ರೆನಾಲ್ಟ್ ಟ್ರೈಬರ್ ನಿರೀಕ್ಷಿತ ಬೆಲೆಗಳು : ಅದು ಮಾರುತಿ ಸುಜುಕಿ ಸ್ವಿಫ್ಟ್ , ಹುಂಡೈ ಗ್ರಾಂಡ್ i10 ನಿಯೋಸ್ ಮತ್ತು ಫೋರ್ಡ್ ಫಿಗೊ ವಿರುದ್ಧ ಗೆಲ್ಲುತ್ತದೆಯೇ?
ಹೆಚ್ಚು ಉಪಯುಕ್ತತೆ ಒಳಗೊಂಡಂತೆ, ಏಳು ಜನರಿಗೆ ಕುಳಿತುಕೊಳ್ಳಲು ಅವಕಾಶ ಮತ್ತು ಬಹಳಷ್ಟು ವಿಭಾಗದ ಮೊದಲ ಫೀಚರ್ ಗಳೊಂದಿಗೆ, ಮುಂಬರುವ ಟ್ರೈಬರ್ ಕಾರ್ ಬೆಲೆ ಪಟ್ಟಿ ಸ್ಪರ್ಧಾತ್ಮಕವಾಗಿದೆಯೇ?
- ರೆನಾಲ್ಟ್ ಟ್ರೈಬರ್ ಅನ್ನು ಕ್ವಿಡ್ ಮತ್ತು ಡಸ್ಟರ್ ಮದ್ಯ ಇರವಂತೆ ಮಾಡಲಾಗಿದೆ
- ನಿರೀಕ್ಷಿತ ಬೆಲೆ ಪಟ್ಟಿ ರೂ 5 ಲಕ್ಷ ದಿಂದ ರೂ 7 ಲಕ್ಷ (ಎಕ್ಸ್ ಶೋ ರೂಮ್ )
- ಟ್ರೈಬರ್ ಅನ್ನು 1.0-ಲೀಟರ್ 3-ಸಿಲಿಂಡರ್ BS4-ಕಂಪ್ಲೇಂಟ್ ಪೆಟ್ರೋಲ್ ಎಂಜಿನ್ ಜೊತೆ ಕೊಡಲಾಗಿದೆ
- ರೆನಾಲ್ಟ್ ಅವರು ಟ್ರೈಬರ್ ಅನ್ನು 5-ಸ್ಪೇಡ್ ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು AMT ಆಯ್ಕೆ ಒಂದಿಗೆ ಕೊಡುತ್ತಿದ್ದಾರೆ
- ಟ್ರೈಬರ್ ಸ್ಪರ್ಧೆ ಮಾರುತಿ ಸುಜುಕಿ ಸ್ವಿಫ್ಟ್, ಹುಂಡೈ ಗ್ರಾಂಡ್ i10 ಮತ್ತು ಫೋರ್ಡ್ ಫಿಗೊ , ಮತ್ತು ಇತರ ಕಾರ್ ಗಳೊಂದಿಗೆ ಇರುತ್ತದೆ.
- ಬುಕಿಂಗ್ ಬೆಲೆ ಯನ್ನು ರೂ 11,000 ನಲ್ಲಿ ಇರಿಸಲಾಗಿದೆ; ಇದನ್ನು ರೆನಾಲ್ಟ್ ಡೀಲರ್ ಅಥವಾ ವೆಬ್ ಸೈಟ್ ಮುಖಾಂತರ ಬುಕ್ ಮಾಡಬಹುದು
ರೆನಾಲ್ಟ್ ಟ್ರೈಬರ್ ಅನ್ನು ಆಗಸ್ಟ್ 28 ಕ್ಕೆ ಬಿಡುಗಡೆ ಬಿಡುಗಡೆ ಮಾಡಲಾಗುತ್ತದೆ ಮತ್ತು ಈ ಕಾಂಪ್ಯಾಕ್ಟ್ MPV ಬುಕಿಂಗ್ ಗಳು ಈಗಾಗಲೇ ಪ್ರಾರಂಭವಾಗಿವೆ, ಟೋಕನ್ ಬೆಲೆ ರೂ 11,000 ಗಳೊಂದಿಗೆ. ನೀವು ನಿಮ್ಮ ಯೂನಿಟ್ ಅನ್ನು ರೆನಾಲ್ಟ್ ಡೀಲೇರ್ಶಿಪ್ ಅಥವಾ ಕಂಪೆನಿಯುಯ ಅಧಿಕೃತ ವೆಬ್ಸೈಟ್ ನಲ್ಲಿ ಬುಕ್ ಮಾಡಬಹುದು. ನೀವು ನಿಮ್ಮ ಹಣವನ್ನು ಮುಂಬರುವ ರೆನಾಲ್ಟ್ ಕೊಡುಗೆ ಮೇಲೆ ಇರಿಸುವವರಾಗಿದ್ದರೆ, ನಿಮಗೆ ಇದರ ಬೆಲೆ ಪಟ್ಟಿ ತಿಳಿದುಕೊಳ್ಳುವುದು ಅವಶ್ಯಕವಾಗಿರಬಹುಹದು ಮತ್ತು ಅದು ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿರುತ್ತದೆ,. ಆದರೆ ನಾವು ನಿರೀಕ್ಷಿತ ಬೆಲೆ ಪಟ್ಟಿ ಬಗ್ಗೆ ನೋಡುವ ಮುಂಚೆ ನಾವು ಅದರ ಫೀಚರ್ ಗಳು ಮತ್ತು ಎಂಜಿನ್ ಹೈಲೈಟ್ ಗಳ ಬಗ್ಗೆ ತಿಳಿಯೋಣ.
ರೆನಾಲ್ಟ್ ಟ್ರೈಬರ್ ಒಂದು ಕೇವಲ ಪೆಟ್ರೋಲ್ ಒಂದಿಗೆ ಸಿಗುವ ಕೊಡುಗೆಯಾಗಿದೆ, ಇದರಲ್ಲಿ 1.0-ಲೀಟರ್ , 3-ಸಿಲಿಂಡರ್ ಯೂನಿಟ್ ಕೊಡಲಾಗಿದ್ದು ಅದು 72PS ಪವರ್ ಮತ್ತು 96Nm ಟಾರ್ಕ್ ಕೊಡುತ್ತದೆ. ಅದು ಎರೆಡು ಟ್ರಾನ್ಸ್ಮಿಷನ್ 5-ಸ್ಪೀಡ್ ಮಾನ್ಯುಯಲ್ ಮತ್ತು ಆಯ್ಕೆಯಾಗಿ AMT ಜೊತೆಗೆ ಬರುತ್ತದೆ. ಅಧಿಕೃತ ಮೈಲೇಜ್ 20kmpl (MT) ಮತ್ತು 20.5kmpl (AMT).
ಒಳಭಾಗದಲ್ಲಿ , ರೆನಾಲ್ಟ್ ಟ್ರೈಬರ್ ನಲ್ಲಿ ಮೂರು ಸಾಲು ಸೀಟಿಂಗ್ ಇದೆ ಸ್ಮಾರ್ಟ್ ಕೀ ಕಾರ್ಡ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಯೂನಿಟ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ , 3.5-ಇಂಚು MID ಮತ್ತು ಡಿಜಿಟಲ್ LED ಇನ್ಸ್ಟ್ರುಮೆಂಟ್ ಕ್ಲಸ್ಟರ್ , ಒಟ್ಟಾರೆ ನಾಲ್ಕು ಏರ್ಬ್ಯಾಗ್ ಮತ್ತು ರೆಫ್ರೆಜೆರೇಟರ್ (ವಿಭಾಗದಲ್ಲಿ ಮೊದಲ ಬಾರಿಗೆ ).
ಮೂರನೇ ಸಾಲು ಸೀಟ್ ಅನ್ನು ಪೂರ್ಣವಾಗಿ ತೆಗೆದಾಗ ನಿಮಗೆ ವಿಶಾಲವಾದ ಬೂಟ್ ಸ್ಪೇಸ್ 625 ಲೀಟರ್ ದೊರೆಯುತ್ತದೆ, ಅದು ಇತರ ಹಲವು ಪ್ರತಿಸ್ಪರ್ದಿಗಳಿಗಿಂತ ಹೆಚ್ಚು ಆಗಿದೆ. ಆದರೆ, ಟ್ರೈಬರ್ ಬಿಡುಗಡೆ ಆದಾಗ ಎಷ್ಟು ಬೆಲೆ ಹೊಂದಿರುತ್ತದೆ? ನಾವು ನಿರೀಕ್ಷಿತ ವೇರಿಯೆಂಟ್ ಹಾಗು ಅದರ ಬೆಲೆ ಪಟ್ಟಿ ನೋಡೋಣ.
Variants (Expected) |
Prices (Expected) |
RXE |
Rs 4.99 lakh |
RXL |
Rs 5.89 lakh |
RXL AMT |
Rs 6.39 lakh |
RXT |
Rs 6.49 lakh |
RXT AMT |
Rs 6.99 lakh |
ಗಮನಿಸಿ: ಮೇಲೆ ಹೇಳಿರುವ ಸಂಖ್ಯೆಗಳು ಅಂದಾಜು ಮಾಡಲಾಗಿರುವ ಸಂಖ್ಯೆಗಳಾಗಿವೆ ಅಂತಿಮ ಬೆಲೆ ಪಟ್ಟಿ ವೆತ್ಯಾಸ ಆಗಬಹುದು.
ನಮ್ಮ ನಿರೀಕ್ಷೆಯಂತೆ ರೆನಾಲ್ಟ್ ಕ್ವಿಡ್ ಬೆಲೆ ರೂ 5 ಲಕ್ಷ ದಿಂದ ರೂ 7 ಲಕ್ಷ ವರೆಗೂ ಇರುತ್ತದೆ. ರೆನಾಲ್ಟ್ ಅಧಿಕೃತವಾಗಿ ಯಾವುದೇ ವೇರಿಯೆಂಟ್ ವಿವರಣೆ ಕೊಟ್ಟಿಲ್ಲ, ಆದರೂ ಟ್ರೈಬರ್ ಅನ್ನು ಕ್ವಿಡ್ ನಲ್ಲಿರುವಂತಹ ವೇರಿಯೆಂಟ್ ಗಳೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು ಇದೆ.
ಈಗ ನಾವು ಟ್ರೈಬರ್ ನ ಪ್ರತಿಸ್ಪರ್ದಿಗಳ ಬೆಲೆ ಪಟ್ಟಿ ತಿಳಿಯೋಣ
Petrol |
ರೆನಾಲ್ಟ್ ಟ್ರೈಬರ್ ( ನಿರೀಕ್ಷಿತ) |
ಹುಂಡೈ ಗ್ರಾಂಡ್ i10 ನಿಯೋಸ್ |
ಮಾರುತಿ ಸುಜುಕಿ ಸ್ವಿಫ್ಟ್ |
ಫೋರ್ಡ್ ಫಿಗೊ |
ಫೋರ್ಡ್ ಫ್ರೀ ಸ್ಟೈಲ್ |
ಮಾರುತಿ ಇಗ್ನಿಸ್ |
Price (ex-showroom Delhi) |
Rs 5 lakh to Rs 7 lakh |
Rs 5 lakh to Rs 8 lakh (expected) |
Rs 5.14 lakh to Rs 7.97 lakh |
Rs 5.23 lakh to Rs 7.77 lakh |
Rs 5.81 lakh to Rs 7.46 lakh |
Rs 4.79 lakh to Rs 7.15 lakh |
ಈ ಬೆಲೆಗಳು ನಿಮಗೆ ಇತರ ಮಾರಾಟದಲ್ಲಿರುವ ಹ್ಯಾಚ್ ಬ್ಯಾಕ್ ಗಳಿಗಿಂತ ಹೆಚ್ಚು ಗಮನಾರ್ಹವಾಗಿದೆ ಎಂದೆನಿಸುತ್ತದೆಯೇ? ನಮಗೆ ಕಾಮೆಂಟ್ ಮೂಲಕ ತಿಳಿಸಿರಿ.
Write your Comment on Renault ಟ್ರೈಬರ್
Did Renault Triber remove Navigation ? There is no red navigation icon in the dash ?
I had test trial of this petrol version with great anxiety, but was highly disappointed with the drive. Being such a version company has not thought of power to product. It's not upto mark. Cannot sustain