• English
  • Login / Register

Tata Curvv SUVಯ ಫ್ಲಶ್‌ ಟೈಪ್‌ ಡೋರ್‌ ಹ್ಯಾಂಡಲ್‌ ಗಳ ಸ್ಪಷ್ಟ ಚಿತ್ರಣ ಇಲ್ಲಿದೆ

ಟಾಟಾ ಕರ್ವ್‌ ಗಾಗಿ rohit ಮೂಲಕ ನವೆಂಬರ್ 02, 2023 06:23 am ರಂದು ಪ್ರಕಟಿಸಲಾಗಿದೆ

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಕರ್ವ್‌ ಕಾರು, ಫ್ಲಶ್‌ ಆಕಾರದ ಡೋರ್‌ ಹ್ಯಾಂಡಲ್‌ ಗಳನ್ನು ಹೊಂದಿರುವ ಮೊದಲ ಪ್ರೊಡಕ್ಷನ್‌ - ಸ್ಪೆಕ್‌ ಟಾಟಾ ಕಾರು ಎನಿಸಲಿದೆ.

Tata Curvv spied

  • ಟಾಟಾ ಸಂಸ್ಥೆಯು ತಯಾರಿಗೆ ಸಿದ್ಧವಾಗಿರುವ ಕರ್ವ್‌ ಕಾರಿನ ಪರಿಕಲ್ಪನೆಯನ್ನು ಅಟೋ ಎಕ್ಸ್ಪೋ 2023ರಲ್ಲಿ ಪ್ರದರ್ಶಿಸಿತು.
  • ಇದು 2024ರ ಮಧ್ಯದಲ್ಲಿ ಹೊರಬರಲಿದ್ದು, ಈಗಾಗಲೇ ಸಾಕಷ್ಟು ಸ್ಪರ್ಧೆಯನ್ನು ಎದುರಿಸುತ್ತಿರುವ ಕಾಂಪ್ಯಾಕ್ಟ್‌ SUV ಕ್ಷೇತ್ರದಲ್ಲಿ ಟಾಟಾದ ಮೊದಲ ವಾಹನ ಎನಿಸಲಿದೆ.
  • ಹೊರಭಾಗದಲ್ಲಿ ಎತ್ತರದ ಬೂಟ್‌ ಲಿಡ್‌, ನೆಕ್ಸನ್‌ ನಲ್ಲಿರುವಂತ ಹೊಸ ಅಲೋಯ್‌ ವೀಲ್‌ ಗಳು, ಮತ್ತು LED ಟೇಲ್‌ ಲೈಟ್‌ ಗಳು ಇತ್ಯಾದಿಗಳನ್ನು ನೋಡಬಹುದು.
  • ಕ್ಯಾಬಿನ್‌ ಅನ್ನು ಇನ್ನಷ್ಟೇ ನೋಡಬೇಕಾಗಿದೆ. ಗಣನೀಯ ಗಾತ್ರದ ಎರಡು ಡಿಸ್ಪ್ಲೇಗಳು ಮತ್ತು ಬ್ಯಾಕ್‌ ಲಿಟ್‌ ಟಾಟಾ ಸ್ಟಿಯರಿಂಗ್‌ ವೀಲ್‌ ಜೊತೆಗೆ ಇದು ಹೊರಬರುವ ಸಾಧ್ಯತೆ ಇದೆ. 
  • ವೆಂಟಿಲೇಟೆಡ್‌ ಸೀಟ್‌ ಗಳು, 6 ಏರ್‌ ಬ್ಯಾಗ್‌ ಗಳು ಮತ್ತು ADAS ಇತ್ಯಾದಿ ವಿಶೇಷತೆಗಳನ್ನು ಇದು ಹೊಂದಿರಲಿದೆ.
  • ಹೊಸ 1.2-ಲೀಟರ್‌ ಟರ್ಬೋ ಪೆಟ್ರೋಲ್‌ ಯೂನಿಟ್‌ ಪಡೆಯಲಿದ್ದು, ICE ಕರ್ವ್‌ ಮೊದಲೇ EV ಆವೃತ್ತಿ ಹೊರಬರಲಿದೆ.
  • ಬೆಲೆಯು ರೂ. 10.5 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಲಿದೆ.

ಅಟೋ ಎಕ್ಸ್ಪೋ 2023 ಕಾರ್ಯಕ್ರಮದಲ್ಲಿ ಉತ್ಪಾದನೆಗೆ ಸಿದ್ಧವಾಗಿರುವ  ಟಾಟಾ ಕರ್ವ್‌ ವಾಹನದ ಪ್ರದರ್ಶನವು ಈ ಬಾರಿಯ ಅತ್ಯಂತ ಪ್ರಮುಖ ಪ್ರದರ್ಶನಗಳಲ್ಲಿ ಒಂದೆನಿಸಿದೆ. ಇದು SUV ಕೂಪೆ ಆಗಿದ್ದು, ಇದರ ಪರೀಕ್ಷಾರ್ಥ ಚಾಲನೆಯು ಕೆಲವು ತಿಂಗಳುಗಳ ಮೊದಲು ಪ್ರಾರಂಭವಾಗಿದೆ. ಇದರ ಪರೀಕ್ಷಾರ್ಥ ವಾಹನವು ಸವಾರಿ ಮಾಡುವುದನ್ನು ನಾವು ಪತ್ತೆ ಹಚ್ಚಿದ್ದು, ಇದರ ವಿನ್ಯಾಸವು ಹೇಗೆ ಕಾಣಿಸುತ್ತಿದೆ ಎಂಬುದನ್ನು ಕಂಡುಕೊಂಡಿದ್ದೇವೆ.

ಗಮನ ಸೆಳೆಯುವ ಅಂಶಗಳು

Tata Curvv side spied

ಸ್ಪೈ ಶಾಟ್‌ ಗಳಲ್ಲಿ ಕಾಣಸಿಗುವ ಅತ್ಯಂತ ಪ್ರಮುಖ ಅಂಶವೆಂದರೆ ಇದರ ಫ್ಲಶ್‌ ಪ್ರಕಾರ ಡೋರ್‌ ಹ್ಯಾಂಡಲ್‌ ಗಳು. ಉತ್ಪಾದನೆಗೆ ಸಿದ್ಧವಾಗಿರುವ ಟಾಟಾ ಕಾರೊಂದರಲ್ಲಿ ಈ ವೈಶಿಷ್ಟ್ಯವು ಮೊದಲ ಬಾರಿ ಕಾಣಸಿಕ್ಕಿದೆ. ಹೊಸದಾದ ಏರೋಡೈನಾಮಿಕಲ್‌ ಶೈಲಿಯ ಅಲೋಯ್‌ ವೀಲ್‌ ಗಳು, LED ಟೇಲ್‌ ಲೈಟ್‌ ಗಳನ್ನು ಹೊಂದಿರುವ ಎತ್ತರದ ಟೇಲ್‌ ಗೇಟ್‌ ಇತ್ಯಾದಿಗಳನ್ನು ಸಹ ನಾವು ನೋಡಬಹುದು. ಇತ್ತೀಚಿನ ಚಿತ್ರಗಳಲ್ಲಿ ಕರ್ವ್‌ ವಾಹನದ ಕೂಪ್‌ ನಂತಹ ರೂಫ್‌ ಲೈನ್‌ ಸಹ ಸ್ಪಷ್ಟವಾಗಿ ಗೋಚರಿಸುತ್ತದೆ

ನಿಮ್ಮ ಮಾಹಿತಿಗಾಗಿ: ಫ್ಲಶ್‌ ಡೋರ್‌ ಹ್ಯಾಂಡಲ್‌ ಗಳನ್ನು ಮೊದಲ ಬಾರಿಗೆ, 2021ರ ಮಧ್ಯದಲ್ಲಿ ಬಿಡುಗಡೆಯಾದ  ಮಹೀಂದ್ರಾ XUV700 ವಾಹನದಲ್ಲಿ ಪರಿಚಯಿಸಿದಾಗ ಇದು ಮಾಸ್‌ ಮಾರ್ಕೆಟ್‌ ನಲ್ಲಿ ಹೆಚ್ಚು ಚಿರಪರಿಚಿತವಾಯಿತು.

ಈ ಹಿಂದಿನ ಚಿತ್ರಗಳು, ಪರಿಷ್ಕೃತ  ಟಾಟಾ ನೆಕ್ಸನ್, ಟಾಟಾ ನೆಕ್ಸನ್ EV, ಟಾಟಾ ಹ್ಯಾರಿಯರ್, ಮತ್ತು Tataಟಾಟಾ ಸಫಾರಿ ಇತ್ಯಾದಿ ಕಾರುಗಳಲ್ಲಿರುವಂತೆಯೇ ಈ SUV ಕೂಪೆ ಕಾರಿನ ಸ್ಲ್ಪಿಟ್‌ ಮತ್ತು ಲಂಬಾಂತರವಾಗಿ ಇರಿಸಲಾಗಿರುವ LED ಹೆಡ್‌ ಲೈಟ್‌ ಇತ್ಯಾದಿ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿವೆ.

ಇದನ್ನು ಸಹ ಓದಿರಿ: ಹೆಡ್ಸ್‌ ಅಪ್‌ ಡಿಸ್ಪ್ಲೇ ಜೊತೆಗೆ ಭಾರತದಲ್ಲಿ ರೂ. 20 ಲಕ್ಷಗಿಂತಲೂ ಕಡಿಮೆ ಬೆಲೆಗೆ ದೊರೆಯುವ 7 ಕಾರುಗಳು

 

ಉತ್ತಮ ವಿನ್ಯಾಸದ ಕ್ಯಾಬಿನ್‌ ಪಡೆಯುವ ಸಾಧ್ಯತೆ

Tata Curvv concept cabin

 ಉತ್ಪಾದನೆಗೆ ಸಿದ್ಧವಾಗಿರುವ ಕರ್ವ್‌ ವಾಹನದ ಒಳಭಾಗದ ಚಿತ್ರಗಳು ನಮಗೆ ಲಭಿಸದೆ ಇದ್ದರೂ, ಯಾವುದೇ ಟಾಟಾ SUV ಯ ಕ್ಯಾಬಿನ್‌ ಗೆ ಹೋಲಿಸಿದರೆ ಇದು ಪ್ರೀಮಿಯಂ ಅನುಭವವನ್ನು ನೀಡುವುದು ಖಂಡಿತ. ಇದು ಇಲ್ಯುಮಿನೇಟೆಡ್‌ ಟಾಟಾ ಲೋಗೋ ಜೊತೆಗೆ ಹೊಸ ಸ್ಟೀಯರಿಂಗ್‌ ವೀಲ್‌ ಮತ್ತು ಶುಭ್ರ ಡ್ಯಾಶ್‌ ಬೋರ್ಡ್‌ ವಿನ್ಯಾಸವನ್ನು ಪಡೆಯಲಿದೆ.

ಟಾಟಾ ಕರ್ವ್‌ ವಾಹನವು ಟಚ್‌ ಆಧರಿತ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌, ದೊಡ್ಡದಾದ ಟಚ್‌ ಸ್ಕ್ರೀನ್‌ (ನೆಕ್ಸನ್‌ EV ಯಲ್ಲಿರುವಂತೆಯೇ 12.3 ಇಂಚಿನ ಘಟಕ), 10.25 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳೊಂದಿಗೆ ಶೋಭಿಸಲಿದೆ. ಇದರ ಸುರಕ್ಷತಾ ಪಟ್ಟಿಯಲ್ಲಿ ಆರು ಏರ್‌ ಬ್ಯಾಗ್‌ ಗಳು, ಮುಂದಿನ ಮತ್ತು ಹಿಂದಿನ ಪಾರ್ಕಿಂಗ್‌ ಸೆನ್ಸಾರ್‌ ಗಳು, ISOFIX ಚೈಲ್ಡ್‌ ಸೀಟ್‌ ಮೌಂಟ್‌ ಗಳು, ಮತ್ತು 360 ಡಿಗ್ರಿ ಕ್ಯಾಮರಾ ಇತ್ಯಾದಿಗಳಿವೆ. ಟಾಟಾ ಸಂಸ್ಥೆಯು ಕರ್ವ್‌ ವಾಹನದಲ್ಲಿ ಅಟೋನೋಮಸ್‌ ಎಮರ್ಜೆನ್ಸಿ ಬ್ರೇಕಿಂಗ್‌ (AEB) ಸೇರಿದಂತೆ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS), ಮತ್ತು ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಇತ್ಯಾದಿಗಳನ್ನು ಸಹ ಅಳವಡಿಸಲಿದೆ.

 

ಎಂಜಿನ್‌ ಹೇಗಿರಲಿದೆ?

ಕರ್ವ್‌ ವಾಹನವು ಹೊಸ ಟರ್ಬೊಚಾರ್ಜ್ಡ್ 1.2-ಲೀಟರ್‌ ಪೆಟ್ರೋಲ್‌ ಎಂಜಿನ್ (125PS/225Nm)‌ ಜೊತೆಗೆ ಹೊರಬರಲಿದೆ. ಇದರ ಗೇರ್‌ ಬಾಕ್ಸ್‌ ಆಯ್ಕೆಗಳ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರೆಯದೆ ಇದ್ದರೂ ನೆಕ್ಸನ್‌ ಫೇಸ್‌ ಲಿಫ್ಟ್‌ ನಲ್ಲಿ ಇರುವಂತೆಯೇ 7 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಟ್ರಾನ್ಸ್‌ ಮಿಶನ್ (DCT)‌ ಅನ್ನು ಸಹ ಇದು ಒಳಗೊಂಡಿರುವ ಸಾಧ್ಯತೆ ಇದೆ. ಇತರ ಎಂಜಿನ್‌ ಗಳು ಏನೆಲ್ಲ ಹೊಂದಿರಲಿವೆ ಎನ್ನುವ ಕುರಿತು ಮಾಹಿತಿ ದೊರೆತಿಲ್ಲ.

Tata Curvv EV concept

ಟಾಟಾ ಸಂಸ್ಥೆಯ ಜೆನ್2 ಪ್ಲಾಟ್‌ ಫಾರ್ಮ್‌ ಮೇಲೆ ರೂಪಿಸಲಾದ, ಕರ್ವ್‌ ವಾಹನದ ಎಲೆಕ್ಟ್ರಿಕ್‌ ಆವೃತ್ತಿಯು ಸಹ ಹೊರಬರಲಿದ್ದು, 500km ನಷ್ಟು ಶ್ರೇಣಿಯನ್ನು ಹೊಂದಿರಲಿದೆ. ಆದರೆ ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ನ ತಾಂತ್ರಿಕ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಈ SUV ಕೂಪೆಯನ್ನು ಮೊದಲಿಗೆ EV ಅವತಾರದಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದೆ.
 

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

Tata Curvv rear spied

ಟಾಟಾ ಕರ್ವ್‌ ವಾಹನವು 2024ರ ಮಧ್ಯದಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯು ಇಂಟರ್ನಲ್‌ ಕಂಬಶನ್‌ ಎಂಜಿನ್‌ (ICE) ಮಾದರಿಗೆ ರೂ. 10.5 ಲಕ್ಷ ಮತ್ತು EV ಗೆ ರೂ. 20 ಲಕ್ಷದಿಂದ ಪ್ರಾರಂಭವಾಗಲಿದೆ (ಎರಡೂ ಬೆಲೆಗಳು ಎಕ್ಸ್‌ - ಶೋರೂಂ ಬೆಲೆಗಳಾಗಿವೆ). ಇದು ಇತರ ICE ಕಾಂಪ್ಯಾಕ್ಟ್ SUV ಗಳಾದ ಹೋಂಡಾ ಎಲೆವೇಟ್, ಮಾರುತಿ ಗ್ರಾಂಡ್‌ ವಿಟಾರ, ಕಿಯಾ ಸೆಲ್ಟೋಸ್‌, ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಕ್‌, ಟೊಯೊಟಾ ಅರ್ಬನ್‌ ಕ್ರೂಸ್‌ ಹೈರೈಡರ್‌, ಸಿಟ್ರನ್‌ C3 ಏರ್‌ ಕ್ರಾಸ್, MG ಆಸ್ಟರ್,‌ ಮತ್ತು ಫಾಕ್ಸ್‌ ವ್ಯಾಗನ್‌ ಟೈಗುನ್‌ ಇತ್ಯಾದಿಗಳೊಂದಿಗೆ ಸ್ಪರ್ಧಿಸಲಿರುವ SUV ಕೂಪೆ ಎನಿಸಲಿದೆ. ಇದೇ ವೇಳೆ ಕರ್ವ್ EV ಯು MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಇತ್ಯಾದಿಗಳಿಗೆ ಬದಲಿ ಆಯ್ಕೆ ಎನಿಸಲಿದೆ.

ಇದನ್ನು ಸಹ ಓದಿರಿ: ಅಕ್ಟೋಬರ್ 2023ರಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳು, ಈ ಹಬ್ಬದ ಋತುವಿನಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳು

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಕರ್ವ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience