ಈ ಮೇನಲ್ಲಿ ಮಾರುತಿ ನೆಕ್ಸಾ ಮಾಡೆಲ್‌ಗಳ ಮೇಲೆ ರೂ 54,000 ತನಕ ಉಳಿಸಿ
ಮಾರುತಿ ಬಾಲೆನೋ ಗಾಗಿ ansh ಮೂಲಕ ಮೇ 12, 2023 05:03 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಸುಜುಕಿ ತನ್ನ ಬಲೆನೊ, ಸಿಯಾಜ್ ಮತ್ತು ಇಗ್ನಿಸ್ ಕಾರುಗಳ ಮೇಲೆ ಮಾತ್ರ ರಿಯಾಯಿತಿಗಳನ್ನು ನೀಡುತ್ತಿದ್ದಾರೆ
- ಇಗ್ನಿಸ್ ಮೇಲೆ ರೂ 54,000 ತನಕದ ಅತ್ಯಂತ ಹೆಚ್ಚಿನ ರಿಯಾಯಿತಿ.
- ಹೆಚ್ಚು ಮಾರಾಟವಾಗುತ್ತಿರುವ ಬಲೆನೊ ರೂ 30,000 ತನಕದ ಪ್ರಯೋಜನಗಳನ್ನು ಪಡೆದಿದೆ.
- ಸಿಯಾಝ್ ಮೇಲೆ ರೂ 28,000 ತನಕದ ಅತ್ಯಂತ ಕಡಿಮೆ ಡಿಸ್ಕೌಂಟ್
- ಈ ಎಲ್ಲಾ ಆಫರ್‌ಗಳು ಮೇ ಕೊನೆಯ ತನಕ ಮಾನ್ಯವಾಗಿರುತ್ತದೆ.
ಈ ತಿಂಗಳ ಪ್ರಾರಂಭದಲ್ಲಿ, ಮಾರುತಿ ತನ್ನ ಅರೆನಾ ಮಾಡೆಲ್‌ಗಳಿಗಾಗಿ ತಿಂಗಳ ಆಫರ್‌ಗಳನ್ನು ಬಿಡುಗಡೆ ಮಾಡಿದ್ದು, ಈಗ ಈ ಕಾರುತಯಾರಕರು ನೆಕ್ಸಾ ಲೈನ್‌ಅಪ್‌ನಲ್ಲೂ ರಿಯಾಯಿತಿಗಳನ್ನು ನೀಡಿದೆ. ಮಾರುತಿಯು ಬಲೆನೊ, ಸಿಯಾಝ್ ಮತ್ತು ಇಗ್ನಿಸ್ ಮೇಲೆ ಈ ಮೇನಲ್ಲಿ ನಗದು, ವಿನಿಮಯ ಮತ್ತು ಕಾರ್ಪೋರೇಟ್ ಪ್ರಯೋಜನಗಳನ್ನು ನೀಡುತ್ತಿದ್ದು, ಮಾಡೆಲ್‌ವಾರು ಅವುಗಳ ವಿವರ ಇಲ್ಲಿದೆ:
ಬಲೆನೊ
ಆಫರ್‌ಗಳು |
ಮೊತ್ತ |
ನಗದು ರಿಯಾಯಿತಿ |
ರೂ 20,000 ತನಕ |
ವಿನಿಮಯ ಬೋನಸ್ |
ರೂ 10,000 ತನಕ |
ಒಟ್ಟು ಪ್ರಯೋಜನಗಳು |
ರೂ 30,000 ತನಕ |
- ಮೇಲೆ ಹೇಳಲಾದ ಆಫರ್‌ಗಳು ಹ್ಯಾಚ್‌ಬ್ಯಾಕ್‌ನ ಡೆಲ್ಟಾ ಮ್ಯಾನುವಲ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ.
- ಝೀಟಾ ಮತ್ತು ಆಲ್ಫಾ ಮ್ಯಾನುವಲ್ ಮತ್ತು AMT ವೇರಿಯೆಂಟ್‌ಗಳು ರೂ 10,000 ತನಕದ ಕಡಿಮೆ ನಗದು ರಿಯಾಯಿತಿ ಪಡೆದಿವೆ ಮತ್ತು ಸಿಗ್ಮಾ ಮತ್ತು ಡೆಲ್ಟಾ AMT ವೇರಿಯೆಂಟ್‌ಗಳಲ್ಲಿ ಯಾವುದೇ ನಗದು ರಿಯಾಯಿತಿ ಇರುವುದಿಲ್ಲ.
- ಎಲ್ಲಾ ವೇರಿಯೆಂಟ್‌ಗಳು ರೂ 10,000 ತನಕದ ನಗದು ರಿಯಾಯಿತಿಯನ್ನು ಪಡೆದಿವೆ.
- ಮಾರುತಿ ಬಲೆನೊ ಬೆಲೆಯನ್ನು ರೂ 61 ಲಕ್ಷದಿಂದ ರೂ 9.88 ಲಕ್ಷ ತನಕ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಮಾರುತಿ ಬಲೆನೋ ಪಡೆಯುತ್ತಿದೆ ವಿಭಾಗದಲ್ಲೇ ಮೊದಲಿನ ಸುರಕ್ಷತಾ ನವೀಕರಣ
ಸಿಯಾಝ್
ಆಫರ್‌ಗಳು |
ಮೊತ್ತ |
ವಿನಿಮಯ ಬೋನಸ್ |
ರೂ 25,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 3,000 ತನಕ |
ಒಟ್ಟು ಪ್ರಯೋಜನಗಳು |
ರೂ 28,000 ತನಕ |
- ಈ ರಿಯಾಯಿತಿಗಳು ಸಿಯಾಝ್‌ನ ಎಲ್ಲಾ ವೇರಿಯೆಂಟ್‌ಗಳಿಗೂ ಇವೆ ಆದರೆ ಸೆಡಾನ್‌ನಲ್ಲಿ ನಗದು ಆಫರ್ ಇರುವುದಿಲ್ಲ.
- ಮಾರುತಿ ಸಿಯಾಝ್ ರೂ 9.30 ಲಕ್ಷದಿಂದ ರೂ 12.29 ಲಕ್ಷ ತನಕದ ಬೆಲೆ ಶ್ರೇಣಿಯನ್ನು ಹೊಂದಿದೆ.
ಇಗ್ನಿಸ್
ಆಫರ್‌ಗಳು |
ಮೊತ್ತ |
ನಗದು ರಿಯಾಯಿತಿ |
ರೂ 35,000 ತನಕ |
ವಿನಿಮಯ ಬೋನಸ್ |
ರೂ 15,000 ತನಕ |
ಕಾರ್ಪೋರೇಟ್ ರಿಯಾಯಿತಿ |
ರೂ 4,000 ತನಕ |
ಒಟ್ಟು ಪ್ರಯೋಜನಗಳು |
ರೂ 54,000 ತನಕ |
- ಈ ಆಫರ್‌ಗಳು ಇಗ್ನಿಸ್‌ನ ಎಲ್ಲಾ ವೇರಿಯೆಂಟ್‌ಗಳಿಗೂ ಇರುತ್ತದೆ.
- ಈ ತಿಂಗಳು ಇಗ್ನಿಸ್ ಎಲ್ಲಾದಕ್ಕಿಂತಲೂ ಹೆಚ್ಚಿನ ರಿಯಾಯಿತಿಗಳನ್ನು ಪಡೆದಿದೆ.
- ಇದರ ಬೆಲೆಗಳು ರೂ 5.84 ಲಕ್ಷದಿಂದ ರೂ 8.16 ಲಕ್ಷದ ತನಕ ಇರುತ್ತದೆ.
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರವಾಗಿ ಇದೆ.
ಇತರ ಆಫರ್‌ಗಳು:
- ಈ ಮೇನಲ್ಲಿ ಹ್ಯುಂಡೈ ಕಾರುಗಳ ಮೇಲೆ ನೀವು ರೂ 50,000 ತನಕ ಈ ಆಫರ್‌ಗಳನ್ನು ಪಡೆಯಬಹದು.
- ಈ ಮೇನಲ್ಲಿ ನೀವು ಟಾಟಾ ಕಾರುಗಳ ಮೇಲೆ ರೂ 35,000 ತನಕದ ರಿಯಾಯಿತಿ ಪಡೆಯಿರಿ.
- ಈ ಮೇನಲ್ಲಿ ರೆನಾಲ್ಟ್ ಕೈಗರ್, ಟ್ರೈಬರ್ ಮತ್ತು ಕ್ವಿಡ್ ಮೇಲೆ ರೂ 62,000 ತನಕದ ರಿಯಾಯಿತಿ ಪಡೆಯಿರಿ
ಗಮನಿಸಿ: ಈ ಆಫರ್‌ಗಳು ನಿಮ್ಮ ಸ್ಥಳ ಮತ್ತು ವೇರಿಯೆಂಟ್ ಅನ್ನು ಆಧರಿಸಿ ವ್ಯತ್ಯಾಸವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ.
ಇನ್ನಷ್ಟು ಓದಿ : ಬಲೆನೊ AMT