Login or Register ಅತ್ಯುತ್ತಮ CarDekho experience ಗೆ
Login

ಈ ಮೇನಲ್ಲಿ ಮಾರುತಿ ನೆಕ್ಸಾ ಮಾಡೆಲ್‌ಗಳ ಮೇಲೆ ರೂ 54,000 ತನಕ ಉಳಿಸಿ

published on ಮೇ 12, 2023 05:03 pm by ansh for ಮಾರುತಿ ಬಾಲೆನೋ

ಮಾರುತಿ ಸುಜುಕಿ ತನ್ನ ಬಲೆನೊ, ಸಿಯಾಜ್ ಮತ್ತು ಇಗ್ನಿಸ್ ಕಾರುಗಳ ಮೇಲೆ ಮಾತ್ರ ರಿಯಾಯಿತಿಗಳನ್ನು ನೀಡುತ್ತಿದ್ದಾರೆ

  • ಇಗ್ನಿಸ್ ಮೇಲೆ ರೂ 54,000 ತನಕದ ಅತ್ಯಂತ ಹೆಚ್ಚಿನ ರಿಯಾಯಿತಿ.
  • ಹೆಚ್ಚು ಮಾರಾಟವಾಗುತ್ತಿರುವ ಬಲೆನೊ ರೂ 30,000 ತನಕದ ಪ್ರಯೋಜನಗಳನ್ನು ಪಡೆದಿದೆ.
  • ಸಿಯಾಝ್ ಮೇಲೆ ರೂ 28,000 ತನಕದ ಅತ್ಯಂತ ಕಡಿಮೆ ಡಿಸ್ಕೌಂಟ್
  • ಈ ಎಲ್ಲಾ ಆಫರ್‌ಗಳು ಮೇ ಕೊನೆಯ ತನಕ ಮಾನ್ಯವಾಗಿರುತ್ತದೆ.

ಈ ತಿಂಗಳ ಪ್ರಾರಂಭದಲ್ಲಿ, ಮಾರುತಿ ತನ್ನ ಅರೆನಾ ಮಾಡೆಲ್‌ಗಳಿಗಾಗಿ ತಿಂಗಳ ಆಫರ್‌ಗಳನ್ನು ಬಿಡುಗಡೆ ಮಾಡಿದ್ದು, ಈಗ ಈ ಕಾರುತಯಾರಕರು ನೆಕ್ಸಾ ಲೈನ್‌ಅಪ್‌ನಲ್ಲೂ ರಿಯಾಯಿತಿಗಳನ್ನು ನೀಡಿದೆ. ಮಾರುತಿಯು ಬಲೆನೊ, ಸಿಯಾಝ್ ಮತ್ತು ಇಗ್ನಿಸ್ ಮೇಲೆ ಈ ಮೇನಲ್ಲಿ ನಗದು, ವಿನಿಮಯ ಮತ್ತು ಕಾರ್ಪೋರೇಟ್ ಪ್ರಯೋಜನಗಳನ್ನು ನೀಡುತ್ತಿದ್ದು, ಮಾಡೆಲ್‌ವಾರು ಅವುಗಳ ವಿವರ ಇಲ್ಲಿದೆ:

ಬಲೆನೊ

ಆಫರ್‌ಗಳು

ಮೊತ್ತ

ನಗದು ರಿಯಾಯಿತಿ

ರೂ 20,000 ತನಕ

ವಿನಿಮಯ ಬೋನಸ್

ರೂ 10,000 ತನಕ

ಒಟ್ಟು ಪ್ರಯೋಜನಗಳು

ರೂ 30,000 ತನಕ

  • ಮೇಲೆ ಹೇಳಲಾದ ಆಫರ್‌ಗಳು ಹ್ಯಾಚ್‌ಬ್ಯಾಕ್‌ನ ಡೆಲ್ಟಾ ಮ್ಯಾನುವಲ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ.
  • ಝೀಟಾ ಮತ್ತು ಆಲ್ಫಾ ಮ್ಯಾನುವಲ್ ಮತ್ತು AMT ವೇರಿಯೆಂಟ್‌ಗಳು ರೂ 10,000 ತನಕದ ಕಡಿಮೆ ನಗದು ರಿಯಾಯಿತಿ ಪಡೆದಿವೆ ಮತ್ತು ಸಿಗ್ಮಾ ಮತ್ತು ಡೆಲ್ಟಾ AMT ವೇರಿಯೆಂಟ್‌ಗಳಲ್ಲಿ ಯಾವುದೇ ನಗದು ರಿಯಾಯಿತಿ ಇರುವುದಿಲ್ಲ.
  • ಎಲ್ಲಾ ವೇರಿಯೆಂಟ್‌ಗಳು ರೂ 10,000 ತನಕದ ನಗದು ರಿಯಾಯಿತಿಯನ್ನು ಪಡೆದಿವೆ.
  • ಮಾರುತಿ ಬಲೆನೊ ಬೆಲೆಯನ್ನು ರೂ 61 ಲಕ್ಷದಿಂದ ರೂ 9.88 ಲಕ್ಷ ತನಕ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಮಾರುತಿ ಬಲೆನೋ ಪಡೆಯುತ್ತಿದೆ ವಿಭಾಗದಲ್ಲೇ ಮೊದಲಿನ ಸುರಕ್ಷತಾ ನವೀಕರಣ

ಸಿಯಾಝ್

ಆಫರ್‌ಗಳು

ಮೊತ್ತ

ವಿನಿಮಯ ಬೋನಸ್

ರೂ 25,000 ತನಕ

ಕಾರ್ಪೋರೇಟ್ ರಿಯಾಯಿತಿ

ರೂ 3,000 ತನಕ

ಒಟ್ಟು ಪ್ರಯೋಜನಗಳು

ರೂ 28,000 ತನಕ

  • ಈ ರಿಯಾಯಿತಿಗಳು ಸಿಯಾಝ್‌ನ ಎಲ್ಲಾ ವೇರಿಯೆಂಟ್‌ಗಳಿಗೂ ಇವೆ ಆದರೆ ಸೆಡಾನ್‌ನಲ್ಲಿ ನಗದು ಆಫರ್ ಇರುವುದಿಲ್ಲ.
  • ಮಾರುತಿ ಸಿಯಾಝ್ ರೂ 9.30 ಲಕ್ಷದಿಂದ ರೂ 12.29 ಲಕ್ಷ ತನಕದ ಬೆಲೆ ಶ್ರೇಣಿಯನ್ನು ಹೊಂದಿದೆ.

ಇಗ್ನಿಸ್

ಆಫರ್‌ಗಳು

ಮೊತ್ತ

ನಗದು ರಿಯಾಯಿತಿ

ರೂ 35,000 ತನಕ

ವಿನಿಮಯ ಬೋನಸ್

ರೂ 15,000 ತನಕ

ಕಾರ್ಪೋರೇಟ್ ರಿಯಾಯಿತಿ

ರೂ 4,000 ತನಕ

ಒಟ್ಟು ಪ್ರಯೋಜನಗಳು

ರೂ 54,000 ತನಕ

  • ಈ ಆಫರ್‌ಗಳು ಇಗ್ನಿಸ್‌ನ ಎಲ್ಲಾ ವೇರಿಯೆಂಟ್‌ಗಳಿಗೂ ಇರುತ್ತದೆ.
  • ಈ ತಿಂಗಳು ಇಗ್ನಿಸ್ ಎಲ್ಲಾದಕ್ಕಿಂತಲೂ ಹೆಚ್ಚಿನ ರಿಯಾಯಿತಿಗಳನ್ನು ಪಡೆದಿದೆ.
  • ಇದರ ಬೆಲೆಗಳು ರೂ 5.84 ಲಕ್ಷದಿಂದ ರೂ 8.16 ಲಕ್ಷದ ತನಕ ಇರುತ್ತದೆ.

ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರವಾಗಿ ಇದೆ.

ಇತರ ಆಫರ್‌ಗಳು:

ಗಮನಿಸಿ: ಈ ಆಫರ್‌ಗಳು ನಿಮ್ಮ ಸ್ಥಳ ಮತ್ತು ವೇರಿಯೆಂಟ್ ಅನ್ನು ಆಧರಿಸಿ ವ್ಯತ್ಯಾಸವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ.

ಇನ್ನಷ್ಟು ಓದಿ : ಬಲೆನೊ AMT

a
ಅವರಿಂದ ಪ್ರಕಟಿಸಲಾಗಿದೆ

ansh

  • 19 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಬಾಲೆನೋ

Read Full News

explore similar ಕಾರುಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಏಪ್ರಿಲ್ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ