pm ರಂದು ಪ್ರಕಟಿಸಲಾಗಿದೆ
- 46 Views
- ಕಾಮೆಂಟ್ ಅನ್ನು ಬರೆಯಿರಿ
ಇವೆಲ್ಲವೂ ಸರಿಸುಮಾರು ಪವರ್ ಫಿಗರ್‌ನೊಂದಿಗೆ ಒಂದೇ ಗಾತ್ರದ ಎಂಜಿನ್‌ಗಳನ್ನು ಪಡೆಯುತ್ತವೆ. ದಾಖಲೆಗಳ ಪ್ರಕಾರ ಯಾವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮುಂದಿದೆ ಎಂದು ನೋಡೋಣ.
ಮಾರುತಿ ಹೊಸ ಎಸ್‌ಯುವಿ ಆಗಿರುವ ಫ್ರಾಂಕ್ಸ್, ಮುಂಬರುವ ವಾರಗಳಲ್ಲಿ ಬಿಡುಗಡೆ ಹೊಂದಲು ಸಿದ್ಧವಾಗಿದೆ. ಈ ಸಬ್‌ಕಾಂಪ್ಯಾಕ್ಟ್ ಬಲೆನೊವನ್ನು ಆಧರಿಸಿದೆ ಆದರೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗೆ ಪರೋಕ್ಷ ಪ್ರತಿಸ್ಪರ್ಧಿಯಾಗಿದೆ. ಬಲೆನೊ, ಗ್ಲಾಂಝಾ, i20, ಅಲ್ಟ್ರೊಸ್, ಮತ್ತು C3 ಗಳಿಗೆ ಈ ಫ್ರಾಂಕ್ಸ್ ಅನ್ನು ಸದೃಢ ಪರ್ಯಾಯವಾಗಿದೆ ಎಂದು ಹೇಳಬಹುದು.
ಇದೇ ಗಾತ್ರದ ಹ್ಯಾಚ್‌ಬ್ಯಾಕ್ ಪ್ರತಿಸ್ಪರ್ಧಿಗಳೊಂದಿಗೆ ಫ್ರಾಂಕ್ಸ್‌ನ ಇಂಧನ ದಕ್ಷತೆಯ ಹೋಲಿಕೆ ಇಲ್ಲಿದೆ:
ಮಾರುತಿ ಫ್ರಾಂಕ್ಸ್ Vs ಮಾರುತಿ ಬಲೆನೊ/ಟೊಯೊಟಾ ಗ್ಲಾಂಝಾ
ಸ್ಪೆಕ್ಸ್ |
ಫ್ರಾಂಕ್ಸ್ |
ಬಲೆನೊ/ಗ್ಲಾಂಝಾ |
|
ಎಂಜಿನ್ |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೋಪೆಟ್ರೋಲ್ |
1.2-ಲೀಟರ್ ಪೆಟ್ರೋಲ್ |
ಪವರ್ / ಟಾರ್ಕ್ |
90PS / 113Nm |
100PS / 148Nm |
90PS/ 113Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT / 5-ಸ್ಪೀಡ್ AMT |
5-ಸ್ಪೀಡ್ MT / 6-ಸ್ಪೀಡ್ AT |
5-ಸ್ಪೀಡ್ MT/ 5-ಸ್ಪೀಡ್ AMT |
ಮೈಲೇಜ್ |
21.79kmpl / 22.89kmpl |
21.5kmpl / 20.1kmpl |
22.35kmpl/ 22.94kmpl |
-
ಫ್ರಾಂಕ್ಸ್ ಮತ್ತು ಅದರ ಹ್ಯಾಚ್‌ಬ್ಯಾಕ್ ಆವೃತ್ತಿಯಾದ ಬಲೆನೊದ ಇಂಧನ ದಕ್ಷತೆಯ ಅಂಕಿಅಂಶಗಳು ತುಂಬಾ ಹೋಲುತ್ತವೆ. ಇಲ್ಲಿ ಒಂದೇ ವ್ಯತ್ಯಾಸವೆಂದರೆ ಫ್ರಾಂಕ್ಸ್ ಹೆಚ್ಚು ಉತ್ತಮವಾದ ಟರ್ಬೋ-ಪೆಟ್ರೋಲ್ ಆಯ್ಕೆಯನ್ನು ಪಡೆಯುತ್ತದೆ, ಇದು ಕೇವಲ 2kmpl ರಷ್ಟು ಕಡಿಮೆ ದಕ್ಷತೆಯನ್ನು ಹೊಂದಿದೆ.
-
ಟೊಯೆಟಾ ಗ್ಲಾಂಝಾ ದ ಅಂಕಿಅಂಶಗಳು ಸಹ ಫ್ರಾಂಕ್ಸ್ ಅನ್ನು ಹೋಲುತ್ತವೆ.
ಇದನ್ನೂ ಓದಿ: ಮಾರುತಿ ಫ್ರಾಂಕ್ಸ್ ವರ್ಸಸ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆ ಹೋಲಿಕೆ
ಮಾರುತಿ ಫ್ರಾಂಕ್ಸ್ Vs ಸಿಟ್ರಾನ್ C3
ಸ್ಪೆಕ್ಸ್ |
ಫ್ರಾಂಕ್ಸ್ |
C3 |
||
ಎಂಜಿನ್ |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೋ-ಪೆಟ್ರೋಲ್ |
1.2-ಲೀಟರ್ ಪೆಟ್ರೋಲ್ |
1.2-ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ / ಟಾರ್ಕ್ |
90PS / 113Nm |
100PS / 148Nm |
82PS/ 115Nm |
110PS/ 190Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT / 5-ಸ್ಪೀಡ್ AMT |
5-ಸ್ಪೀಡ್ MT / 6-ಸ್ಪೀಡ್ AT |
5-ಸ್ಪೀಡ್ MT |
6-ಸ್ಪೀಡ್ MT |
ಮೈಲೇಜ್ |
21.79kmpl / 22.89kmpl |
21.5kmpl / 20.1kmpl |
19.8kmpl |
19.4kmpl |
-
C3 ಮತ್ತು ಫೀಚರ್‌ಗಳ ವಿಷಯದಲ್ಲಿ ಫ್ರಾಂಕ್ಸ್‌ಗೆ ನೇರ ಪ್ರತಿಸ್ಪರ್ಧಿಯಲ್ಲದಿದ್ದರೂ ಡೈಮೆನ್ಶನ್‌ಗಳು ಸಾಕಷ್ಟು ಹೋಲುತ್ತವೆ. ಇದು ಎಲ್ಲಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಿಗೆ ಹೆಚ್ಚು ಕೈಗೆಟಕುವ ಆದರೆ ಕಡಿಮೆ-ಸಜ್ಜಿತ ಪರ್ಯಾಯ ಆಯ್ಕೆಯಾಗಿದೆ.
-
C3 ಗೆ ಹೋಲಿಸಿದರೆ, ಫ್ರಾಂಕ್ಸ್ 3kmpl ವರೆಗೆ ಪರಿಣಾಮಕಾರಿಯಾಗಿರುತ್ತದೆ. ಅವುಗಳು ನೈಸರ್ಗಿಕ ಆ್ಯಸ್ಪಿರೇಟೆಡ್ ಎಂಜಿನ್‌ಗಳು ಒಂದೇ ರೀತಿಯ ಸ್ಪೆಕ್ಸ್‌ಗಳನ್ನು ಹೊಂದಿದ್ದರೂ C3 ಯ ಟರ್ಬೋ-ಪೆಟ್ರೋಲ್ ಯೂನಿಟ್ ಹೆಚ್ಚು ಶಕ್ತಿಶಾಲಿಯಾಗಿದೆ.
-
ಆದಾಗ್ಯೂ, ಫ್ರಾಂಕ್ಸ್ ಸ್ಪೋರ್ಟ್‌ನಲ್ಲಿರುವಂತೆ ಸಿಟ್ರಾನ್ C3 ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿಲ್ಲ.
ಮಾರುತಿ ಫ್ರಾಂಕ್ಸ್ Vs ಹ್ಯುಂಡೈ i20
ಸ್ಪೆಕ್ಸ್ |
ಫ್ರಾಂಕ್ಸ್ |
i20 |
||
ಎಂಜಿನ್ |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೋ-ಪೆಟ್ರೋಲ್ |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ / ಟಾರ್ಕ್ |
90PS / 113Nm |
100PS / 148Nm |
83PS / 113Nm |
120PS / 172Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT / 5- ಸ್ಪೀಡ್ AMT |
5- ಸ್ಪೀಡ್ MT / 6- ಸ್ಪೀಡ್ AT |
5- ಸ್ಪೀಡ್ MT / CVT |
6- ಸ್ಪೀಡ್ iMT / 7- ಸ್ಪೀಡ್ DCT |
ಮೈಲೇಜ್ |
21.79kmpl / 22.89kmpl |
21.5kmpl / 20.1kmpl |
20.3kmpl / 19.6kmpl |
20.2kmpl |
-
ಅದೇ ರೀತಿಯ ಪವರ್ಡ್ 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ, ಈ i20’ ಯ ಮ್ಯಾನ್ಯುವಲ್ ವೇರಿಯೆಂಟ್‌ಗಳು ಸ್ವಲ್ಪ ಕಡಿಮೆ ದಕ್ಷತೆಯನ್ನು ಹೊಂದಿವೆ. ಅವುಗಳ ಆಟೋಮ್ಯಾಟಿಕ್ ವೇರಿಯೆಂಟ್‌ಗಳು ಸುಮಾರು 3kmpl ವ್ಯತ್ಯಾಸವನ್ನು ಹೊಂದಿವೆ.
-
ಈ i20 ಉತ್ತಮವಾದ ಅದರ ಅತ್ಯಂತ ಶಕ್ತಿಶಾಲಿ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿವೆ. ಹೆಚ್ಚಿನ ಶಕ್ತಿ ಮತ್ತು ಟಾರ್ಕ್‌ನೊಂದಿಗೆ, ಇದು ಫ್ರಾಂಕ್ಸ್ ಟರ್ಬೋದಂತೆಯೇ ಬಹುತೇಕ ಅದೇ ದಕ್ಷತೆಯನ್ನು ನೀಡುತ್ತದೆ.
ಮಾರುತಿ ಫ್ರಾಂಕ್ಸ್ Vs ಟಾಟಾ ಅಲ್ಟ್ರೊಸ್
ಸ್ಪೆಕ್ಸ್ |
ಫ್ರಾಂಕ್ಸ್ |
ಅಲ್ಟ್ರೊಸ್ |
||
ಎಂಜಿನ್ |
1.2-ಲೀಟರ್ ಪೆಟ್ರೋಲ್ |
1- ಲೀಟರ್ ಟರ್ಬೋ-ಪೆಟ್ರೋಲ್ |
1.2-ಲೀಟರ್ ಪೆಟ್ರೋಲ್ |
1.2-ಲೀಟರ್ ಟರ್ಬೋ-ಪೆಟ್ರೋಲ್ |
ಪವರ್ / ಟಾರ್ಕ್ |
90PS / 113Nm |
100PS / 148Nm |
86PS / 113Nm |
110PS / 140Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT / 5- ಸ್ಪೀಡ್ AMT |
5- ಸ್ಪೀಡ್ MT / 6- ಸ್ಪೀಡ್ AT |
5- ಸ್ಪೀಡ್ MT / 6- ಸ್ಪೀಡ್ DCT |
5- ಸ್ಪೀಡ್ MT |
ಮೈಲೇಜ್ |
21.79kmpl / 22.89kmpl |
21.5kmpl / 20.1kmpl |
19.3kmpl / - |
18.13kmpl |
-
ನಾವು ನೈಸರ್ಗಿಕ ಆ್ಯಸ್ಪಿರೇಟೆಡ್ ಮತ್ತು ಟರ್ಬೋ ಪೆಟ್ರೋಲ್ ಎಂಜಿನ್‌ಗಳನ್ನು ಅಳವಡಿಸಿದಾಗಲೂ ಸಹ ಇತರ ಹ್ಯಾಚ್‌ಬ್ಯಾಕ್‌ಗಳಂತೆಯೇ ಫ್ರಾಂಕ್ಸ್ ಮತ್ತು ಅಲ್ಟ್ರೊಸ್ ಅಂಕಿಅಂಶಗಳು ಹೋಲುತ್ತವೆ,.
-
ಫ್ರಾಂಕ್ಸ್ ಟರ್ಬೋ-ಪೆಟ್ರೋಲ್ ಆಟೋಮ್ಯಾಟಿಕ್ ಸಂಯೋಜನೆಯ ಹೆಚ್ಚುವರಿ ಪ್ರಯೋಜನವನ್ನು ಹೊಂದಿದ್ದು ಇದು ಟಾಟಾದಲ್ಲಿ ಲಭ್ಯವಿಲ್ಲ.
-
ದಕ್ಷತೆಯ ವಿಷಯದಲ್ಲಿ, ಅಲ್ಟ್ರೊಸ್ ಎಲ್ಲಕ್ಕಿಂತ ಕಡಿಮೆ ದಕ್ಷತೆಯನ್ನು ಹೊಂದಿದೆ.
ಪ್ರಮುಖಾಂಶಗಳು:
ಮಾರುತಿ ಉಳಿದ ವಾಹನಗಳಂತೆ ಫ್ರಾಂಕ್ಸ್ ಉತ್ತಮ ಇಂಧನ ದಕ್ಷತೆಯ ಅಂಕಿಅಂಶಗಳೊಂದಿಗೆ ಎಲ್ಲಕ್ಕಿಂತ ಮುಂದಿದೆ. ನಿಜವಾದ ಸ್ಪರ್ಧೆಯು i20 ಟರ್ಬೋನಿಂದ ಬರುತ್ತದೆ, ಇದು ಅತ್ಯಂತ ಶಕ್ತಿಶಾಲಿಯಾಗಿದ್ದರೂ ಬಹುತೇಕ ಸಮಾನವಾಗಿ ಪರಿಣಾಮಕಾರಿಯಾಗಿರುತ್ತದೆ. ನಮ್ಮ ಹೋಲಿಕೆಯ ವಿಮರ್ಶೆಗಳಿಗಾಗಿ ಸದಾಕಾಲ ಸಂಪರ್ಕದಲ್ಲಿರಿ, ಇಲ್ಲಿ ನಿಮಗೆ ಪರಿಶೀಲಿಸಲು ಸಹಾಯವಾಗುವಂತೆ ನೈಜ-ಪ್ರಪಂಚದ ಸಂಖ್ಯೆಗಳನ್ನು ನಾವು ಒದಗಿಸುತ್ತೇವೆ.
ಇನ್ನಷ್ಟು ಓದಿ : ಮಾರುತಿ ಬಲೆನೊ AMT