ಬಿಡುಗಡೆಗೆ ಮುಂಚಿತವಾಗಿಯೇ ಡೀಲರ್‌ಶಿಪ್‌ಗಳನ್ನು ತಲುಪಿದ Tata Curvv EV
ಟಾಟಾ ಕರ್ವ್ ಇವಿಯ ಆಫ್‌ಲೈನ್ ಬುಕಿಂಗ್ ಕೂಡ ಕೆಲವು ಡೀಲರ್‌ಶಿಪ್‌ಗಳಲ್ಲಿ ನಡೆಯುತ್ತಿದೆ
-
ಟಾಟಾ ಕರ್ವ್ ಇವಿಯು ಬಿಡುಗಡೆಯಾದ ನಂತರ ಇದು ಪ್ರಮುಖ EV ಕಾರು ಆಗಲಿದೆ.
-
ಎಸ್‌ಯುವಿ-ಕೂಪ್ ಇಳಿಜಾರಾದ ರೂಫ್‌ಲೈನ್, ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ.
-
ಒಳಭಾಗದಲ್ಲಿ, ಇದು ಹ್ಯಾರಿಯರ್‌ನ ಫೋರ್-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ನೆಕ್ಸಾನ್ ಇವಿಯ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳನ್ನು ಹೊಂದಿರುತ್ತದೆ.
-
ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಸೇರಿವೆ.
-
ಇದನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಮತ್ತು 500 ಕಿಮೀಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ನೀಡಬಹುದೆಂದು ಎಂದು ನಿರೀಕ್ಷಿಸಲಾಗಿದೆ.
-
ಎಕ್ಸ್ ಶೋರೂಂ ಬೆಲೆಗಳು 20 ಲಕ್ಷ ರೂ.ಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.
ಟಾಟಾ ಮೋಟಾರ್ಸ್‌ನ ಮೊದಲ ಎಸ್‌ಯುವಿ-ಕೂಪ್ ಆಗಿರುವ ಟಾಟಾ ಕರ್ವ್ ಇವಿಯು, ಕೆಲವು ಡೀಲರ್‌ಶಿಪ್‌ಗಳಲ್ಲಿ ಈಗಾಗಲೇ ಆಫ್‌ಲೈನ್ ಬುಕಿಂಗ್‌ಗಳನ್ನು ಸ್ವೀಕರಿಸುವುದರೊಂದಿಗೆ ಅನಾವರಣಗೊಂಡಿದೆ. ನಾಳೆ ಬಿಡುಗಡೆಯಾಗುವ ಮುನ್ನ, ಟಾಟಾ ಮೋಟಾರ್ಸ್ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ತೋರಿಸುವ ಹಲವಾರು ಟೀಸರ್‌ಗಳನ್ನು ಹಂಚಿಕೊಂಡಿದೆ. ಈಗ, ಟಾಟಾ ಕರ್ವ್ ಇವಿಯ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಈ ಹಲವು ಫೀಚರ್‌ಗಳನ್ನು ಬಹಿರಂಗಪಡಿಸಿದೆ. ವೀಡಿಯೊದಲ್ಲಿ ನಾವು ಗುರುತಿಸಬಹುದಾದ ಎಲ್ಲವನ್ನು ಕೆಳಗೆ ವಿವರಿಸಲಾಗಿದೆ:
ನಾವು ಗಮನಿಸಿದ್ದು ಏನು ?
ನೆಕ್ಸಾನ್ ಇವಿ ಮತ್ತು ಪಂಚ್ ಇವಿಯಂತೆಯೇ UI ಜೊತೆಗೆ 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಗಳನ್ನು ಒಳಗೊಂಡಂತೆ ಹಲವಾರು ಫೀಚರ್‌ಗಳ ಒಂದು ನೋಟವನ್ನು ವೀಡಿಯೊ ಒದಗಿಸಿದೆ. ಇದು 12.3-ಇಂಚಿನ ಟಚ್‌ಸ್ಕ್ರೀನ್ ಅನ್ನು ಪ್ರದರ್ಶಿಸಿತು, ಇದು ನೆಕ್ಸಾನ್ ಇವಿಯಲ್ಲಿಯೂ ಲಭ್ಯವಿದೆ, ಜೊತೆಗೆ ಪ್ಯಾನರೋಮಿಕ್ ಸನ್‌ರೂಫ್ ಮತ್ತು ಎಲೆಕ್ಟ್ರಿಕ್ ಟೈಲ್‌ಗೇಟ್ ಕಾರ್ಯಾಚರಣೆಯಲ್ಲಿದೆ.
ಇದನ್ನೂ ಓದಿ: ಆಗಸ್ಟ್ 7 ರಂದು ಟಾಟಾ ಮೋಟಾರ್ಸ್‌ನಿಂದ Curvv EV ಜೊತೆಗೆ ಚಾರ್ಜ್ ಪಾಯಿಂಟ್ ಅಗ್ರಿಗೇಟರ್ ಅಪ್ಲಿಕೇಶನ್ ಬಿಡುಗಡೆ
ಹೊರಭಾಗದಲ್ಲಿ, ಕರ್ವ್ ಇವಿಯು ಅದರ ಅನಾವರಣದ ಸಮಯದ ಅದೇ ನೀಲಿ ಬಣ್ಣವನ್ನು ಹೊಂದಿದೆ. ಇದು ಕೂಪ್ ಮಾದರಿಗಳ ವಿಶಿಷ್ಟವಾದ ಇಳಿಜಾರಿನ ರೂಫ್ ಅನ್ನು ಹೊಂದಿದೆ, ಒಂದು ಖಾಲಿಯಾದ ಮುಂಭಾಗದ ಗ್ರಿಲ್, ಟಾಟಾ ಹ್ಯಾರಿಯರ್‌ನಿಂದ ಪ್ರೇರಿತವಾದ ಹೆಡ್‌ಲೈಟ್‌ಗಳು ಮತ್ತು ಟಾಟಾ ನೆಕ್ಸಾನ್ ಇವಿಯಿಂದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. 18-ಇಂಚಿನ ಏರೋಡೈನಾಮಿಕ್ ಅಲಾಯ್ ವೀಲ್‌ಗಳು ಮತ್ತು ಫ್ಲಶ್-ಡೋರ್ ಹ್ಯಾಂಡಲ್‌ಗಳನ್ನು ತೋರಿಸುವ ಇವಿಯ ಸೈಡ್ ಪ್ರೊಫೈಲ್ ಸಹ ಗೋಚರಿಸುತ್ತದೆ.
ತಿಳಿಯಬೇಕಾದ ಇತರ ವಿಷಯಗಳು
ಇತರ ಫೀಚರ್‌ಗಳು ವೆಂಟಿಲೇಟೆಡ್ ಸೀಟ್‌ಗಳು ಮತ್ತು ಸ್ಪರ್ಶ-ಸಕ್ರಿಯಗೊಳಿಸಿದ ಎಸಿ ಪ್ಯಾನೆಲ್ ಅನ್ನು ಒಳಗೊಂಡಿರುತ್ತದೆ. ನೆಕ್ಸಾನ್ ಇವಿಯಿಂದ ಇವಿ ಡ್ರೈವ್ ಮೋಡ್ ಸೆಲೆಕ್ಟರ್ ಮತ್ತು ಆಟೋಮ್ಯಾಟಿಕ್ ಗೇರ್ ಶಿಫ್ಟರ್ ಅನ್ನು ಸಹ ಹಂಚಿಕೊಳ್ಳುತ್ತದೆ. ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಸೇರಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಒಳಗೊಂಡಿರುತ್ತದೆ.
ನಿರೀಕ್ಷಿತ ಬ್ಯಾಟರಿ, ಪವರ್ ಮತ್ತು ರೇಂಜ್
ಎಲೆಕ್ಟ್ರಿಕ್ ಪವರ್‌ಟ್ರೇನ್ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಇದು ಟಾಟಾದ ಇತ್ತೀಚಿನ Acti.ev ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ ಇದು ಸುಮಾರು 500 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿದೆ. ಟಾಟಾ ಕರ್ವ್ ಇವಿಯು ಸಹ V2L (ವಾಹನದಿಂದ ಬೇರೆ ಡಿವೈಸ್‌ಗಳಿಗೆ) ಮತ್ತು V2V (ವಾಹನದಿಂದ ಬೇರೆ ವಾಹನಕ್ಕೆ ಚಾರ್ಜ್) ಫಂಕ್ಷನ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ ಇವಿಯ ಬೆಲೆಯು 20 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ಅಂದಾಜಿಸಲಾಗಿದೆ ಮತ್ತು ಎಮ್‌ಜಿ ಜೆಡ್‌ಎಸ್ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ ಇವಿಎಕ್ಸ್‌ಗಳೊಂದಿಗೆ ಸ್ಪರ್ಧಿಸಲಿದೆ.
ಟಾಟಾ ಕಾರುಗಳ ಕುರಿತ ಇತ್ತೀಚಿನ ಎಲ್ಲಾ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಆನ್ನು ಫಾಲೋ ಮಾಡಿ