• English
  • Login / Register

ಸಿಟ್ರಾನ್ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ವಾಸ್ತವಿಕ ಚಾರ್ಜಿಂಗ್ ಟೆಸ್ಟ್ ಬಗ್ಗೆ ಮಾಹಿತಿ ಇಲ್ಲಿದೆ

ಸಿಟ್ರೊಯೆನ್ ಇಸಿ3 ಗಾಗಿ shreyash ಮೂಲಕ ಮೇ 19, 2023 02:00 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಲು eC3 58 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಿಟ್ರಾನ್ ಹೇಳಿಕೊಂಡಿದೆ. ಇದು ನಿಜವೇ?

Citroen eC3

ಫೆಬ್ರವರಿ 2023 ರ ಕೊನೆಯ ವಾರದಲ್ಲಿ, ಸಿಟ್ರಾನ್ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿತು, ಇದು C3 ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದ್ದು, ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 29.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪರಿಚಯಿಸಲಾಗಿದೆ. ಇದರ ARAI ಪ್ರಮಾಣೀಕೃತ ರೇಂಜ್ 320km ಆಗಿದೆ. ಸಿಟ್ರಾನ್‌ನ ಎಲೆಕ್ಟ್ರಿಕ್ ಕಾರು ಎಸಿ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ. ಆದರೆ eC3 ಯಾವ ಮಟ್ಟದ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂಬುದನ್ನು ಕಂಪನಿಯು ಸ್ಪಷ್ಟಪಡಿಸಿಲ್ಲ. ಆದ್ದರಿಂದ ಇತ್ತೀಚೆಗೆ ನಾವು ಅದರ ಚಾರ್ಜಿಂಗ್ ಪರೀಕ್ಷೆಯನ್ನು ನಡೆಸಿದ್ದೇವೆ ಮತ್ತು ಚಾರ್ಜ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇವೆ.

 

ಡಿಸಿ ಫಾಸ್ಟ್ ಚಾರ್ಜಿಂಗ್

Real World Charging Test Of The Citroen eC3 Electric Hatchback

 ನಮ್ಮ ಪರೀಕ್ಷೆಯಲ್ಲಿ, ನಾವು 120kW ವೇಗದ ಚಾರ್ಜರ್‌ ಬಳಸಿ eC3 ಅನ್ನು ಚಾರ್ಜ್ ಮಾಡಿದ್ದೇವೆ ಮತ್ತು ಈ ಸಮಯದಲ್ಲಿ ಎಲೆಕ್ಟ್ರಿಕ್ ಕಾರಿನ ಬ್ಯಾಟರಿಯು ಶೇಕಡಾ 64 ರಷ್ಟಿತ್ತು. ನಾವು ಅದನ್ನು 65 ರಿಂದ 95 ಪ್ರತಿಶತದವರೆಗೆ ಚಾರ್ಜ್ ಮಾಡಿದ್ದೇವೆ ಮತ್ತು ಆ ಸಮಯದಲ್ಲಿ ಅದರ ಚಾರ್ಜಿಂಗ್ ದರ ಮತ್ತು ಚಾರ್ಜಿಂಗ್ ಸಮಯ ಈ ಕೆಳಗಿನಂತಿತ್ತು:

ಶೇಕಡಾವಾರು ಚಾರ್ಜಿಂಗ್

ಚಾರ್ಜಿಂಗ್ ದರ

ಸಮಯ

65 ರಿಂದ 70 ಪ್ರತಿಶತ

25kW

4 ನಿಮಿಷಗಳು

70 ರಿಂದ 75 ಪ್ರತಿಶತ 

22kW

4 ನಿಮಿಷಗಳು

75 ರಿಂದ 80 ಪ್ರತಿಶತ

22kW

4 ನಿಮಿಷಗಳು

80 ರಿಂದ 85 ಪ್ರತಿಶತ

16kW

7 ನಿಮಿಷಗಳು

85 ರಿಂದ 90 ಪ್ರತಿಶತ

16kW

6 ನಿಮಿಷಗಳು

90 to 95 ಪ್ರತಿಶತ

6kW

20 ನಿಮಿಷಗಳು

 

ಪ್ರಮುಖ ಸಾರಾಂಶ

Real World Charging Test Of The Citroen eC3 Electric Hatchback

  •  ಕಾರಿನ ಡಿಸ್‌ಪ್ಲೇಯು 65 ಪ್ರತಿಶತ ಚಾರ್ಜ್‌ನಲ್ಲಿ 135 km ಡ್ರೈವಿಂಗ್ ರೇಂಜ್ ಅನ್ನು ತೋರಿಸಿತು. ಈ ಬ್ಯಾಟರಿ ಮಟ್ಟದಲ್ಲಿ EC3 ಯ 25kW ಚಾರ್ಜ್ ಆಗುತ್ತಿತ್ತು, ಇದು ನಾವು ಗಮನಿಸಿದ ಅತ್ಯಧಿಕ ದರವಾಗಿದೆ. 65 ರಿಂದ 70 ರಷ್ಟು ಚಾರ್ಜ್ ಆಗಲು ಸುಮಾರು 4 ನಿಮಿಷಗಳು ಬೇಕಾಯಿತು.
  •  70 ಪ್ರತಿಶತ ಚಾರ್ಜ್‌ನಲ್ಲಿ, ಚಾರ್ಜಿಂಗ್ ದರವು 22kW ಗೆ ಇಳಿಕೆಯಾಗುತ್ತದೆ, ಹಾಗೂ ಮತ್ತೊಂದು 5 ಪ್ರತಿಶತದಷ್ಟು ಹೆಚ್ಚು ಚಾರ್ಜ್ ಆಗಲು ಸುಮಾರು 4 ನಿಮಿಷಗಳು ಬೇಕಾಗುತ್ತವೆ. 80 ಪ್ರತಿಶತದವರೆಗೆ ಅದೇ ದರದಲ್ಲಿ ಚಾರ್ಜಿಂಗ್ ಮುಂದುವರಿಯುತ್ತದೆ.
  • 80 ಪ್ರತಿಶತವನ್ನು ತಲುಪಿದ ನಂತರ, ಚಾರ್ಜ್ ದರವು 16kW ಗೆ ಇಳಿಕೆಯಾಗುತ್ತದೆ, ಇನ್ನೊಂದು 10 ಪ್ರತಿಶತದಷ್ಟು ಹೆಚ್ಚು ಚಾರ್ಜ್ ಆಗಲು 11 ನಿಮಿಷಗಳು ಬೇಕಾಗುತ್ತವೆ.
  •  90 ರಿಂದ 95 ರಷ್ಟು ಚಾರ್ಜಿಂಗ್‌ಗೆ, ಚಾರ್ಜಿಂಗ್ ದರವು 6kW ಗೆ ಇಳಿಕೆಯಾಗುತ್ತದೆ ಮತ್ತು ಇನ್ನೊಂದು 5 ಪ್ರತಿಶತ ಹೆಚ್ಚು ಚಾರ್ಜ್ ಆಗಲು 20 ನಿಮಿಷಗಳು ಬೇಕಾಗುತ್ತವೆ. 
  • ನಾವು 95 ಪ್ರತಿಶತ ಬ್ಯಾಟರಿಯಲ್ಲಿ ಚಾರ್ಜಿಂಗ್ ಅನ್ನು ನಿಲ್ಲಿಸಿದೆವು ಮತ್ತು ಕಾರು ಆಗ 218km ರೇಂಜ್ ಅನ್ನು ತೋರಿಸುತ್ತಿತ್ತು, ಇದು ಪೂರ್ಣ ಚಾರ್ಜ್‌ನಲ್ಲಿ ಕ್ಲೈಮ್ ಮಾಡಿದ ಡ್ರೈವಿಂಗ್ ರೇಂಜ್‌ಗಿಂತ 100km ಕಡಿಮೆಯಾಗಿದೆ. 

ಇದನ್ನೂ ಓದಿ: ಸಿಟ್ರಾನ್ C3 ಯ ಟರ್ಬೊ ವೇರಿಯಂಟ್‌ಗಳು ಹೊಸ, ಸಂಪೂರ್ಣವಾಗಿ ಲೋಡ್ ಮಾಡಲಾದ ಶೈನ್ ಟ್ರಿಮ್ ಜೊತೆಗೆ BS6 ಫೇಸ್ 2 ಅಪ್‌ಡೇಟ್ ಅನ್ನು ಪಡೆಯುತ್ತವೆ

 

ಚಾರ್ಜಿಂಗ್ ವೇಗ ಕಡಿಮೆಯಾಗಲು ಕಾರಣವೇನು?

Citroen eC3

 ನಮ್ಮ ಪರೀಕ್ಷಾ ಫಲಿತಾಂಶಗಳ ಪ್ರಕಾರ, ಬ್ಯಾಟರಿ ಶೇಕಡಾ 80 ರಷ್ಟು ತಲುಪಿದಾಗ ಚಾರ್ಜಿಂಗ್ ಪವರ್ ಕಡಿಮೆಯಾಗುತ್ತದೆ. ಏಕೆಂದರೆ ಡಿಸಿ ಫಾಸ್ಟ್ ಚಾರ್ಜರ್‌ನಿಂದ ಚಾರ್ಜ್ ಮಾಡಿದಾಗ ಬ್ಯಾಟರಿ ಕ್ರಮೇಣ ಬಿಸಿಯಾಗುತ್ತದೆ. ನಿರಂತರವಾದ ಹೆಚ್ಚಿನ ತಾಪಮಾನ ಬ್ಯಾಟರಿಗೆ ಅನಾನುಕೂಲಗಳನ್ನುಂಟುಮಾಡುವುದರಿಂದ, ಚಾರ್ಜಿಂಗ್ ಅನ್ನು ನಿಧಾನಗೊಳಿಸುವುದು ಬ್ಯಾಟರಿಯು ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ ಮತ್ತು ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ.

 ಅಷ್ಟೇ ಅಲ್ಲದೇ, ಬ್ಯಾಟರಿ ಪ್ಯಾಕ್ ಅನ್ನು ಅದರೊಳಗೆ ಹಲವಾರು ಕೋಶಗಳನ್ನು ಸಂಯೋಜಿಸುವ ಮೂಲಕ ತಯಾರಿಸಲಾಗುತ್ತದೆ. ನಿಧಾನವಾಗಿ ಚಾರ್ಜ್ ಮಾಡುವುದರಿಂದ ಕೋಶಗಳಾದ್ಯಂತ ಚಾರ್ಜ್‌ ಸ್ಥಿರವಾಗಿ ವಿತರಣೆಯಾಗುತ್ತದೆ. 

 

15A ಸಾಕೆಟ್‌ನಿಂದ ಚಾರ್ಜಿಂಗ್

 eC3 ಬ್ಯಾಟರಿಯನ್ನು ಚಾರ್ಜ್ ಮಾಡಲು ನಾವು 15A ಸಾಕೆಟ್ ಅನ್ನು ಸಹ ಬಳಸಿದೆವು. ನಿರ್ದಿಷ್ಟ ಬ್ಯಾಟರಿ ಮಟ್ಟದಲ್ಲಿ MID ಯಲ್ಲಿ ತೋರಿಸಿರುವಂತೆ ಚಾರ್ಜ್ ಮಾಡುವ ಸಮಯವನ್ನು ಕೆಳಗೆ ನೀಡಲಾಗಿದೆ:

ಬ್ಯಾಟರಿ ಶೇಕಡಾವಾರು

ನಿರೀಕ್ಷಿತ ಚಾರ್ಜಿಂಗ್ ಸಮಯ(80% ವರೆಗೆ)

1 ಪ್ರತಿಶತ (ಪ್ಲಗ್ ಇನ್ ಮಾಡಿದಾಗ)

8 ಗಂಟೆ 20 ನಿಮಿಷಗಳು

10 ಪ್ರತಿಶತ

8 ಗಂಟೆ

ನಾವು ಕಾರಿಗೆ 15A ಹೋಮ್ ಚಾರ್ಜರ್ ಅನ್ನು ಸಂಪರ್ಕಿಸಿದಾಗ, 10 ರಿಂದ 80 ಪ್ರತಿಶತದಷ್ಟು ಚಾರ್ಜಿಂಗ್‌ಗೆ ಅದರ ಡಿಸ್ಪ್ಲೇ 8 ಗಂಟೆಗಳ ನಿರೀಕ್ಷಿತ ಸಮಯವನ್ನು ತೋರಿಸಿತು. ಇದರ ಪ್ರಕಾರ, ಇದು ಒಂದು ಗಂಟೆಗೆ ಸರಿಸುಮಾರು 8.5 ರಿಂದ 9 ಪ್ರತಿಶತದಷ್ಟು ಚಾರ್ಜಿಂಗ್ ದರವನ್ನು ಹೊಂದಿದೆ.

 

ಪವರ್‌ಟ್ರೇನ್ ವಿವರಗಳು

Citroen eC3

ಸಿಟ್ರಾನ್‌ನ 29.2kWh ಬ್ಯಾಟರಿ ಪ್ಯಾಕ್ ಅನ್ನು 57PS ಪವರ್ ಮತ್ತು 143Nm ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ಅದರ ಕೆಲವು ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ, ಈ ವ್ಯವಸ್ಥೆಯು ಏರ್ ಕೂಲ್‌ಡ್ ಆಗಿದ್ದು ಲಿಕ್ವಿಡ್ ಕೂಲ್ ಅನ್ನು ಹೊಂದಿಲ್ಲ, ಆದ್ದರಿಂದಲೇ ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವುದಿಲ್ಲ.

Price & Rivals 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

eC3 ಯು ಟಾಟಾ ಟಿಯಾಗೊ EV ಮತ್ತು ಟಾಟಾ ಟಿಗೊರ್ EV ಗೆ ಪ್ರತಿಸ್ಪರ್ಧಿಯಾಗಿದೆ. ಇದನ್ನು MG ಕಾಮೆಟ್ EV ಗೆ ದೊಡ್ಡ ಪರ್ಯಾಯವಾಗಿ ಪರಿಗಣಿಸಬಹುದು. ಇದು ಪ್ರಸ್ತುತ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ, ಇದರ ಬೆಲೆ ರೂ 11.50 ಲಕ್ಷ ರೂ.ದಿಂದ  12.76 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ ದೆಹಲಿ) ಇದೆ. ನಾವು eC3 ಪ್ರತಿಸ್ಪರ್ಧಿಗಳ ಬೆಲೆಗಳನ್ನು ಸಹ ಹೋಲಿಸಿದ್ದೇವೆ, ಈ ಲೇಖನದಲ್ಲಿ ವಿವರಿಸಲಾಗಿದೆ.

ಇನ್ನಷ್ಟು ಓದಿ: ಸಿಟ್ರಾನ್ eC3 ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Citroen ಇಸಿ3

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience