ಈ ಜನವರಿಯಲ್ಲಿ ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ 73,000 ರೂ. ವರೆಗೆ ಡಿಸ್ಕೌಂಟ್
ರೆನಾಲ್ಟ್ ಕ್ವಿಡ್ ಗಾಗಿ yashika ಮೂಲಕ ಜನವರಿ 16, 2025 05:53 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ರೆನಾಲ್ಟ್ ಎಲ್ಲಾ ಮೂರು ಮೊಡೆಲ್‌ಗಳಾದ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಮೇಲೆ MY24 (ಮೊಡೆಲ್ ಇಯರ್) ಮತ್ತು MY25 ಎರಡರಲ್ಲೂ ಪ್ರಯೋಜನಗಳನ್ನು ನೀಡುತ್ತಿದೆ
-
ರೆನಾಲ್ಟ್ ಕಿಗರ್ ಅನ್ನು ಗರಿಷ್ಠ 73,000 ರೂ.ಗಳವರೆಗಿನ ಡಿಸ್ಕೌಂಟ್‌ಗಳೊಂದಿಗೆ ಪಡೆಯಬಹುದು.
-
ರೆನಾಲ್ಟ್ ಕ್ವಿಡ್ ಮತ್ತು ರೆನಾಲ್ಟ್ ಟ್ರೈಬರ್ ಕಾರುಗಳಲ್ಲಿ ಗ್ರಾಹಕರು 63,000 ರೂ.ಗಳವರೆಗೆ ಉಳಿಸಬಹುದು.
-
ಎಲ್ಲಾ ಆಫರ್‌ಗಳು 2025ರ ಜನವರಿ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.
ನೀವು ಈ ತಿಂಗಳು ರೆನಾಲ್ಟ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೊಂದು ಸಿಹಿಸುದ್ದಿಯಿದೆ. ಹೌದು ಈ ಕಾರು ತಯಾರಕ ಕಂಪೆನಿಯು ತಮ್ಮ ಮಾಸಿಕ ಆಫರ್‌ಗಳೊಂದಿಗೆ ಹಿಂತಿರುಗಿದ್ದಾರೆ. ಈ ಬಾರಿ, ರೆನಾಲ್ಟ್ ತನ್ನ ಡಿಸ್ಕೌಂಟ್‌ಗಳನ್ನು MY24 ಮತ್ತು MY25 ಆವೃತ್ತಿಗಳ ಮೂರು ಕಾರುಗಳಾದ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಕಿಗರ್ ಮೇಲೆ ವಿಸ್ತರಿಸಿದೆ. ಮೊಡೆಲ್-ವಾರು ವಿವರಗಳನ್ನು ಗಮನಿಸೋಣ:
ಗಮನಿಸಿ: 2025 ರಲ್ಲಿ ತಯಾರಾದ ಮೊಡೆಲ್‌ಗಳಿಗೆ ಹೋಲಿಸಿದರೆ 2024 ರಲ್ಲಿ ತಯಾರಾದ ಮಾದರಿಗಳು ಕಡಿಮೆ ರಿ-ಸೇಲ್ ವ್ಯಾಲ್ಯೂವನ್ನು ಹೊಂದಿರಬಹುದು ಎಂಬುದನ್ನು ಗಮನಿಸಿ.
ರೆನಾಲ್ಟ್ ಕ್ವಿಡ್
ಆಫರ್‌ಗಳು |
ಮೊತ್ತ |
|
MY24 |
MY25 |
|
ಕ್ಯಾಶ್ ಡಿಸ್ಕೌಂಟ್ |
30000 ರೂ.ವರೆಗೆ |
N/A |
ಎಕ್ಸ್‌ಚೇಂಜ್ ಬೋನಸ್ |
15000 ರೂ.ವರೆಗೆ |
15000 ರೂ.ವರೆಗೆ |
ಲಾಯಲ್ಟಿ ಬೋನಸ್ |
10000 ರೂ.ವರೆಗೆ |
10000 ರೂ.ವರೆಗೆ |
ಕಾರ್ಪೋರೇಟ್ |
8000 ರೂ.ವರೆಗೆ |
8000 ರೂ.ವರೆಗೆ |
ಒಟ್ಟು ಲಾಭಗಳು |
63000 ರೂ.ವರೆಗೆ |
33000 ರೂ.ವರೆಗೆ |
-
ಮೇಲಿನ ಡಿಸ್ಕೌಂಟ್‌ಗಳು ಕ್ವಿಡ್‌ನ ಬೇಸ್-ಸ್ಪೆಕ್ RXE ಮತ್ತು ಮಿಡ್-ಸ್ಪೆಕ್ RXL (O) ವೇರಿಯೆಂಟ್‌ಗಳನ್ನು ಹೊರತುಪಡಿಸಿ, ಎಲ್ಲಾ MY25 ಕ್ವಿಡ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತವೆ.
-
MY25 RXE ಮತ್ತು RXL (O) ವೇರಿಯೆಂಟ್‌ಗಳಿಗೆ, ಲಾಯಲ್ಟಿ ಪ್ರಯೋಜನಗಳು ಮಾತ್ರ ಅನ್ವಯಿಸುತ್ತವೆ.
-
MY24 ಗಾಗಿ, ಮೇಲೆ ತಿಳಿಸಲಾದ ಪ್ರಯೋಜನಗಳು ಹ್ಯಾಚ್‌ಬ್ಯಾಕ್‌ನ RXT, RXL(O) ಮತ್ತು ಕ್ಲೈಂಬರ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತವೆ. ಲೋವರ್-ಸ್ಪೆಕ್ ವೇರಿಯೆಂಟ್‌ಗಳನ್ನು ಲಾಯಲ್ಟಿ ಬೋನಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ ಎಂಬುದನ್ನು ಗಮನಿಸಿ.
-
ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಬೆಲೆ 4.70 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 6.45 ಲಕ್ಷ ರೂ.ಗಳವರೆಗೆ ಇರುತ್ತದೆ.
ರೆನಾಲ್ಟ್ ಟ್ರೈಬರ್
ಆಫರ್‌ಗಳು |
ಮೊತ್ತ |
|
MY24 |
MY25 |
|
ಕ್ಯಾಶ್ ಡಿಸ್ಕೌಂಟ್ |
30000 ರೂ.ವರೆಗೆ |
10000 ರೂ.ವರೆಗೆ |
ಎಕ್ಸ್‌ಚೇಂಜ್ ಬೋನಸ್ |
15000 ರೂ.ವರೆಗೆ |
15000 ರೂ.ವರೆಗೆ |
ಲಾಯಲ್ಟಿ ಬೋನಸ್ |
10000 ರೂ.ವರೆಗೆ |
10000 ರೂ.ವರೆಗೆ |
ಕಾರ್ಪೋರೇಟ್ |
8000 ರೂ.ವರೆಗೆ |
8000 ರೂ.ವರೆಗೆ |
ಒಟ್ಟು ಲಾಭಗಳು |
63000 ರೂ.ವರೆಗೆ |
43000 ರೂ.ವರೆಗೆ |
-
ಬೇಸ್-ಸ್ಪೆಕ್ RXE ವೇರಿಯೆಂಟ್ ಅನ್ನು ಹೊರತುಪಡಿಸಿ, ಗ್ರಾಹಕರು ಟ್ರೈಬರ್‌ನ ಎಲ್ಲಾ ವೇರಿಯೆಂಟ್‌ಗಳ ಮೇಲೆ ಮೇಲಿನ ರಿಯಾಯಿತಿಗಳನ್ನು ಪಡೆಯಬಹುದು.
-
RXE ವೇರಿಯೆಂಟ್‌ಗೆ ಕೇವಲ ಲಾಯಲ್ಟಿ ಬೋನಸ್(10,000 ರೂ.ವರೆಗೆ) ಲಭ್ಯವಿದೆ.
-
ರೆನಾಲ್ಟ್ ಟ್ರೈಬರ್ ಕಾರಿನ ಬೆಲೆ 6 ಲಕ್ಷ ರೂ.ಗಳಿಂದ 8.98 ಲಕ್ಷ ರೂ.ಗಳವರೆಗೆ ಇರುತ್ತದೆ.
ರೆನಾಲ್ಟ್ ಕೈಗರ್
ಆಫರ್‌ಗಳು |
ಮೊತ್ತ |
|
MY24 |
MY25 |
|
ಕ್ಯಾಶ್ ಡಿಸ್ಕೌಂಟ್ |
40000 ರೂ.ವರೆಗೆ |
10000 ರೂ.ವರೆಗೆ |
ಎಕ್ಸ್‌ಚೇಂಜ್ ಬೋನಸ್ |
15000 ರೂ.ವರೆಗೆ |
15000 ರೂ.ವರೆಗೆ |
ಲಾಯಲ್ಟಿ ಬೋನಸ್ |
10000 ರೂ.ವರೆಗೆ |
10000 ರೂ.ವರೆಗೆ |
ಕಾರ್ಪೋರೇಟ್ |
8000 ರೂ.ವರೆಗೆ |
8000 ರೂ.ವರೆಗೆ |
ಒಟ್ಟು ಲಾಭಗಳು |
73000 ರೂ.ವರೆಗೆ |
43000 ರೂ.ವರೆಗೆ |
-
ಮೇಲಿನ ಕ್ಯಾಶ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಬೋನಸ್ ಲೋವರ್-ಸ್ಪೆಕ್ RXE ಮತ್ತು RXL ವೇರಿಯೆಂಟ್‌ಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಕೈಗರ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ.
-
ನೀವು ಕೈಗರ್‌ನ RXE ಅಥವಾ RXL (MY24 ಅಥವಾ MY25) ವೇರಿಯೆಂಟ್ ಅನ್ನು ಆಯ್ಕೆ ಮಾಡಲು ಬಯಸಿದರೆ, ಅದನ್ನು ಲಾಯಲ್ಟಿ ಬೋನಸ್‌ನೊಂದಿಗೆ ಮಾತ್ರ ಪಡೆಯಬಹುದು.
-
ಕಿಗರ್ ಬೆಲೆ 6 ಲಕ್ಷ ರೂ.ಗಳಿಂದ 11.23 ಲಕ್ಷ ರೂ.ಗಳವರೆಗೆ ಇರುತ್ತದೆ.
ಗಮನಿಸಿ:
-
ಗ್ರಾಹಕರು ಅಗತ್ಯವಿರುವ ಲಾಯಲ್ಟಿ ಪುರಾವೆಗಳನ್ನು ಸಲ್ಲಿಸಿದರೆ ನೀಡಲಾದ ಕೊಡುಗೆಗಿಂತ ಹೆಚ್ಚಿನ ಹೆಚ್ಚುವರಿ ಲಾಯಲ್ಟಿ ಆಫರ್ ಅನ್ನು ಪಡೆಯಬಹುದು.
-
ಆಯ್ದ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳ ಉದ್ಯೋಗಿಗಳಿಗೆ ಎಲ್ಲಾ ರೆನಾಲ್ಟ್ ಆಫರ್‌ಗಳ ಮೇಲೆ ರೂ 8,000 ವರೆಗಿನ ಕಾರ್ಪೊರೇಟ್ ರಿಯಾಯಿತಿಗಳು ಲಭ್ಯವಿದೆ.
-
ರೈತರು, ಸರಪಂಚ್ ಮತ್ತು ಗ್ರಾಮ ಪಂಚಾಯತ್ ಸದಸ್ಯರು 4,000 ರೂ.ಗಳ ಗ್ರಾಮೀಣ ರಿಯಾಯಿತಿಯನ್ನು ಪಡೆಯಬಹುದು. ಆದರೆ, ನೀವು ಈ ಗ್ರಾಮೀಣ ರಿಯಾಯಿತಿ ಅಥವಾ ಕಾರ್ಪೊರೇಟ್ ರಿಯಾಯಿತಿಯನ್ನು ಮಾತ್ರ ಬಳಸಬಹುದು, ಎರಡನ್ನೂ ಪಡೆಯಲು ಸಾಧ್ಯವಿಲ್ಲ.
-
ವಾಹನ ಸ್ಕ್ರ್ಯಾಪೇಜ್‌ಗೆ 'ರಿಲೈವ್' ರಿಯಾಯಿತಿ ಮತ್ತು ಎಲ್ಲಾ ಕಾರುಗಳಿಗೆ ಲಾಯಲ್ಟಿ ಬೋನಸ್ ಅನ್ನು ಸಹ ನೀಡಲಾಗುತ್ತಿದೆ.
-
ಮೇಲೆ ತಿಳಿಸಲಾದ ಡಿಸ್ಕೌಂಟ್‌ಗಳು ರಾಜ್ಯ ಮತ್ತು ನಗರವನ್ನು ಆಧರಿಸಿ ಭಿನ್ನವಾಗಿರಬಹುದು. ನಿಖರವಾದ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಶೋರೂಮ್ ಅನ್ನು ಸಂಪರ್ಕಿಸಿ.
-
ಎಲ್ಲಾ ಬೆಲೆಗಳು ನವದೆಹಲಿಯ ಎಕ್ಸ್-ಶೋರೂಂ ಆಗಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ