• English
  • Login / Register

ಬಹುನಿರೀಕ್ಷಿತ Tata Nexon ಸಿಎನ್‌ಜಿ ಬಿಡುಗಡೆ, ಬೆಲೆಗಳು 8.99 ರೂ.ನಿಂದ ಪ್ರಾರಂಭ

published on ಸೆಪ್ಟೆಂಬರ್ 24, 2024 08:20 pm by dipan for ಟಾಟಾ ನೆಕ್ಸಾನ್‌

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ನೆಕ್ಸಾನ್ ಭಾರತದಲ್ಲಿ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ ಬರುವ ಮೊದಲ ಸಿಎನ್‌ಜಿ ಕಾರು ಆಗಿದೆ

Tata Nexon CNG launched

  • ಸ್ಮಾರ್ಟ್, ಪ್ಯೂರ್‌, ಕ್ರಿಯೆಟಿವ್‌ ಮತ್ತು ಫಿಯರ್ಲೆಸ್ ಪ್ಲಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. 

  • ಟಾಟಾ ನೆಕ್ಸನ್ ICE (ಇಂಧನ ಚಾಲಿತ ಎಂಜಿನ್) ಆವೃತ್ತಿಯಂತೆಯೇ ಎಕ್ಸ್‌ಟಿರಿಯರ್‌ ಮತ್ತು ಇಂಟಿರಿಯರ್‌ ಅನ್ನು ಪಡೆಯುತ್ತದೆ.

  • ಅವಳಿ ಸಿಎನ್‌ಜಿ ಸಿಲಿಂಡರ್‌ಗಳೊಂದಿಗೆ ಬರುತ್ತದೆ ಮತ್ತು 321 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

  • 100 ಪಿಎಸ್‌ ಮತ್ತು 170 ಎನ್‌ಎಮ್‌ ಉತ್ಪಾದಿಸುವ 1.2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

  • ಈ ಸೆಗ್ಮೆಂಟ್‌ನಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ಪಡೆಯುವ ಮೊದಲ ಸಿಎನ್‌ಜಿ ಕಾರು ಆಗಿದೆ. 

  • ನೆಕ್ಸಾನ್ ಸಿಎನ್‌ಜಿ ಬೆಲೆಗಳು 8.99 ಲಕ್ಷ ರೂ.ನಿಂದ 14.59 ಲಕ್ಷ ರೂ.ವರೆಗೆ ಇರುತ್ತದೆ (ಎಕ್ಸ್ ಶೋರೂಂ, ಪ್ಯಾನ್ಇಂಡಿಯಾ).

ಟಾಟಾ ನೆಕ್ಸಾನ್ ಸಿಎನ್‌ಜಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆಗಳು 8.99 ಲಕ್ಷ ರೂ.ನಿಂದ 14.59 ಲಕ್ಷ ರೂ.ವರೆಗೆ (ಎಕ್ಸ್-ಶೋ ರೂಂ, ಪ್ಯಾನ್-ಇಂಡಿಯಾ) ಇದೆ. ಇದು ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಭಾರತದಲ್ಲಿ ಈ ಎಂಜಿನ್‌ನೊಂದಿಗೆ ಬರುವ ಮೊದಲ ಸಿಎನ್‌ಜಿ ಕಾರು ಆಗಿದೆ. ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ, ನೆಕ್ಸಾನ್ ಈಗ ಪನೋರಮಿಕ್ ಸನ್‌ರೂಫ್‌ಅನ್ನು ಸಹ ಒಳಗೊಂಡಿದೆ.  

ವೇರಿಯಂಟ್-ವಾರು ಬೆಲೆಗಳು ಮತ್ತು ನೆಕ್ಸಾನ್‌ ಸಿಎನ್‌ಜಿ ಆಫರ್‌ನಲ್ಲಿರುವ ಫೀಚರ್‌ಗಳನ್ನು ನಾವು ನೋಡೋಣ:

ಬೆಲೆಗಳು

Tata Nexon CNG

ವೇರಿಯೆಂಟ್‌

ಪೆಟ್ರೋಲ್‌ ಬೆಲೆಗಳು

ಸಿಎನ್‌ಜಿ ಬೆಲೆಗಳು

ವ್ಯತ್ಯಾಸ

ಸ್ಮಾರ್ಟ್‌

8.99 ಲಕ್ಷ ರೂ. 

ಹೊಸ ವೇರಿಯೆಂಟ್‌

ಸ್ಮಾರ್ಟ್‌ ಪ್ಲಸ್‌

8.70 ಲಕ್ಷ ರೂ. ((5-ಸ್ಪೀಡ್‌ ಮ್ಯಾನುಯಲ್‌ ಜೊತೆಗೆ))

9.69 ಲಕ್ಷ ರೂ. (6-ಸ್ಪೀಡ್‌ ಮ್ಯಾನುಯಲ್‌ ಜೊತೆಗೆ)

+ 99,000 ರೂ.

ಸ್ಮಾರ್ಟ್‌ ಪ್ಲಸ್‌ ಎಸ್‌

9 ಲಕ್ಷ ರೂ. ((5-ಸ್ಪೀಡ್‌ ಮ್ಯಾನುಯಲ್‌ ಜೊತೆಗೆ))

9.99 ಲಕ್ಷ ರೂ. (6-ಸ್ಪೀಡ್‌ ಮ್ಯಾನುಯಲ್‌ ಜೊತೆಗೆ)

+ 99,000 ರೂ.

ಪ್ಯೂರ್‌

9.70 ಲಕ್ಷ ರೂ.

10.69 ಲಕ್ಷ ರೂ.

+ 99,000 ರೂ.

ಪ್ಯೂರ್‌ ಎಸ್‌

10 ಲಕ್ಷ ರೂ.

10.99 ಲಕ್ಷ ರೂ.

+ 99,000 ರೂ.

ಕ್ರೀಯೆಟಿವ್‌

10.70 ಲಕ್ಷ ರೂ.

11.69 ಲಕ್ಷ ರೂ.

+ 99,000 ರೂ.

ಕ್ರಿಯೆಟಿವ್‌ ಪ್ಲಸ್‌

11.20 ಲಕ್ಷ ರೂ.

12.19 ಲಕ್ಷ ರೂ.

+ 99,000 ರೂ.

ಫೀಯರ್‌ಲೆಸ್‌ ಪ್ಲಸ್‌ ಎಸ್‌

14.59 ಲಕ್ಷ ರೂ.

ಇವುಗಳು ಭಾರತದಾದ್ಯಂತದ ಎಕ್ಸ್‌ಶೋರೂಮ್‌ ಬೆಲೆಗಳು

ನಾವು ಈಗ ಟಾಟಾ ನೆಕ್ಸಾನ್ ಸಿಎನ್‌ಜಿಯೊಂದಿಗೆ ನೀಡುವ ಎಲ್ಲವನ್ನೂ ನೋಡೋಣ:

ಏನಿದೆ ಹೊಸತು ?

ಟಾಟಾ ನೆಕ್ಸಾನ್ ಸಿಎನ್‌ಜಿ ಡ್ಯುಯಲ್-ಸಿಎನ್‌ಜಿ ಸಿಲಿಂಡರ್‌ಗಳೊಂದಿಗೆ ಬರುತ್ತದೆ, ಇದು ಒಟ್ಟು 60 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಇದು 321 ಲೀಟರ್ ಬೂಟ್ ಸ್ಪೇಸ್ ಹೊಂದಿದೆ, ಇದು ICE (ಇಂಧನ ಚಾಲಿತ ಎಂಜಿನ್) ನೆಕ್ಸಾನ್ ಗಿಂತ 61 ಲೀಟರ್ ಕಡಿಮೆ ಇದೆ. ಸಿಎನ್‌ಜಿ ಆವೃತ್ತಿಯು ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುತ್ತದೆ.

ಪವರ್‌ಟ್ರೈನ್‌

Tata Nexon CNG 6-speed Manual Transmission

ಎಂಜಿನ್‌

1.2- ಲೀಟರ್‌ ಟರ್ಬೋ ಪೆಟ್ರೋಲ್‌ ಸಿಎನ್‌ಜಿ

ಪವರ್‌

100 ಪಿಎಸ್‌

ಟಾರ್ಕ್‌

170 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್‌ ಮ್ಯಾನುಯಲ್‌

ಕ್ಲೈಮ್‌ ಮಾಡಲಾದ ಮೈಲೇಜ್‌

ಪ್ರತಿ ಕೆ.ಜಿ.ಗೆ 24 ಕಿ.ಮೀ

ನೆಕ್ಸಾನ್ ಸಿಎನ್‌ಜಿಯನ್ನು ಸದ್ಯಕ್ಕೆ ಯಾವುದೇ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ನೀಡಲಾಗುತ್ತಿಲ್ಲ.

ನೆಕ್ಸಾನ್‌ನ ICE ಆವೃತ್ತಿಯು ಅದೇ ಎಂಜಿನ್‌ನೊಂದಿಗೆ 120 ಪಿಎಸ್‌ ಮತ್ತು 170 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಮ್ಯಾನ್ಯುವಲ್, 7-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಮತ್ತು 6-ಸ್ಪೀಡ್ ಎಎಮ್‌ಟಿ (ಆಟೋಮೆಟೆಡ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್) ನೊಂದಿಗೆ ನೀಡಲಾಗುತ್ತದೆ. ICE-ಚಾಲಿತ ನೆಕ್ಸಾನ್ 1.5-ಲೀಟರ್ ಡೀಸೆಲ್ ಎಂಜಿನ್ (115 ಪಿಎಸ್‌/260 ಎನ್‌ಎಮ್‌) ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಎಎಮ್‌ಟಿಯೊಂದಿಗೆ ಸಂಯೋಜಿಸುತ್ತದೆ.

ಇದನ್ನು ಸಹ ಓದಿ: Maruti Wagon R Waltz ಎಡಿಷನ್‌ ಬಿಡುಗಡೆ, ಬೆಲೆಗಳು 5.65 ಲಕ್ಷ ರೂ.ನಿಂದ ಪ್ರಾರಂಭ

ಫೀಚರ್‌ಗಳು ಮತ್ತು ಸುರಕ್ಷತೆ

Tata Nexon CNG interior

ಟಾಟಾ ನೆಕ್ಸಾನ್ ಸಿಎನ್‌ಜಿ ಹೊಸ ಪನೋರಮಿಕ್ ಸನ್‌ರೂಫ್ ಮತ್ತು 10.25-ಇಂಚಿನ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ (ಒಂದು ಟಚ್‌ಸ್ಕ್ರೀನ್‌ಗೆ ಮತ್ತು ಇನ್ನೊಂದು ಡ್ರೈವರ್‌ನ ಡಿಸ್‌ಪ್ಲೇಗೆ). ಇದು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಆಟೋ ಎಸಿ, ಏರ್ ಪ್ಯೂರಿಫೈಯರ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ಸೀಟ್ ಬೆಲ್ಟ್‌ಗಳು ಸಹ ಆಫರ್‌ನಲ್ಲಿದೆ. 

ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ), ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಮಳೆ-ಸಂವೇದಿ ವೈಪರ್‌ಗಳನ್ನು ಒಳಗೊಂಡಿದೆ. 

ಪ್ರತಿಸ್ಪರ್ಧಿಗಳು

Tata Nexon CNG

ಟಾಟಾ ನೆಕ್ಸಾನ್ ಸಿಎನ್‌ಜಿಯು ಮಾರುತಿ ಬ್ರೆಝಾ ಸಿಎನ್‌ಜಿ ಮತ್ತು ಮಾರುತಿ ಫ್ರಾಂಕ್ಸ್ ಸಿಎನ್‌ಜಿಗೆ ಪ್ರತಿಸ್ಪರ್ಧಿಯಾಗಲಿದೆ.

 ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ನೆಕ್ಸಾನ್‌ ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ನೆಕ್ಸಾನ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience