Tata Harrier EVಯಿಂದ ಏನನ್ನು ನಿರೀಕ್ಷಿಸಬಹುದು ?
ಟಾಟಾ ಹ್ಯಾರಿಯರ್ ಇವಿ ರೆಗ್ಯುಲರ್ ಹ್ಯಾರಿಯರ್‌ನಂತೆಯೇ ವಿನ್ಯಾಸವನ್ನು ಹೊಂದಿದ್ದರೂ, ಇದು ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಸೆಟಪ್ ಅನ್ನು ಪಡೆಯುತ್ತದೆ ಮತ್ತು 500 ಕಿ.ಮೀ.ಗಿಂತ ಹೆಚ್ಚಿನ ರೇಂಜ್‌ಅನ್ನು ನೀಡುತ್ತದೆ
ಟಾಟಾ ಹ್ಯಾರಿಯರ್ ಇವಿ ಶೀಘ್ರದಲ್ಲೇ ವಾಹನ ತಯಾರಕರ ಕಾರುಗಳ ಪಟ್ಟಿಯಲ್ಲಿ ಮುಂದಿನ ಆಲ್-ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಪರಿಚಯಿಸಲ್ಪಡಲಿದೆ. ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2025ರಲ್ಲಿ ಇದನ್ನು ಅದರ ಅಂತಿಮ ಉತ್ಪಾದಗೆ ಸಿದ್ಧವಾದ ಅವತಾರದಲ್ಲಿ ಪ್ರದರ್ಶಿಸಲಾಯಿತು. ಆಲ್-ಎಲೆಕ್ಟ್ರಿಕ್ ಹ್ಯಾರಿಯರ್‌ನ ಫೀಚರ್‌ಗಳ ಪಟ್ಟಿ ಮತ್ತು ಬ್ಯಾಟರಿ ಪ್ಯಾಕ್ ವಿಶೇಷಣಗಳನ್ನು ಟಾಟಾ ಇನ್ನೂ ಬಹಿರಂಗಪಡಿಸದಿದ್ದರೂ, ಇದು ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ನೊಂದಿಗೆ ಬರುವುದು ದೃಢಪಡಿಸಲಾಗಿದೆ. ಟಾಟಾದಿಂದ ಮುಂಬರುವ ಪ್ರಮುಖ ಇವಿಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ.
ರೆಗ್ಯುಲರ್ ಇವಿಯಂತೆ ಕಾಣುವ ಲುಕ್
ಟಾಟಾ ಹ್ಯಾರಿಯರ್ ಇವಿ ಯಾವುದೇ ಗಮನಾರ್ಹ ವಿನ್ಯಾಸ ಬದಲಾವಣೆಗಳಿಗೆ ಒಳಗಾಗಿಲ್ಲ, ಮತ್ತು ಇದು ಇನ್ನೂ ರೆಗ್ಯುಲರ್ ಡೀಸೆಲ್ ಚಾಲಿತ ಹ್ಯಾರಿಯರ್‌ನಂತೆ ಕಾಣುತ್ತದೆ. ಆದರೂ, ಇದನ್ನು ಇವಿಯಾಗಿ ಎದ್ದು ಕಾಣುವಂತೆ ಮಾಡುವುದು ಅದರ ಮುಚ್ಚಿದ ಗ್ರಿಲ್, ಟಾಟಾ ನೆಕ್ಸಾನ್ ಇವಿಯಲ್ಲಿ ಕಂಡುಬರುವಂತೆ ಲಂಬವಾದ ಸ್ಲ್ಯಾಟ್‌ಗಳನ್ನು ಹೊಂದಿರುವ ಪರಿಷ್ಕೃತ ಬಂಪರ್‌ಗಳು ಮತ್ತು ಏರೋಡೈನಾಮಿಕ್ ಶೈಲಿಯ ಅಲಾಯ್ ವೀಲ್‌ಗಳಾಗಿವೆ. ಆದರೂ, ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳಂತಹ ಅಂಶಗಳು ಬದಲಾಗದೆ ಉಳಿದಿವೆ.
ಡ್ಯುಯಲ್-ಟೋನ್ ಕಪ್ಪು ಮತ್ತು ಬಿಳಿ ಕ್ಯಾಬಿನ್ ಥೀಮ್
ಹ್ಯಾರಿಯರ್ ಇವಿ ಒಳಗಿನಿಂದ ಹೇಗೆ ಕಾಣುತ್ತದೆ ಎಂಬುದನ್ನು ಟಾಟಾ ಇನ್ನೂ ಬಹಿರಂಗಪಡಿಸದಿದ್ದರೂ, ಇದು ಸಾಮಾನ್ಯ ಹ್ಯಾರಿಯರ್‌ನಲ್ಲಿ ಕಂಡುಬರುವ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುವ ಸಾಧ್ಯತೆಯಿದೆ. ಅಲ್ಲದೆ, ನಾವು ನೆಕ್ಸಾನ್ ಇವಿ ಮತ್ತು ಕರ್ವ್ ಇವಿಯಲ್ಲಿ ನೋಡಿದಂತೆ, ಆಲ್-ಎಲೆಕ್ಟ್ರಿಕ್ ಟಾಟಾ ಹ್ಯಾರಿಯರ್ ಕೂಡ ಡ್ಯುಯಲ್-ಟೋನ್ ಕಪ್ಪು ಮತ್ತು ಬಿಳಿ ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತದೆ, ಇದನ್ನು ನಾವು ಈಗಾಗಲೇ 2025ರ ಆಟೋ ಎಕ್ಸ್‌ಪೋದಲ್ಲಿ ಕಾರು ಪ್ರದರ್ಶನಗೊಂಡಾಗ ಗಮನಿಸಿದ್ದೇವೆ.
ಫೀಚರ್‌ಗಳು: ಸಮನ್ಸ್ ಮೋಡ್‌ನ ಸೇರ್ಪಡೆ
ಹ್ಯಾರಿಯರ್ ಇವಿ ಅದರ ರೆಗ್ಯುಲರ್ ಮೊಡೆಲ್‌ನಂತೆಯೇ ಅದೇ ಫೀಚರ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಸೌಕರ್ಯಗಳ ಪಟ್ಟಿಯಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ಅನ್ನು ಒಳಗೊಂಡಿರಬಹುದು. ಇದು ಡ್ಯುಯಲ್-ಜೋನ್ ಎಸಿ ಮತ್ತು ಚಾಲಿತ ಟೈಲ್‌ಗೇಟ್‌ನಂತಹ ಫೀಚರ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. ಹ್ಯಾರಿಯರ್‌ನ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯು ಸಮನ್ ಮೋಡ್ ಅನ್ನು ಹೊಂದಿದ್ದು, ಕೀಲಿಯನ್ನು ಬಳಸಿಕೊಂಡು ಕಾರನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸಲು ಅನುವು ಮಾಡಿಕೊಡುತ್ತದೆ.
ಇದರ ಸುರಕ್ಷತಾ ಕಿಟ್‌ನಲ್ಲಿ 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು ಒಳಗೊಂಡಿರಬಹುದು.
ಇದನ್ನೂ ಓದಿ: ಈ ಫೆಬ್ರವರಿಯ ಕಾರು ಮಾರಾಟದಲ್ಲಿ Hyundai ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ Mahindra
AWD (ಆಲ್-ವೀಲ್-ಡ್ರೈವ್) ಸೆಟಪ್‌ನ ಸೇರ್ಪಡೆ
ಹ್ಯಾರಿಯರ್ ಇವಿಯು ಡ್ಯುಯಲ್ ಮೋಟಾರ್ ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಡ್ರೈವ್‌ಟ್ರೇನ್‌ನೊಂದಿಗೆ ಬರಲಿದೆ ಎಂದು ಟಾಟಾ ಈಗಾಗಲೇ ದೃಢಪಡಿಸಿದೆ. ಟಾಟಾ ಹ್ಯಾರಿಯರ್ ಇವಿ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದ್ದು, ಸುಮಾರು 500 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಅದರ ಆಲ್-ವೀಲ್ ಡ್ರೈವ್ ಆವೃತ್ತಿಯ ಹೊರತಾಗಿ, ಒಂದೇ ಮೋಟಾರ್ ವೇರಿಯೆಂಟ್‌ಅನ್ನು ಸಹ ನಿರೀಕ್ಷಿಸಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಹ್ಯಾರಿಯರ್ ಇವಿ ಕಾರಿನ ಬೆಲೆ 30 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಮಹೀಂದ್ರಾ ಎಕ್ಸ್‌ಇವಿ 9e ಮತ್ತು ಬಿವೈಡಿ ಅಟ್ಟೊ 3ಗೆ ಪ್ರತಿಸ್ಪರ್ಧಿಯಾಗಲಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ