Tata Curvv EVಗಾಗಿ ಬುಕಿಂಗ್‌ಗಳು ಪ್ರಾರಂಭ, ಶೀಘ್ರದಲ್ಲೇ ಡೆಲಿವೆರಿಗೂ ಲಭ್ಯ
ಟಾಟಾ ಕರ್ವ್ ಇವಿ ಗಾಗಿ samarth ಮೂಲಕ ಆಗಸ್ಟ್ 12, 2024 07:47 pm ರಂದು ಪ್ರಕಟಿಸಲಾಗಿದೆ
- 43 Views
- ಕಾಮೆಂಟ್ ಅನ್ನು ಬರೆಯಿರಿ
ಗ್ರಾಹಕರು ತಮ್ಮ ಎಲೆಕ್ಟ್ರಿಕ್ ಎಸ್‌ಯುವಿ-ಕೂಪ್ ಅನ್ನು ಆನ್‌ಲೈನ್‌ನಲ್ಲಿ ಅಥವಾ 21,000 ರೂ.ಗೆ ಹತ್ತಿರದ ಡೀಲರ್‌ಶಿಪ್‌ನಲ್ಲಿ ಬುಕ್ ಮಾಡಬಹುದು
- ಭಾರತದಾದ್ಯಂತ ಟಾಟಾ ಕರ್ವ್ ಇವಿಯು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 17.49 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ.
- ಫೀಚರ್‌ಗಳು Arcade.ev ಬೆಂಬಲದೊಂದಿಗೆ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿವೆ.
- ಇದು 45 ಕಿ.ವ್ಯಾಟ್ ಮತ್ತು 55 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ, ಆದರೆ ಆಫರ್‌ನಲ್ಲಿ ಒಂದೇ ಮೋಟರ್ ಲಭ್ಯವಿದೆ.
- ಇದು 585 ಕಿಮೀ ವರೆಗಿನ (MIDC) ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿದೆ.
- ಟಾಟಾವು ಆಗಸ್ಟ್ 23 ರಿಂದ ಈ ಎಲೆಕ್ಟ್ರಿಕ್ ಎಸ್‌ಯುವಿ-ಕೂಪ್‌ನ ಡೆಲಿವೆರಿಯನ್ನು ಪ್ರಾರಂಭಿಸುತ್ತದೆ.
ಬಹು ನಿರೀಕ್ಷಿತ ಟಾಟಾ ಕರ್ವ್ ಇವಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಮತ್ತು ಕಾರು ತಯಾರಕರು ಈಗ ಅಧಿಕೃತವಾಗಿ ಇದಕ್ಕಾಗಿ ಬುಕಿಂಗ್ ಅನ್ನು ಆರಂಭಿಸಿದ್ದಾರೆ. ನೀವು ಇದನ್ನು ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಹತ್ತಿರದ ಟಾಟಾ ಡೀಲರ್‌ಶಿಪ್ ಮೂಲಕ 21,000 ರೂ.ಗೆ ಬುಕ್ ಮಾಡಬಹುದು. ಇದರ ಡೆಲಿವೆರಿಗಳು ಆಗಸ್ಟ್ 23 ರಿಂದ ಪ್ರಾರಂಭವಾಗಲಿದೆ. ಟಾಟಾ ಸೆಪ್ಟೆಂಬರ್ 2 ರಂದು ಕರ್ವ್‌ನ ಇಂಧನದಿಂದ ಚಾಲಿತ ಎಂಜಿನ್ (ICE) ಆವೃತ್ತಿಯ ಬೆಲೆಗಳನ್ನು ಬಹಿರಂಗಪಡಿಸಲು ಸಿದ್ಧವಾಗಿದೆ. ಕರ್ವ್ ಇವಿಯು ಏನನ್ನು ಒಳಗೊಂಡಿದೆ ಎಂಬುದನ್ನು ವಿವರವಾಗಿ ಗಮನಿಸೋಣ.
ಫೀಚರ್‌ಗಳು ಮತ್ತು ಸುರಕ್ಷತಾ ಪ್ಯಾಕೇಜ್
ಕರ್ವ್ ಇವಿಯು ನೀವು ಆಯ್ಕೆಮಾಡುವ ಆವೃತ್ತಿಯನ್ನು ಅವಲಂಬಿಸಿ ವಿಭಿನ್ನ ಕ್ಯಾಬಿನ್ ಥೀಮ್‌ಗಳನ್ನು ಹೊಂದಿದೆ. ಟಾಟಾ ಹ್ಯಾರಿಯರ್-ಸಫಾರಿ ಜೋಡಿಯಲ್ಲಿ ಕಂಡುಬರುವಂತೆ ಟಾಪ್-ಸ್ಪೆಕ್ ಆವೃತ್ತಿಯು ಡ್ಯುಯಲ್-ಟೋನ್ ಕಪ್ಪು ಮತ್ತು ಬಿಳಿ ಇಂಟಿರೀಯರ್ ಮತ್ತು 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.
ಟಾಟಾವು ತನ್ನ ಕರ್ವ್ ಇವಿಯನ್ನು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 9-ಸ್ಪೀಕರ್ JBL-ಟ್ಯೂನ್ಡ್ ಸೌಂಡ್ ಸಿಸ್ಟಮ್‌ನಂತಹ ಫೀಚರ್‌ಗಳೊಂದಿಗೆ ಒದಗಿಸಿದೆ. ಟಾಟಾ ಕರ್ವ್ ಇವಿಯ ಟಾಪ್-ಸ್ಪೆಕ್ ಆವೃತ್ತಿಯಲ್ಲಿರಯವ ಇನ್ಫೋಟೈನ್‌ಮೆಂಟ್ ಸಿಸ್ಟಮ್ Arcade.ev ಅಪ್ಲಿಕೇಶನ್ ಸೂಟ್ ಅನ್ನು ಸಹ ಒಳಗೊಂಡಿದೆ, ಇದರ ಮೂಲಕ ಕಾರ್ ಪಾರ್ಕ್ ಮಾಡಿರುವ ಸಮಯದಲ್ಲಿ ಗೇಮ್‌ಗಳನ್ನು ಆಡಬಹುದು ಮತ್ತು OTT ಅಪ್ಲಿಕೇಶನ್‌ಗಳ ಮೂಲಕ ವಿಡಿಯೋಗಳನ್ನು ವೀಕ್ಷಿಸಬಹುದು.
ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು (ರೆಗುಲರ್‌ನಂತೆ), ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಒಳಗೊಂಡಿದೆ.
ಪವರ್‌ಟ್ರೈನ್
ಕರ್ವ್ ಇವಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತದೆ, ನಿಮ್ಮ ಆದ್ಯತೆಯ ಪ್ರಕಾರ ಆಯ್ಕೆ ಮಾಡಲು ನಿಮಗೆ ಅವಕಾಶ ನೀಡುತ್ತದೆ. ಈ ಬ್ಯಾಟರಿ ಪ್ಯಾಕ್‌ಗಳ ವಿವರವಾದ ವಿಶೇಷಣಗಳು ಇಲ್ಲಿವೆ:
ವೇರಿಯೆಂಟ್ |
ಕರ್ವ್ ಇವಿ 45 (ಮೀಡಿಯಂ ರೇಂಜ್) |
ಕರ್ವ್ ಇವಿ 45 (ಲಾಂಗ್ ರೇಂಜ್) |
ಬ್ಯಾಟರಿ ಪ್ಯಾಕ್ |
45 kWh |
55 kWh |
ಎಲೆಕ್ಟ್ರಿಕ್ ಮೋಟರ್ ಸಂಖ್ಯೆ |
1 |
1 |
ಪವರ್ |
150 PS |
167 PS |
ಟಾರ್ಕ್ |
215 Nm |
215 Nm |
ಕ್ಲೇಮ್ ಮಾಡಿರುವ ರೇಂಜ್ (MIDC) |
502 ಕಿ.ಮೀ ವರೆಗೆ |
585 ಕಿ.ಮೀ ವರೆಗೆ |
MIDC - ಮಾಡಿಫೈಡ್ ಇಂಡಿಯನ್ ಡ್ರೈವ್ ಸೈಕಲ್
ಕರ್ವ್ ಇವಿಯು V2L (ವೆಹಿಕಲ್ ಟು ಲೋಡ್) ಮತ್ತು V2V (ವೆಹಿಕಲ್ ಟು ವೆಹಿಕಲ್) ಫಂಕ್ಷನಾಲಿಟಿಯನ್ನು ಕೂಡ ಹೊಂದಿದೆ. ಕರ್ವ್ ಇವಿಯು ಗರಿಷ್ಠ 70 ಕಿ.ವ್ಯಾಟ್ ಉತ್ಪಾದನೆಯೊಂದಿಗೆ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ನೀಡುತ್ತದೆ, ಬ್ಯಾಟರಿಯು 40 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಅನುಮತಿಸುತ್ತದೆ. ಇದು 7.2 ಕಿ.ವ್ಯಾಟ್ ಎಸಿ ಚಾರ್ಜರ್ ಅನ್ನು ಸಹ ಪಡೆಯುತ್ತದೆ, ಇದನ್ನು 45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು 6.5 ಗಂಟೆಗಳಲ್ಲಿ 10 ರಿಂದ 100 ಪ್ರತಿಶತ ಮತ್ತು 55 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಸುಮಾರು 8 ಗಂಟೆಗಳಲ್ಲಿ ಚಾರ್ಜ್ ಮಾಡಲು ಬಳಸಬಹುದು.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಟಾಟಾ ಕರ್ವ್ ಇವಿಯ ಪರಿಚಯಾತ್ಮಕ, ಎಕ್ಸ್-ಶೋರೂಮ್ ಬೆಲೆಗಳು 17.49 ಲಕ್ಷ ರೂ.ನಿಂದ ಪ್ರಾರಂಭವಾಗಿ ರೂ 21.99 ಲಕ್ಷ ರೂ.ವರೆಗೆ ಇರುತ್ತದೆ. ಇದು ಎಮ್‌ಜಿ ಜೆಡ್‌ಎಸ್ ಇವಿಗೆ ಸೊಗಸಾದ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಮುಂಬರುವ ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ ಇವಿಎಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಟಾಟಾ ಕರ್ವ್ ಇವಿ ಆಟೋಮ್ಯಾಟಿಕ್
0 out of 0 found this helpful