Skoda Kylaq ವರ್ಸಸ್ Tata Nexon: NCAP ರೇಟಿಂಗ್‌ಗಳು ಮತ್ತು ಸ್ಕೋರ್‌ಗಳ ಹೋಲಿಕೆ
ಎರಡೂ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳು 5-ಸ್ಟಾರ್ ರೇಟಿಂಗ್ ಪಡೆದಿದ್ದರೂ, ನೆಕ್ಸಾನ್‌ಗೆ ಹೋಲಿಸಿದರೆ ಕೈಲಾಕ್ ಚಾಲಕನ ಕಾಲುಗಳಿಗೆ ಸ್ವಲ್ಪ ಉತ್ತಮ ರಕ್ಷಣೆ ನೀಡುತ್ತದೆ
ಭಾರತದಲ್ಲಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ಗೆ ಹೊಸದಾಗಿ ಪ್ರವೇಶ ಪಡೆದ ಸ್ಕೋಡಾ ಕೈಲಾಕ್ ಅನ್ನು ಇತ್ತೀಚೆಗೆ ಭಾರತ್ NCAP ಕ್ರ್ಯಾಶ್ ಟೆಸ್ಟ್ ಮಾಡಿತು. ನಿರೀಕ್ಷೆಯಂತೆ, ಕೈಲಾಕ್ ಪರೀಕ್ಷೆಯಲ್ಲಿ ಪೂರ್ಣ ಅಂಕಗಳೊಂದಿಗೆ ಉತ್ತೀರ್ಣವಾಯಿತು, 5 ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಪಡೆದಿದೆ. ಕೈಲಾಕ್ ಅನ್ನು ಟಾಟಾ ನೆಕ್ಸಾನ್‌ಗೆ ನೇರ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು, ಇದು ಸಹ BNCAP ನಿಂದ ಅದೇ ರೇಟಿಂಗ್‌ಗಳನ್ನು ಪಡೆದಿದೆ. ಕೈಲಾಕ್ ಮತ್ತು ನೆಕ್ಸಾನ್‌ನ ಕ್ರ್ಯಾಶ್ ಪರೀಕ್ಷಾ ಫಲಿತಾಂಶಗಳನ್ನು ವಿವರವಾಗಿ ಹೋಲಿಸೋಣ.
ಪಲಿತಾಂಶಗಳು
ಮಾನದಂಡ |
ಸ್ಕೋಡಾ ಕೈಲಾಕ್ |
ಟಾಟಾ ನೆಕ್ಸಾನ್ |
ವಯಸ್ಕ ಪ್ರಯಾಣಿಕರ ರಕ್ಷಣೆ (AOP) ಸ್ಕೋರ್ |
30.88/32 |
29.41/32 |
ಮಕ್ಕಳು ಪ್ರಯಾಣಿಸುವಾಗಿನ ರಕ್ಷಣೆ (COP) ಸ್ಕೋರ್ |
45/49 |
43.83/49 |
ವಯಸ್ಕರ ಸುರಕ್ಷತಾ ರೇಟಿಂಗ್ |
5-ಸ್ಟಾರ್ |
5-ಸ್ಟಾರ್ |
ಮಕ್ಕಳ ಸುರಕ್ಷತಾ ರೇಟಿಂಗ್ |
5-ಸ್ಟಾರ್ |
5-ಸ್ಟಾರ್ |
ಮುಂಭಾಗದಿಂದ ಡಿಕ್ಕಿಯಾದಗ ವಿರೂಪಗೊಳಿಸಬಹುದಾದ ತಡೆಗೋಡೆ ಪರೀಕ್ಷಾ ಸ್ಕೋರ್ |
15.04/16 |
14.65/16 |
ಬದಿಯಿಂದ ಡಿಕ್ಕಿಯಾದಗ ವಿರೂಪಗೊಳಿಸಬಹುದಾದ ತಡೆಗೋಡೆ ಪರೀಕ್ಷಾ ಸ್ಕೋರ್ |
15.84/16 |
14.76/16 |
ಡೈನಾಮಿಕ್ ಸ್ಕೋರ್ (ಮಕ್ಕಳ ಸುರಕ್ಷತೆ) |
24/24 |
22.83/24 |
ಸ್ಕೋಡಾ ಕೈಲಾಕ್
ಮುಂಭಾಗದ ಆಫ್‌ಸೆಟ್ ಡಿಫಾರ್ಮೇಬಲ್ ಬ್ಯಾರಿಯರ್ ಪರೀಕ್ಷೆಯಿಂದ ಪ್ರಾರಂಭಿಸಿ, ಸ್ಕೋಡಾ ಕೈಲಾಕ್ ಚಾಲಕ ಮತ್ತು ಸಹ-ಚಾಲಕರ ತಲೆ ಮತ್ತು ಕುತ್ತಿಗೆಗೆ 'ಉತ್ತಮ' ರಕ್ಷಣೆಯನ್ನು ನೀಡಿತು, ಆದರೆ ಚಾಲಕನ ಎದೆಗೆ ನೀಡಲಾದ ರಕ್ಷಣೆಯನ್ನು 'ಸರಾಸರಿ' ಎಂದು ರೇಟ್ ಮಾಡಲಾಗಿದೆ. ಆದಾಗ್ಯೂ, ಸಹ-ಚಾಲಕನ ಎದೆಗೆ 'ಉತ್ತಮ' ರಕ್ಷಣೆ ನೀಡಲಾಯಿತು. ಇದಲ್ಲದೆ, ಚಾಲಕನ ಎಡಗಾಲಿಗೆ 'ಸಾಕಾಗುವಷ್ಟು' ರಕ್ಷಣೆ ಸಿಕ್ಕಿತು, ಆದರೆ ಮುಂಭಾಗದ ಪ್ರಯಾಣಿಕರ ಎಡ ಮತ್ತು ಬಲ ಕಾಲುಗಳೆರಡಕ್ಕೂ 'ಉತ್ತಮ' ರಕ್ಷಣೆ ಸಿಕ್ಕಿತು. ಪಕ್ಕದ ಚಲಿಸಬಲ್ಲ ವಿರೂಪಗೊಳಿಸಬಹುದಾದ ತಡೆಗೋಡೆ ಪರೀಕ್ಷೆಯಲ್ಲಿ, ಚಾಲಕನ ಎದೆಗೆ ನೀಡಲಾದ ರಕ್ಷಣೆ 'ಸಾಕಾಗುವಷ್ಟು' ಇತ್ತು, ಆದರೆ ತಲೆ ಮತ್ತು ಹೊಟ್ಟೆಗೆ ರಕ್ಷಣೆ ಉತ್ತಮವಾಗಿತ್ತು. ಸೈಡ್ ಪೋಲ್ ಪರೀಕ್ಷೆಯಲ್ಲಿ, ಚಾಲಕನ ತಲೆ, ಎದೆ, ಹೊಟ್ಟೆ ಮತ್ತು ಸೊಂಟ ಎಲ್ಲವೂ ಉತ್ತಮ ರಕ್ಷಣೆಯನ್ನು ಪಡೆದುಕೊಂಡವು.
18 ತಿಂಗಳ ಮತ್ತು 3 ವರ್ಷದ ಮಕ್ಕಳಿಗೆ, ಮುಂಭಾಗ ಮತ್ತು ಬದಿಗೆ ಕ್ರಮವಾಗಿ ಡೈನಾಮಿಕ್ ಸ್ಕೋರ್ 8 ರಲ್ಲಿ 8 ಮತ್ತು 4 ರಲ್ಲಿ 4 ಆಗಿತ್ತು.
ಟಾಟಾ ನೆಕ್ಸಾನ್
ಮುಂಭಾಗದ ಕ್ರ್ಯಾಶ್ ಪರೀಕ್ಷೆಯಲ್ಲಿ, ಟಾಟಾ ನೆಕ್ಸಾನ್ ಚಾಲಕ ಮತ್ತು ಪ್ರಯಾಣಿಕರ ತಲೆ ಮತ್ತು ಕುತ್ತಿಗೆ ಎರಡಕ್ಕೂ ಉತ್ತಮ ರಕ್ಷಣೆ ನೀಡಿತು. ಚಾಲಕನ ಎದೆಗೆ ರಕ್ಷಣೆ ʼಸಾಕಷ್ಟುʼ ಎಂದು ರೇಟ್ ಮಾಡಲಾಗಿದ್ದು, ಸಹ-ಚಾಲಕನಿಗೆ ಅದು ಉತ್ತಮವಾಗಿದೆ ಎಂದು ರೇಟ್ ಮಾಡಲಾಗಿದೆ. ಚಾಲಕ ಮತ್ತು ಸಹ-ಚಾಲಕನ ಎರಡೂ ಕಾಲುಗಳಿಗೆ ಸಾಕಷ್ಟು ರಕ್ಷಣೆ ನೀಡಲಾಯಿತು. ಸೈಡ್ ಮೂವಬಲ್ ಬ್ಯಾರಿಯರ್ ಪರೀಕ್ಷೆಯ ಫಲಿತಾಂಶಗಳು ಕೈಲಾಕ್‌ನಂತೆಯೇ ಇದ್ದವು, ಇದರಲ್ಲಿ ಚಾಲಕನ ತಲೆ ಮತ್ತು ಹೊಟ್ಟೆಗೆ ರಕ್ಷಣೆ ಉತ್ತಮವಾಗಿದೆ ಎಂದು ರೇಟ್ ಮಾಡಲಾಗಿದೆ ಮತ್ತು ಎದೆಯು ಸಾಕಷ್ಟು ರೇಟಿಂಗ್ ಅನ್ನು ಪಡೆದುಕೊಂಡಿದೆ. ಅದೇ ರೀತಿ, ಸೈಡ್ ಪೋಲ್ ಪರೀಕ್ಷೆಯಲ್ಲಿ ಚಾಲಕನ ತಲೆ, ಎದೆ, ಹೊಟ್ಟೆ ಮತ್ತು ಸೊಂಟ ಎಲ್ಲವೂ ಉತ್ತಮ ರಕ್ಷಣೆಯನ್ನು ಪಡೆದುಕೊಂಡವು.
18 ತಿಂಗಳ ಮಗುವಿನ ಮುಂಭಾಗ ಮತ್ತು ಸೈಡ್‌ನ ರಕ್ಷಣೆಗೆ, ಡೈನಾಮಿಕ್ ಸ್ಕೋರ್ ಕ್ರಮವಾಗಿ 8 ರಲ್ಲಿ 7 ಮತ್ತು 4 ರಲ್ಲಿ 4 ಆಗಿತ್ತು. ಅದೇ ರೀತಿ, 3 ವರ್ಷದ ಮಗುವಿಗೆ, ಡೈನಾಮಿಕ್ ಸ್ಕೋರ್ ಕ್ರಮವಾಗಿ 8 ರಲ್ಲಿ 7.83 ಮತ್ತು 4 ರಲ್ಲಿ 4 ಆಗಿತ್ತು.
ಗಮನಿಸಿದ ಪ್ರಮುಖ ಅಂಶಗಳು
ಕೈಲಾಕ್ ಮುಂಭಾಗದ ಕ್ರ್ಯಾಶ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿತು. ಏಕೆಂದರೆ ಇದು ನೆಕ್ಸಾನ್‌ಗೆ ಹೋಲಿಸಿದರೆ ಸಹ-ಚಾಲಕನ ಎಡ ಮತ್ತು ಬಲ ಕಾಲುಗಳು ಮತ್ತು ಚಾಲಕನ ಬಲ ಕಾಲಿಗೆ ಉತ್ತಮ ರಕ್ಷಣೆ ನೀಡಿತು. ಮಕ್ಕಳ ರಕ್ಷಣೆಗಾಗಿ ಇದು ಹೆಚ್ಚಿನ ಕ್ರಿಯಾತ್ಮಕ ಅಂಕಗಳನ್ನು ಪಡೆದುಕೊಂಡಿದೆ, ಈ ಕಾರಣದಿಂದಾಗಿ ಸ್ಕೋಡಾದ ಈ ಎಸ್‌ಯುವಿಯ ಒಟ್ಟಾರೆ ಮಕ್ಕಳ ಪ್ರಯಾಣಿಕರ ಸುರಕ್ಷತಾ ಸ್ಕೋರ್ ಟಾಟಾ ಎಸ್‌ಯುವಿಗಿಂತ ಹೆಚ್ಚಾಗಿದೆ.
ಆಫರ್‌ನಲ್ಲಿರುವ ಸುರಕ್ಷತಾ ಫೀಚರ್‌ಗಳು
ಸ್ಕೋಡಾ ಕೈಲಾಕ್ ಮತ್ತು ಟಾಟಾ ನೆಕ್ಸಾನ್ ಎರಡೂ ಸುರಕ್ಷತಾ ಫೀಚರ್‌ಗಳಾದ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು EBD ಯೊಂದಿಗೆ ABS ನೊಂದಿಗೆ ಬರುತ್ತವೆ. ಆದರೆ, ಸ್ಕೋಡಾ ಕೈಲಾಕ್‌ಗಿಂತ ಹೆಚ್ಚುವರಿಯಾಗಿ ಟಾಟಾ ನೆಕ್ಸಾನ್ 360-ಡಿಗ್ರಿ ಕ್ಯಾಮೆರಾದೊಂದಿಗೆ ಬರುತ್ತದೆ, ಆದರೆ ಕೈಲಾಕ್ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಮಾತ್ರ ಬರುತ್ತದೆ.
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಕೈಲಾಕ್ |
ಟಾಟಾ ನೆಕ್ಸಾನ್ |
7.89 ಲಕ್ಷ ರೂ. ನಿಂದ 14.40 ಲಕ್ಷ ರೂ. |
8 ಲಕ್ಷ ರೂ.ಗಳಿಂದ 15.80 ಲಕ್ಷ ರೂ. |
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಆಗಿದೆ.
ಈ ಎರಡೂ ಎಸ್‌ಯುವಿಗಳನ್ನು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳಿಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ