2025ರ Renault Kiger ಮತ್ತು Renault Triber ಬಿಡುಗಡೆ, ಬೆಲೆಗಳು 6.1 ಲಕ್ಷ ರೂ.ನಿಂದ ಪ್ರಾರಂಭ
ರೆನಾಲ್ಟ್ ಕೈಗರ್ ಗಾಗಿ kartik ಮೂಲಕ ಫೆಬ್ರವಾರಿ 18, 2025 04:46 pm ರಂದು ಮಾರ್ಪಡಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲವಾದರೂ, ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸಲು ರೆನಾಲ್ಟ್ ಕಡಿಮೆ ವೇರಿಯೆಂಟ್‌ಗಳಲ್ಲಿ ಹೆಚ್ಚಿನ ಫೀಚರ್‌ಗಳನ್ನು ಪರಿಚಯಿಸಿದೆ
-
MY 2025ರ ರೆನಾಲ್ಟ್ ಕೈಗರ್ ಮತ್ತು ಟ್ರೈಬರ್ ಲೋವರ್-ಎಂಡ್ ವೇರಿಯೆಂಟ್‌ಗಳಲ್ಲಿ ಹೆಚ್ಚಿನ ಫೀಚರ್‌ಗಳನ್ನು ಪಡೆಯುತ್ತವೆ.
-
ಎರಡೂ ಕಾರುಗಳಲ್ಲಿ ಪವರ್ ವಿಂಡೋಗಳು ಮತ್ತು ಸೆಂಟ್ರಲ್ ಲಾಕಿಂಗ್ ಅನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ.
-
ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 8-ಇಂಚಿನ ಟಚ್‌ಸ್ಕ್ರೀನ್ ಈಗ ಬೇಸ್ ಮೊಡೆಲ್‌ಗಿಂತ ಒಂದು ಮೇಲಿರುವ RXL ವೇರಿಯೆಂಟ್‌ನಲ್ಲಿ ಲಭ್ಯವಿದೆ.
-
ಏರಡು ಮೊಡೆಲ್‌ಗಳ RXT (O) ವೇರಿಯೆಂಟ್‌ಗಳಲ್ಲಿ ಫ್ಲೆಕ್ಸ್ ವೀಲ್‌ಗಳನ್ನು ಪಡೆಯುತ್ತದೆ.
-
ಎರಡೂ ಕಾರುಗಳಲ್ಲಿ ಎಂಜಿನ್‌ಗಳನ್ನು E20 ಕಂಪ್ಲೈಂಟ್ ಮಾಡಲಾಗಿದೆ.
-
ರೆನಾಲ್ಟ್ ಕಿಗರ್ ಸಬ್-4ಎಮ್ ಎಸ್‌ಯುವಿ ಬೆಲೆ 6.1 ಲಕ್ಷ ರೂ.ನಿಂದ 10.1 ಲಕ್ಷ ರೂ.ಗಳವರೆಗೆ ಇದೆ.
-
ರೆನಾಲ್ಟ್ ಟ್ರೈಬರ್ ಎಮ್‌ಪಿವಿ ಬೆಲೆ 6.1 ಲಕ್ಷ ರೂ. ನಿಂದ 8.75 ಲಕ್ಷ ರೂ. ವರೆಗೆ ಇದೆ.
ರೆನಾಲ್ಟ್ ಭಾರತದಲ್ಲಿ MY2025 ಟ್ರೈಬರ್ ಮತ್ತು ಕಿಗರ್ ಅನ್ನು ಬಿಡುಗಡೆ ಮಾಡಿದೆ, ಎರಡೂ ಮೊಡೆಲ್‌ಗಳ ಬೆಲೆ 6.1 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಆಪ್‌ಡೇಟ್‌ಗಳು ವೇರಿಯೆಂಟ್‌ಗಳಲ್ಲಿ ಫೀಚರ್‌ನ ಪುನರ್‌ರಚನೆಯನ್ನು ಒಳಗೊಂಡಿವೆ, ಎರಡೂ ಮೊಡೆಲ್‌ಗಳ ಲೋವರ್ ವೇರಿಯೆಂಟ್‌ಗಳಲ್ಲಿ ಕೆಲವು ಉತ್ತಮ ಫೀಚರ್‌ಗಳು ಲಭ್ಯವಾಗುವಂತೆ ಮಾಡುತ್ತವೆ. ಅಲ್ಲದೆ, ಎರಡೂ ಮೊಡೆಲ್‌ಗಳಲ್ಲಿನ ಎಂಜಿನ್‌ಗಳನ್ನು ಈಗ E20 ಕಂಪ್ಲೈಂಟ್ ಮಾಡಲಾಗಿದೆ. ರೆನಾಲ್ಟ್ ಟ್ರೈಬರ್ ಮತ್ತು ರೆನಾಟ್ ಕಿಗರ್‌ನ ತ್ವರಿತ ಅವಲೋಕನ ಮತ್ತು ವೇರಿಯೆಂಟ್‌ಗಳಲ್ಲಿ ಹೊಸದೇನಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
2025 ರೆನಾಲ್ಟ್ ಕಿಗರ್ ಮತ್ತು ಟ್ರೈಬರ್: ವೇರಿಯೆಂಟ್-ವಾರು ಬೆಲೆಗಳು
ರೆನಾಲ್ಟ್ ಕಿಗರ್ |
||||
ವೇರಿಯಂಟ್ |
ನ್ಯಾ/ಎ ಪೆಟ್ರೋಲ್ ಮ್ಯಾನ್ಯುವಲ್ |
ನ್ಯಾ/ಎ ಪೆಟ್ರೋಲ್ ಎಎಮ್‌ಟಿ |
ಟರ್ಬೋ ಮ್ಯಾನ್ಯುವಲ್ |
ಟರ್ಬೊ ಸಿವಿಟಿ |
ಆರ್‌ಎಕ್ಸ್‌ಇ |
6.1 ಲಕ್ಷ ರೂ. |
- |
- |
- |
ಆರ್‌ಎಕ್ಸ್‌ಎಲ್ |
6.85 ಲಕ್ಷ ರೂ. |
7.35 ಲಕ್ಷ ರೂ. |
- |
- |
ಆರ್‌ಎಕ್ಸ್‌ಟಿ ಪ್ಲಸ್ |
8 ಲಕ್ಷ ರೂ. |
8.5 ಲಕ್ಷ ರೂ. |
- |
10 ಲಕ್ಷ ರೂ. |
ಆರ್‌ಎಕ್ಸ್‌ಝೆಡ್ |
8.8 ಲಕ್ಷ ರೂ. |
- |
10 ಲಕ್ಷ ರೂ. |
11 ಲಕ್ಷ ರೂ. |
ರೆನಾಲ್ಟ್ ಟ್ರೈಬರ್ |
||
ವೇರಿಯೆಂಟ್ |
ಮ್ಯಾನ್ಯುವಲ್ |
ಎಎಮ್‌ಟಿ |
ಆರ್‌ಎಕ್ಸ್‌ಇ |
6.1 ಲಕ್ಷ ರೂ. |
- |
ಆರ್‌ಎಕ್ಸ್‌ಎಲ್ |
7 ಲಕ್ಷ ರೂ. |
- |
ಆರ್‌ಎಕ್ಸ್‌ಟಿ |
7.8 ಲಕ್ಷ ರೂ. |
- |
ಆರ್‌ಎಕ್ಸ್‌ಝೆಡ್ |
8.23 ಲಕ್ಷ ರೂ. |
8.75 ಲಕ್ಷ ರೂ. |
ಇದನ್ನೂ ಸಹ ಓದಿ: 2025 Audi RS Q8 ಪರ್ಫಾರ್ಮೆನ್ಸ್ ಎಡಿಷನ್ ಭಾರತದಲ್ಲಿ ಬಿಡುಗಡೆ, ಬೆಲೆ 2.49 ಕೋಟಿ ರೂ.ನಿಗದಿ
ರೆನಾಲ್ಟ್ ಕಿಗರ್ ಮತ್ತು ಟ್ರೈಬರ್: ಬದಲಾವಣೆಗಳೇನು?
ಎರಡೂ ಕಾರುಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ, ಮುಖ್ಯ ಹೈಲೈಟ್‌ಗಳೆಂದರೆ ಫೀಚರ್‌ಗಳನ್ನು ಪುನರ್‌ರಚಿಸಲಾಗಿದೆ ಮತ್ತು ಮೊದಲಿಗಿಂತ ಹೆಚ್ಚು ಕೈಗೆಟಕುವ ಬೆಲೆಯಲ್ಲಿ ಹೊಂದಿದೆ. ಎಲ್ಲಾ ವಿವರಗಳು ಇಲ್ಲಿವೆ:
-
ರೆನಾಲ್ಟ್ ಈಗ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡುತ್ತಿದೆ, ಅದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ, ಇದು ಬೇಸ್‌ಗಿಂತ ಒಂದು ಮೇಲಿರುವ RXL ವೇರಿಯೆಂಟ್‌ನಿಂದ ಲಭ್ಯವಿದೆ.
-
ಸೆಂಟ್ರಲ್ ಲಾಕಿಂಗ್ ಬಾಗಿಲುಗಳು ಮತ್ತು ಎಲ್ಲಾ ನಾಲ್ಕು ಪವರ್ ವಿಂಡೋಗಳನ್ನು ಈಗ ಎರಡೂ ಕಾರುಗಳ ಎಲ್ಲಾ ವೇರಿಯೆಂಟ್‌ಗಳಲ್ಲಿ ಪ್ರಮಾಣಿತವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
-
ಎರಡೂ ಮೊಡೆಲ್‌ಗಳಲ್ಲಿನ RXT ವೇರಿಯೆಂಟ್‌ಗಳು ಈಗ ಅಲಾಯ್‌ಗಳ ವಿನ್ಯಾಸವನ್ನು ಅನುಕರಿಸುವ 15-ಇಂಚಿನ ಹೈಪರ್‌ಸ್ಟೈಲ್ ಸ್ಟೀಲ್ ಚಕ್ರಗಳನ್ನು ಪಡೆಯುತ್ತವೆ.
-
ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ರೆನಾಲ್ಟ್ ಕೈಗರ್‌ನ ಟಾಪ್-ಎಂಡ್ ಮೊಡೆಲ್ ಆರ್‌ಎಕ್ಸ್‌ಜೆಡ್‌ನಲ್ಲಿ ಈಗ ರಿಮೋಟ್ ಎಂಜಿನ್ ಸ್ಟಾರ್ಟ್ ಅನ್ನು ಪರಿಚಯಿಸಲಾಗಿದೆ.
ಈ ಬದಲಾವಣೆಗಳನ್ನು ಹೊರತುಪಡಿಸಿ, ಎರಡೂ ಮೊಡೆಲ್‌ಗಳ ಫೀಚರ್‌ಗಳ ಪಟ್ಟಿಯಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ರೆನಾಲ್ಟ್ ಕಿಗರ್ ಮತ್ತು ಟ್ರೈಬರ್: ಎಂಜಿನ್ ಆಯ್ಕೆಯ ವಿವರಣೆ
ಕಿಗರ್ ಮತ್ತು ಟ್ರೈಬರ್ ಎರಡರಲ್ಲೂ ಎಂಜಿನ್ ಆಯ್ಕೆಗಳನ್ನು ಈಗ E20 ಕಂಪ್ಲಿಯೆಂಟ್ ಮಾಡಲಾಗಿದೆ. ಅವುಗಳ ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
ರೆನಾಲ್ಟ್ ಕಿಗರ್ ಮತ್ತು ಟ್ರೈಬರ್ 1-ಲೀಟರ್ N/A ಪೆಟ್ರೋಲ್ |
ರೆನಾಲ್ಟ್ ಕಿಗರ್ 1-ಲೀಟರ್ ಟರ್ಬೊ ಪೆಟ್ರೋಲ್ |
ಪವರ್ |
72 ಪಿಎಸ್ |
100 ಪಿಎಸ್ |
ಟಾರ್ಕ್ |
96 ಎನ್‌ಎಮ್ |
160 ಎನ್‌ಎಮ್‌ವರೆಗೆ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನ್ಯುವಲ್/AMT |
5-ಸ್ಪೀಡ್ ಮ್ಯಾನ್ಯುವಲ್ / CVT |
N/A - ನ್ಯಾಚುರಲಿ ಆಸ್ಪಿರೇಟೆಡ್
ಸಿವಿಟಿ - ಕಂಟಿನ್ಯೂಸ್ಲಿ ವೇರಿಯಬಲ್ ಟ್ರಾನ್ಸ್ಮಿಷನ್
AMT - ಆಟೋಮೆಟೆಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್
ಟ್ರೈಬರ್ ಮತ್ತು ಕಿಗರ್ ಎರಡೂ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಂದರೆ, ಕಿಗರ್ ಅನ್ನು ಹೆಚ್ಚುವರಿಯಾಗಿ ಹೆಚ್ಚು ಶಕ್ತಿಶಾಲಿ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಪಡೆಯಬಹುದು.
ಪ್ರತಿಸ್ಪರ್ಧಿಗಳು
ರೆನಾಲ್ಟ್ ಕಿಗರ್ ಕಾರು, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಬ್ರೆಝಾ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO ಮತ್ತು ಟಾಟಾ ನೆಕ್ಸಾನ್‌ಗಳಂತಹ ದೈತ್ಯ ಕಾರುಗಳನ್ನು ಹೊಂದಿರುವ ಸಬ್-4ಎಮ್ ಎಸ್‌ಯುವಿ ಸೆಗ್ಮೆಂಟ್‌ಗೆ ಸೇರಿದೆ. ಇದು ಟಾಟಾ ಪಂಚ್, ಹ್ಯುಂಡೈ ಎಕ್ಸ್‌ಟರ್, ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಇತರ ಮೊಡೆಲ್‌ಗಳೊಂದಿಗೆ ಸಹ ಪ್ರತಿಸ್ಪರ್ಧಿಯಾಗಿದೆ.
ಮತ್ತೊಂದೆಡೆ, ರೆನಾಲ್ಟ್ ಟ್ರೈಬರ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್‌ಗಳಿಗೆ 7-ಸೀಟರ್ ಪರ್ಯಾಯವೆಂದು ಪರಿಗಣಿಸಬಹುದು.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ