• English
  • Login / Register

Tata Altroz Racer ವರ್ಸಸ್‌ Hyundai i20 N Line ವರ್ಸಸ್‌ Maruti Fronx: ಯಾವುದು ಬೆಸ್ಟ್‌?

published on ಜೂನ್ 21, 2024 09:07 pm by shreyash for ಟಾಟಾ ಆಲ್ಟ್ರೋಜ್ ರೇಸರ್

  • 153 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯುಂಡೈ ಐ20 ಎನ್‌ ಲೈನ್ ಮತ್ತು ಮಾರುತಿ ಫ್ರಾಂಕ್ಸ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿವೆ, ಆದರೆ, ಟಾಟಾ ಆಲ್ಟ್ರೋಜ್ ರೇಸರ್ ಇದೀಗ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಮಾತ್ರ ಪಡೆಯುತ್ತದೆ

Tata Altroz Racer vs Hyundai i20 N Line vs Maruti Fronx: Specifications Comparison

 ಟಾಟಾ ಆಲ್ಟ್ರೋಜ್‌ ರೇಸರ್, ಆಲ್ಟ್ರೋಜ್‌ ಲೈನ್‌ಅಪ್‌ನ ಅತ್ಯಂತ ಶಕ್ತಿಶಾಲಿ ಆವೃತ್ತಿಯಾಗಿ ಎದ್ದು ಕಾಣುತ್ತದೆ, ಇದು ನೇರವಾಗಿ ಹ್ಯುಂಡೈ i20 ಎನ್‌ ಲೈನ್‌ಗೆ ಪ್ರತಿಸ್ಪರ್ಧಿಯಾಗಿದೆ. ಇದಲ್ಲದೆ, ವಿಶೇಷವಾಗಿ ಟಾಟಾ ಆಲ್ಟ್ರೋಜ್ ರೇಸರ್ ತನ್ನ ಟರ್ಬೊ-ಪೆಟ್ರೋಲ್ ಅವತಾರದಲ್ಲಿ,  ತನ್ನನ್ನು ಮಾರುತಿ ಫ್ರಾಂಕ್ಸ್‌ಗೆ ನೇರಸ್ಪರ್ಧಿಯಾಗಿ ಪ್ರಸ್ತುತಪಡಿಸುತ್ತದೆ. ನೈಜ-ಪ್ರಪಂಚದ ವಿಶೇಷಣಗಳ ವಿಷಯದಲ್ಲಿ ಈ ಮೊಡೆಲ್‌ಗಳು ಹೇಗೆ ಹೋಲಿಕೆಯಾಗುತ್ತವೆ ಎಂಬುದನ್ನು ಪರಿಶೀಲಿಸೋಣ.

ಬೆಲೆಗಳು

ಟಾಟಾ ಆಲ್ಟ್ರೋಜ್ ರೇಸರ್

ಹ್ಯುಂಡೈ ಐ20 ಎನ್‌ ಲೈನ್

ಮಾರುತಿ ಫ್ರಾಂಕ್ಸ್

9.49 ಲಕ್ಷ ರೂ.ನಿಂದ 10.99 ಲಕ್ಷ ರೂ.

9.99 ಲಕ್ಷ ರೂ.ನಿಂದ 12.52 ಲಕ್ಷ ರೂ.

9.73 ಲಕ್ಷ ರೂ.ನಿಂದ 13.04 ಲಕ್ಷ ರೂ.(ಟರ್ಬೊ-ಪೆಟ್ರೋಲ್)

  • ಆಲ್ಟ್ರೋಜ್‌ ​​ರೇಸರ್ ಇಲ್ಲಿ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿದೆ ಮತ್ತು ಇದು ಫ್ರಾಂಕ್ಸ್‌ನ ಎಂಟ್ರಿ-ಲೆವೆಲ್‌ನ ಟರ್ಬೊ-ಪೆಟ್ರೋಲ್ ಆವೃತ್ತಿಯಿಂದ 24,000 ರೂ.ರಷ್ಟು ಕಡಿಮೆ ಬೆಲೆಯಲ್ಲಿದೆ. ಟಾಟಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಆರಂಭಿಕ ಬೆಲೆಯು ಐ20 ಎನ್‌ ಲೈನ್‌ನ ಬೇಸ್-ಸ್ಪೆಕ್ ಎನ್‌6 ಆವೃತ್ತಿಗಿಂತ 50,000 ರೂ.ರಷ್ಟು ಕಡಿಮೆಯಿದೆ. 

ಗಾತ್ರದ ಹೋಲಿಕೆ

ಮೊಡೆಲ್‌ಗಳು

ಟಾಟಾ ಆಲ್ಟ್ರೋಜ್ ರೇಸರ್

ಹ್ಯುಂಡೈ ಐ20 ಎನ್‌ ಲೈನ್

ಮಾರುತಿ ಫ್ರಾಂಕ್ಸ್

ಉದ್ದ

3990 ಮಿ.ಮೀ

3995 ಮಿ.ಮೀ

3995 ಮಿ.ಮೀ

ಅಗಲ

1755 ಮಿ.ಮೀ

1775 ಮಿ.ಮೀ

1765 ಮಿ.ಮೀ

ಎತ್ತರ

1523 ಮಿ.ಮೀ

1505 ಮಿ.ಮೀ

1550 ಮಿ.ಮೀ

ವೀಲ್‌ಬೇಸ್‌

2501 ಮಿ.ಮೀ

2580 ಮಿ.ಮೀ

2520 ಮಿ.ಮೀ

Tata Altroz Racer Rear 3/4th

  • ಗಾತ್ರಗಳಿಗೆ ಸಂಬಂಧಿಸಿದಂತೆ, ಟಾಟಾ ಆಲ್ಟ್ರೋಜ್ ರೇಸರ್ ಎಲ್ಲಾ ಅಳತೆಗಳಲ್ಲಿ ಹುಂಡೈ i20 ಎನ್‌ ಲೈನ್ ಮತ್ತು ಮಾರುತಿ ಫ್ರಾಂಕ್ಸ್ ಎರಡರಿಂದಲೂ ಚಿಕ್ಕದಾಗಿದೆ. ಆದರೂ, ಇದು i20 ಎನ್‌ ಲೈನ್‌ಗಿಂತ 18 ಮಿ.ಮೀ.ನಷ್ಟು ಎತ್ತರವಾಗಿದೆ.

  • ಸಬ್‌ಕಾಂಪ್ಯಾಕ್ಟ್ ಕ್ರಾಸ್‌ಒವರ್ ಆಗಿರುವುದರಿಂದ, ಈ ಹೋಲಿಕೆಯಲ್ಲಿ ಫ್ರಾಂಕ್ಸ್ ಅತಿ ಎತ್ತರದ ಕಾರು ಆಗಿದೆ. ಮತ್ತೊಂದೆಡೆ, i20 ಎನ್‌ ಲೈನ್ ಎಲ್ಲಾ ಮೂರರಲ್ಲಿ ಅಗಲವಾಗಿದೆ.

Maruti Fronx Side

  • ಐ20 ಎನ್‌ ಲೈನ್ ಮತ್ತು ಫ್ರಾಂಕ್ಸ್ ಎರಡೂ ಉದ್ದದ ವಿಷಯದಲ್ಲಿ ಒಂದೇ ಆಗಿದ್ದರೂ, ಎನ್‌ ಲೈನ್ ಇನ್ನೂ ಫ್ರಾಂಕ್ಸ್‌ಗಿಂತ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ.

ಇದನ್ನೂ ಸಹ ಓದಿ: 2024ರ Maruti Suzuki Swift: ಭಾರತೀಯ ಸ್ವಿಫ್ಟ್‌ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್‌ಗಿರುವ 5 ವ್ಯತ್ಯಾಸಗಳು

ಪವರ್‌ಟ್ರೈನ್‌ಗಳು

ಮೊಡೆಲ್‌ಗಳು

ಟಾಟಾ ಆಲ್ಟ್ರೋಜ್ ರೇಸರ್

ಹ್ಯುಂಡೈ ಐ20 ಎನ್‌ ಲೈನ್

ಮಾರುತಿ ಫ್ರಾಂಕ್ಸ್

ಎಂಜಿನ್‌

1.2-ಲೀಟರ್‌ ಟರ್ಬೋ-ಪೆಟ್ರೋಲ್‌

1-ಲೀಟರ್‌ ಟರ್ಬೋ-ಪೆಟ್ರೋಲ್‌

1-ಲೀಟರ್‌ ಟರ್ಬೋ-ಪೆಟ್ರೋಲ್‌

ಪವರ್‌

120 ಪಿಎಸ್‌

120 ಪಿಎಸ್‌

100 ಪಿಎಸ್‌

ಟಾರ್ಕ್‌

170 ಎನ್‌ಎಮ್‌

172 ಎನ್‌ಎಮ್‌

148 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್‌ ಮ್ಯಾನುಯಲ್‌

6-ಸ್ಪೀಡ್‌ ಮ್ಯಾನುಯಲ್‌, 7-ಸ್ಪೀಡ್‌ ಡಿಸಿಟಿ*

5-ಸ್ಪೀಡ್‌ ಮ್ಯಾನುಯಲ್‌, 6-ಸ್ಪೀಡ್‌ ಆಟೋಮ್ಯಾಟಿಕ್‌

*ಡಿಸಿಟಿ- ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

Hyundai i20 N Line

  • ಐ20 ಎನ್‌ ಲೈನ್ ಮತ್ತು ಫ್ರಾಂಕ್ಸ್‌ನ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳಿಗೆ ಹೋಲಿಸಿದರೆ ಆಲ್ಟ್ರೋಜ್‌ ​​ರೇಸರ್ ದೊಡ್ಡ 1.2-ಲೀಟರ್ ಟರ್ಬೊ-ಪೆಟ್ರೋಲ್ ಅನ್ನು ಹೊಂದಿದೆ.

  • ಟಾಟಾ ಮತ್ತು ಹ್ಯುಂಡೈ ಹ್ಯಾಚ್‌ಬ್ಯಾಕ್‌ಗಳು ಸಮಾನ ಶಕ್ತಿ ಮತ್ತು ಬಹುತೇಕ ಒಂದೇ ರೀತಿಯ ಟಾರ್ಕ್ ಔಟ್‌ಪುಟ್‌ಗಳನ್ನು ಹೊಂದಿವೆ.

Maruti Fronx

  • ಮಾರುತಿ ಫ್ರಾಂಕ್ಸ್ ಟರ್ಬೊ ಮತ್ತೊಂದೆಡೆ, ಆಲ್ಟ್ರೋಜ್ ರೇಸರ್ ಮತ್ತು ಐ20 ಎನ್‌ ಲೈನ್ ಎರಡಕ್ಕಿಂತಲೂ 20 ಪಿಎಸ್‌ ಕಡಿಮೆ ಶಕ್ತಿಶಾಲಿಯಾಗಿದೆ ಮತ್ತು ಇದು ಎರಡೂ ಹ್ಯಾಚ್‌ಬ್ಯಾಕ್‌ಗಳಿಗಿಂತ ಕಡಿಮೆ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 

  • ಆದಾಗಿಯೂ, ಆಲ್ಟ್ರೋಜ್‌ ​​ರೇಸರ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ, ಆದರೆ ಐ20 ಎನ್‌ ಲೈನ್ ಮತ್ತು ಫ್ರಾಂಕ್ಸ್ ಕ್ರಮವಾಗಿ 7-ಸ್ಪೀಡ್ ಡಿಸಿಟಿ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಯ್ಕೆಯನ್ನು ಪಡೆಯುತ್ತವೆ.

ಫೀಚರ್‌ಗಳ ಹೋಲಿಕೆ

ಮೊಡೆಲ್‌ಗಳು

ಟಾಟಾ ಆಲ್ಟ್ರೋಜ್ ರೇಸರ್

ಹ್ಯುಂಡೈ ಐ20 ಎನ್‌ ಲೈನ್

ಮಾರುತಿ ಫ್ರಾಂಕ್ಸ್

ಎಕ್ಸ್‌ಟಿರೀಯರ್‌

ಆಟೋ-ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

ಎಲ್‌ಇಡಿ ಡಿಆರ್‌ಎಲ್‌ಗಳು

ಮುಂಭಾಗದ ಫಾಗ್‌ ಲ್ಯಾಂಪ್‌ಗಳು  

ಬಾನೆಟ್ ಮತ್ತು ರೂಫ್‌ನ ಮೇಲೆ ಡ್ಯುಯಲ್ ಬಿಳಿ ಪಟ್ಟೆಗಳು

ಮುಂಭಾಗದ ಫೆಂಡರ್‌ಗಳಲ್ಲಿ ರೇಸರ್ ಬ್ಯಾಡ್ಜ್‌ಗಳು

16-ಇಂಚಿನ ಸಂಪೂರ್ಣ ಕಪ್ಪು ಅಲಾಯ್‌ ವೀಲ್‌ಗಳು

ಡ್ಯುಯಲ್-ಟಿಪ್ ಎಕ್ಸಾಸ್ಟ್

ಆಟೋ-ಎಲ್‌ಇಡಿ ಹೆಡ್‌ಲೈಟ್‌ಗಳು

ಎಲ್‌ಇಡಿ ಡಿಆರ್‌ಎಲ್‌ಗಳು

ಎಲ್‌ಇಡಿ ಟೈಲ್‌ಲೈಟ್‌ಗಳು

ಮುಂಭಾಗದ ಪ್ರೊಜೆಕ್ಟರ್ ಫಾಗ್‌ ಲ್ಯಾಂಪ್‌ಗಳು

ಸುತ್ತಲೂ ಕೆಂಪು ಸಾರಗಳು

ಗ್ರಿಲ್, ಮುಂಭಾಗದ ಫೆಂಡರ್‌ಗಳು ಮತ್ತು ಚಕ್ರಗಳಲ್ಲಿ ಎನ್‌ ಲೈನ್ ಬ್ಯಾಡ್ಜ್‌ಗಳು

16-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು

ಡ್ಯುಯಲ್-ಟಿಪ್ ಎಕ್ಸಾಸ್ಟ್

ಫಾಲೋ-ಮಿ-ಹೋಮ್ ಫಂಕ್ಷನ್‌ನೊಂದಿಗೆ ಆಟೋ-ಎಲ್ಇಡಿ ಮಲ್ಟಿ-ರಿಫ್ಲೆಕ್ಟರ್ ಹೆಡ್‌ಲೈಟ್‌ಗಳು

ಎಲ್ಇಡಿ ಡಿಆರ್‌ಎಲ್‌ಗಳು

ಕನೆಕ್ಟೆಡ್‌ ಎಲ್ಇಡಿ ಟೈಲ್ ಲ್ಯಾಂಪ್‌ಗಳು

16-ಇಂಚಿನ ಅಲಾಯ್‌ ವೀಲ್‌ಗಳು

ಇಂಟಿರೀಯರ್‌

ಲೆದರ್‌ನ ಸೀಟ್‌ಗಳು

ಲೆದರ್‌ನಿಂದ ಸುತ್ತಿದ ಸ್ಟೀರಿಂಗ್ ವೀಲ್‌ ಮತ್ತು ಗೇರ್ ಲಿವರ್

ಸ್ಟೋರೆಜ್‌ನೊಂದಿಗೆ ಮುಂಭಾಗದ ಸ್ಲೈಡಿಂಗ್ ಆರ್ಮ್‌ರೆಸ್ಟ್

ಲೆದರ್‌ನ ಸೀಟ್‌ಗಳು

ಲೆದರ್‌ನಿಂದ ಸುತ್ತಿದ ಸ್ಟೀರಿಂಗ್ ವೀಲ್‌ ಮತ್ತು ಗೇರ್ ಲಿವರ್

ಸನ್‌ಗ್ಲಾಸ್‌ ಹೋಲ್ಡರ್‌

ಸ್ಟೋರೆಜ್‌ನೊಂದಿಗೆ ಮುಂಭಾಗದ ಸ್ಲೈಡಿಂಗ್ ಆರ್ಮ್‌ರೆಸ್ಟ್

ಡ್ಯುಯಲ್‌-ಟೋನ್ ಡ್ಯಾಶ್‌ಬೋರ್ಡ್‌

ಲೆದರ್‌ನಿಂದ ಸುತ್ತಿದ ಸ್ಟೀರಿಂಗ್ ವೀಲ್‌ 

ಸ್ಟೋರೆಜ್‌ನೊಂದಿಗೆ ಮುಂಭಾಗದ ಸ್ಲೈಡಿಂಗ್ ಆರ್ಮ್‌ರೆಸ್ಟ್

ಆಟೋ-ಡಿಮ್ಮಿಂಗ್‌ ಐಆರ್‌ವಿಎಮ್‌

ಸೌಕರ್ಯ ಮತ್ತು ಸೌಲಭ್ಯ

ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ

ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು

ಆಂಬಿಯೆಂಟ್ ಲೈಟಿಂಗ್

ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು

ಕ್ರೂಸ್ ಕಂಟ್ರೋಲ್

ಸನ್‌ರೂಫ್

ವೈರ್‌ಲೆಸ್ ಫೋನ್ ಚಾರ್ಜರ್

7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

ಎಲೆಕ್ಟ್ರಿಕಲಿ ಎಡ್ಜಸ್ಟ್‌ ಮಾಡಬಹುದಾದ ಮತ್ತು ಆಟೋ ಡಿಮ್ಮಿಂಗ್‌ ಒಆರ್‌ವಿಎಮ್‌ಗಳು

ಎಲ್ಲಾ ನಾಲ್ಕು ಪವರ್ ವಿಂಡೋಗಳು

ಕೀಲಿಯಿಲ್ಲದೇ ಪ್ರವೇಶ

ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

ಏರ್ ಪ್ಯೂರಿಫೈಯರ್ 

ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ

ಎಲೆಕ್ಟ್ರಿಕಲಿ ಎಡ್ಜಸ್ಟ್‌ ಮಾಡಬಹುದಾದ ಮತ್ತು ಆಟೋ ಡಿಮ್ಮಿಂಗ್‌ ಒಆರ್‌ವಿಎಮ್‌ಗಳು

ಕೀಲಿಯಿಲ್ಲದೇ ಪ್ರವೇಶ

ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

ಎಲ್ಲಾ ನಾಲ್ಕು ಪವರ್ ವಿಂಡೋಗಳು

ಆಂಬಿಯೆಂಟ್ ಲೈಟಿಂಗ್

ವೈರ್‌ಲೆಸ್ ಫೋನ್ ಚಾರ್ಜರ್

ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು

ಕ್ರೂಸ್ ಕಂಟ್ರೋಲ್

ಸನ್‌ರೂಫ್

ಪ್ಯಾಡಲ್ ಶಿಫ್ಟರ್‌ಗಳು (ಡಿಸಿಟಿಯಲ್ಲಿ ಮಾತ್ರ)

ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ

ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್

ಹಿಂದಿನ ಸೀಟ್‌ಗಳಿಗೆ ಟೈಪ್-ಎ ಮತ್ತು ಟೈಪ್-ಸಿ ಯುಎಸ್‌ಬಿ ಚಾರ್ಜರ್

ಎಲ್ಲಾ ನಾಲ್ಕು ಪವರ್ ವಿಂಡೋಗಳು

ಎಲೆಕ್ಟ್ರಿಕಲಿ ಎಡ್ಜಸ್ಟ್‌ ಮಾಡಬಹುದಾದ ಮತ್ತು ಆಟೋ ಡಿಮ್ಮಿಂಗ್‌ ಒಆರ್‌ವಿಎಮ್‌ಗಳು

ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು

ಕ್ರೂಸ್ ಕಂಟ್ರೋಲ್

ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್

ವೈರ್‌ಲೆಸ್ ಫೋನ್ ಚಾರ್ಜರ್

ಪ್ಯಾಡಲ್ ಶಿಫ್ಟರ್‌ಗಳು

ಹೆಡ್ಸ್‌-ಅಪ್ ಡಿಸ್‌ಪ್ಲೇ

ಇನ್ಫೋಟೈನ್ಮೆಂಟ್

10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

8-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ (4 ಟ್ವೀಟರ್‌ಗಳು ಸೇರಿದಂತೆ)

10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ

ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

7-ಸ್ಪೀಕರ್ ಬೋಸ್ ಮ್ಯೂಸಿಕ್ ಸಿಸ್ಟಮ್ (2 ಟ್ವೀಟರ್‌ಗಳು ಮತ್ತು ಒಂದು ಸಬ್‌ವೂಫರ್‌ ಸೇರಿದಂತೆ)

9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

6-ಸ್ಪೀಕರ್ ARKAMYS-ಟ್ಯೂನ್ಡ್ ಸೌಂಡ್ ಸಿಸ್ಟಮ್

ಸುರಕ್ಷತೆ

6 ಏರ್‌ಬ್ಯಾಗ್‌ಗಳು

ಇಬಿಡಿ ಜೊತೆಗೆ ಎಬಿಎಸ್

ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು

ISOFIX ಚೈಲ್ಡ್ ಸೀಟ್ ಆಂಕರ್‌ಗಳು

ಬ್ಲೈಂಡ್ ಸ್ಪಾಟ್ ಮಾನಿಟರ್ ಹೊಂದಿರುವ 360-ಡಿಗ್ರಿ ಕ್ಯಾಮೆರಾ

ಮಳೆ ಸಂವೇದಿ ವೈಪರ್‌ಗಳು

ವಾಷರ್‌ನೊಂದಿಗೆ ಹಿಂದಿನ ವೈಪರ್

ಹಿಂಭಾಗದ ಡಿಫಾಗರ್

6 ಏರ್‌ಬ್ಯಾಗ್‌ಗಳು

ಇಬಿಡಿ ಜೊತೆಗೆ ಎಬಿಎಸ್

ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು

ರಿವರ್ಸಿಂಗ್‌ ಕ್ಯಾಮೆರಾ

ISOFIX ಚೈಲ್ಡ್ ಸೀಟ್ ಆಂಕರ್‌ಗಳು

ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್)

ಹಿಂದಿನ ವೈಪರ್ ವಾಷರ್

ಹಿಂದಿನ ಡಿಫಾಗರ್

6 ಏರ್‌ಬ್ಯಾಗ್‌ಗಳವರೆಗೆ

ಇಬಿಡಿ ಜೊತೆಗೆ ಎಬಿಎಸ್

360 ಡಿಗ್ರಿ ಕ್ಯಾಮೆರಾ

ಹಿಂದಿನ ಪಾರ್ಕಿಂಗ್ ಸೆನ್ಸರ್‌ಗಳು

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

ಹಿಲ್ ಹೋಲ್ಡ್ ಅಸಿಸ್ಟ್

ISOFIX ಚೈಲ್ಡ್ ಸೀಟ್ ಲಂಗರುಗಳು

ಹಿಂದಿನ ವೈಪರ್ ಮತ್ತು ವಾಷರ್

ಹಿಂದಿನ ಡಿಫಾಗರ್

Tata Altroz Racer Cabin

  • ನೀವು ನಿರ್ದಿಷ್ಟವಾಗಿ ಟರ್ಬೊ-ಪೆಟ್ರೋಲ್ ಮಾದರಿಯನ್ನು ಹುಡುಕುತ್ತಿದ್ದರೆ, ಆಲ್ಟ್ರೋಜ್‌ ​​ರೇಸರ್ ಇಲ್ಲಿ ಹೆಚ್ಚು ವೈಶಿಷ್ಟ್ಯ-ಲೋಡ್ ಮಾಡಲಾದ ಮೊಡೆಲ್‌ ಆಗಿದೆ. ಇದು 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸಿಂಗಲ್ ಪೇನ್ ಸನ್‌ರೂಫ್ ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳಂತಹ ಸೌಕರ್ಯಗಳೊಂದಿಗೆ ಬರುತ್ತದೆ.

  • ಐ20 ಎನ್‌ ಲೈನ್ ಮತ್ತು ಫ್ರಾಂಕ್ಸ್ ಮುಂಭಾಗದ ವೆಂಟಿಲೇಟೆಡ್‌ ಸೀಟುಗಳು ಮತ್ತು ಮಳೆ ಸಂವೇದಿ ವೈಪರ್‌ಗಳನ್ನು ಕಳೆದುಕೊಳ್ಳುತ್ತವೆ, ಹಾಗೆಯೇ ಫ್ರಾಂಕ್ಸ್‌ನಲ್ಲಿ ಸನ್‌ರೂಫ್ ಸಿಗುವುದಿಲ್ಲ.

Hyundai i20 N Line Facelift Cabin

  • ಮಾರುತಿಯ ಸಬ್‌ಕಾಂಪ್ಯಾಕ್ಟ್ ಕ್ರಾಸ್‌ಒವರ್ ಹೆಡ್‌ಸ್‌ಅಪ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ, ಇದು ವೇಗ, ಆರ್‌ಪಿಎಂ, ಸರಾಸರಿ ಇಂಧನ ಆರ್ಥಿಕತೆ ಮತ್ತು ಇತ್ಯಾದಿ ಮಾಹಿತಿಯನ್ನು ತೋರಿಸುತ್ತದೆ. ಈ ವೈಶಿಷ್ಟ್ಯವು ಆಲ್ಟ್ರೊಜ್ ರೇಸರ್ ಮತ್ತು ಫ್ರಾಂಕ್ಸ್ ಎರಡರಲ್ಲೂ ಲಭ್ಯವಿರುವುದಿಲ್ಲ. 

  • ಸುರಕ್ಷತೆಯ ವಿಷಯದಲ್ಲಿ, ಐ20 ಎನ್‌ ಲೈನ್ ಮತ್ತು ಆಲ್ಟ್ರೋಜ್‌ ​​ರೇಸರ್ ಎರಡೂ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳನ್ನು ಪಡೆಯುತ್ತವೆ ಮತ್ತು ಫ್ರಾಂಕ್ಸ್‌ ಅದರ ಟಾಪ್‌-ಸ್ಪೆಕ್ ಆವೃತ್ತಿಗಳಲ್ಲಿ ಮಾತ್ರ ಆರು ಏರ್‌ಬ್ಯಾಗ್‌ಗಳನ್ನು ನೀಡುತ್ತದೆ.

Maruti Fronx Interior

  • ಆಲ್ಟ್ರೋಜ್‌ ರೇಸರ್‌ ​ಮತ್ತು ಫ್ರಾಂಕ್ಸ್‌ ಮೊಡೆಲ್‌ಗಳು i20 ಎನ್‌ ಲೈನ್‌ನಲ್ಲಿಲ್ಲದ 360-ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತವೆ. ಆಲ್ಟ್ರೋಜ್ ರೇಸರ್ ಹೆಚ್ಚುವರಿಯಾಗಿ ಫ್ರಾಂಕ್ಸ್‌ನಲ್ಲಿ ಇಲ್ಲದ ಬ್ಲೈಂಡ್ ಸ್ಪಾಟ್ ಮಾನಿಟರ್ ಅನ್ನು ಸಹ ಹೊಂದಿದೆ.

ಅಂತಿಮ ಮಾತು

ನೀವು ವೈಶಿಷ್ಟ್ಯಗಳಿಗೆ ಆದ್ಯತೆ ನೀಡಿದರೆ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆ ನಿಮಗೆ ಅಗತ್ಯವಿಲ್ಲದಿದ್ದರೆ, ಆಲ್ಟ್ರೋಜ್‌ ​​ರೇಸರ್ ಸೂಕ್ತ ಆಯ್ಕೆಯಾಗಿದೆ. ಆದಾಗಿಯೂ, ನೀವು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಶಕ್ತಿಯುತ ಪೆಟ್ರೋಲ್ ಹ್ಯಾಚ್‌ಬ್ಯಾಕ್ ಅನ್ನು ಬಯಸಿದರೆ, ಐ20 ಎನ್‌ಲೈನ್‌ ಇಲ್ಲಿ ಅತ್ಯುತ್ತಮ ಆಯ್ಕೆಯಾಗಿ ಉಳಿದಿದೆ. ಆದಾಗಿಯೂ, ಐ20 ಎನ್‌ ಲೈನ್‌ನ ಪ್ರತಿಸ್ಪರ್ಧಿಗಳಲ್ಲಿ ಲಭ್ಯವಿರುವ  ಮುಂಭಾಗದ ವೆಂಟಿಲೇಟೆಡ್‌ ಸೀಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಕೆಲವು ಪ್ರೀಮಿಯಂ ಸೌಕರ್ಯಗಳು ಇದರಲ್ಲಿ ಲಭ್ಯವಿಲ್ಲ ಎಂದು ಇಲ್ಲಿ ಗಮನಿಸಬೇಕು. ಮತ್ತೊಂದೆಡೆ, ನೀವು ಎಲ್ಲಾ ಅಗತ್ಯ ಫೀಚರ್‌ಗಳು ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಎಸ್‌ಯುವಿಯು ಆಕಾರದಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್ ಬಯಸಿದರೆ, ಫ್ರಾಂಕ್ಸ್ ಸಹ ಪರಿಗಣಿಸಲು ಯೋಗ್ಯವಾಗಿದೆ.

ರೆಗುಲರ್‌ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್‌ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಆಲ್ಟ್ರೋಜ್ ರೇಸರ್ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಆಲ್ಟ್ರೋಝ್ Racer

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience