Login or Register ಅತ್ಯುತ್ತಮ CarDekho experience ಗೆ
Login

Maruti Jimny: ಭಾರತದಲ್ಲಿರುವ ಆವೃತ್ತಿಗಿಂತ ಹೆಚ್ಚಿನ ಬಣ್ಣಗಳನ್ನು ಪಡೆಯಲಿರುವ ದಕ್ಷಿಣ ಆಫ್ರಿಕಾದ 5-ಡೋರ್‌ ಜಿಮ್ನಿ

published on ನವೆಂಬರ್ 20, 2023 07:56 am by ansh for ಮಾರುತಿ ಜಿಮ್ನಿ

ಭಾರತದ ಹೊರಗಡೆ 5 ಬಾಗಿಲುಗಳ ಸುಜುಕಿ ಜಿಮ್ನಿಯನ್ನು ಪಡೆದ ದೇಶಗಳ ಪೈಕಿ ದಕ್ಷಿಣ ಆಫ್ರಿಕಾವು ಮೊದಲ ಮಾರುಕಟ್ಟೆ ಎನಿಸಿದೆ

  • ಈ ಘಟಕಗಳನ್ನು ಭಾರತದಿಂದಲೇ ರಫ್ತು ಮಾಡಿದ್ದರೂ, ಇವು ಬಣ್ಣಗಳಲ್ಲಿ ಹೆಚ್ಚಿನ ಆಯ್ಕೆಗಳನ್ನು ಹೊಂದಿವೆ.
  • ಸಿಲ್ಕಿ ಸಿಲ್ವರ್‌ ಮೆಟಾಲಿಕ್‌, ಜಂಗಲ್‌ ಗ್ರೀನ್‌ ಮತ್ತು ಶಿಫಾನ್‌ ಐವರಿ ಮೆಟಾಲಿಕ್‌ ಡ್ಯುವಲ್‌ ಟೋನ್‌ ಗಳು ಈ 3 ಹೆಚ್ಚುವರಿ ಬಣ್ಣಗಳೆನಿಸಿವೆ.
  • ಇದು ಭಾರತೀಯ ಆವೃತ್ತಿಯನ್ನು ಹೊಂದಿರುವ ಅದೇ 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಅನ್ನು ಪಡೆದಿದ್ದರೂ ಕಡಿಮೆ ಔಟ್ಪುಟ್‌ ಅನ್ನು ಹೊಂದಿರಲಿದೆ.
  • 9 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್ ಸಿಸ್ಟಂ, ಅಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್, 6ರ ತನಕ ಏರ್‌ ಬ್ಯಾಗುಗಳು ಮತ್ತು ರಿಯರ್‌ ವ್ಯೂ ಕ್ಯಾಮರಾವನ್ನು ಹೊಂದಿದೆ.

ಭಾರತದಲ್ಲಿ ನಿರ್ಮಿಸಲಾಗಿರುವ ಮಾರುತಿ ಜಿಮ್ನಿ 5 ಬಾಗಿಲುಗಳ ವಾಹನವನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಲಾಗಿದ್ದು ಇದು ಅದೇ ಎಂಜಿನ್‌ ಆಯ್ಕೆ ಮತ್ತು ವೈಶಿಷ್ಟ್ಯಗಳು ಹಾಗೂ ಹೆಚ್ಚು ದುಬಾರಿ ಬೆಲೆಯೊಂದಿಗೆ ದೊರೆಯುತ್ತಿದೆ. ಈ ಉದ್ದನೆಯ ಆಫ್‌ ರೋಡರ್‌ ವಾಹನದ ಹೆಚ್ಚಿನ ವೈಶಿಷ್ಟ್ಯಗಳು ಭಾರತೀಯ ಆವೃತ್ತಿಯಲ್ಲಿ ಕಾಣ ಸಿಕ್ಕರೂ, ದಕ್ಷಿಣ ಆಫ್ರಿಕಾದಲ್ಲಿ ಇದು ಹೆಚ್ಚಿನ ಬಣ್ಣಗಳನ್ನು ಹೊಂದಿದೆ. ಇವುಗಳನ್ನು ನೀವು ಇಲ್ಲಿ ನೋಡಬಹುದು.

ಬಣ್ಣಗಳು

ಇದು 6 ಮೋನೋಟೋನ್‌ ಬಣ್ಣಗಳ ಆಯ್ಕೆಗಳೊಂದಿಗೆ ಬರುತ್ತದೆ

  • ಸೆಲೆಸ್ಟಿಯಲ್‌ ಬ್ಲೂ ಪರ್ಲ್‌ ಮೆಟಾಲಿಕ್‌ (ಭಾರತದ ಜಿಮ್ನಿಯಲ್ಲಿ ನೆಕ್ಸಾ ಬ್ಲೂ ಎಂಬ ಹೆಸರಿನಲ್ಲಿ ದೊರೆಯುತ್ತದೆ)
  • ಆರ್ಕಟಿಕ್‌ ವೈಟ್‌ ಪರ್ಲ್‌ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಸಿಲ್ಕಿ ಸಿಲ್ವರ್‌ ಮೆಟಾಲಿಕ್‌ (ಹೊಸತು)
  • ಬ್ಲೂಯಿಶ್‌ ಬ್ಲ್ಯಾಕ್ ಪರ್ಲ್‌ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಗ್ರಾನೈಟ್‌ ಗ್ರೇ ಮೆಟಾಲಿಕ್ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಜಂಗಲ್‌ ಗ್ರೀನ್‌ (ಹೊಸತು)
  • ಈ ಬಣ್ಣವು (ಜಂಗಲ್ ಗ್ರೀನ್) ಭಾರತದಲ್ಲಿ ಮಿಲಿಟರಿ ವಾಹನಗಳಿಗೆ ಬಳಸುವ ಹಸಿರು ಛಾಯೆಗೆ ಸ್ವಲ್ಪ ಹತ್ತಿರದಲ್ಲಿದೆ ಎಂದು ನಾವು ನಂಬುತ್ತೆವೆ. ಮತ್ತು ಆದ್ದರಿಂದ ಇದನ್ನು ನಮಗೆ ಇನ್ನೂ ನೀಡಲಾಗುತ್ತಿಲ್ಲ.

ಅಲ್ಲದೆ 3 ಡ್ಯುವಲ್‌ ಟೋನ್‌ ಛಾಯೆಗಳು ದೊರೆಯುತ್ತಿವೆ.

  • ಸಿಜ್ಲಿಂಗ್‌ ರೆಡ್‌ ಮೆಟಾಲಿಕ್‌ + ಬ್ಲೂಯಿಶ್‌ ಬ್ಲ್ಯಾಕ್ ಪರ್ಲ್‌ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಕೈನೆಟಿಕ್‌ ಯೆಲೊ + ಬ್ಲೂಯಿಶ್‌ ಬ್ಲ್ಯಾಕ್ ಪರ್ಲ್‌ (ಭಾರತೀಯ ಆವೃತ್ತಿಯಲ್ಲಿ ದೊರೆಯುತ್ತಿದೆ)
  • ಶಿಫಾನ್‌ ಐವರಿ ಮೆಟಾಲಿಕ್‌ + ಬ್ಲೂಯಿಶ್‌ ಬ್ಲ್ಯಾಕ್‌ ಪರ್ಲ್‌ (ಹೊಸತು)
  • ಬೆಳ್ಳಿ ಅಥವಾ ಬೂದು ಬಣ್ಣಕ್ಕಿಂತ ಭಿನ್ನವಾಗಿದ್ದು ಎದ್ದು ಕಾಣುವ ಸರಳ ಮತ್ತು ಗಂಭೀರ ಛಾಯೆಯು (ಶಿಫಾನ್‌ ಐವರಿ ಮೆಟಾಲಿಕ್)‌ ಇಲ್ಲಿ ದೊರೆಯುತ್ತಿಲ್ಲ. ಅಲ್ಲದೆ ಇದು ಭಾರತೀಯ ಗ್ರಾಹಕರ ಪೈಕಿ ಹೆಚ್ಚು ಜನಪ್ರಿಯತೆಯನ್ನು ಹೊಂದಿಲ್ಲ.
  • ರೆಡ್‌ ಮೆಟಾಲಿಕ್‌ ಬಣ್ಣದ ಆಯ್ಕೆಯು ದಕ್ಷಿಣ ಆಫ್ರಿಕಾದಲ್ಲಿ ಡ್ಯುವಲ್‌ ಟೋನ್‌ ಛಾಯೆಯಲ್ಲಿ ದೊರೆಯುತ್ತಿದ್ದ, ಇದನ್ನು ಮೋನೋಟೋನ್‌ ಛಾಯೆಯಲ್ಲಿಯೂ ನೀಡಲಾಗುತ್ತಿದೆ.

ಇದನ್ನು ಸಹ ಓದಿರಿ: ಹೊಸ ಸುಜುಕಿ ಸ್ವಿಫ್ಟ್‌ ಕಾರಿನ ಬಣ್ಣಗಳ ವಿವರ ಬಹಿರಂಗ! ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಸ್ವಿಫ್ಟ್‌ ಕಾರನ್ನು ನೀವು ಯಾವ ಬಣ್ಣದಲ್ಲಿ ನೋಡಲು ಇಷ್ಟಪಡುತ್ತೀರಿ?

ಪವರ್‌ ಟ್ರೇನ್

ದಕ್ಷಿಣ ಆಫ್ರಿಕಾದ ರಸ್ತೆಗಳಲ್ಲಿ ಓಡಾಡಲಿರುವ 5 ಬಾಗಿಲುಗಳ ಜಿಮ್ನಿಯು 1.5 ಲೀಟರ್‌ ಗಳ ಪೆಟ್ರೋಲ್‌ ಎಂಜಿನ್‌ ಅನ್ನೇ ಬಳಸಲಿದ್ದು, 102 PS ಮತ್ತು 130 Nm ನಷ್ಟು ಕಡಿಮೆ ಔಟ್ಪುಟ್‌ ಅನ್ನು ನೀಡಲಿದೆ. ಅಲ್ಲದೆ ಅವುಗಳ ಟ್ರಾನ್ಸ್‌ ಮಿಶನ್‌ ಆಯ್ಕೆಯಲ್ಲಿಯೂ ಯಾವುದೇ ಬದಲಾವಣೆ ಇಲ್ಲ: 5-ಸ್ಪೀಡ್‌ ಮ್ಯಾನುವಲ್‌ ಮತ್ತು 4-ಸ್ಪೀಡ್‌ ಅಟೋಮ್ಯಾಟಿಕ್.

ಇದನ್ನು ಸಹ ಓದಿರಿ: ಹೊಸ ಎಂಜಿನ್‌ ಪಡೆದ 2024 ಮಾರುತಿ ಸುಜುಕಿ ಸ್ವಿಫ್ಟ್‌ ಕಾರು, ವಿವರಗಳು ಬಹಿರಂಗ!

ಅಲ್ಲದೆ ಭಾರತೀಯ ಆವೃತ್ತಿಯಂತೆ, ದಕ್ಷಿಣ ಆಫ್ರಿಕಾದ 5 ಬಾಗಿಲುಗಳ ಸುಜುಕಿ ಜಿಮ್ನಯಿ ಕಡಿಮೆ ಶ್ರೇಣಿಯ ಟ್ರಾನ್ಸ್‌ ಫರ್‌ ಕೇಸ್‌ ಜೊತೆಗೆ ಪ್ರಮಾಣಿತ ಫೋರ್‌ ವೀಲ್‌ ಡ್ರೈವ್‌ ಅನ್ನು ಪಡೆಯಲಿದ್ದು, 210 mm ನಷ್ಟು ಗ್ರೌಂಡ್‌ ಕ್ಲಿಯರೆನ್ಸ್‌ ಅನ್ನು ಪಡೆಯಲಿದೆ.

ಗುಣಲಕ್ಷಣಗಳು ಮತ್ತು ಸುರಕ್ಷತೆ

ಭಾರತೀಯ ಮಾದರಿಯು ಹೊಂದಿರುವ ವಿಶೇಷತೆಗಳನ್ನೇ ಇದು ಹೊಂದಿರಲಿದೆ. ಇದು ವೈರ್‌ ಲೆಸ್‌ ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ ಪ್ಲೇ ಜೊತೆಗೆ 9 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ, ಕ್ರೂಸ್‌ ಕಂಟ್ರೋಲ್‌, ಅಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, 6ರ ತನಕದ ಏರ್‌ ಬ್ಯಾಗ್‌ ಗಳು (ಭಾರತೀಯ ಆವೃತ್ತಿಯಲ್ಲಿ 6 ಏರ್‌ ಬ್ಯಾಗ್‌ ಗಳು ಪ್ರಮಾಣಿತವೆನಿಸಿವೆ), EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್‌ ಹೋಲ್ಡ್‌ ಮತ್ತು ಡೆಸೆಂಟ್‌ ಕಂಟ್ರೋಲ್‌ ಹಾಗೂ ರಿಯರ್‌ ವ್ಯೂ ಕ್ಯಾಮೆರಾವನ್ನು ಹೊಂದಿರಲಿದೆ.

ಭಾರತದಲ್ಲಿ ಮುಂಬರುವ ಕಾರುಗಳು

ಬೆಲೆಗಳು

ದಕ್ಷಿಣ ಆಫ್ರಿಕಾದ 5 ಬಾಗಿಲುಗಳ ಸುಜುಕಿ ಜಿಮ್ನಿಯು R4,29,900 ರಿಂದ R4,79,900 (ಎಕ್ಸ್-ಶೋರೂಂ) ತನಕದ ಬೆಲೆಯನ್ನು ಹೊಂದಿದ್ದು, ಭಾರತೀಯ ರೂಪಾಯಿಗೆ ಇದನ್ನು ಪರಿವರ್ತಿಸಿದಾಗ ಇದು ರೂ. 19.65 ಲಕ್ಷದಿಂದ ರೂ. 21.93 ಲಕ್ಷದ ನಡುವೆ ಬರುತ್ತದೆ. ಭಾರತದಲ್ಲಿರುವ ಮಾರುತಿ ಜಿಮ್ನಿ 5 ಬಾಗಿಲುಗಳ ವಾಹನವು ರೂ. 12.74 ಲಕ್ಷದಿಂದ ರೂ. 15.05 ಲಕ್ಷದ ತನಕ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಮಹೀಂದ್ರಾ ಥಾರ್ ಮತ್ತು ಫೋರ್ಸ್‌ ಗೂರ್ಖಾಗಳಿಗೆ ಪ್ರತಿಸ್ಪರ್ಧಿ ಎನಿಸಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಜಿಮ್ನಿ ಆನ್‌ ರೋಡ್‌ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 40 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಜಿಮ್ನಿ

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ